ಮೆಟ್ರೋದಲ್ಲಿ ಪ್ರಯಾಣಿಸಿದ ಮೇಘಾ ರಾಜ್; ಪಬ್ಲಿಕ್ ಕೊಟ್ಟ ರಿಯಾಕ್ಷನ್ ವೈರಲ್!
ಸಿನಿಮಾ ನೋಡುತ್ತಿರುವ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಬೇಕು ಎಂದು ಮೆಟ್ರೋದಲ್ಲಿ ಪ್ರಯಾಣಿಸಿದ ಮೇಘನಾ ರಾಜ್. ವಿಡಿಯೋ ವೈರಲ್....
ವಿಶಾಲ್ ಆತ್ರೇಯಾ ನಿರ್ದೇಶನ, ಪನ್ನಗಾಭರಣ ನಿರ್ಮಾಣದ ತತ್ಸಮ ತದ್ಭವ ಸಿನಿಮಾದಲ್ಲಿ ನಟಿಸಿರುವ ಮೇಘನಾ ರಾಜ್ (Meghana Raj).
ಸ್ನೇಹಿತರು ಒಟ್ಟಿಗೆ ಸಿನಿಮಾ ಮಾಡಬೇಕು ಅನ್ನೋದು ಚಿರಂಜೀವಿ ಸರ್ಜಾ ಕನಸ್ಸು ಆಗಿತ್ತು. ಹೀಗಾಗಿ ಮೇಘನಾ ಜೊತೆ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ.
ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ತತ್ಸಮ ತದ್ಭವ ಸಿನಿಮಾ ರಿಲೀಸ್ ಅಗಿದೆ. ಮೊದಲ ದಿನ ಸಿನಿಮಾ ನೋಡುತ್ತಿರುವ ವೀಕ್ಷಕರನ್ನು ಮೇಘು ಭೇಟಿ ಮಾಡಿದ್ದಾರೆ.
ಜೆಪಿ ನಗರದಲ್ಲಿ ವಾಸಿಸುತ್ತಿರುವ ಮೇಘನಾ ರಾಜ್ ಮೆಟ್ರೋದಲ್ಲಿ ಸ್ಯಾಂಡಲ್ ಸೋಪ್ ಫ್ಯಾಕ್ಟರ್‌ವರೆಗೂ ಪ್ರಯಾಣಿಸಿ ಓರಾಯನ್ ಮಾಲ್ ತಲುಪಿದ್ದಾರೆ.
ತತ್ಸಮ ತದ್ಭವ ಸಿನಿಮಾ ನೋಡುತ್ತಿರುವ ಅಭಿಮಾನಿಗಳಿಗೆ ಇಂಟರ್‌ವಲ್‌ನಲ್ಲಿ ಮೇಘನಾ ರಾಜ್ ಸರ್ಪ್ರೈಸ್ ಮಾಡಿದ್ದಾರೆ. ಫ್ಯಾನ್ಸ್ ಖುಷಿಯಾಗಿದ್ದಾರೆ.
‘ಪ್ರೀಮಿಯರ್ ಶೋನಲ್ಲಿ ನಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಮೆಟ್ರೋದಲ್ಲಿ ಸಾಗಿದೆವು’ ಎಂದು ವಿಡಿಯೋ ಅಪ್ಲೋಡ್ ಮಾಡಿ ಪನ್ನಗಾಭರಣ ಬರೆದುಕೊಂಡಿದ್ದಾರೆ.