Asianet Suvarna News Asianet Suvarna News

ಕಾಂಚನಾ 3ರಲ್ಲಿ ಕಿಯಾರಾ ಅವತಾರ ಹೇಗಿರಲಿದೆ.. ಬಯಲಾದ ಸಿಕ್ರೇಟ್!

ನಟ, ನಿರ್ದೇಶಕ ರಾಘವ ಲಾರೆನ್ಸ್ ಹೊಸ ಸಾಹಸ/ ಮೂರು ಧರರ್ಮೀಯರಿಗೆ ಒಂದೇ ದೇವಾಲಯ/ ಕಾಂಚಾನಾ-3 ಹಿಂದಿ ಅವತರಿಣಿಕೆ ನಿರ್ದೇಶನದಲ್ಲಿ ಬ್ಯುಸಿ / ಸಾಮಾಜಿಕ ಕಳಕಳಿಯಲ್ಲಿ ಒಂದು ಹೆಜ್ಜೆ ಮುಂದೆ

Actor Raghava Lawrence to build a single temple for three religions
Author
Bengaluru, First Published Mar 3, 2020, 8:22 PM IST

ಚೆನ್ನೈ[ಫೆ. 03]   ಕೋರಿಯೋಗ್ರಾಫರ್ ಆಗಿ ಚಿತ್ರರಂಗ ಪ್ರವೇಶ ಮಾಡಿದ್ದ ರಾಘವ ಲಾರೆನ್ಸ್ ಕಾಂಚನಾ ಚಿತ್ರದ ಮುಖೇನ ಮನೆಮಾತಾದವರು. ನಿರ್ದೇಶಕರಾದವರು. ಸಾಮಾಜಿಕ ಕೆಲಸದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು.  ಅನಾಥ ಮಕ್ಕಳನ್ನು ಸಾಕಿ ಸಲಹುತ್ತಿದ್ದಾರೆ.

ಇದೀಗ ಕಾಂಚನಾ 3 ಹಿಂದಿ ಅವತರಿಣಿಕೆ ಲಕ್ಷ್ಮೀ ಬಾಂಬ್ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದೆಲ್ಲವನ್ನು ಮೀರಿ ರಾಘವ ಮತ್ತೊಂದು ಸುದ್ದಿ ಮಾಡಿದ್ದಾರೆ.

ಮೂರು ಧರ್ಮಗಳನ್ನು ಗಮನದಲ್ಲಿ ಇರಿಸಿಕೊಂಡು ಒಂದೇ ದೇವಾಲಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ತೃತೀಯ ಲಿಂಗಿಗಳಿಗೆ ಮನೆ ಕಟ್ಟಿಕೊಡಲು ಮುಂದಾಗಿದ್ದ ರಾಘವ ಅವರಿಗೆ ಅಕ್ಷಯ್ ಕುಮಾರ್ 1.5 ಕೋಟಿ ರೂ. ದೇಣಿಗೆ ನೀಡಿದ್ದು ಸುದ್ದಿಯಾಗಿತ್ತು. ಇದಾದ ಮೇಲೆ ದೇವಾಲಯ ನಿರ್ಮಾಣದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಹಂಚಿಕೊಂಡಿದ್ದಾರೆ.

150 ಜನರಿಗೆ ಹಾರ್ಟ್ ಸರ್ಜರಿ ಮಾಡಿಸಿದ ನಾಯಕ ನಟನಿಗೊಂದು ಸಲಾಂ!

ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮೂರು ಧರ್ಮೀಯರಿಗೆ ಒಂದೇ ದೇವಾಲಯ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು 2020ರ ಈದ್ ಹಬ್ಬದ ವೇಳೆ ಚಿತ್ರ ತೆರೆಗೆ ಬರಲಿದೆ.

 

Follow Us:
Download App:
  • android
  • ios