ನಟ ಭಯಂಕರ ಹಾಡು ಬಿಡುಗಡೆ ಮಾಡಿದ ಅಶ್ವಿನಿ ಪುನೀತ್‌ರಾಜ್‌ಕುಮಾರ್
ಪ್ರತಿಭಾವಂತ ನಟ, ಅಪ್ರತಿಮ ಮಾತುಗಾರ ಒಳ್ಳೆ ಹುಡುಗ ಪ್ರಥಮ್ ನಟನೆ, ನಿರ್ದೇಶನದ ‘ನಟ ಭಯಂಕರ’ ಚಿತ್ರದ ಒಂದು ಹಾಡನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಬಿಡುಗಡೆ ಮಾಡಿದ್ದಾರೆ. ಲಹರಿ ಮ್ಯೂಸಿಕ್‌ನಲ್ಲಿ ಈ ಹಾಡು ಕೇಳಬಹುದು.
ಪ್ರತಿಭಾವಂತ ನಟ, ಅಪ್ರತಿಮ ಮಾತುಗಾರ ಒಳ್ಳೆ ಹುಡುಗ ಪ್ರಥಮ್ ನಟನೆ, ನಿರ್ದೇಶನದ ‘ನಟ ಭಯಂಕರ’ ಚಿತ್ರದ ಒಂದು ಹಾಡನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಬಿಡುಗಡೆ ಮಾಡಿದ್ದಾರೆ. ಲಹರಿ ಮ್ಯೂಸಿಕ್‌ನಲ್ಲಿ ಈ ಹಾಡು ಕೇಳಬಹುದು. ಈ ಸಿನಿಮಾ ಫೆ.3ರಂದು ಬಿಡುಗಡೆಯಾಗಲಿದೆ. ಪ್ರಥಮ್ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದು. ಹಾರರ್ ಶೇಡ್ ಇರುವ ಈ ಸಿನಿಮಾದ ಮೇಲೆ ಪ್ರಥಮ್ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಹಾಡು ಬಿಡುಗಡೆ ಮಾಡಲು ಬಂದ ಅಶ್ವಿನಿಯವರಿಗೆ ಪುನೀತ್ ಭಾವಚಿತ್ರವನ್ನು ಕೊಡುಗೆ ನೀಡಿದರು.
ಅಶ್ವಿನಿಯವರು ಎಂದಿನಂತೆ ಆಲ್ ದಿ ಬೆಸ್ಟ್ ಹೊರತಾಗಿ ಈ ಕಾರ್ಯಕ್ರಮದಲ್ಲಿಯೂ ಜಾಸ್ತಿ ಮಾತನಾಡಲಿಲ್ಲ. ಅಶ್ವಿನಿ ಪುನೀತ್ ಅವರು ಟ್ರೇಲರ್ ನೋಡಿ ಕಚೇರಿಗೆ ಕರೆಸಿಕೊಂಡು ಮೆಚ್ಚುಗೆ ಸಲ್ಲಿಸಿದ್ದನ್ನು ಪ್ರಥಮ್ ಖುಷಿಯಿಂದ ಹೇಳಿಕೊಂಡರು. ಚಿತ್ರಕ್ಕೆ ಆಶೀರ್ವಾದ ಬೇಕು ಎಂದು ಪ್ರಥಮ್ ಪ್ರೇಕ್ಷಕರಲ್ಲಿ ವಿನಂತಿಸಿಕೊಂಡರು. ಲಹರಿ ವೇಲು ಚಿತ್ರಕ್ಕೆ ಶುಭ ಹರಸಿದರು. ಚಂದನ, ನಿಹಾರಿಕಾ, ಸುಶ್ಮಿತಾ ಜೋಶಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.
Nata Bhayankara: ನಟ ಭಯಂಕರ ಪೋಸ್ಟರ್ ಬಿಡುಗಡೆ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ!
