ಪ್ರಜ್ವಲ್ ದೇವರಾಜ್, ಮೇಘನಾ ರಾಜ್‌, ಶ್ರುತಿ, ಟಿಎಸ್‌ ನಾಗಾಭರಣ, ಗಿರಿಜಾ ಲೋಕೇಶ್ ನಟನೆಯ ತತ್ಸಮ ತದ್ಭವ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ.... 

ರಾಜೇಶ್ ಶೆಟ್ಟಿ

ಅತ್ಯತ್ತಮ ಚಿತ್ರಕತೆ ಇಲ್ಲದಿದ್ದರೆ ಅತ್ಯುತ್ತಮ ಥ್ರಿಲ್ಲರ್ ಆಗುವುದು ಅಸಾಧ್ಯ. ನಿರ್ದೇಶಕ ವಿಶಾಲ್ ಆತ್ರೇಯ ವಿಶಿಷ್ಟ ಬರವಣಿಗೆಯ ಮೂಲಕ ಜಾಣ ಚಿತ್ರಕತೆಯನ್ನಿಟ್ಟುಕೊಂಡು ರೂಪಿಸಿದ ಸೈಕಲಾಜಿಕಲ್ ಥ್ರಿಲ್ಲರ್ ಇದು.

ಆರಂಭ ಎಲ್ಲಾ ಥ್ರಿಲ್ಲರ್‌ಗಳಂತೆ ಇದೆ. ಆರಿಕಾ ಎಂಬ ಪಾತ್ರ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ದೂರು ಕೊಡುವಲ್ಲಿಗೆ ಕತೆ ಆರಂಭ. ಅಲ್ಲಿಗೆ ಒಂದು ಹೆಜ್ಜೆ ಇಟ್ಟಾಯಿತು. ಹಾಗಂತ ಎರಡನೇ ಹೆಜ್ಜೆ ಊಹಿಸಲು ಅಸಾಧ್ಯ ಎನ್ನುವಂತೆ ನಿರ್ದೇಶಕರು ಮತ್ತೊಂದು ತಿರುವು ತರುತ್ತಾರೆ. ಆ ತಿರುವುಗಳು ಪ್ರಥಮಾರ್ಧ ಪೂರ್ತಿ ಕೈಹಿಡಿದು ಎಳೆದುಕೊಂಡು ಹೋಗುತ್ತವೆ. ಆ ಮೂಲಕ ಥ್ರಿಲ್ಲರ್‌ಗೆ ಬೇಕಾಗಿರುವ ಗುಣ ಈ ಸಿನಿಮಾಗೆ ಪ್ರಾಪ್ತವಾಗಿದೆ.

ಮೆಟ್ರೋದಲ್ಲಿ ಪ್ರಯಾಣಿಸಿದ ಮೇಘಾ ರಾಜ್; ಪಬ್ಲಿಕ್‌ ಕೊಟ್ಟ ರಿಯಾಕ್ಷನ್ ವೈರಲ್!

ನಿರ್ದೇಶನ: ವಿಶಾಲ್ ಆತ್ರೇಯ

ತಾರಾಗಣ: ಪ್ರಜ್ವಲ್ ದೇವರಾಜ್, ಮೇಘನಾ ರಾಜ್‌, ಶ್ರುತಿ, ಟಿಎಸ್‌ ನಾಗಾಭರಣ, ಗಿರಿಜಾ ಲೋಕೇಶ್

ರೇಟಿಂಗ್: 3

ನಿರ್ದೇಶಕ ಪಾತ್ರಗಳನ್ನು ಕಟ್ಟುವಾಗಲೂ ಬಹಳ ಎಚ್ಚರಿಕೆ ವಹಿಸುತ್ತಾರೆ. ಅದಕ್ಕೆ ಪುರಾವೆ ಪ್ರಜ್ವಲ್ ದೇವರಾಜ್ ಪಾತ್ರ. ಆತ ಬುದ್ಧಿವಂತ. ಆ ಪಾತ್ರವನ್ನು ಬರೆಯುವಾಗಲೇ ಆ ಪಾತ್ರಕ್ಕೆ ಅಡುಗೆಯ ಮೇಲೆ ಇರುವ ಪ್ರೀತಿಯನ್ನು ಹೇಳುತ್ತಾರೆ. ಆ ಮೂಲಕ ಆ ಪಾತ್ರಕ್ಕೊಂದು ಹೆಚ್ಚಿನ ಘನತೆ ಒದಗಿಸುತ್ತಾರೆ. ಪೊಲೀಸ್ ಅಧಿಕಾರಿಯಾಗಿರುವ ಆತ ತನ್ನ ಮುಂದೆ ಇರುವ ಪ್ರಕರಣಗಳಿಗೆ ಅಂತ್ಯ ಹುಡುಕುವ ದಾರಿ ಮತ್ತು ಪ್ರಯಾಣ ಎರಡೂ ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದಾರೆ.

ಅತ್ತೆ ಕೈ ಹಿಡಿದು ಪತಿ ಸಿನಿಮಾ ನೋಡಲು ಬಂದ ರಾಗಿಣಿ ಪ್ರಜ್ವಲ್; ಫೋಟೋ ವೈರಲ್!

ಈ ಸಿನಿಮಾದಲ್ಲಿ ಪ್ರಮುಖವಾಗಿ ಮೂರು ವಿಶೇಷತೆಗಳಿವೆ. ಒಂದು ಬರವಣಿಗೆ, ನಿರ್ದೇಶನ. ಪಾತ್ರಗಳಿಗೆ, ವಸ್ತುವಿಗೆ ಹಲವು ಲೇಯರ್‌ಗಳಿರುವುದು ಮತ್ತು ಪ್ರತೀ ದೃಶ್ಯವನ್ನು ನೋಡಲೇಬೇಕು ಅನ್ನುವ ಅನಿವಾರ್ಯತೆ ಸೃಷ್ಟಿಸುವುದು ಬರವಣಿಗೆಯ ಹೆಚ್ಚುಗಾರಿಕೆ. ಎರಡನೇಯದು ಪ್ರಜ್ವಲ್ ದೇವರಾಜ್. ಅಬ್ಬರಗಳಿಲ್ಲದ ಒಬ್ಬ ಜಾಣ ಪೊಲೀಸ್ ಅಧಿಕಾರಿಯಾಗಿ ಅವರು ಗಮನ ಸೆಳೆಯುತ್ತಾರೆ. ಮೂರನೇಯದು ಮೇಘನಾ ರಾಜ್. ಅವರ ಪಾತ್ರ ಸರಳವಾಗಿ ಕಂಡರೂ ಸರಳವಾಗಿ ಇಲ್ಲ. ಪಾತ್ರದ ಎಲ್ಲಾ ಸಂಕೀರ್ಣತೆಗಳನ್ನು ದಾಟಿಸುವ ಮೂಲಕ ಮೇಘನಾ ಸಮರ್ಥವಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಇದೊಂದು ಸೊಗಸಾದ ಮತ್ತು ಬುದ್ಧಿವಂತ ಬರವಣಿಗೆಯ ಸೈಕಲಾಜಿಕಲ್ ಥ್ರಿಲ್ಲರ್.