Asianet Suvarna News Asianet Suvarna News

Chase Film Review: ಕಥೆಗೆ ಹೊಸ ಸ್ವರೂಪ, ಅಭಿನಯವೇ ದೀಪ

ಭಾರತೀಯ ಚಿತ್ರರಂಗದಲ್ಲಿ ಮೂವಿ ಸ್ಟ್ರೀಮಿಂಗ್ ಹಾಗೂ ಡಿಸ್ಟ್ರಿಬ್ಯೂಷನ್ ನಲ್ಲಿ ತನ್ನದೇ ಒಂದು ಮಾರುಕಟ್ಟೆ ಸೃಷ್ಟಿಸಿರುವ ಯುಎಫ್ಒ ಸಂಸ್ಥೆ ಇದೀಗ ಚೇಸ್ ವಿತರಣೆ ಹಕ್ಕನ್ನು ಪಡೆದುಕೊಂಡಿದೆ.

Radhika Narayan Sheetal shetty chase in the dark movie review vcs
Author
Bengaluru, First Published Jul 16, 2022, 10:07 AM IST

ಪೀಕೆ

ಕಣ್ಣು ಕಾಣದ ನಿಧಿ ಏನು ತಾನೇ ಮಾಡಿಯಾಳು ಅಂತ ನಾವಂದುಕೊಳ್ಳುವ ಹೊತ್ತಿಗೆ ಅವಳು ಕೊಡುವ ಒಂದೇ ಒಂದು ಹೊಡೆತ ಡಾ ರಾಜೇಶ್‌ಗೆ ಕಣ್ಣು ಕತ್ತಲೆ ಬರುವ ಹಾಗೆ ಮಾಡುತ್ತದೆ. ಚೇಸ್‌ ಅನ್ನೋ ಹೊಸ ನಿರ್ದೇಶಕ ವಿಲೋಕ್‌ ಶೆಟ್ಟಿಅವರ ಸಿನಿಮಾವೂ ಅಷ್ಟೇ, ಇದ್ರಲ್ಲೇನಿರಬಹುದು ಅನ್ನೋ ಉಡಾಫೆಗೆ, ಇದು ಹೀಗೇ ಆಗಬಹುದು ಅನ್ನುವ ನಮ್ಮ ಊಹೆಗೆ ಆರಂಭದಿಂದ ಕೊನೆಯವರೆಗೂ ಹೊಡೆತ ಕೊಡುತ್ತಲೇ ಹೋಗುತ್ತದೆ, ಅರಗಿಸಿಕೊಳ್ಳೋಕೂ ಟೈಮ್‌ ಕೊಡದಂತೆ.

ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. ಒಂದು ಕೊಲೆ, ಒಂದು ಅಪಘಾತ, ಇದರ ಹಿನ್ನೆಲೆ ಹುಡುಕುತ್ತಾ ಹೋಗುವಾಗ ಮೆಡಿಕಲ್‌ ಮಾಫಿಯಾ ಎಂಬ ನಮ್ಮ ಊಹೆಯನ್ನೂ ಮೀರಿ ನಿಂತಿರುವ ಜಗತ್ತೊಂದರ ಅನಾವರಣವಾಗುತ್ತದೆ. ಯಾವುದೋ ಘಟನೆಯ ಕಾರಣವಾಗಿ ಸಿಗುವ ವ್ಯಕ್ತಿಗಳ ನಡುವೆ ಬೆಳೆಯುವ ಸಂಬಂಧ, ಆ ಮೂಲಕ ತೆರೆದುಕೊಳ್ಳುವ ಅವರ ಕಥೆ.. ಇವೆಲ್ಲ ವಿಭಿನ್ನ.

