Asianet Suvarna News Asianet Suvarna News

ನಾವೇನು ನೋಡುತ್ತೇವೋ ಹುಡುಕುತ್ತೇವೋ ಅದನ್ನೇ ಪಡೆಯುತ್ತೇವೆ; ಕೆಜಿಎಫ್ ಸ್ಟಾರ್ ಯಶ್!

ಕನ್ನಡದ, ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಇಂದು ಜಗದ್‌ವಿಖ್ಯಾತಿ ಪಡೆದಿರುವ ನಟ. ಕೆಜಿಎಫ್ ಸಿನಿಮಾಗಳ ಮೂಲಕ ಪ್ರಪಂಚದ ಮೂಲೆಮೂಲೆಯನ್ನು ತಲುಪಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಇದೀಗ ಟಾಕ್ಸಿಕ್..

we will get what we see and search says rocking star yash srb
Author
First Published Jun 19, 2024, 6:00 PM IST

'ನೀವು ಏನ್ ನೋಡ್ತೀರೋ ಅದೇ ನಿಮಗೆ ಸಿಗುತ್ತೆ. ನೀವು, ಅಯ್ಯೋ ಮನುಷ್ಯರು ಸರಿ ಇಲ್ಲ ಗುರೂ, ಜನ ಎಲ್ಲಾ ಹಿಂಗಿದಾರೆ ಗುರೂ ಅಂತ ಅಂದ್ಕೊತಾ ಇದ್ರೆ ನಿಮಗೆ ಅಂಥದ್ದೇ ಬರುತ್ತೆ. ಎಲ್ಲಾ ಕಳ್ಳರೇ, ಬಟ್ ಅವ್ರಲ್ಲಿ ಒಳ್ಳೇತನ ಇದೆ ಅಂತ ಅಂದ್ಕೊಂಡ್ರೆ, ಒಳ್ಳೇ ತನಾನೇ ಸಿಗ್ತಾ ಹೋಗುತ್ತೆ..' ಅಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್ (Rocking Star Yash). ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಯಶ್, ಒಳ್ಳೆತನ ಕೆಟ್ಟತನ ಇವೆಲ್ಲಾ ನಮ್ಮ ಮನಸ್ಸಿನಲ್ಲೇ ಇರುವುದು ಎಂಬ ಅರ್ಥದಲ್ಲಿ ಮಾತನಾಡಿದ್ರಾ? ಯಶ್ ಆಡಿರುವ ಮಾತು ಕೇಳಿ ನೀವೇ ನಿರ್ಧಾರ ಮಾಡಿ.

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರು ಆಗಾಗ ಸಂದರ್ಶನಗಳಲ್ಲಿ ಕೆಲವು ಮಾತುಗಳನ್ನು ಹೇಳುತ್ತಾ ಇರುತ್ತಾರೆ. ಸಂದರ್ಶನಗಳಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಯಶ್, ವೇದಿಕೆ ಮೇಲೆ ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ನಟ ಯಶ್ ಅವರು ಹೇಳಿರುವ ನುಡಿಮುತ್ತುಗಳು ಸಾಕಷ್ಟು ಶೇರ್ ಆಗುತ್ತವೆ, ಭಾರೀ ವೈರಲ್ ಕೂಡ ಆಗುತ್ತವೆ. ಯಶ್ ಸದ್ಯ ಪ್ಯಾನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದರಿಂದ ಅವರ ಮಾತಿಗೆ ಬಹಳಷ್ಟು ಬೆಲೆಯಿದೆ. 

ಸಪೋರ್ಟ್ ಮಾಡಿದವ್ರು ಗೂಬೆಗಳ ಥರ ಕಾಣ್ತಾರೆ; ಹಳೆಯ ಘಟನೆಗೆ ಟಾಂಗ್ ಕೊಟ್ರಾ ಕಿಚ್ಚ ಸುದೀಪ್?

ಕನ್ನಡದ, ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಇಂದು ಜಗದ್‌ವಿಖ್ಯಾತಿ ಪಡೆದಿರುವ ನಟ. ಕೆಜಿಎಫ್ ಸಿನಿಮಾಗಳ ಮೂಲಕ ಪ್ರಪಂಚದ ಮೂಲೆಮೂಲೆಯನ್ನು ತಲುಪಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಇದೀಗ ಟಾಕ್ಸಿಕ್ ಎಂಬ ಪ್ಯಾನ್ ವರ್ಲ್ಡ್‌ ಹಾಗು ರಾಮಾಯಣ ಎಂಬ ಬಾಲಿವುಡ್‌ ಸಿನಿಮಾದಲ್ಲಿ ನಟ ಯಶ್ ನಟಿಸುತ್ತಿದ್ದಾರೆ. ಬಾಲಿವುಡ್‌ನ ರಾಮಾಯಣ ಸಿನಿಮಾಗೆ ನಟ ಯಶ್ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಈ ಸಿನಿಮಾದ ಬಜೆಟ್ 885 ಕೋಟಿ. 

ರಮ್ಯಾ-ರಕ್ಷಿತಾ ಸಿನಿಮಾ ಬಗ್ಗೆ ನಿರ್ಮಾಪಕರು ಹೇಳಿದ್ದೇನು; ಸಕ್ಸಸ್‌ಗೆ ಯಾವ ಫಾರ್ಮುಲಾ ಬಳಸಿದ್ರು?

ಇನ್ನೊಂದು ವಿಷಯ ಏನೆಂದರೆ, ರಾಕಿಂಗ್ ಸ್ಟಾರ್ ನಟ ಯಶ್ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಸ್ನೇಹ, ಗೆಳೆತನದ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಸ್ನೇಹ ತುಂಬಾ ಮುಖ್ಯವಾದುದು. ಸ್ನೇಹ ಅಂದ್ರೆ ಏನು ಅಂದ್ರೆ, ನಾವು ಏನ್ ಮಾಡಿದೀವೋ ಅದು ವಾಪಸ್ ಬರುತ್ತೆ ಪ್ರಪಂಚದಲ್ಲಿ. ಅದೇ ಅಲ್ವಾ ಜೀವನದ ಬೇಸಿಕ್? ನಟ ಯಶ್ ಕೂಡ ಅದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಅದನ್ನೇ ಅವರು ಹೇಳಿದ್ದಾರೆ ಕೂಡ. 

ರೋಬೋಟ್ ತರ ಕೆಲಸ ಮಾಡಬೇಡಿ, ಫ್ಯಾಷನ್ ಇರಲಿ; ಪ್ರಿಯಾಂಕಾ ಚೋಪ್ರಾ ಕಿವಿ ಮಾತು!

ಅಂದಹಾಗೆ, ನಟ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 

ಕರ್ನಾಟಕದ ಋಣ ತೀರಿಸೋಕಾಗಲ್ಲ, ಆದ್ರೂ ನನ್ ಕರ್ತವ್ಯ ಮಾಡ್ತೀನಿ; ರಾಕಿಂಗ್ ಸ್ಟಾರ್ ಯಶ್

Latest Videos
Follow Us:
Download App:
  • android
  • ios