ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್‌ ಹಾಕಿರುವ  ಸರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಈ ಚಿತ್ರದಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಮದುವೆ ಆಗದಿರೋ ಮತ್ತು ಮದುವೆಯಾದರೂ ಪುರಸೊತ್ತಿರೋ ಬ್ಯಾಚುಲರಗಳ ಮತ್ತು ಗಂಡು ಹೈಕ್ಳುಗಳ ಕಥೆ ಮತ್ತು ವ್ಯಥೆಗಳನ್ನು ಹಾಸ್ಯಮಯವಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ನಾಯಕ ನಟಿ ಪಾತ್ರ ವಹಿಸಿದ ಮಾನಸ ಅವರು ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ  ಹೊತ್ತಿದ್ದಾರೆ.  ಪ್ರಭುದೇವ ಮತ್ತು ಧ್ರುವ ಚಿತ್ರಕ್ಕೆ ಗೀತೆ ರಚನೆ ಮಾಡಿದ್ದಾರೆ. ಸುದ್ದೊರಾಯ್‌ ಈ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಒಟ್ಟಿನಲ್ಲಿ ಬಹಳ ದಿನಗಳಿಂದ ಥೇಯಟರ್‌ಗೆ ಹೋಗಿ ಚಿತ್ರ ನೋಡಲು ಆಗದವರು ಈ ಚಿತ್ರವನ್ನು ನೋಡಿ, ಮಸ್ತ್ ಮಜಾ ಮಾಡಿಕೊಂಡು ಬರಬಹುದು. 

ಹೊಸಬರ ಜೊತೆಗೆ ಕೆಲಸ ಮಾಡಕ್ಕೆ ಖುಷಿಯಾಗುತ್ತೆ..! - ರವಿಶಂಕರ್ ಗೌಡ, ನಟ
ಅನುಭವಿ ನಿರ್ದೇಶಕರು, ನಟರೊಂದಿಗೆ ಕೆಲಸ ಮಾಡೋ ಅನುಭವವೇ ಬೇರೆ, ಹೊಸಬರು ಇರೋ ತಂಡದೊಂದಿಗೆ ಕೆಲಸ ಮಾಡೋ ಮಜಾನೇ ಬೇರೆ. ಏನೇ ಡೌಟ್ ಬಂದರೂ ನಿಸ್ಸಂಕೋಚವಾಗಿ ಕೇಳುತ್ತಾರೆ. ನಮಗೆ ಗೊತ್ತಿರುವ ವಿಚಾರಗಳನ್ನೂ ಅವರೊಟ್ಟಿಗೆ ಹಂಚಿಕೊಳ್ಳಬಹುದು. ಅಲ್ಲದೇ  ಅವರನ್ನೂ ಹುರಿದುಂಬಿಸಬಹುದು. 

ಒಂದು ಅಪರಾಧ, ಆರು ಹೊರದಾರಿ; 'ಅರಿಷಡ್ವರ್ಗ' ಚಿತ್ರ ವಿಮರ್ಶೆ! 

ಐದು, ಹತ್ತು ಸಾವಿರ ರೂಪಾಯಿಗೆ ಯಾರು ಕೆಲಸ ಮಾಡ್ತಾರೆ...?
ಚೆನ್ನಾಗಿ ಓದಿ, ಎಲ್ಲವನ್ನು ತಿಳ್ಕೊಂಡು ಐದು, ಹತ್ತು ಸಾವಿರ ರೂಪಾಯಿಗೆಲ್ಲ ಯಾರು ಕೆಲಸ ಮಾಡ್ತರೆ? ಹಾಗಂಥ ಸುಮ್ನೆ ಫ್ರೀಯಾಗಿ ಇರುವವರನ್ನು ನೋಡಿ ಈ ತರಹ ಸಿನಿಮಾ ಮಾಡೋ ಐಡಿಯಾ ಬಂತು, ಎನ್ನುತ್ತಾರೆ ಚಿತ್ರದ ನಿರ್ದೇಶಕ ಸರು. ಸರು ಅವರ ಪ್ರಕಾರ ಚಿತ್ರ ರಂಗದಲ್ಲಿ ಫಸ್ಟ ಟೈಮ್‌ ಸಿನಿಮಾ ಮಾಡಬೇಕಾದ್ರೆ ಕಾಮಿಡಿ ಚಿತ್ರಗಳನ್ನು ಮಾಡಿದ್ರೆ ಸ್ವಲ್ಪ ಸೇಫ್ ಅಂತೆ. ಅದಕ್ಕೇ ಹಾಸ್ಯಭರಿತ ಕಥೆಯನ್ನೇ ಆರಿಸಿಕೊಂಡರಂತೆ.

