Dhruva Sarja And Prem KD Kannada Movie Review: ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಇಂದು ರಿಲೀಸ್ ಆಗಿದೆ. ಧ್ರುವ ಸರ್ಜಾ, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೋಡಿದವರು ಸಿನಿಮಾ ಹೇಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜೋಗಿ ಪ್ರೇಮ್ ( Jogi Prem ) ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೆಡಿ’ ( KD Kannada Movie ) ಇಂದು (ಏ.30) ಬಿಡುಗಡೆಯಾಗಿದೆ. ಈ ಪ್ಯಾನ್ ಇಂಡಿಯಾ ಇಂದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದು, ಪರಭಾಷೆಗಳಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಈ ಸಿನಿಮಾ ಕುರಿತು ಧ್ರುವ ಸರ್ಜಾ ( Dhruva Sarja ) , ‘ಕಾಳಿದಾಸ ಎಂಬ ಪಾತ್ರದ ಮೂಲಕವೇ ಈ ಸಿನಿಮಾದ ಕತೆ ನಡೆಯುತ್ತಿರುತ್ತದೆ. ಅವನ ಜಗತ್ತಲ್ಲಿ ಯಾರಾರಿದ್ದಾರೆ ಎಂಬುದನ್ನು ತಿಳಿಯುತ್ತಾ ಹೋಗುತ್ತಿದ್ದಂತೆ ನೋಡುಗರೂ ಕನೆಕ್ಟ್ ಆಗುತ್ತಾರೆ. ಈ ಸಿನಿಮಾವನ್ನು ಬಹಳ ಶ್ರಮಪಟ್ಟು ಚಿತ್ರೀಕರಣ ಮಾಡಿದ್ದೇವೆ. ಪ್ರೇಕ್ಷಕರು 2 ಗಂಟೆ 20 ನಿಮಿಷ ಕೊಟ್ಟು ಈ ಸಿನಿಮಾ ನೋಡಬೇಕು ಎಂದು ವಿನಂತಿಸುತ್ತೇನೆ. ನನ್ನ ಈ ಹಿಂದಿನ ಸಿನಿಮಾಗಳಿಗಿಂತ ಬೇರೆ ರೀತಿಯ ಪಾತ್ರವನ್ನು ನೋಡಬಹುದು’ ಎಂದು ಹೇಳಿದ್ದಾರೆ.
ಈ ಚಿತ್ರದಲ್ಲಿ ಸುದೀಪ್ ಅವರು ಕಾಲಭೈರವ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಅವರ ಕುರಿತು ಮಾತನಾಡಿರುವ ಧ್ರುವ, ‘ಸುದೀಪ್ ಅವರಿಗೆ ಬಹಳ ದೊಡ್ಡ ಯಶಸ್ಸು ಕಂಡಿದ್ದಾರೆ. ಅಷ್ಟಿದ್ದರೂ ಅವರಿಗೆ ಅಹಂಕಾರ ಇಲ್ಲ. ಆ ಪಾಠವನ್ನು ಅವರಿಂದ ನಾನು ಈ ಸಿನಿಮಾದಲ್ಲಿ ಕಲಿತಿದ್ದೇನೆ’ ಎಂದು ಹೇಳಿದರು.
ಈ ಸಿನಿಮಾ ಕಥೆ ಏನು?
ರೀಷ್ಮಾ ನಾಣಯ್ಯ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ. 1975ರಲ್ಲಿ ನಡೆದ ಅಂಡರ್‌ವರ್ಲ್ಡ್ ಕಥೆಯನ್ನು ಜೋಗಿ ಪ್ರೇಮ್ ಅವರು ಸಖತ್ ಆಗಿ ಕಥೆ ಮಾಡಿದ್ದಾರೆ. ಧ್ರುವ ಸರ್ಜಾ ಅವರು ಆಕ್ಷನ್ ಪ್ರಿನ್ಸ್ ಅಲ್ಲ, ಆಕ್ಷನ್ ಟೈಗರ್ ಎಂದು ಕರೆಯಬೇಕು, ಅಷ್ಟು ಚೆನ್ನಾಗಿ ಮಾಡಿದ್ದಾರೆ.
ಸಿನಿಮಾ ಹೇಗಿದೆ?
- ಕಿಚ್ಚ ಸುದೀಪ್ ಅವರ ಎಂಟ್ರಿ ಸಖತ್ ಆಗಿದೆ
- ಧ್ರುವ ಸರ್ಜಾ ಎಂಟ್ರಿ ಕೂಡ ಚೆನ್ನಾಗಿದೆ
- ಫಸ್ಟ್ ಹಾಫ್‌ನಲ್ಲಿ ಸಖತ್ ಆಗಿದೆ
- ಕುರ್ಚಿ ತುತ್ತ ತುದಿ ಕೂತು ನೋಡಬಹುದು
- ಸಿನಿಮಾಟೋಗ್ರಫಿ ಚೆನ್ನಾಗಿದೆ
- ಸುದೀಪ್ ಅವರ ಕಾಲಭೈರವ ಎಂಟ್ರಿ ಚೆನ್ನಾಗಿದೆ
- ಧ್ರುವ ಸರ್ಜಾ ನಟನೆ ಚೆನ್ನಾಗಿದೆ, ಧ್ರುವ ಸರ್ಜಾ ಅವರನ್ನು ಈ ಲುಕ್‌ನಲ್ಲಿ ಈ ಹಿಂದೆ ನೋಡಿರಲಿಲ್ಲ.
- ಮ್ಯೂಸಿಕ್ ಚೆನ್ನಾಗಿದೆ
- ನಿರೀಕ್ಷೆಯನ್ನು ತಲುಪಿದ್ದಾರೆ
- ಎಲ್ಲಿಯೂ ಬೋರ್ ಆಗಿರಲಿಲ್ಲ, ಎಲ್ಲಿಯೂ ಕೂತ್ಕೊಳೋಳೆ ಆಗಲಿಲ್ಲ, ಅಷ್ಟು ಎಂಟರ್‌ಟೇನಿಂಗ್ ಆಗಿದೆ
ಧ್ರುವ ಸರ್ಜಾ ಪತ್ನಿ ಏನಂದ್ರು?
ಫಸ್ಟ್ ಡೇ ಮಾರ್ನಿಂಗ್ ಶೋಗೆ ಬಂದಿರುವ ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್ ಅವರು ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ತೆರೆ ಮೇಲೆ ಬಂದಾಗ, ಫ್ಯಾನ್ ಥರ ಎಂಜಾಯ್ ಮಾಡಿದೆ ಎಂದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಹೇಳಿದ್ದಾರೆ.


