ಚಿತ್ರ ವಿಮರ್ಶೆ: ಮೌನಂ
ಇದೆಲ್ಲ ಸಾಧ್ಯವೇ? ಮಗ ಪ್ರೀತಿಸಿದ ಹುಡುಗಿಯನ್ನೇ ಅಪ್ಪ ಇಷ್ಟಪಡುವುದು ಸಹ್ಯವೇ? ಅರೆಬೆಂದ ಪ್ರೀತಿ, ಪ್ರೇಮದ ಕತೆ ದ್ವೀತಿಯಾರ್ಧದಲ್ಲಿ ಹೀಗೊಂದು ತಿರುವಿಗೆ ಬಂದು ನಿಂತಾಗ ಪ್ರೇಕ್ಷಕರು ಬೆಚ್ಚಿ ಬೀಳುತ್ತಾರೆ.
ದೇಶಾದ್ರಿ ಹೊಸ್ಮನೆ
ಸೊಸೆಯಾಗಲು ಬಂದವಳನ್ನೇ ವಿವಾಹವಾಗುತ್ತೇನೆ ಬಿಟ್ಟುಬಿಡು ಎಂದು ಮಗನನ್ನೇ ಅಂಗಲಾಚುವ ಆತನೇನು ಮನುಷ್ಯನೇ ಅಥವಾ ವಿಕೃತ ಕಾಮಿಯೇ? ಪ್ರೇಕ್ಷಕರ ಮನಸ್ಸು ಕುದಿಯುತ್ತದೆ. ಇನ್ನೊಂದೆಡೆ ಸಮಾಜವೇ ಒಪ್ಪಿಕೊಳ್ಳದ
ಇನ್ನಾವುದೋ ಸಂಬಂಧಕ್ಕೆ ನಿರ್ದೇಶಕ ಜೋತು ಬಿದ್ದರೇನೋ ಅಂತೆಲ್ಲ ನೋಡುಗರ ಮನಸ್ಸು ಕಸಿವಿಸಿಗೊಳ್ಳುತ್ತದೆ. ಆದರೆ ಕ್ಲೈಮ್ಯಾಕ್ಸ್ ಬೇರೆಯದೆ ಆದ ಕತೆ ಹೇಳುತ್ತದೆ.
ಚಿತ್ರ ವಿಮರ್ಶೆ: ಪಾಪ್‌ಕಾರ್ನ್ ಮಂಕಿ ಟೈಗರ್
ಅಲ್ಲಿಗೆ, ಎರಡೂವರೆ ತಾಸಿನ ಚಿತ್ರದ ಪಯಣ ನೋಡುಗನ ಪಾಲಿಗೆ ತುಸು ಕಷ್ಟ ಎನಿಸಿದರೂ, ಒಂದಷ್ಟು ಭಾವನೆಗಳನ್ನು ಕೆದಕಿ ಹೃದಯ ಭಾರವಾಗುವಂತೆ ಮಾಡುತ್ತದೆ. ಅದು ಈ ಚಿತ್ರಕ್ಕಿರುವ ದೊಡ್ಡ ಶಕ್ತಿ ಮತ್ತು ಮೆಚ್ಚುಗೆ ಆಗುವ ಅಂಶ. ಇದೊಂದು ತುಸು ವಿಭಿನ್ನ ಮತ್ತು ವಿಕ್ಷಿಪ್ತ ಕಥಾ ಹಂದರದ ಚಿತ್ರ. ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು, ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎನ್ನುವುದು ಚಿತ್ರದ ಅಂತರ್ಯದ ತಿರುಳು. ಅದನ್ನು ಹೇಳುವುದಕ್ಕೆ ನಿರ್ದೇಶಕರು ಬಳಸಿಕೊಂಡಿದ್ದು ಅಪ್ಪ-ಮಗನ ನಡುವಿನ ಒಂದು ಸೆಂಟಿಮೆಂಟ್ ಕತೆ, ಅದರ ಜತೆಗೆ ಇಬ್ಬರು ಕಾಲೇಜ್ ಹುಡಗ - ಹುಡುಗಿನ ನಡುವಿನ ಪ್ರೀತಿ-ಪ್ರೇಮದ ಪ್ರಸಂಗ್.