ಹೆಣ್ಣು ಮಗಳು ನಿರ್ಮಾಪಕಿಯಾಗಿರುವುದು ಖುಷಿಯಾಯಿತು...! - ಶಿವರಾಜ್ ಕೆ ಆರ್ ಪೇಟೆ, ನಟ
ರವಿಶಂಕರ್‌ ಜೊತೆಗೆ ಕೆಲಸ ಮಾಡುವುದೇ ಒಂದು ಒಳ್ಳೆಯ ಅನುಭವ. ಸರು ಅವರ ಮೊದಲ ಸಿನಿಮಾ, ಅಲ್ಲದೆ ಹೆಣ್ಣುಮಗಳು ದುಡ್ಡು ಹಾಕಿ ಮಾಡಿರುವ ಸಿನಿಮಾ ಅಗಿದ್ದರಿಂದ ತುಂಬಾ ಖುಷಿಯಾಯಿತು, ಎಂದು ಸಂತಸ ವ್ಯಕ್ತಪಡಿಸುತ್ತಾರೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್‌ ಕೆ. ಆರ್‌. ಪೇಟೆ.

ರವಿ ಸರ್‌ ಜೊತೆ ಕೆಲಸ ಮಾಡಿರುವುದ ನಮಗೆ ಹೆಮ್ಮೆ...! 
‘ನಾವು ಎನ್‌ ಮಾಡುತ್ತೀವೋ ಅದರ ರಿಸಲ್ಟ್ ಬರುತ್ತೆ!ʼ ಎಂಬುವುದರಲ್ಲಿ ನಂಬಿಕೆ, ವಿಶ್ವಾಸ ಇಟ್ಟವರು ನಿರ್ಮಾಪಕಿ ಮಾನಸ. ಮಾಡಿರುವ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತೆ ಎಂಬ ನಂಬಿಕೆಯಲ್ಲಿದ್ದಾರೆ. ಅಲ್ಲದೇ ತಮ್ಮ ಮೊದಲ ಸಿನಿಮಾದಲ್ಲೇ ರವಿಶಂಕರ್  ಸರ್‌ ಮತ್ತು ಶಿವರಾಜ್‌ ಸರ್ ಜೊತೆಗಿದ್ದು ಕೆಲಸ‌ ಮಾಡಿರುವುದು ಹೆಮ್ಮೆಯ ವಿಷಯ. ಒಂದು ಸಲ ಸಿನಿಮಾ ನೋಡಿಕೊಂಡು ಹೋದರೆ, ಕೊರೋನ ಸಂಕಷ್ಟದಿಂದ ಮನಸ್ಸಿಗೆ ಆದ ನೋವನ್ನು ಮರೆತು ನಾವು ಖುಷಿಯಾಗಿ ನಗ್ತಾ ಮನೆಗೆ ಹೋಗಬಹುದು. ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದಾಗ ಕೆಲವು ಟೀಕೆಗಳನ್ನು ಎದುರಿಸಿದೆ.  ಆದರೆ ಸಿನಿಮಾ ರಂಗದಿಂದ ಉತ್ತಮ ಸಹಕಾರ ದೊರೆತಿದ್ದು. ಈ ಸಿನಿಮಾ ನಿರ್ಮಾಣ ಮಾಡಿರುವ ಹೆಮ್ಮೆ ನನಗಿದೆ, ನಿರ್ಮಾಪಕಿ ಮತ್ತು ನಟಿ ಮಾನಸ. 

ಎದೆಗೆ ನಾಟುವ ತುಂಬು ಬಸುರಿಯ ನಿಟ್ಟುಸಿರು; ಆಕ್ಟ್‌ 1978 

ಕೊರೋನಾ ಲಾಕಡೌನ್‌  ಸಂದರ್ಭದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಕನ್ನಡ ಚಿತ್ರರಂಗದ ಚಟುವಟಿಕೆಗಳು ಕಳೆದ ತಿಂಗಳಿನಿಂದ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ.  ಕೊರೋನಾ ಮುಂಜಾಗೃತ ಕ್ರಮಗಳನ್ನು ಪಾಲಿಸುತ್ತಾ,  ತೆರೆ ಕಂಡಿರುವ 'ಪುರ್‌ಸೋತ್‌ರಾಮ' ಚಿತ್ರ ನೋಡಲು ಪ್ರೇಕ್ಷಕ ಮಹಾಪ್ರಭು ಪುರುಸೊತ್ತು ಮಾಡ್ಕೊಂಡು ಚಿತ್ರ ಮಂದಿರಗಳತ್ತ ಮುಖ ಮಾಡುತ್ತಿರುವುದು ಖುಷಿಯ ವಿಚಾರ.

- ಮಂಜುನಾಥ ನಾಯಕ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ

ಈ ಸಂದರ್ಶನವನ್ನು ನೋಡಲು ಈ ಕೆಳಕಂಡ ಲಿಂಕ್ ನೋಡಿ.