ಸಿನಿಮಾ ತಾರೆಯರೆಂದರೆ ಥಳಕು, ಬಳಕು ಜಾಸ್ತಿ. ತೆರೆ ಮೇಲೆ ಭೋದನೆ ಮಾಡಿ ಹೋಗುತ್ತಾರೆ ಎಂದು ಮೂಗು ಮುರಿಯುವವರೇ ಜಾಸ್ತಿ. ಆದರೆ ಎಲ್ಲರೂ ಭೇಷ್ ಎನ್ನುವಂತಹ ಕೆಲಸ ಮಾಡಿರುವ ಅಪರೂಪದ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ ನೋಡಿ. 

ಕೊರಿಯಾಗ್ರಫರ್, ನಟ, ನಿರ್ದೆಶಕ ರಾಘವ ಲಾರೆನ್ಸ್ ಸಾಮಾಜಿಕ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇವರು ರಾಘವ ಲಾರೆನ್ಸ್ ಹೆಸರಿನಲ್ಲಿ ಒಂದು ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ 200 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಷ್ಟೇ ಅಲ್ಲ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 150 ಕ್ಕೂ ಹೆಚ್ಚು ಜನರಿಗೆ ನೆರವಾಗಿದ್ದಾರೆ. 60 ಕ್ಕೂ ಹೆಚ್ಚು ಜನರನ್ನು ದತ್ತು ತೆಗೆದುಕೊಂಡಿದ್ದಾರೆ. 

ಲಾರೆನ್ಸ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಸಾಕಷ್ಟು ಸಿನಿಮಾಗಳಿಗೆ ಕೊರಿಯಾಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಇವರ ಸಾಮಾಜಿಕ ಕೆಲಸಕ್ಕೆ ಚಿರಂಜೀವಿ ಕೂಡಾ ಸಾಥ್ ನೀಡಿದ್ದಾರೆ. ಇವರ ಟ್ರಸ್ಟ್ ಗೆ 10 ಲಕ್ಷ ರೂ ಸಹಾಯ ಮಾಡಿದ್ದಾರೆ.