ಆರ್‌ ಕೇಶವಮೂರ್ತಿ

ಈ ದೂರಿನ ಸುತ್ತ ಹಾಸ್ಯವಾಗಿಯೇ ಕತೆ ತೆರೆದುಕೊಂಡು ಇನ್ನೇನು ವಿರಾಮ ಬರುವಷ್ಟರಲ್ಲಿ ನೆರಳು ಕಳೆದುಕೊಂಡಿದ್ದವನ ಕತೆ ನೋಡಿ ನಗುತ್ತಿದ್ದವರು ಇದ್ದಕ್ಕಿದ್ದಂತೆ ಭಾವುಕರಾಗುತ್ತಾರೆ. ಹೀಗೆ ತಮಾಷೆ ಮತ್ತು ಭಾವುಕತೆ ಎರಡನ್ನೂ ಸೇರಿಸಿಕೊಂಡು ವಿನೋದ್‌ ಪ್ರಭಾಕರ್‌ ಕ್ರೈಮ್‌, ಥ್ರಿಲ್ಲರ್‌ ಹಾಗೂ ಸಸ್ಪೆನ್ಸ್‌ ಕತೆಗಳಿಗೂ ತಾನು ಸೂಕ್ತ ಎಂದು ಸಾಬೀತು ಮಾಡಿದ್ದಾರೆ. ಜತೆಗೆ ಅವರ ಆ್ಯಕ್ಷನ್‌ ಕೂಡ ಸಾಥ್‌ ನೀಡುತ್ತದೆ.

ಚಿತ್ರಕ್ಕಾಗಿ ಗಂಟಲು ಆಪರೇಷನ್‌ ಮಾಡಿಸಿಕೊಂಡ್ರಾ ವಿನೋದ್‌ ಪ್ರಭಾಕರ್‌? 

ತಾರಾಗಣ: ವಿನೋದ್‌ ಪ್ರಭಾಕರ್‌, ಶೋಭಿತಾ ರಾಣಾ, ಶರತ್‌ ಲೋಹಿತಾಶ್ವ, ಶ್ರವಣ್‌, ಗಿರಿ

ನಿರ್ದೇಶನ: ರವಿ ಗೌಡ

ನಿರ್ಮಾಣ: ಚಕ್ರವರ್ತಿ ಸಿ ಎಚ್‌

ಸಂಗೀತ: ಅಚ್ಚು

ಛಾಯಾಗ್ರಾಹಣ: ಮನೋಹರ್‌ ಜೋಷಿ

ರೇಟಿಂಗ್‌ 3

ನಿರ್ದೇಶಕ ರವಿ ಗೌಡ ಅವರು ನೆರಳು ಕಳೆದಿದೆ ಎನ್ನುವ ಮೂಲಕ ನಮ್ಮ ಸುತ್ತ ದಿನಾ ನಿತ್ಯ ನಡೆಯುವ ಬೆಳವಣಿಗೆಗಳ ಕಡೆ ಗಮನ ಕೊಡದೆ ನಿರ್ಲಕ್ಷೆ ತೋರುವವರಿಗೆ ಕಿವಿ ಹಿಂಡುತ್ತಾರೆ. ನೆರಳು ಕಳೆದು ಹೋಗಲು ಸಾಧ್ಯವೇ ಎನ್ನುವ ಅಚ್ಚರಿಯಿಂದಲೇ ತನಿಖೆಗೆ ಇಳಿಯುವ ಪೊಲೀಸರ ಮುಂದೆ ಅಸಲಿ ವಿಚಾರಗಳು ಬಯಲಾಗುತ್ತವೆ. ಅಂದಹಾಗೆ ಇದು ಮಲಯಾಳಂನಲ್ಲಿ ಬಂದು, ತೆಲುಗಿಗೂ ಡಬ್‌ ಆಗಿದ್ದ ‘ನೆಪೋಲಿಯನ್‌’ ಚಿತ್ರದ ರೀಮೇಕ್‌. ಮೂಲ ಚಿತ್ರದಲ್ಲಿ ಸಸ್ಪೆನ್ಸ್‌, ಬಿಗಿಯಾದ ಚಿತ್ರಕಥೆ ಹಾಗೂ ಥ್ರಿಲ್ಲಿಂಗ್‌ಗೆ ಹೆಚ್ಚು ಒತ್ತು ಕೊಡಲಾಗಿತ್ತು. ಆದರೆ, ಇಲ್ಲಿ ಆ್ಯಕ್ಷನ್‌ ಹಾಗೂ ಆತ್ಮದ ಅಬ್ಬರಕ್ಕೆ ಮಹತ್ವ ನೀಡಲಾಗಿದೆ.

