ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಸ್ಯನಟ ಚಿಕ್ಕಣ್ಣ ಅವರಿಗೆ ಅಭಿನಂದನೆ ಹೇಳಿದ್ದಾರೆ. ಅರೆ ಏನಕ್ಕೆ ಅಂತೀರಾ? ಇಲ್ಲಿದೆ ನೋಡಿ ಎಲ್ಲ ಕತೆ.. ಸಿನಿಮಾ ಬಿಟ್ಟರೆ ಪ್ರಾಣಿ, ಪಕ್ಷಿಗಳ ಜೊತೆ ದಚ್ಚು ಫಾರ್ಮ್ ಹೌಸ್ ನಲ್ಲಿ ಬ್ಯುಸಿಯಾಗಿರುತ್ತಾರೆ.

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಬಿಡುವಿನ ಸಮಯದಲ್ಲಿ ಅರಣ್ಯ ಸಂಚಾರ ಮಾಡಿ ಪ್ರಾಣಿಗಳನ್ನು ನೋಡಿ ಆನಂದಿಸುವ ಜೊತೆಗೆ ಸುಂದರ ಫೋಟೋಗಳನ್ನು ಸೆರೆಹಿಡಿಯುತ್ತಾರೆ. ವಿಶೇಷ ಅಂದ್ರೆ ದರ್ಶನ್ ಸೆರೆಹಿಡಿದ ಪ್ರಾಣಿಗಳ ಫೋಟೋ ಭಾರಿ ಮೊತ್ತಕ್ಕೆ ಮಾರಾಟವಾಗುತ್ತವೆ.

ಸಾವಿನಂಚಿನಲ್ಲಿದ್ದ ನಟನನ್ನು ಬದುಕಿಸಿದ ಚಾಲೆಂಜಿಂಗ್ ಸ್ಟಾರ್!

ದರ್ಶನ್ ಕ್ಲಿಕ್ಕಿಸಿದ ಆನೆ ಫೋಟೋವನ್ನು ಹಾಸ್ಯ ನಟ ಚಿಕ್ಕಣ್ಣ ಖರೀದಿಸಿದ್ದಾರೆ. ಚಿಕ್ಕಣ್ಣ ಬರೋಬ್ಬರಿ 1ಲಕ್ಷ ಕೊಟ್ಟು ಪಡೆದುಕೊಂಡಿದ್ದಾರೆ. ದರ್ಶನ್ ಅವರ ಕೈಯಿಂದಲೆ ಚಿಕ್ಕಣ್ಣ ಪೋಟೋ ಪಡೆದುಕೊಂಡಿದ್ದಾರೆ.

"ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು" ಎಂದು ಚಿಕ್ಕಣ್ಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.