Asianet Suvarna News Asianet Suvarna News

ಮೈಸೂರು- ಬೆಂಗಳೂರು ನಡುವೆ ರೈಲ್ವೆ ಸಂಚಾರದಲ್ಲಿ 30 ನಿಮಿಷ ಉಳಿತಾಯ

ಮೈಸೂರು- ಬೆಂಗಳೂರು ನಡುವೆ ಓಡಾಡುವ ರೈಲುಗಾಡಿಗಳ ಅವಧಿಯಲ್ಲಿ ಅರ್ಧಗಂಟೆ ಉಳಿತಾಯವಾಗುವಂತೆ ವೇಳಾಪಟ್ಟಿಯಂತೆ ಪರಿಷ್ಕರಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ 11 ರೈಲುಗಳ ಪ್ರಯಾಣ ಅವಧಿಯನ್ನು 30 ನಿಮಿಷ ಕಡಿತಗೊಳಿಸಲಾಗಿದೆ.

thirty minutes to be saved in mysuru bangalore train journey
Author
Bangalore, First Published Nov 13, 2019, 12:57 PM IST

ಮೈಸೂರು(ನ.13): ಮೈಸೂರು- ಬೆಂಗಳೂರು ನಡುವೆ ಓಡಾಡುವ ರೈಲುಗಾಡಿಗಳ ಅವಧಿಯಲ್ಲಿ ಅರ್ಧಗಂಟೆ ಉಳಿತಾಯವಾಗುವಂತೆ ವೇಳಾಪಟ್ಟಿಯಂತೆ ಪರಿಷ್ಕರಿಸಲಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ 11 ರೈಲುಗಳ ಪ್ರಯಾಣ ಅವಧಿಯನ್ನು 30 ನಿಮಿಷ ಕಡಿತಗೊಳಿಸಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುವ 6 ಮತ್ತು ಬೆಂಗಳೂರಿನಿಂದ ಮೈಸೂರಿಗೆ ಬರುವ 5 ರೈಲುಗಳ ವೇಳಾಪಟ್ಟಿಬದಲಾಗಲಿದೆ. ಇದು ನ. 14 ರಿಂದ ಜಾರಿಗೆ ಬರಲಿದೆ.

ಪ್ರಯಾಣಿಕರ ಗಮನಕ್ಕೆ: 20 ಕ್ಕೂ ಹೆಚ್ಚು ರೈಲು ಸೇವೆ ರದ್ದು

ಮೈಸೂರು- ಜೈಪುರ್‌ ರೈಲು ಬೆಳಗ್ಗೆ 10.40ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 12.55ಕ್ಕೆ ತಲುಪಲಿದೆ. ಮೈಸೂರು- ಕೆಂಚಗೂಡ ರೈಲು ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 5.40ಕ್ಕೆ ತಲುಪಲಿದೆ. ಮೈಸೂರು- ಸೊಲಾಪುರ್‌ ರೈಲು ಮಧ್ಯಾಹ್ನ 3.45ಕ್ಕೆ ಹೊರಟು ಸಂಜೆ 6.30ಕ್ಕೆ ತಲುಪಲಿದೆ. ಮೈಸೂರು- ಮೈಲಾಡುತುರೈ ರೈಲು ಸಂಜೆ 4.30ಕ್ಕೆ ಹೊರಟು 6.55ಕ್ಕೆ ತಲುಪಲಿದೆ. ಮೈಸೂರು- ತೂತುಕುಡಿ ರೈಲು ಸಂಜೆ 4.20ಕ್ಕೆ ಹೊರಟು 7.05ಕ್ಕೆ ತಲುಪಲಿದೆ. ಚಾಮರಾಜನಗರ- ತಿರುಪತಿ ರೈಲು ಸಂಜೆ 5.10ಕ್ಕೆ ಹೊರಟು 8.20ಕ್ಕೆ ತಲುಪಲಿದೆ.

ಬಂದರು ನಗರಿ ಮಂಗಳೂರಿನಿಂದ ಹೊಸ ರೈಲು ಸಂಚಾರ : ಎಲ್ಲಿಗೆ?

ವಾರಾಣಾಸಿ- ಮೈಸೂರು ರೈಲುಗಾಡಿಯು ಬೆಂಗಳೂರಿನಿಂದ ಮಧ್ಯರಾತ್ರಿ 12.20ಕ್ಕೆ ಹೊರಟು ಮೈಸೂರಿಗೆ 2.35ಕ್ಕೆ ತಲುಪಲಿದೆ. ರಾಣಿಗುಂಟ- ಮೈಸೂರು ಗಾಡಿಯು ಮಧ್ಯರಾತ್ರಿ 12.35ಕ್ಕೆ ಹೊರಟು 2.50ಕ್ಕೆ ಮೈಸೂರು ತಲುಪಲಿದೆ. ಹೌರಾ- ಮೈಸೂರು ಗಾಡಿಯು ಮಧ್ಯರಾತ್ರಿ 12.50ಕ್ಕೆ ಹೊರಟು 3.15ಕ್ಕೆ ತಲುಪಲಿದೆ. ಮೈಲಾಡುತುರೈ- ಮೈಸೂರು ಗಾಡಿಯು ಬೆಳಗ್ಗೆ 6ಕ್ಕೆ ಹೊರಟು 8.20ಕ್ಕೆ ತಲುಪಲಿದೆ. ಜೈಪುರ್‌- ಮೈಸೂರು ಗಾಡಿಯು ಮಧ್ಯಾಹ್ನ 1ಕ್ಕೆ ಹೊರಟು ಮಧ್ಯಾಹ್ನ 3.30ಕ್ಕೆ ಮೈಸೂರು ತಲುಪಲಿದೆ.

ಮೈಸೂರು- ಬಾಗಲಕೋಟೆ ನಡುವೆ ಸಂಚರಿಸುವ ಬಸವ ಎಕ್ಸ್‌ಪ್ರೆಸ್‌ ರೈಲುಗಾಡಿಯ ಓಡಾಟವನ್ನು ನ. 13 ರಿಂದ 27 ರವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.

ಬೆಂಗಳೂರಿನಿಂದ ಸಂಚರಿಸಲಿದೆ ಮತ್ತೊಂದು ಹೊಸ ರೈಲು

Follow Us:
Download App:
  • android
  • ios