KGF 2 Film Review: ಅಮ್ಮನ ಹಠದ ಹಿಂದೆ ಹೋಗುವ ಮಗನ ಕಥೆಯಿದು, ಕೆಜಿಎಫ್ 2 ಅದ್ದೂರಿತನ ಮಿಸ್ ಮಾಡ್ಕೊಳ್ಬೇಡಿ!
ಕೆಜಿಎಫ್ 2 ಮಣ್ಣಡಿ ಹೂತು ಹೋದ ಚರಿತ್ರೆಯನ್ನು ಮತ್ತೆ ಮೇಲೆತ್ತುವ ಪ್ರಯತ್ನ. ಅಮ್ಮನಿಗೆ ಈ ಭೂಮಿ ಮೇಲಿನ ಚಿನ್ನವನ್ನೆಲ್ಲ ತಂದು ನಿನಗೆ ಕೊಡ್ತೀನಿ ಅನ್ನೋ ಮಗನ ಮಾತಿನಲ್ಲಿ ಇಡೀ ಸಿನಿಮಾ ನಿಂತಿದೆ.
- ಭವಾನಿ ಆರ್.
ಮೂರ್ನಾಲ್ಕು ವರ್ಷಗಳ ಕಾಯುವಿಕೆ, ಚಿತ್ರದ ಪೋಸ್ಟರ್ ಟ್ರೇಲರ್, KGF ಚಾಪ್ಟರ್ 1 ಹುಟ್ಟು ಹಾಕಿದ ಕುತೂಹಲ.. ಇದ್ಯಾವುದಕ್ಕೂ ಮೋಸ ಮಾಡಲ್ಲ KGF 2. ಹೀಗೂ ಸಿನಿಮಾ ಮಾಡಬಹುದಾ ಅನ್ನೋವಷ್ಟು ಅದ್ದೂರಿತನ, ಒಂದಾದ ಮೇಲೊಂದು ಪಂಚಿಂಗ್ ಡಯಲಾಗ್, ಯಶ್ ಸ್ಟೖಲ್, ಮ್ಯಾನರಿಸಂ... ಹೀಗೆ ಹೇಳುತ್ತಾ ಹೋದರೆ ಹತ್ತಾರು ಅಂಶಗಳು ಈ ಸಿನಿಮಾನ ಬಿಗ್ ಸ್ಕ್ರೀನ್ ನಲ್ಲೇ ನೋಡ್ಬೇಕು ಅಂತ ಹೇಳ್ತವೆ.
ಈ ಸಿನಿಮಾವನ್ನು ನರೇಟ್ ಮಾಡುವ ಆನಂದ ಇಂಗಳಗಿ [ಅನಂತ ನಾಗ್ ] ಕೊನೆಯುಸಿರು ಎಳೆದದ್ದೇ ಅವರ ಮಗ ವಿಜಯೇಂದ್ರ ಇಂಗಳಗಿ [Prakash raj) ಕೋರ್ಟ್ ನಲ್ಲಿ ಚೆಂಡು ಬಿದ್ದಿದೆ. ಅವರು ಅಪ್ಪ ಬರೆದಿಟ್ಟ ಡೀಟೇಲ್, ಫಿಕ್ಷನ್ ಗಳಿಂದಲೇ ಮತ್ತೊಂದು ಕೆಜಿಎಫ್ ಕಟ್ಟುತ್ತಾರೆ.. ಅದೇ ಕೆಜಿಎಫ್ 2. ಮಣ್ಣಡಿ ಹೂತು ಹೋದ ಚರಿತ್ರೆಯನ್ನು ಮತ್ತೆ ಮೇಲೆತ್ತುವ ಪ್ರಯತ್ನ. ಅಮ್ಮನಿಗೆ ಈ ಭೂಮಿ ಮೇಲಿನ ಚಿನ್ನವನ್ನೆಲ್ಲ ತಂದು ನಿನಗೆ ಕೊಡ್ತೀನಿ ಅನ್ನೋ ಮಗನ ಮಾತಿನಲ್ಲಿ ಇಡೀ ಸಿನಿಮಾ ನಿಂತಿದೆ. ಮಗ ಅದು ಹೇಗೇಗೆಲ್ಲ ಭೂಮಿಯ ಮೇಲಿನ ಚಿನ್ನವನ್ನು ತಂದು ಗೋರಿಯಡಿ ಸೇರಿರುವ ಅಮ್ಮನ ಆತ್ಮಕ್ಕೆ ನೀಡುತ್ತಾನೆ ಅನ್ನೋದು ಕತೆ.
