ಆ್ಯಂಕರ್ ಅನುಶ್ರೀ ಜತೆ ಉಪೇಂದ್ರ ; ಸಿನಿಮಾನ ಹೇಳಿಕೊಡದೇ ಹೇಳಿಕೊಡೋರು ಕಾಶೀನಾಥ್!
'ತುಂಬಾ ಟ್ರೂಥ್‌ಪೂಲ್ ಅವ್ರು. ನಿಮಗೆ ನಿಜ ಹೇಳ್ಬೇಕು ಅಂದ್ರೆ, 'ನಾನು' ಕ್ಯಾರೆಕ್ಟರ್ ಎಲ್ಲಾ ನಾನು ಸಿನಿಮಾಗೆ ಮಾಡಿರೋದು. ಆದ್ರೆ ಅವರು ಹಾಗೇ ಇದ್ದರು. ಅವ್ರಿಗೆ ಪೇಶನ್ಸ್ ಅಂದ್ರೆ ತುಂಬಾ ಪೇಶನ್ಸ್'..
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಆ್ಯಂಕರ್ ಅನುಶ್ರೀ (Anchor Anushree) ಅವರ ಮುಂದೆ ಕುಳಿತಿದ್ದಾರೆ. ಸಂದರ್ಶನ ಮಾಡುತ್ತಿರುವ ಅನುಶ್ರೀ, 'ನೀವು ಕಾಶೀನಾಥ್ (Kashinath) ಸರ್ ಅವರನ್ನು ಎಷ್ಟು ಮಿಸ್ ಮಾಡ್ಕೋತಿದೀರ' ಎಂದು ಕೇಳುತ್ತಾರೆ. ಅದಕ್ಕೆ ನಟ ಉಪೇಂದ್ರ ಅವರು 'ತುಂಬಾನೇ ಮಿಸ್ ಮಾಡ್ಕೋತಿದೀನಿ, ಸಿಕ್ಕಾಪಟ್ಟೆ..' ಎಂದಿದ್ದಾರೆ. ಕಾಶೀನಾಥ್ ಸರ್‌ನ ನಾನು ಲೈಫ್ ಲಾಂಗ್ ಮಿಸ್ ಮಾಡ್ಕೋತಾನೇ ಇರ್ತಿನಿ ಅವರನ್ನ.. ಏನೇ ಪ್ರಾಬ್ಲಂ ಇದ್ರೂ ಕಾಲ್ ಮಾಡೋರು. ನನಗೆ ಏನೇ ಗೊಂದಲ ಇದ್ದರೂ ಕಾಲ್ ಮಾಡ್ತಾ ಇದ್ದೆ.
ಇತ್ತೀಚೆಗೆ ಪ್ರಜಾಕೀಯ ಸ್ಟಾರ್ಟ್ ಮಾಡಿದಾಗಲೂ ಕಾಲ್ ಮಾಡಿ ಮಾತಾಡಿದ್ದರು. ಕರೆಕ್ಟ್ ಹೆಜ್ಜೆ ಇಟ್ಟಿದೀಯ, ಯಾವುದೇ ಕಾರಣಕ್ಕೂ ಹಿಂದೆ ಹೋಗ್ಬೇಡ' ಅಂದ್ರು. ಅದೇ ತರ ಎಲ್ಲಾ ವಿಷ್ಯದಲ್ಲೂ ಸಪೋರ್ಟ್ ಮಾಡೋರು. ಹೊಸಬರಿಗೆ ಕರೆದು ಎಲ್ಲಾ ವಿಷ್ಯ ಹೇಳಿಕೊಡೋರು.. ಸಿನಿಮಾನ ಹೇಳಿಕೊಡದೇ ಹೇಳಿಕೊಡೋರು.. ಅಂದ್ರೆ, ಅವರಾಗಿಯೇ ಅವರು ಹೀಗೆ ಮಾಡು ಹಾಗೆ ಮಾಡು ಎಂದು ಹೇಳಿಕೊಡ್ತಾ ಇರ್ಲಿಲ್ಲ. ಅವ್ರನ್ನ ನೋಡಿ ಕಲಿಬೇಕು ಅಷ್ಟೇ.. ನಿನಗೆ ಅನಿವಾರ್ಯತೆ ಬಂದಾಗ ನೀನು ಕಲಿತೀಯ. ನಿನಗೆ ಕಲಿಸೋಕೆ ನಾನ್ಯಾರು ಅಂತ ಹೇಳೋರು..
ಡಾ ರಾಜ್ ದಂಪತಿ ಮೊದಲ ಜಗಳದಲ್ಲಿ ಪಾರ್ವತಮ್ಮ ಹಸಿಮೆಣಸಿನಕಾಯಿ ಹಿಂಡ್ಕೊಂಡಿದ್ರು ಯಾಕೆ?
