Kannada Short Film Review: ಹುಣ್ಣಿಮೆ ರಾತ್ರಿಯಲ್ಲಿ ತಾಯಿಯ ಮಾತು ನಿರ್ಲಕ್ಷಿಸಿ ಪ್ರಯಾಣ ಬೆಳೆಸಿದ ಯುವಕನೊಬ್ಬನಿಗೆ ಎದುರಾಗುವ ಅಚ್ಚರಿಯ ಘಟನೆಗಳ ಸುತ್ತ ಹೆಣೆದಿರುವ ಕಥೆ. 

Suspense Thriller Short Film: ಭೂತ-ಪ್ರೇತ ಇದೆಯಾ ಅಥವಾ ಇಲ್ಲವಾ ಅನ್ನೋದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅಮವಾಸ್ಯೆ, ಹುಣ್ಣಿಮೆ ರಾತ್ರಿ ಮನೆಯಿಂದ ಹೊರಗೆ ಹೋಗಬಾರದು, ರಾತ್ರಿ ಪ್ರಯಾಣದ ಮಾರ್ಗ ಮಧ್ಯೆ ಯಾರಿಗೂ ಡ್ರಾಪ್ ಕೊಡಬಾರದು ಎಂದು ಹಿರಿಯರು ಹೇಳುತ್ತಿರುತ್ತಾರೆ. ಹೀಗೆ ಯುವಕನೊಬ್ಬ ಹುಣ್ಣಿಮೆ ರಾತ್ರಿ ತಾಯಿ ಮಾತನ್ನು ನಿರ್ಲಕ್ಷ್ಯಿಸಿ ಪ್ರಯಾಣ ಮಾಡುತ್ತಾನೆ. ಯುವಕನಿಗೆ ಮಾರ್ಗ ಮಧ್ಯೆಯಾಗುವ ಅಚ್ಚರಿಯ ಅನುಭವಗಳ ಕಥೆಯೇ ಪನ್ಮಂಡ್ರಿ ಕ್ರಾಸ್. 2016ರಲ್ಲಿ ಯುಟ್ಯೂಬ್‌ನಲ್ಲಿ ಅಪ್ಲೋಡ್ ಆಗಿರುವ ಈ ಶಾರ್ಟ್ ಫಿಲಂನ್ನು 50 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

ನೀವು ರಾತ್ರಿ ಒಂಟಿಯಾಗಿ ಅರಣ್ಯ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ರೆ ಅರ್ಜುನ್ ಕುಮಾರ್ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಶಾರ್ಟ್ ಫಿಲಂ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ತೇಜಸ್ವಿ, ಅಕ್ಷತಾ, ರಿತ್ವಿಕ್, ಮಂಜು ರಂಗಾಯಣ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ನಿಮ್ಮನ್ನು ಖಂಡಿತವಾಗಿ ನಿರಾಸೆಗೊಳಿಸಲ್ಲ.

ಪನ್ಮಂಡ್ರಿ ಕ್ರಾಸ್ ಕಥೆ ಏನು?

