Nata Bhayankara Review ಒಳ್ಳೆ ಹುಡುಗ ಪ್ರಥಮನ ಭಯಂಕರ ಆಟಗಳು

ಬಿಗ್ ಬಾಸ್‌ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಅಭಿನಯಿಸಿ ನಿರ್ದೇಶಿಸಿರುವ ನಟ ಭಯಂಕರ ಸಿನಿಮಾ ಭರ್ಜರಿಯಾಗಿ ಬಿಡುಗಡೆ ಕಂಡಿದೆ. ಸಿನಿಮಾ ಹೇಗಿದೆ ಗೊತ್ತಾ?

Olle huduga Pratham nata bhayankara kannada film review vcs

ಆರ್‌. ಕೇಶವಮೂರ್ತಿ

ಒಂದಿಷ್ಟುಪ್ರಥಮ ಆಟಗಳ ಒಟ್ಟು ರಾಶಿಯೇ ‘ನಟ ಭಯಂಕರ’. ಎಂಥ ಆಟಗಳು...? ಹೆಲಿಕಾಪ್ಟರ್‌ನಲ್ಲಿ ಬಂದು ಫೈಟ್‌ ಮಾಡುವುದು, ಕಣ್ಣಿಲ್ಲದ ಆತ್ಮಕ್ಕೆ ಕಣ್ಣು ಬರುವಂತೆ ಮಾಡುವುದು, ವೈದ್ಯರಾಗಿದ್ದವರು ಮಂತ್ರ- ತಂತ್ರಗಳನ್ನು ಮಾಡುವ ಕಾಯಕ ಮಾಡುವುದು ಇತ್ಯಾದಿಗಳು. ಇವು ಪ್ರಥಮ್‌ ಮಟ್ಟಿಗೆ ಪ್ರಪ್ರಥಮ ಆಟ ಮತ್ತು ಅವತಾರಗಳು. ಸಿನಿಮಾದೊಳಗೊಂದು ಸಿನಿಮಾ ಎನ್ನುವಂತೆ ಸಾಗಿದರೂ ದೆವ್ವ, ಆತ್ಮ, ಆಸ್ತಿಗಾಗಿ ಕೊಲೆ ಮತ್ತು ದ್ವೇಷ ಅಂಶಗಳು ಸೇರಿಕೊಂಡು ಪ್ರಥಮನ ಆಟಗಳಿಗೆ ಮತ್ತಷ್ಟುರೋಚಕತೆ ತುಂಬುತ್ತದೆ ಸಿನಿಮಾ. ಹೀಗಾಗಿ ಈ ಸಿನಿಮಾ ಒಂದು ರೀತಿಯಲ್ಲಿ ಪ್ರಥಮನ ಭಯಂಕರ ಅವತಾರಗಳು ಅಂತಲೂ ಹೇಳಬಹುದು. ತಾನೇ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಪ್ರಥಮ್‌ ಸೂಪರ್‌ಸ್ಟಾರ್‌ ಪಾತ್ರ. ಈ ಸ್ಟಾರ್‌ ನಟನನ್ನು ಇಟ್ಟುಕೊಂಡು ಸಿನಿಮಾ ಮಾಡುವ ಒಬ್ಬ ನಿರ್ದೇಶಕ, ಛಾಯಾಗ್ರಾಹಕ, ನಿರ್ಮಾಪಕ ಹಾಗೂ ಪ್ರತೀಕಾರಕ್ಕೆ ಕಾಯುತ್ತಿರುವ ವ್ಯಕ್ತಿ ಇವಿಷ್ಟರ ಮಧ್ಯೆ ಕತೆ ಸಾಗುತ್ತದೆ. ಇವರ ನಡುವೆ ಕಣ್ಣಿಲ್ಲದ ಹೆಣ್ಣಿನ ಸಾವೊಂದು ಪ್ರವೇಶ ಆಗುತ್ತದೆ. ಮುಂದೆ ಹಾಸ್ಯಕ್ಕೆ ಕೊಂಚ ರೋಚಕತೆ ತಿರುವು ಸಿಗುತ್ತದೆ.