#LockDown ವಿನೋದ್‌ ಪ್ರಭಾಕರ್‌ ಸಕತ್ ಕಸರತ್ತು ವಿಡಿಯೋ ವೈರಲ್! 

ನೆರಳು ಕಳೆದಿದೆ ಎಂದು ಹೇಳುತ್ತ ಪೊಲೀಸು, ಮಾಧ್ಯಮ ಹಾಗೂ ಜನರ ದೃಷ್ಟಿಯನ್ನು ಬೇರೆ ಕಡೆ ತಿರುಗಿಸು ಮುಚ್ಚಿ ಹೋದ ಕೊಲೆ ಪ್ರಕರಣವೊಂದನ್ನು ಮರು ತನಿಖೆ ಮಾಡುವಂತೆ ಮಾಡುವ ನಾಯಕನೇ ಇಲ್ಲಿ ಕೊಲೆಗಾರ, ಆತನೇ ಚಿತ್ರದ ವಿಲನ್‌ ಎಂದು ಗೊತ್ತಾಗುವ ಹೊತ್ತಿಗೆ ಚಿತ್ರಕ್ಕೊಂದು ಪವರ್‌ ದಕ್ಕುತ್ತದೆ. ನೆರಳು, ಆತ್ಮ, ಕೊಲೆ ಮತ್ತು ಆಸ್ತಿ ಹಾಗೂ ಇದರ ಸುತ್ತ ನಡೆಯುವ ಸಂಚು... ಇವು ಚಿತ್ರದ ಪ್ರಮುಖ ಅಂಶಗಳು. ಕತೆಯಲ್ಲಿ ಇವು ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂದು ಕೇಳಿದರೆ ನೀವು ಸಿನಿಮಾ ನೋಡಬೇಕಾಗುತ್ತದೆ. ನಟ ವಿನೋದ್‌ ಪ್ರಭಾಕರ್‌ ಅವರು ಶಿಳ್ಳೆ ಹೊಡೆಯುವ ಡೈಲಾಗ್‌ಗಳ ಜತೆಗೆ ಮೈ ನವಿರೇಳಿಸುವ ಸಾಹಸ ದೃಶ್ಯಗಳಲ್ಲೂ ಮಿಂಚುತ್ತಾರೆ. ಒಂಚೂರು ತಮಾಷೆ ಮತ್ತು ಮೆಚ್ಚುವಂತಹ ಡ್ಯಾನ್ಸ್‌ ಕೂಡ ಮಾಡಿದ್ದಾರೆ ಎಂಬುದು ಈ ಚಿತ್ರದಲ್ಲಿ ಕಾಣುವ ಅವರ ಹೊಸತನ. ಪೊಲೀಸ್‌ ಪಾತ್ರದಲ್ಲಿ ಶರತ್‌ ಲೋಹಿತಾಶ್ವ ಹಾಗೂ ಮುಖ್ಯಪೇದೆಯಾಗಿ ಗಿರಿ ನಟನೆಯ ಪಾತ್ರಗಳಿಗೆ ಹೆಚ್ಚು ಮಹತ್ವ ಇದೆ. ಹಿನ್ನೆಲೆ ಸಂಗೀತ ಹಾಗೂ ಮನೋಹರ್‌ ಜೋಷಿ ಅವರ ಕ್ಯಾಮೆರಾ ಕೆಲಸ ಚಿತ್ರಕ್ಕೆ ಒಪ್ಪುವಂತಿದೆ.