ಕುರಿಡಿ ದೆವ್ವದ ನಡುವೆ ನಡೆಯುವ ಪ್ರೇಮ ಕತೆ: ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಇಲ್ಲಿ ಎರಡು ಕತೆಗಳು ಇವೆ. ತುಂಬಾ ಅಹಂಕಾರ ಇರುವ ಒಬ್ಬ ವ್ಯಕ್ತಿ ಒಬ್ಬರಿಗೆ ಮಾತು ಕೊಟ್ಟ ಮೇಲೆ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಒಂದು ಕತೆಯಾದರೆ, ಇನ್ನೊಂದು ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರಿಡಿ ದೆವ್ವದ ನಡುವೆ ನಡೆಯುವ ಪ್ರೇಮ ಕತೆ. ಇವೆರಡನ್ನೂ ಒಟ್ಟಿಗೆ ತೆರೆ ಮೇಲೆ ನೋಡಬಹುದು. ನಮ್ಮ ಆಡಿಯೋ ಬಿಡುಗಡೆಗೆ ಬಂದಿರುವ ಶ್ರೀಮುರಳಿ ಅವರಿಗೆ ನನ್ನ ಕೃತಜ್ಞತೆಗಳು. ರೋರಿಂಗ್ ಸ್ಟಾರ್ ಬೆಂಬಲ ಇದೆ ಎಂದ ಮೇಲೆ ನಮ್ಮ ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾಸ ಮೂಡಿದೆ’ ಎಂದರು ಪ್ರಥಮ್
ವಿದೇಶದಲ್ಲಿ ಬಿಗ್ ಬಜೆಟ್ 'ಕರ್ನಾಟಕ ಅಳಿಯ' ಚಿತ್ರೀಕರಣ ಮಾಡುತ್ತಿರುವ ನಟ ಪ್ರಥಮ್!
ಶ್ರೀಮುರಳಿ ಹಾರೈಕೆ: ‘ನನಗೆ ಪ್ರಥಮ್ ಅವರ ಕಾನ್ಫಿಡೆನ್ಸ್ ಇಷ್ಟ ಆಗುತ್ತದೆ. ಬಿಗ್‌ಬಾಸ್ ಶೋನಲ್ಲಿ ಇವರನ್ನು ನೋಡಿ ಏನಪ್ಪಾ ಹೀಗೆ ಮಾತನಾಡುತ್ತಾನೆ ಎಂದುಕೊಂಡಿದ್ದೆ. ನಂತರ ನಾನೇ ಅವರ ಅಭಿಮಾನಿ ಆದೆ. ಈಗ ನಟನೆ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಒಂದು ಹಾಡನ್ನು ಉಪೇಂದ್ರ ಅವರು ಹಾಡಿದ್ದಾರೆ. ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗಿ, ಗೆಲ್ಲಲಿ’ ಎಂದು ಶ್ರೀಮುರಳಿ ಹಾರೈಸಿದರು. ‘ಹಾಡುಗಳು ಚೆನ್ನಾಗಿವೆ. ಹೀಗಾಗಿ ಆಡಿಯೋ ಹಕ್ಕುಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಲಹರಿ ವೇಲು ಹೇಳಿದರು. ಚಿತ್ರದ ನಾಯಕಿಯರಾದ ನಿಹಾರಿಕ, ಚಂದನ, ಸಂಗೀತ ನಿರ್ದೇಶಕ ಪ್ರದ್ಯೋತನ್ ಚಿತ್ರದ ಕುರಿತು ಮಾತನಾಡಿದರು. ಇನ್ನು ಸ್ವಾರಸ್ಯ ಸಿನಿ ಕ್ರಿಯೇಷನ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದ್ದು, ಸಾಕಷ್ಟುಅದ್ದೂರಿಯಾಗಿ ಮೇಕಿಂಗ್ ಮಾಡಲಾಗಿದೆ. ಹಾಡು ಮತ್ತು ಫೈಟ್ ದೃಶ್ಯಗಳ ಚಿತ್ರೀಕರಣಕ್ಕೆ ಚಾಪ್ಟರ್ ಬಳಸಿದ್ದು, ಈ ಚಿತ್ರದ ಅದ್ದೂರಿತನಕ್ಕೆ ಸಾಕ್ಷಿ.