ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ಅದೆಷ್ಟೋ ಜನರ ಪಾಲಿನ ಆರಾಧ್ಯ ದೈವರಾಗಿದ್ದಾರೆ. ದರ್ಶನ್ ರಿಂದ ನೆರವು ಪಡೆದ ವ್ಯಕ್ತಿಯೊಬ್ಬರು ದರ್ಶನ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳ ಕಾಲ ಪೋಷಕ ನಟರಾಗಿ, ಖಳ ನಾಯಕರಾಗಿ ಮಿಂಚಿದವರು ಭರತ್. ಇದ್ದಕ್ಕಿದ್ದಂತೆ ತಲೆಗೆ ಸ್ಟ್ರೋಕ್ ಆಗಿದ್ದರಿಂದ ಹಾಸಿಗೆ ಹಿಡಿದರು. ಬೇಡಿಕೆಯಲ್ಲಿದ್ದಾಗಲೇ ಮರೆಗೆ ಸರಿದರು. ಹಾಸಿಗೆ ಹಿಡಿದಾಗ ಸಹಾಯಕ್ಕಾಗಿ ಅದೆಷ್ಟೋ ಮಂದಿಯನ್ನು ಕೇಳಿದರೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ. ಆಗ ನೆರವಿಗೆ ಬಂದಿದ್ದೇ ಚಾಲೆಂಜಿಂಗ್ ಸ್ಟಾರ್. 

ಯಾವುದೇ ಪ್ರಚಾರವನ್ನು ಬಯಸದೇ ದರ್ಶನ್ ಭರತ್ ಚಿಕಿತ್ಸೆಗೆ ನೆರವಾಗಿದ್ದರು. ಎಲ್ಲಾ ರೀತಿಯ ಚಿಕಿತ್ಸೆಗೆ ನೆರವಾಗಿದ್ದಾರೆ. ದರ್ಶನ್ ನೆರವಿನಿಂದ ಚೇತರಿಸಿಕೊಂಡು ಭರತ್ ಮತ್ತೆ ಹಿಂತಿರುಗಿದ್ದಾರೆ. 

ಖುಷಿಯ ವಿಚಾರ ಎಂದರೆ ಭರತ್ ಸಂಪೂರ್ಣರಾಗಿ ಗುಣಮುಖರಾಗಿದ್ದಾರೆ. ಜಲ್ಲಿಕಟ್ಟು ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.