Padavi Poorva Review: ಟೀನ್ ಬದುಕಿನ ಸಿಹಿ, ಕಹಿ ಮತ್ತು ಒಗರು
ಪೃಥ್ವಿ ಶಾಮನೂರು, ಅಂಜಲಿ ಅನೀಶ್, ಯಶ ಶಿವಕುಮಾರ್, ಶರತ್ ಲೋಹಿತಾಶ್ವ ಅಭಿನಯಿಸಿರುವ ಪದವಿ ಪೂರ್ವ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ?
ಪ್ರಿಯಾ ಕೆರ್ವಾಶೆ
ಬಾಲ್ಯ ಇರಬಹುದು, ನಂತರದ ಟೀನ್ ದಿನಗಳಿರಬಹುದು, ಅವು ಇದ್ದದ್ದಕ್ಕಿಂತಲೂ ನೆನಪುಗಳಲ್ಲಿ ಕೊಂಚ ಹೆಚ್ಚೇ ಕಲರ್‌ಫುಲ್ ಆಗಿ ಕಾಣುತ್ತವೆ. ಟೀನ್ ಲೈಫಿನ ಸಿಹಿ, ಕಹಿ, ಒಗರು, ಹುಳಿ, ಖಾರ ಫ್ಲೇವರ್‌ಗಳನ್ನು ಹೇಳೋ ಪದವಿ ಪೂರ್ವ ಸಿನಿಮಾ ಈ ಮಾತಿಗೆ ಹೊರತಲ್ಲ.
ಕಾಲ: 90ರ ದಶಕದ ಉತ್ತರಾರ್ಧ, ಸ್ಥಳ: ಮಲೆನಾಡು, ಅಲ್ಲಿನ ಕಾಲೇಜು.
ಈ ವಿವರಗಳನ್ನು ನೀಡಿಯೇ ಕಥೆ ಶುರು ಮಾಡ್ತಾರೆ ನಿರ್ದೇಶಕರು. ಆದರೆ ಸಿನಿಮಾ ಈ ಜಗತ್ತನ್ನು ಅಲ್ಲಲ್ಲಿ ಸ್ಪರ್ಶಿಸೋ ಪ್ರಯತ್ನ ಮಾಡುತ್ತದೆಯೇ ಹೊರತು, 90ರ ದಶಕದ ಮಲೆನಾಡಿನ ಬದುಕಿನ ಒಳನೋಟಗಳೇನೂ ಇದರಲ್ಲಿ ಸಿಗೋದಿಲ್ಲ. 90ರ ದಶಕದ ಬೆಂಗಳೂರಿನ ಯಾವುದೇ ಕಾಲೇಜಿಗಿಂತ ಈ ಕಾಲೇಜು ಭಿನ್ನ ಅಂತ ಅನಿಸಲ್ಲ. ಚಿತ್ರದಲ್ಲಿ ಹೇರಳವಾಗಿ ಬಳಕೆ ಆಗಿರುವ ಇಂಗ್ಲೀಷ್ ಮಿಶ್ರಿತ ಕನ್ನಡ ಭಾಷೆ ಆ ಕಾಲ ಬಿಡಿ, ಈ ಕಾಲದಲ್ಲೂ ಮಲೆನಾಡು ಭಾಗದ ಕಾಲೇಜು ಮಕ್ಕಳ ಮಾತಲ್ಲಿ ಕಾಣಿಸೋದು ಕಡಿಮೆ. ಬಯಲುಸೀಮೆಯ ವೀರಗಾಸೆ ಕುಣಿತ ಮಲೆನಾಡ ಮಕ್ಕಳಿಗೆ ಅಪರಿಚಿತ.