ಒಂದು ಹಂತದಲ್ಲಿ ಇವೆರಡು ವಿಚಿತ್ರ ತಿರುವಿಗೆ ಬಂದು ನಿಂತಾಗ ತಂದೆಗಿದ್ದ ಮಗನ ಮೇಲಿನ ಪ್ರೀತಿ ಹೇಗೆ ದ್ವೇಷಕ್ಕೆ ಬಂದು ನಿಲ್ಲುತ್ತದೆ. ಅಲ್ಲಿಂದ ಮುಂದೇನು ಅನ್ನೋದು ಸಸ್ಪೆನ್ಸ್. ಮುಂದೆನಾಗುತ್ತೆ ಅನ್ನೋದನ್ನು ಸಲೀಸಾಗಿ ಊಹಿಸಿಬಿಡುವಷ್ಟು ಸಾದಾಸೀದಾ ಕತೆ ಇದು. ಪಾತ್ರವರ್ಗದಲ್ಲಿ ಅವಿನಾಶ್ ಪ್ರಮುಖ ಆಕರ್ಷಣೆ. ಕಥಾ ನಾಯಕ ರಾಜುನ ತಂದೆ. ಒಂದೊಮ್ಮೆ ಆ ಪಾತ್ರವೇ ಅವರಿಗೆ ಬೇಡದಾಗಿತ್ತು ಅಂತೆನಿಸುತ್ತದೆ. ಅದಕ್ಕೆ ಕಾರಣ ಮಗ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲು ಬಯಸುವ ಅವರ ಕೆಟ್ಟ ಮನಸ್ಥಿತಿ. ಆ ಪಾತ್ರಕ್ಕೆ ಐದಾರು ಶೇಡ್ಸ್‌ಗಳಿವೆ. ಅಷ್ಟಕ್ಕೂ ಜೀವ ತುಂಬಿ ನಿಲ್ಲಿಸಿದ್ದಾರೆ ಅವಿನಾಶ್. ಅವರ ಪ್ರಬುದ್ಧ ನಟನೆ ಮೆಚ್ಚುಗೆ ಆಗುತ್ತದೆ.
ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್
ಕಿರುತೆರೆ ನಟ ನಾಯಕ ಬಾಲಾಜಿ ಶರ್ಮಾಗೆ ಇದು ಮೊದಲ ಸಿನಿಮಾ. ಕಟ್ಟು ಮಸ್ತು ದೇಹದ ಮೂಲಕ ಆ್ಯಕ್ಷನ್ ಮತ್ತು ಡಾನ್ಸ್‌ನಲ್ಲಿ ಇಷ್ಟವಾದರೂ, ನಟನೆಗೆ ಇನ್ನಷ್ಟು ತರಬೇತಿ ಬೇಕಿದೆ. ಲುಕ್ ಆ್ಯಂಡ್ ಗೆಟಪ್ ಗಳಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿರುವ ಮಯೂರಿ ಇಲ್ಲಿ ನೋಡುಗರಿಗೆ ಕಿರಿಕಿರಿ. ಕಾಲೇಜು ಹುಡುಗಿಯಾಗಿ ಇಷ್ಟವಾದರೂ, ಕೆಲವೆಡೆ ಅವರ ನಟನೆ ಹೆಚ್ಚಾಗಿದೆ. ಅದು ಬಾಲಿಷ ಎನಿಸುತ್ತದೆ. ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ ಅವರ ಹಾಸ್ಯ ಪ್ರಸಂಗಳು ಕಚಗುಳಿ ಇಡುತ್ತವೆ. ನಿಧಾನ ಗತಿಯ ನಿರೂಪಣೆಯ ಆಯಾಸವನ್ನು ಮರೆಯಲು ಅವು ಸಹಕಾರಿ ಆಗುತ್ತವೆ. ಶಂಕರ್ ಛಾಯಾಗ್ರಹಣ, ಅರವ್ ಸಂಗೀತ ಅದಕ್ಕೆ ಸಾಥ್ ನೀಡಿವೆ.