ಇಂಥ ಅವಕಾಶ ಪದೇ ಪದೇ ಬರೋದಿಲ್ಲ: ರಾಧಿಕಾ ನಾರಾಯಣ್‌

ತಾರಾಗಣ : ರಾಧಿಕಾ ನಾರಾಯಣ್‌, ಅವಿನಾಶ್‌ ನರಸಿಂಹರಾಜು, ರಾಜೇಶ್‌ ನಟರಂಗ, ಶೀತಲ್‌ ಶೆಟ್ಟಿ, ಅರವಿಂದ್‌ ರಾವ್‌, ಅರ್ಜುನ್‌ ಯೋಗಿ

ನಿರ್ದೇಶನ: ವಿಲೋಕ್‌ ಶೆಟ್ಟಿ

ರೇಟಿಂಗ್‌ : 4

ಬೆರಗುಗೊಳಿಸುವ ವೇಗವಿದೆ. ಹೀಗಾಗಿ ಸೂಕ್ಷ್ಮ ಸಂಗತಿಗಳು ಕಣ್ಮರೆಯಾಗಿವೆ. ಆದರೆ ಅಂಧ ನಾಯಕಿ ನಿಧಿಯ ಪಾತ್ರ ಪವರ್‌ಫುಲ್‌. ಸಣ್ಣ ಸದ್ದು, ಸೂಕ್ಷ್ಮ ಗ್ರಹಿಕೆ, ಚುರುಕು ಚಲನೆಯ ಈ ಪಾತ್ರ ತನ್ನನ್ನು ತಾನು ರಕ್ಷಣೆ ಮಾಡುವುದಲ್ಲದೇ, ದುಷ್ಟರನ್ನು ಬಗ್ಗು ಬಡಿಯಬಲ್ಲದು. ನಿರ್ದೇಶಕ ವಿಲೋಕ್‌ ಅವರ ಕಲ್ಪನೆ, ರಾಧಿಕಾ ನಾರಾಯಣ್‌ ಅವರ ನಟನೆ ಎರಡೂ ಬೆಸ್ಟ್‌.

ಚೇಸ್ ವಿತರಣೆ ಹಕ್ಕು UFOಗೆ ಮಾರಾಟ; ಜುಲೈ 15ರಿಂದ ಶುರುವಾಗುತ್ತೆ ಚೇಸ್ ಆಟ!

ಲಿಪ್‌ಸಿಂಕ್‌ ಸಮಸ್ಯೆ, ಕೆಲವೊಂದು ದೃಶ್ಯ ಬಯಸುವ ಸಮರ್ಥನೆಗಳಾಚೆಯೂ ಬೆಳೆಯುವ ಶಕ್ತಿ ಕಥೆಗೂ, ನಿರೂಪಣೆಗೂ ಇದೆ.

ನಿಧಿ, ಯಶ್‌ ಬಿಟ್ಟರೆ ಉಳಿದೆಲ್ಲ ಪಾತ್ರಗಳ ಹೆಸರೂ ಅವರ ನಿಜ ಹೆಸರೇ ಆಗಿವೆ. ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಅವಿನಾಶ್‌ ಜಸ್ಟ್‌ ವ್ಹಾ! ಅರವಿಂದ್‌ ಮುಖದ ಗೆರೆ, ಕಣ್ಣಿನ ಸೂಕ್ಷ್ಮ ಚಲನೆಯಲ್ಲೇ ಬಹಳಷ್ಟನ್ನು ಹೇಳುತ್ತಾರೆ. ಶೀತಲ್‌ ಶೆಟ್ಟಿ, ರಾಜೇಶ್‌ ನಟರಂಗ, ಅರ್ಜುನ್‌ ಯೋಗಿ, ಶ್ವೇತಾ ಮೊದಲಾದವರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬ್ರೂನಿ ಹೆಸರಿನ ನಾಯಿ ಪಾತ್ರವೂ ಪೂರಕವಾಗಿ ಬಂದಿದೆ. ಹೊಡೆದಾಟಗಳು ಸಹಜತೆಯ ಹೊಸಿಲು ದಾಟಿಲ್ಲ.

ಕನ್ನಡದ ಮಟ್ಟಿಗೆ ಹೊಸತನದ ನಿರೂಪಣೆ ಇರುವ ಒಂದೊಳ್ಳೆ ಸಿನಿಮಾ ಚೇಸ್‌.

Follow Us:
Download App:
  • android
  • ios