ವಿಜಯಪುರ (ನ.12): ಬಂದರು ನಗರಿ ಮಂಗಳೂರಿಗೆ ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿ ಒಳನಾಡಿನಿಂದ ಸಂಚರಿಸುವ ಮೊದಲ ರೈಲಾದ ‘ವಿಜಯಪುರ- ಮಂಗಳೂರು’ ಸೂಪರ್ ಫಾಸ್ಟ್ ತತ್ಕಾಲ್ ವಿಶೇಷ ರೈಲು ಸಂಚಾರಕ್ಕೆ ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಜಿಗಜಿಣಗಿ ಸೋಮವಾರ ನಗರದ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.

ಉತ್ತರ ಹಾಗೂ ಮಧ್ಯ ಕರ್ನಾಟಕ  ಪ್ರದೇಶಗಳನ್ನು ಕರಾವಳಿ ಪ್ರದೇಶಕ್ಕೆ ಸಂಪರ್ಕಿಸಲು ನೈಋತ್ಯ ರೈಲ್ವೆ ವಲಯ ಆರಂಭಿಸಿ ರುವ ಈ ರೈಲು ವಿಜಯಪುರ ದಿಂದ ಬಸವನ ಬಾಗೇವಾಡಿ, ಆಲ ಮಟ್ಟಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಅರಸಿಕೆರೆ, ಹಾಸನ,  ಸಕಲೇಶಪುರ ಮೂಲಕ ಮಂಗಳೂರು ತಲುಪಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಜೆ 6 ಕ್ಕೆ ವಿಜಯ ಪುರದಿಂದ ಹೊರಡಲಿರುವ ಈ ರೈಲು ಮರುದಿನ ಮಧ್ಯಾಹ್ನ 12.40 ಕ್ಕೆ ಮಂಗಳೂರು ತಲುಪಲಿದೆ. ಅದೇರೀತಿ ಮಂಗಳೂರಿನಿಂದ ಸಂಜೆ 4.30ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 11.45ಕ್ಕೆ ವಿಜಯಪುರ ತಲುಪಲಿದೆ.