ಭರತ್‌ ನಾವುಂದ ಅವರ 'ಮುಗಿಲ್‌ಪೇಟೆ' ಗಮನ ಸೆಳೆಯುವುದೇ ಈ ಕಾರಣಕ್ಕೆ. ಹಾಗಾದರೆ 'ಮುಗಿಲ್‌ಪೇಟೆ' ಕತೆ ಏನು ಎಂದರೆ, ಪ್ರೀತಿ ಮುರಿದು ಬೀಳಲು ಹಾಗೂ ಅಪನಂಬಿಕೆ ಮೂಡಲು ಬೆಟ್ಟದಷ್ಟು ಕಾರಣಗಳು ಬೇಕಿಲ್ಲ. ರಾಗಿ ಕಾಳಿನಷ್ಟು ಸಣ್ಣ ವಿಚಾರಗಳೇ ಸಾಕು. ಹಾಗೆ ಆ ಪುಟ್ಟ ಸಂಗತಿಗಳು ಕೂತು ಮಾತನಾಡಿಕೊಂಡರೆ ಜೀವನಪೂರ್ತಿ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗುತ್ತದೆ ಎಂದು ಒಂದು ಸಾಲಿನಲ್ಲಿ ಸರಳವಾಗಿ ಹೇಳಿಬಿಡಬಹುದು.

ಆರ್ ಕೇಶವಮೂರ್ತಿ

ಆಗಾಗ ಬಂದು ಇಣುಕುವ ಮಂಜು, ಮಳೆ, ಹಸಿರು ಕಾವ್ಯಾತ್ಮಕ ಮಾತುಗಳು ಹಾಗೂ ಸಣ್ಣ ಕಾಮಿಡಿ ತಿರುವಿನಲ್ಲಿ ಹುಟ್ಟಿಕೊಳ್ಳುವ ಪ್ರೀತಿ ಮುರಿದು ಹೋಗುವ ಹಂತಕ್ಕೆ ಬರುವ ಹೊತ್ತಿಗೆ ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಮನು ರವಿಂಚದ್ರನ್, ತಾರಾ ಹಾಗೂ ಕಯಾದು ಲೋಹರ್ ಮುದ್ದು ಮುಖ ಪ್ರೇಕ್ಷಕನ ನೆನಪಿನ ಪುಟದಲ್ಲಿ ಗಟ್ಟಿಯಾಗಿ ಜಾಗ ಗಿಟ್ಟಿಸಿಕೊಂಡಿರುತ್ತದೆ. ಇದರ ಜತೆಗೆ ಮಳೆಯಲ್ಲಿ ಬರುವ ಟ್ರ್ಯಾಜಿಡಿ ಹಾಡು, ಹಸಿರಿನ ಜತೆ ಮೂಡುವ ಪ್ರೇಮ ಗೀತೆ ನೋಡುಗನಿಗೆ ಮತ್ತಷ್ಟು ಹತ್ತಿರವಾಗುತ್ತದೆ. 

Mugilpete ಚಿತ್ರದ ಬಗ್ಗೆ ಮನುರಂಜನ್-ಕಯಾದು ಲೋಹರ್ ಎಕ್ಸ್‌ಕ್ಲೂಸಿವ್ ಮಾತುಗಳು!

ಭರತ್‌ ನಾವುಂದ ಅವರ 'ಮುಗಿಲ್‌ಪೇಟೆ' ಗಮನ ಸೆಳೆಯುವುದೇ ಈ ಕಾರಣಕ್ಕೆ. ಹಾಗಾದರೆ 'ಮುಗಿಲ್‌ಪೇಟೆ' ಕತೆ ಏನು ಎಂದರೆ, ಪ್ರೀತಿ ಮುರಿದು ಬೀಳಲು ಹಾಗೂ ಅಪನಂಬಿಕೆ ಮೂಡಲು ಬೆಟ್ಟದಷ್ಟು ಕಾರಣಗಳು ಬೇಕಿಲ್ಲ. ರಾಗಿ ಕಾಳಿನಷ್ಟು ಸಣ್ಣ ವಿಚಾರಗಳೇ ಸಾಕು. ಹಾಗೆ ಆ ಪುಟ್ಟ ಸಂಗತಿಗಳು ಕೂತು ಮಾತನಾಡಿಕೊಂಡರೆ ಜೀವನಪೂರ್ತಿ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗುತ್ತದೆ ಎಂದು ಒಂದು ಸಾಲಿನಲ್ಲಿ ಸರಳವಾಗಿ ಹೇಳಿಬಿಡಬಹುದು. 