ತಾಯಿ ಬೇಡ ಅಂದ್ರೂ ಹುಣ್ಣಿಮೆ ರಾತ್ರಿ ಪೃಥ್ವಿ ಒಂಟಿಯಾಗಿ ಕಾರ್‌ನಲ್ಲಿ ಪ್ರಯಾಣಸುತ್ತಾನೆ. ಕಾರ್ ಅರಣ್ಯ ಪ್ರದೇಶದೊಳಗೆ ಪ್ರವೇಶಿಸುತ್ತಿದ್ದಂತೆ ಪೃಥ್ವಿಗೆ ನಿದ್ದೆ ಬರುತ್ತದೆ. ಮಾರ್ಗಮಧ್ಯೆ ಟೀ ಸ್ಟಾಲ್ ಬಳಿ ಕಾರ್ ನಿಲ್ಲಿಸುತ್ತಾನೆ. ಟೀ ಕುಡಿಯುವಷ್ಟರಲ್ಲಿ ಪೃಥ್ವಿಗೆ ಅಭಿಕ್ಷಾ ಹೆಸರಿನ ಸುಂದರ ಯುವತಿ ಎದುರಾಗುತ್ತಾಳೆ. ಒಂದು ಗಂಟೆಯಿಂದ ಬಸ್‌ಗಾಗಿ ವೇಟ್ ಮಾಡುತ್ತಿದ್ದೇನೆ. ಹತ್ತಿರದಲ್ಲಿಯೇ ನನ್ನೂರು ಬರುತ್ತೆ. ಪ್ಲೀಸ್ ಡ್ರಾಪ್ ಮಾಡಿ ಅಂತ ಹೇಳಿ ಕಾರ್‌ನೊಳಗೆ ಕುಳಿತುಕೊಳ್ಳುತ್ತಾಳೆ. ಇಲ್ಲಿಂದ ನಿರ್ಜನ ಪ್ರದೇಶದಲ್ಲಿ ಪೃಥ್ವಿ ಮತ್ತು ಅಭಿಕ್ಷಾ ಪ್ರಯಾಣ ಆರಂಭವಾಗುತ್ತದೆ.

ಪ್ರಯಾಣ ಶುರುವಾಗುತ್ತಿದ್ದಂತೆ ಪನ್ಮಂಡ್ರಿ ಗ್ರಾಮದಲ್ಲಿ ನಡೆದ ಘಟನೆಯೊಂದನ್ನು ಅಭಿಕ್ಷಾ ಹೇಳುತ್ತಾಳೆ. ಗ್ರಾಮದಲ್ಲಿಯ ಗೌಡರ ಮಗ ಸೂರ್ಯ ಸುಂದರ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುವ ಯುವಕ. ಸೂರ್ಯನ ಮೇಲೆ ಗ್ರಾಮದ ಮಾಟಗಾತಿ ಗೌರಾಂಗಿಗೆ ಪ್ರೀತಿ ಆಗುತ್ತದೆ. ಆದ್ರೆ ಗೌರಾಂಗಿಯ ಪ್ರೀತಿಯನ್ನು ಸೂರ್ಯ ತಿರಸ್ಕರಿಸುತ್ತಾನೆ. ನಂತರ ಸೂರ್ಯ ತನ್ನದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಾನೆ. ಇದಕ್ಕೆ ಗೌಡರು ಸಹ ಒಪ್ಪಿ ಇಬ್ಬರ ಮದುವೆ ಮಾಡಲು ಒಪ್ಪುತ್ತಾರೆ. ಇದರಿಂದ ಕೋಪಗೊಂಡ ಗೌರಾಂಗಿ, ತಮ್ಮ ಮಂತ್ರವಿದ್ಯೆಯಿಂದ ಸೂರ್ಯ ಮದುವೆಯಾಗಬೇಕಿದ್ದ ಯುವತಿಯನ್ನು ಸಾಯಿಸುತ್ತಾಳೆ. ಇದರಿಂದ ಕೋಪಗೊಂಡ ಗೌಡರು, ಗೌರಾಂಗಿಯನ್ನು ಜೀವಂತವಾಗಿ ಸುಡುತ್ತಾರೆ.

ಸುಂದರ ಯುವಕರೇ ಗೌರಾಂಗಿಯ ಟಾರ್ಗೆಟ್!