KGF 2 ಮುಂದೆ ಯಾವ ಬಾಹುಬಲೀನೂ ಇಲ್ಲ, ಕೊನೆಯ ಟ್ವಿಸ್ಟ್ ನೋಡಿದ್ರೆ KGF 3 ಪಕ್ಕಾ! ಸಿನಿಮಾ ಹೈಲೈಟ್ಸ್ ಏನು?
ಮೂರ್ನಾಲ್ಕು ಕವಲುಗಳಲ್ಲಿ ಕತೆ ಇದೆ. ಒಂದು ಕಡೆ ಚಾಪ್ಟರ್ 1 ರಲ್ಲೇ ಗರುಡನ ಹತ್ಯೆ ಯಾಗಿದೆ. ಕೆಜಿಎಫ್ ನಲ್ಲಿ ಆತನ ಸ್ಥಾನಕ್ಕೆ ರಾಕಿ ಅಲಿಯಾಸ್ ರಾಜಾ ಕೃಷ್ಣಪ್ಪ ಭೖರ್ಯ ಬರುತ್ತಾನೆ. ಹಿಂದೆಯೇ ಗುರುತು ಮಾಡಿಟ್ಟಿದ್ದ ಕೆಜಿಎಫ್ ನ ೯ ಬೆಟ್ಟಗಳಲ್ಲಿ ಚಿನ್ನದ ಬೇಟೆ ಆಡ್ತಾನೆ. ಇಲ್ಲಿ ರಾಕಿ ಭಾಯ್ ಗೆ ವಿಲನ್ ಆಗಿ ಕಾಡೋದು ಅಧೀರ [Sanjay Dutt). ಬೃಹದಾಕಾರದಲ್ಲಿ ಭಯ ಹುಟ್ಟಿಸುವ ಅವತಾರದಲ್ಲಿ, ಲೖಟಿಂಗ್ ವಿನ್ಯಾಸದಲ್ಲಿ ಈ ಅಧೀರ ನಮಗೆ ಸಾಕ್ಷಾತ್ Monster ನಂತೇ ನಡುಕ ಹುಟ್ಟಿಸುತ್ತಾನೆ. ಇನ್ನೊಂದು ಕಡೆ ಮುಂಬೖಯ ಭೂಗತ ಜಗತ್ತು, ಶೆಟ್ಟಿ ಮತ್ತಿತರರ ಹಾವಳಿ, ಇನ್ನೊಂದು ಕಡೆ ಸಿಬಿಐ. ಮತ್ತೊಂದೆಡೆ ರಮಿಕಾ ಸೆನ್ (Raveena Tondon) ಎಂಬ ಸತ್ಯದ ಹಿಂದೆ ಬಿದ್ದ ಪ್ರಧಾನಿ. ಎಲ್ಲವನ್ನೂ ರಾಕಿ ಬಾಯ್ ಹೇಗೆ ಫೇಸ್ ಮಾಡ್ತಾನೆ. ಕೊನೆಯಲ್ಲಾದರೂ ಆತ ಅಂದುಕೊಂಡಿದ್ದಾಯ್ತಾ.. ಅಥವಾ ತಾಯಿಯ ಹಠದ ಈಡೇರಿಕೆಗೆ ಆತ ಇನ್ನೊಂದು ಅವತಾರ ಎತ್ತಿ ಬರುತ್ತಾನಾ? ಇದನ್ನೆಲ್ಲ ತೆರೆಯ ಮೇಲೇ ನೋಡಿದರೆ ಚೆಂದ.
ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ KGF 2 ರಿಲೀಸ್: ಜೋರಾಗಿದೆ ಸಿನಿಮಾ ಹವಾ
ಈ ಸಿನಿಮಾದಲ್ಲಿರುವ ಸಿನಿಮಾಟೋಗ್ರಫಿಗೆ ಫುಲ್ ಮಾರ್ಕ್ಸ್. ಪೊಲೀಸ್ ಸ್ಟೇಶನ್ ಗೆ ಟೀ ಸಪ್ಲೖ ಮಾಡೋ ಪುಟಾಣಿ ಹುಡುಗನಿಂದ ಹಿಡಿದು ಅಧೀರನ ಧಾಳಿಗೆ ಮಗನನ್ನು ಬಲಿಕೊಟ್ಟ ತಾಯಿಯವರೆಗೆ, ಶೆಟ್ಟಿ ಎಂಬ ಮುಂಬೖ ಡಾನ್ ನಿಂದ ಹಿಡಿದು ಅಧೀರನವರೆಗೆ ಎಲ್ಲರೂ ಪಾತ್ರಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ತಾಯಿಯ ಪಾತ್ರದ ಧೀಮಂತತೆಯನ್ನು ಅರ್ಚನಾ ಜೋಯಿಸ್ ಹೆಚ್ಚಿಸಿದ್ದಾರೆ. ಇಡೀ ಕಥೆಯನ್ನು ಮೇಲೆತ್ತುವಂಥಾ ಡಯಲಾಗ್ ಅನ್ನು ಅದ್ಭುತವಾಗಿ Carry ಮಾಡಿದ್ದಾರೆ. ಬಿಜಿಎಂ ಸಿನಿಮಾ ಮುಗಿದ ಮೇಲೂ ಕಿವಿಯಲ್ಲಿ ಕೇಳುತ್ತಲೇ ಇರುತ್ತದೆ, ಅಷ್ಟು ಪವರ್ ಫುಲ್ ಆಗಿ ಮೂಡಿಬಂದಿದೆ. ಒಟ್ಟಾರೆ ಈ ಸಿನಿಮಾ ಈ ಹಿಂದೆ ಪ್ರಶಾಂತ್ ನೀಲ್ ಹಾಗೂ ಟೀಮ್ ಹೇಳಿದಂತೆ More than Life ಅನ್ನೋ ಥರವೇ ದೃಶ್ಯರೂಪದಲ್ಲಿ ಬಂದಿದೆ. ಪ್ರಶಾಂತ್ ನೀಲ್ ವಿಷನ್ ಎಷ್ಟು ವಿಸ್ತಾರವಾದದ್ದು ಅನ್ನೋ ಕಲ್ಪನೆ ಈ ಸಿನಿಮಾದಲ್ಲಿ ಸಿಗುತ್ತೆ.
ಈ ಸಿನಿಮಾದಲ್ಲಿ ಕೆಲವೊಂದು ಮಿತಿಗಳೂ ಇವೆ. ಅದರಲ್ಲೊಂದು ನಾಯಕಿ ಬಗ್ಗೆ ಹೀರೋ ಆಡುವ ಮಾತು. ಬಹುಶಃ ಈ ಹೀರೋನೂ ಪರ್ಫೆಕ್ಟ್ ಅಲ್ಲ, ಆತನಲ್ಲೂ ಮಿತಿಗಳಿವೆ ಅನ್ನೋದನ್ನು ಹೇಳೋದಕ್ಕೆ ಈ ಡಯಲಾಗ್ ಹೇಳಿಸಿರಬಹುದು. ಆದರೂ ಹೀರೋನ ವ್ಯಕ್ತಿತ್ವದಿಂದ ಇದು ಹೊರತಾಗಿ ನಿಲ್ಲುತ್ತದೆ. ನಾಯಕಿಯ ಪಾತ್ರವೂ ಉಳಿದ ಪಾತ್ರಗಳಷ್ಟು ಪರಿಣಾಮಕಾರಿಯಾಗಿ ಬಂದಿಲ್ಲ. ಕೆಲವೊಂದು ಕಡೆ ಸಿನಿಮಾ ಫ್ಲೋ ಸ್ಲೋ ಆಗಿರೋದು, ಕತೆ ಚದುರಿದಂತಾಗುವುದೂ ಆಗಿದೆ. ಆದರೆ ಇವೆಲ್ಲದರ ಹೊರತಾಗಿಯೂ ಕೆಜಿಎಫ್ 2 ಒಂದು ಅದ್ಭುತ ದೃಶ್ಯ ವೖಭವದ ಸಿನಿಮಾ ಅನ್ನೋದರಲ್ಲಿ ಯಾವ ಸಂಶಯವೂ ಬೇಡ.