ಆಸ್ತಿಗಾಗಿ ಸಂಚು ರೂಪಿಸಿ ಕಣ್ಣಿಲ್ಲದ ಹುಡುಗಿಯನ್ನು ಮದುವೆಯಾಗುವ ವ್ಯಕ್ತಿ. ಕೊನೆಗೆ ಆಸ್ತಿ ದಕ್ಕಲ್ಲ ಎಂದು ಗೊತ್ತಾದ ಮೇಲೆ ಆ ಹುಡುಗಿ ಮತ್ತು ಆಕೆಯ ಅಜ್ಜಿಯ ಸಾವಿಗೆ ಕಾರಣವಾಗುತ್ತಾನೆ. ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಮತ್ತೆ ಆತ್ಮವಾಗಿ ಬರುವ ಅಂಧ ಯುವತಿ, ಪ್ರೇತವಾಗಿ ಸಿನಿಮಾ ತಂಡವನ್ನು ಕಾಡುವುದು ಯಾಕೆ? ಚಿತ್ರದ ನಾಯಕ ಮತ್ತು ಆತನ ತಂಡ ಸಿನಿಮಾ ತೆಗೆಯಲು ದೆವ್ವದ ಮನೆಗೆ ಪ್ರವೇಶಿಸುತ್ತಾರೆ. ಅಲ್ಲಿಂದ ಏನಾಗುತ್ತದೆ ಎಂಬುದು ಮುಂದಿನ ಸಿನಿಮಾ. ಆತ್ಮದ ಆತ್ಮಕತೆ ಕೇಳಿ ಕಣ್ಣೀರು ಹಾಕುವ ಚಿತ್ರತಂಡ, ದೆವ್ವದ ಪ್ರತೀಕಾರಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ಚಿತ್ರಕ್ಕೆ ಹೊಸ ಟ್ವಿಸ್ಟ್‌ ಸಿಗುತ್ತದೆ.

ನಟ ಭಯಂಕರ ಹಾಡು ಬಿಡುಗಡೆ ಮಾಡಿದ ಅಶ್ವಿನಿ ಪುನೀತ್‌ರಾಜ್‌ಕುಮಾರ್‌

ತಾರಾಗಣ: ಪ್ರಥಮ್‌, ಸುಸ್ಮಿತಾ, ಸಾಯಿಕುಮಾರ್‌, ಶೋಭರಾಜ್‌, ಕುರಿ ಪ್ರತಾಪ್‌, ಓಂಪ್ರಕಾಶ್‌ ರಾವ್‌, ಶಂಕರ್‌ ಅಶ್ವತ್‌್ಥ.

ನಿರ್ದೇಶನ: ಪ್ರಥಮ್‌

VIRATAPURA VIRAGI FILM REVIEW: ಅಂತರಂಗ ತಾಕುವ ಮಮತಾಮಯಿ ಶಿವಯೋಗಿ

ಇಂಥ ಭಯಾನಕ ಆಟಗಳಲ್ಲಿ ನಟ, ನಿರ್ದೇಶಕರಾಗಿ ಪ್ರಥಮ್‌ ತಾವು ಇದ್ದಂತೆಯೇ ಕಾಣಿಸಿಕೊಂಡಿದ್ದಾರೆ. ನಿರ್ದೇಶಕನ ಪಾತ್ರ ಮಾಡಿರುವ ಓಂ ಪ್ರಕಾಶ್‌ ಅವರು ಕೂಡ ಅವರ ನಿಜ ಜೀವನದ ಪಾತ್ರವನ್ನೇ ತೆರೆ ಮೇಲೂ ಮಾಡಿದ್ದಾರೆ. ಥ್ರಿಲ್ಲರ್‌ ಮಂಜು ಅವರು ಸಾಹಸ ನಿರ್ದೇಶಕರಾಗಿ ತೆರೆ ಮೇಲೆ ಬಂದು ಹೋಗುತ್ತಾರೆ. ‘ಸಿನಿಮಾ ಪೂರ್ತಿ ರೀಶೂಟ್‌ ಮಾಡಿ. ನಾನು ಪ್ಯಾನ್‌ ಇಂಡಿಯಾ ಸಿನಿಮಾ ಮಾತ್ರ ಮಾಡೋದು’ ಎನ್ನುವ ಮೂಲಕ ಚಿತ್ರರಂಗದಲ್ಲಿನ ಕೆಲವು ಸನ್ನಿವೇಶಗಳನ್ನು ತಮಾಷೆಯಾಗಿ ಬಳಸಿಕೊಂಡಿದ್ದು, ಕೆಲ ಹೀರೋಗಳಿಗೆ ಪರೋಕ್ಷವಾಗಿ ಟಾಂಗ್‌ ಕೊಡುವ ಸಾಹಸವನ್ನು ಪ್ರಥಮ್‌ ಮಾಡಿದ್ದಾರೆ. ಅದು ಏನು ಎನ್ನುವ ಕುತೂಹಲ ಇದ್ದವರು ಸಿನಿಮಾ ನೋಡಬೇಕು. ಉಳಿದಂತೆ ಚಿತ್ರದ ಕುಂದು ಕೊರತೆಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.

Latest Videos
Follow Us:
Download App:
  • android
  • ios