ತುಂಬಾ ಟ್ರೂಥ್‌ಪೂಲ್ ಅವ್ರು. ನಿಮಗೆ ನಿಜ ಹೇಳ್ಬೇಕು ಅಂದ್ರೆ, 'ನಾನು' ಕ್ಯಾರೆಕ್ಟರ್ ಎಲ್ಲಾ ನಾನು ಸಿನಿಮಾಗೆ ಮಾಡಿರೋದು. ಆದ್ರೆ ಅವರು ಹಾಗೇ ಇದ್ದರು. ಅವ್ರಿಗೆ ಪೇಶನ್ಸ್ ಅಂದ್ರೆ ತುಂಬಾ ಪೇಶನ್ಸ್' ಎಂದಿದ್ದಾರೆ ನಟ, ನಿರ್ದೇಶಕ ಉಪೇಂದ್ರ. ರಿಯಲ್ ಸ್ಟಾರ್ ಹೇಳಿದ್ದಕ್ಕೆಲ್ಲಾ ತಲೆದೂಗಿದ ಆ್ಯಂಕರ್ ಅನುಶ್ರೀ ಕಾಶೀನಾಥ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾತನಾಡಿದ ನಟ ಉಪೇಂದ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ಯಾನ್ ಆಗಿದ್ದ ಕಾದಂಬರಿಯನ್ನೇ ಸಿನಿಮಾ ಮಾಡಿದ್ದ ಪುಟ್ಟಣ್ಣ ಕಣಗಾಲ್; ನೀವೂ ನೋಡಿರಬಹುದು!
ಕಾರಣ, ಕಾಶೀಣಾಥ್ ಅವರು ಬದುಕಿದ್ದಾಗಲೇ ಹಲವರು 'ಉಪೇಂದ್ರ ಹಾಗೂ ಕಾಶೀನಾಥ್ ಅವರ ಮಧ್ಯೆ ಸರಿ ಇಲ್ಲ. ಗುರುಗಳಾಗಿರುವ ಕಾಶೀನಾಥ್ ಅವರಿಗೆ ಉಪೇಂದ್ರ ಅವರು ಗೌರವ ಕೊಡುತ್ತಿಲ್ಲ ಎಂದು ಹುಯಿಲೆಬ್ಬಿಸಿದ್ದರು. ಆದರೆ ಆ ಬಗ್ಗೆ ಕಾಶೀನಾಥ್ ಆಗಲೀ ಅಥವಾ ಉಪೇಂದ್ರ ಅವರಾಗಲೀ ಏನೂ ಮಾತನಾಡಿರಲಿಲ್ಲ. ಹಲವು ವೇದಿಕೆಗಳಲ್ಲಿ, ಸಂದರ್ಶನಗಳಲ್ಲಿ ಆ ಬಗ್ಗೆ ಮಾತು ಬಂದಾಗಲೂ ಇಬ್ಬರೂ ಆ ಬಗ್ಗೆ ಮೌನ ವಹಿಸಿದ್ದರು.
ಅಭಿಮಾನಿ ಅಶ್ಲೀಲ ಸಂದೇಶಕ್ಕೆ ಕಾನೂನು ಕೈಗೆತ್ತಿಕೊಂಡಿದ್ಯಾಕೆ ನಟ ದರ್ಶನ್? ಅಜ್ಞಾನದ ಪರಮಾವಧಿಯೇ?
ಆದರೆ, ಆ್ಯಂಕರ್ ಅನುಶ್ರೀ ಮಾಡಿದ ಸಂದರ್ಶನದಲ್ಲಿ ಕಾಶೀನಾಥ್ ಶಿಷ್ಯ ಉಪೇಂದ್ರ ಅವರು ತಮ್ಮ ಗುರು ಕಾಶೀನಾಥ್ ಸರ್ ಬಗ್ಗೆ ಗೌರವ ಕೊಟ್ಟು ಮಾತನಾಡಿದ್ದಾರೆ. ಕಾಶೀನಾಥ್ ಅವರ ಗುಣಗಾನ ಮಾಡಿದ್ದಾರೆ. ಈ ಸಂದರ್ಶನ ನೋಡದರೆ ಬಹುಶಃ ಯಾರೂ ಕೂಡ ಇನ್ಮುಂದೆ ಗುರು-ಶಿಷ್ಯರಾದ ಉಪೇಂದ್ರ ಹಾಗೂ ಕಾಶೀನಾಥ್ ಮಧ್ಯೆ ಸರಿ ಇರಲಿಲ್ಲ ಎಂದು ಹೇಳಲಿಕ್ಕಿಲ್ಲ ಎನ್ನಬಹುದೇ?
ಶೆಡ್‌ನಲ್ಲಿ ಕೂಡಿಹಾಕಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಡುವಾಗ ನಟ ದರ್ಶನ್ ಹೇಳಿದ್ದೇನು?
ಒಟ್ಟಿನಲ್ಲಿ, ಕಾಶೀನಾಥ್ ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರ ಶಿಷ್ಯ ಉಪೇಂದ್ರ ಇದ್ದಾರೆ. ನಟ-ನಿರ್ದೇಶಕ ಉಪೇಂದ್ರ ಅವರು ಈಗ 'ಯು/ಐ' ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಹಲವು ಭಾಷೆಗಳಲ್ಲಿ ಹಾಗು ಬಿಗ್ ಬಜೆಟ್ ಮೂಲಕ ತೆರೆಗೆ ಬರುತ್ತಿದ್ದು, ಉಪೇಂದ್ರ ಅವರ ನಟನೆ ಹಾಗು ನಿರ್ದೇಶನವಿದೆ. ಈ ಚಿತ್ರವನ್ನು ಉಪೇಂದ್ರ ಅಭಿಮಾನಿಗಳು ಸೇರಿದಂತೆ, ಇಡೀ ಸ್ಯಾಂಡಲ್‌ವುಡ್ ಕಾತರದಿಂದ ಕಾಯುತ್ತಿದೆ.