ನವದೆಹಲಿ(ಅ. 22) ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಚಿತ್ರರಂ ಎಂದರೆ ಕೇವಲ ಬಾಲುವುಡ್ ಮಾತ್ರವೇ ಎಂಬ ಪ್ರಶ್ನೆ ಎದುರಾಗಿತ್ತು. ದಕ್ಷಿಣ ಭಾರತದ ಅನೇಕ ಹಿರಿಯ ನಟರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು.

ಕಾರ್ಯಕ್ರಮಕ್ಕೆ ಬಾಲಿವುಡ್ ಸ್ಟಾರ್ ಗಳೆಲ್ಲಾ ಆಗಮಿಸಿದ್ದರು. ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಜತೆಗೆ ಸೆಲ್ಫೀ ತೆಗೆಸಿಕೊಂಡು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲೂ ಪ್ರಕಟಿಸಿದ್ದರು. ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನು ಆಹ್ವಾನಿಸದೇ ಇದ್ದಿದ್ದು ಯಾಕೆ ಎಂದು ನಟಿ ಖುಷ್ಬೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಚಾರದ ವೇಳೆ ಕಿರಿಕ್ ಮಾಡಿದವನಿಗೆ ನಟಿ ಕಪಾಳಮೋಕ್ಷ

ಪ್ರಧಾನಿ ಮೋದಿಜೀ, ಭಾರತೀಯ ಸಿನಿಮಾ ಎಂದರೆ ಕೇವಲ ಹಿಂದಿ ಸಿನಿಮಾ ಅಲ್ಲ. ಭಾರತೀಯ ಸಿನಿಮಾಗೆ ದಕ್ಷಿಣ ಭಾರತದ ಸಿನಿಮಾಗಳದ್ದೂ ಗಮನಾರ್ಹ ಕೊಡುಗೆ ಇದೆ’ ಎಂದು ಖುಷ್ಬೂ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾ ರಂಗ ಸಹ ಈ ದೇಶದ ಘನತೆಯನ್ನು ದೇಶ-ವಿದೇಶಗಳಲ್ಲಿ ಎತ್ತಿ ಹಿಡಿದಿದೆ. ನೀವು ಯಾವ ಕಾರಣಕ್ಕೆ ದಕ್ಷಿಣ ಭಾರತದ ಚಿತ್ರೋದ್ಯಮದ ಮಂದಿಯನ್ನು ಆಹ್ವಾನಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಮೋದಿ ವಿರುದ್ಧ ನಿಲ್ಲುವಷ್ಟು ದೊಡ್ಡವ ನಾನಲ್ಲ

ಮೋದಿಯವರ ಕ್ರಮಕ್ಕೆ ರತಾಮ್ ಚರಣ್ ಅವರ ಪತ್ನಿ ಉಪಾಸನಾ ಸಹ ಅಸಮಾಧಾನ ಹೊರಹಾಕಿದ್ದರು. ನವರಸ ನಾಯಕ ಜಗ್ಗೇಶ್ ಮಾಡಿದ್ದ ಟ್ವೀಟ್ ಸಹ ಸುದ್ದಿ ಮಾಡಿತ್ತು. ಇದಾದ ಮೇಲೆ ಜಗ್ಗೇಶ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರು. ನಾನು ಮೋದಿ ಅವರ ವಿರುದ್ಧ ಮಾತನಾಡುವಷ್ಟು ದೊಡ್ಡವನಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ದಕ್ಷಿಣ ಭಾರತದ ದೊಡ್ಡ ತಾರೆ ಖುಷ್ಬೂ ಮಾಡಿರುವ ಟ್ವೀಟ್ ಗಳು ಚರ್ಚೆ ಹುಟ್ಟುಹಾಕಿವೆ.