ತಾರಾಗಣ: ಮನುರವಿಚಂದ್ರನ್, ಕಯಾದು ಲೋಹರ್, ರಂಗಾಯಣ ರಘು, ಅವಿನಾಶ್, ತಾರಾ

ನಿರ್ದೇಶನ: ಭರತ್ ನಾವುಂದ

ನಿರ್ಮಾಣ: ರಕ್ಷಾ ವಿಜಯ್ ಕುಮಾರ್

ರೇಟಿಂಗ್: 3

ಆದರೆ, ಈ ಸರಳವಾದ ಕತೆಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಡಲು, ಸಿನಿಮ್ಯಾಟಿಕ್ ತಿರುವುಗಳನ್ನು ಸೃಷ್ಟಿಸಲು, ಪಾತ್ರಧಾರಿಗಳನ್ನು ಕತೆಗೆ ಪೂರಕವಾಗಿ ದುಡಿಸಿಕೊಳ್ಳಲು ನಿರ್ದೇಶಕನ ಶ್ರಮ ಒಂದು ಸಾಲಿನ ಕತೆಯಷ್ಟು ಸರಳ ಅಲ್ಲ. ಹೆತ್ತವರ ಪ್ರೀತಿಯಿಂದ ವಂಚಿತರಾಗಿರುವ ನಾಯಕಿ, ತಂದೆಯ ಕೆಂಗಣ್ಣಿಗೆ ಗುರಿಯಾಗಿರುವ ನಾಯಕ, ಸಂಬಂಧಗಳಿಗೆ ಬೆಲೆ ಕೊಡುವ ಮತ್ತು ಕೊಡದಿರುವ ಎರಡು ಮನೆಗಳ ಕತೆಯಾಗಿ ಕಾಣುವ ಒಂದು ಮಾಮೂಲಿ ಪ್ರೇಮ ಕತೆಯನ್ನೇ ಮುಂಜಾನೆಯ ಮಂಜಿನ ಹನಿಗಳಷ್ಟೆ ತಣ್ಣಗೆ, ಫ್ರೆಶ್ ಆಗಿ ಹೇಳಿರುವುದು 'ಮುಗಿಲ್‌ಪೇಟೆ' ಚಿತ್ರದ ವಿಶೇಷತೆ.

MugilPete;ನನ್ನ ಮಕ್ಕಳು ಒಳ್ಳೆಯ ಚಿತ್ರ ಮಾಡಿದ್ದಾರೆಂಬ ನಂಬಿಕೆ ಇದೆ: ರವಿಚಂದ್ರನ್‌

ಹೀಗಾಗಿಯೇ ಮನು ರವಿಚಂದ್ರನ್ ಅವರು ತಮ್ಮ ಈ ಹಿಂದಿನ ಎರಡು ಚಿತ್ರಗಳನ್ನು ಈ ಚಿತ್ರದ ಮೂಲಕ ಮರೆಸುತ್ತಾರೆ. ಈ ಚಿತ್ರದಿಂದ ಮುದ್ದಾಗಿರುವ ನಾಯಕಿ ಕನ್ನಡಕ್ಕೆ ಪರಿಚಯವಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಟಿ ತಾರಾ ಹಾಗೂ ಅವಿನಾಶ್ ಅವರ ಜೋಡಿ ನಟನೆಗೆ ವಯಸ್ಸಾಗಿಲ್ಲ ಎಂಬುದು ಸಾಬೀತು ಮಾಡಿದ್ದಾರೆ. ಇನ್ನು ಸಾಧು ಕೋಕಿಲ ಅವರ ಹಾಸ್ಯಕ್ಕೆ ಮತ್ತಷ್ಟು ಜಾಗ ಕೊಡಬೇಕಿತ್ತು. ಅಲ್ಲದೆ ನಾಯಕ- ನಾಯಕಿಯ ಪ್ರೀತಿ ಮುರಿದು ಬೀಳುವುದಕ್ಕೆ ಕಾರಣವಾಗಿ ಸಸ್ಪೆನ್ಸ್ ಬಹಿರಂಗ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದು, ಈ ಹಂತದಲ್ಲಿ ನಿರೂಪಣೆ ಹಾಗೂ ಸಂಕಲನಕಾರನಿಗೆ ನಿರ್ದೇಶಕರು ಅಗತ್ಯಕ್ಕಿಂತ ಹೆಚ್ಚೇ ವಿಶ್ರಾಂತಿ ಕೊಟ್ಟಂತೆ ಕಾಣುತ್ತದೆ.

"