ಸತ್ತಮೇಲೆ ದೆವ್ವ ಆದ ಗೌರಾಂಗಿ ಊರಿನಲ್ಲಿರುವ ಸುಂದರ ಯುವಕರನ್ನು ಸಾಯಿಸಲು ಮುಂದಾಗುತ್ತಾಳೆ. ಗೌರಾಂಗಿ ಭಯದಿಂದ ಸೂರ್ಯ ಸೇರಿದಂತೆ ಇಡೀ ಪನ್ಮಾಂಡ್ರಿ ಗ್ರಾಮವೇ ಖಾಲಿಯಾಗುತ್ತದೆ ಎಂದು ಅಭಿಕ್ಷಾ ಹೇಳುತ್ತಾಳೆ. ಇಷ್ಟು ಕತೆ ಹೇಳುವಷ್ಟರಲ್ಲಿಯೇ ಪನ್ಮಾಂಡ್ರಿ ಕ್ರಾಸ್ ಹೆಬ್ಬಾಗಿಲು ಬರುತ್ತದೆ. ಕೂಡಲೇ ಅಭಿಕ್ಷಾ ಕಾರ್ ನಿಲ್ಲಿಸುತ್ತಾಳೆ. ಕಾರ್‌ ಗೆ ಏನಾದ್ರೂ ಹಾನಿಯಾಗಿದೆಯಾ ಎಂದು ಪೃಥ್ವಿ ಕೆಳಗೆ ಇಳಿದು ಬರುತ್ತಾನೆ. ಕಾರ್‌ಗೆ ಯಾವುದೇ ಡ್ಯಾಮೇಜ್ ಆಗದಿರೋದನ್ನು ನೋಡಿ ಪೃಥ್ವಿ ನಿಟ್ಟುಸಿರು ಬಿಡುತ್ತಾನೆ. ಕಾರ್ ಒಳಗೆ ನೋಡಿದ್ರೆ ತನ್ನ ಜೊತೆಯಲ್ಲಿದ್ದ ಅಭಿಕ್ಷಾ ಮಾಯವಾಗಿರುತ್ತಾಳೆ. ಪೃಥ್ವಿಗೆ ಕಾರ್ ಚಾಲನೆ ವೇಳೆ ಪನ್ಮಂಡ್ರಿ ಗ್ರಾಮದ ಹೆಬ್ಬಾಗಿಲು ಸಹ ಕಾಣಿಸಿರುತ್ತದೆ. ಸುತ್ತಮುತ್ತ ನೋಡಿದ್ರೆ ಹೆಬ್ಬಾಗಿಲು ಕಾಣಿಸಲ್ಲ. ಹಾಗೆಯೇ ಅಭಿಕ್ಷಾ ಸಹ ಕಾಣಲ್ಲ.

ಅಚ್ಚರಿಯ ಕ್ಲೈಮ್ಯಾಕ್ಸ್‌ನಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ!

ಈ ಎಲ್ಲದರಿಂದ ಭಯಗೊಂಡ ಪೃಥ್ವಿ ಹಿಂದಕ್ಕೆ ಹೋಗುತ್ತಾನೆ. ಟೀ ಸ್ಟಾಲ್ ಬಳಿ ಹೋಗಿ ಕಾರ್ ನಿಲ್ಲಿಸಿ, ಅಭಿಕ್ಷಾ ಮತ್ತು ಪನ್ಮಂಡ್ರಿ ಗ್ರಾಮದ ಹೆಬ್ಬಾಗಿಲು ನೋಡಿರೋದಾಗಿ ಹೇಳುತ್ತಾನೆ. ಈ ಮಾತುಗಳನ್ನು ಕೇಳಿದ ಟೀ ವ್ಯಾಪಾರಿ ಆಶ್ವರ್ಯಗೊಳ್ಳುತ್ತಾನೆ.

ಪೃಥ್ವಿಯನ್ನು ಗೌರಾಂಗಿಯಿಂದ ರಕ್ಷಿಸಿದ ಈ ಅಭಿಕ್ಷಾ ಯಾರು? ಟೀ ವ್ಯಾಪಾರಿ ಪೃಥ್ವಿಗೆ ಹೇಳಿದ್ದೇನು ಎಂಬುದನ್ನು ತಿಳಿಯಲು ಮಿಸ್ ಮಾಡದೇ ಈ ಪನ್ಮಂಡ್ರಿ ಕ್ರಾಸ್ ಕಿರುಚಿತ್ರವನ್ನು ನೋಡಿ. ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಕಿರುಚಿತ್ರದ ಲಿಂಕ್ ಕೆಳಗೆ ನೀಡಲಾಗಿದೆ.

YouTube video player