ತಾರಾಗಣ: ಪೃಥ್ವಿ ಶಾಮನೂರು, ಅಂಜಲಿ ಅನೀಶ್, ಯಶ ಶಿವಕುಮಾರ್, ಶರತ್ ಲೋಹಿತಾಶ್ವ
ನಿರ್ದೇಶನ: ಹರಿಪ್ರಸಾದ್ ಜಯಣ್ಣ
ರೇಟಿಂಗ್: 3
Padavi Poorva Trailer:'ಪದವಿ ಪೂರ್ವ' ಸಿನಿಮಾದ ಟ್ರೈಲರ್ ರಿಲೀಸ್: ಡಿಸೆಂಬರ್ 30ಕ್ಕೆ ಚಿತ್ರ ಬಿಡುಗಡೆ
ತನ್ನ ತಾಯಿಯ ಕಣ್ಣು ಕಿತ್ತುಕೊಂಡ ಸರ್ಕಾರಿ ಆಸ್ಪತ್ರೆಗೆ ಹಿಡಿಶಾಪ ಹಾಕುತ್ತಾ ತನ್ನಿಬ್ಬರು ಮಕ್ಕಳನ್ನು ಡಾಕ್ಟರ್ ಮಾಡಿ ಅವರಿಂದ ಆಸ್ಪತ್ರೆ ಕಟ್ಟಿಸ್ತೀನಿ, ಬಡವರ ಸೇವೆ ಮಾಡಿಸ್ತೀನಿ ಅನ್ನೋ ಕನಸು ಕಾಣೋ ಅಪ್ಪ. ಅವರ ಕನಸಿನ ಡಾಕ್ಟರಿಕೆಗಿಂತ ಅಪ್ಪ ಮಾಡೋ ಮರದ ಕೆತ್ತನೆಯಲ್ಲೇ ಹೆಚ್ಚು ಆಸಕ್ತಿ ತೋರಿಸೋ ಮಗ ನವೀನ. ಈ ಹುಡುಗನ ಗೆಳೆಯರ ಗ್ಯಾಂಗ್, ಅವರ ಬದುಕಿನಲ್ಲಾಗುವ ಘಟನೆಗಳು, ಸ್ನೇಹ, ಪ್ರೀತಿ ದೂರವಾಗೋದು, ಹತ್ತಿರವಾಗೋದು, ಇದು ಓದಿನ ಮೇಲೆ ಬೀರೋ ಪರಿಣಾಮ ಹೀಗೆ ಹತ್ತಾರು ಸಂಗತಿಗಳನ್ನ ಫ್ರೆಂಡ್‌ಶಿಪ್‌ನ ದಾರದಲ್ಲಿ ಪೋಣಿಸಲಾಗಿದೆ. ಅಪ್ಪನ ಕನಸು, ಮಗನ ಕನಸು, ಸ್ನೇಹಿತರ ಕನಸುಗಳಲ್ಲಿ ನನಸಾಗೋದೆಷ್ಟು, ನೆಲಕಚ್ಚೋದೆಷ್ಟುಅನ್ನೋದನ್ನು ಸಿನಿಮಾದಲ್ಲಿ ನೋಡಬಹುದು.
ಇದು ಹೊಸ ಟಿನೇಜ್ ಲವ್ ಸ್ಟೋರಿ ಸಿನಿಮಾ: ಪೃಥ್ವಿ ಶಾಮನೂರು
ಹೇಳಬೇಕಿರೋದನ್ನ ನಿರ್ದೇಶಕ ಹರಿಪ್ರಸಾದ್ ಚಿತ್ರ ಬರೆದ ಹಾಗೆ ನಿರೂಪಿಸಿದ್ದಾರೆ. ಹೊಸ ಹುಡುಗರಿಂದ ನಟನೆ ತೆಗೆಸಿದ್ದಾರೆ. ಕಥೆಗಿಂತಲೂ ಅನುಭವವಾಗಿ ಮನಸ್ಸಲ್ಲುಳಿಯುತ್ತದೆ. ಹಾಡುಗಳು ಅವುಗಳ ವಿಜ್ಯುವಲೈಸೇಶನ್ ಎರಡೂ ಚೆಂದ. ಲವಲವಿಕೆ ಇಡೀ ಸಿನಿಮಾವನ್ನು ಪೊರೆಯುತ್ತದೆ. ಊಹೆಗೂ ಮೀರಿದ ಕ್ಲೈಮ್ಯಾಕ್ಸ್ ಇದೆ. ಅತಿ ಒಳ್ಳೆಯತನದಿಂದ ನಾಯಕನ ಪಾತ್ರ ವಾಸ್ತವದಿಂದ ಆಚೆ ನಿಲ್ಲುತ್ತದೆ. ಕಲರ್‌ಫುಲ್‌ನೆಸ್ ಚಂದವೇ, ಕೊಂಚ ತಗ್ಗಿಸಿದ್ದರೆ ಇನ್ನೂ ಸಹಜವಾಗಿರುತ್ತಿತ್ತೇನೋ. ಶರತ್ ಲೋಹಿತಾಶ್ವ ಅವರದು ಮಾಗಿದ ನಟನೆ. ಒಟ್ಟಾರೆ ವರ್ಷಾಂತ್ಯಕ್ಕೆ ಬಂದ ನವಿರಾದ ಚಿತ್ರ ಪದವಿ ಪೂರ್ವ ಎನ್ನಬಹುದು.