ಬಹುಶಃ ಭಾರತೀಯ ಸಿನಿಮಾ ಜಗತ್ತಿನಲ್ಲಿ ತನ್ನ ಮೇಕಿಂಗ್ ನಿಂದ, ಅದ್ದೂರಿ ತನದಿಂದ ದಾಖಲೆ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಯೂ ಇದಕ್ಕೆ ಸಲ್ಲಬಹುದು. ಸಿನಿಮಾಟೋಗ್ರಫಿಯಲ್ಲಿ ಭುವನ್ ಅದ್ಭುತವಾಗಿ ಆಟ ಆಡಿದ್ದಾರೆ. ಸೀಮಿತ ಬೆಳಕಿನಲ್ಲೇ ಅವರ ಕ್ಯಾಮರಾ ವರ್ಕ್ ಜೀನಿಯಸ್ ಅನ್ನಬಹುದೇನೋ. ರವಿ ಬಸ್ರೂರು ಸಂಗೀತವೂ ಸಿನಿಮಾಕ್ಕೆ ಪೂರಕವಾಗಿದೆ. ಚಿತ್ರವನ್ನು ಮೇಲೆತ್ತುವ ಹಾಗಿದೆ. ಎಡಿಟಿಂಗ್ ಗೂ ಫುಲ್ ಮಾರ್ಕ್ಸ್. ಯಶ್ ಹಾಗೂ ಪ್ರಶಾಂತ್ ನೀಲ್ ಈ ಸಿನಿಮಾದ ಮೂಲಕ ಹೊಸತೊಂದು ಟ್ರೆಂಡನ್ನೇ ಸೃಷ್ಟಿಸಿದ್ದಾರೆ ಅನ್ನಬಹುದು. ಆದರೂ ಕೊನೆಯಲ್ಲಿ ಇಂಗಳಗಿ ಹೇಳುವ ಮಾತು - ನನ್ನ ತಂದೆ ಈ ಕತೆ ಹೇಳುತ್ತಿದ್ದರೆ ಇದೊಂದು ತಾಯಿಯ ಹಠ, ಆಕೆಯ ಮಾತನ್ನು ಉಳಿಸಿಕೊಳ್ಳಲು ಹೊರಟ ಮಗನ ಕತೆ ಅಂತ ಹೇಳುತ್ತಿದ್ದರು ಅನ್ನೋ ಮಾತು ಸಿನಿಮಾ ವಿಚಾರದಲ್ಲಿ ಪೂರ್ತಿ ನಿಜ ಆಗಲ್ಲ.
ಬದಲಿಗೆ ಸಿನಿಮಾ ನೋಡಿ ಆಚೆ ಬಂದ ಮೇಲೂ ನಮ್ಮ ಮನಸ್ಸಲ್ಲಿ ಉಳಿಯೋದು ಅದೇ ಅದ್ದೂರಿತನ, ಮೇಕಿಂಗ್, ಆ್ಯಕ್ಷನ್, ಆಟಿಟ್ಯೂಡ್. ಕತೆಯನ್ನು ಮೀರಿ ಇದೆಲ್ಲ ಆಗಿದೆ. ಅದನ್ನು ಹಾಗೇ ಒಪ್ಪಿಕೊಳ್ಳದೇ ವಿಧಿಯಿಲ್ಲ.
ಕೆಜಿಎಫ್ ೩ ಎಂಬ ಮತ್ತೊಂದು ತೂಫಾನ್ ಆಗಮನದ ಸೂಚನೆಯೂ ಈ ಫಿಲಂನ ಕೊನೆಯಲ್ಲಿ ಸಿಗುತ್ತದೆ.
ದಯವಿಟ್ಟು ಪೈರಸಿ ಮಾಡಬೇಡಿ : ಟೀಮ್ ಕೆಜಿಎಫ್ 2
"