Shiva 143 Review: ಪ್ರೀತಿ ಆಮೋದ, ಮೋಸ ಆಕ್ರೋಶ

ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಶಿವ 143 ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಧೀರೆನ್‌ ರಾಮ್‌ಕುಮಾರ್‌ ಚೊಚ್ಚಲ ಸಿನಿಮಾ ಇದಾಗಿದ್ದು ಮಾನ್ವಿತಾ ಹರೀಶ್ ಜೋಡಿಯಾಗಿದ್ದಾರೆ. ಹೇಗಿದೆ ಸಿನಿಮಾ?

Dheeren Ramkumar Manvitha Harish Shiva 143 movie review vcs

ಆರ್‌ ಕೇಶವಮೂರ್ತಿ

ಅವನಿಗೆ ಅವಳು ಬೇಕು. ಆತನಿಗೆ ಈತ ಊರು ಬಿಟ್ಟು ಹೋಗಬೇಕು. ಇಲ್ಲಿ ಅವನು ನಾಯಕ, ಆತ ನಾಯಕನ ಸಾಕು ತಂದೆ. ಇವರಿಬ್ಬರ ಕತೆಯಂತೆ ಸಾಗುವ ‘ಶಿವ 143’ ಚಿತ್ರದ ಒಳಗುಟ್ಟೇ ಬೇರೆ. ಸಾಕು ತಂದೆಗಾಗಿ ಪ್ರಾಣ ಕೊಡಲು ತಯಾರಿರುವ ಶಿವ, ಆ ಹಳ್ಳಿ ಬಿಟ್ಟು ಯಾಕೆ ಕದಲಲ್ಲ ಎನ್ನುವ ಗತಕಾಲದ ವಾರ್ತೆಗಳಿಗೆ ಕಿವಿ ಮತ್ತು ಕಣ್ಣು ಕೊಟ್ಟರೆ ಅಲ್ಲಿ ಊರ ಗೌಡನ ಮಗಳು, ಆ ಗೌಡನ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಹುಡುಗನ ಪ್ರೇಮ ಕತೆ ತೆರೆದುಕೊಳ್ಳುತ್ತದೆ. ಅದು ಮಧು ಮತ್ತು ಶಿವನ ಪ್ರೇಮ ಪಯಣ. ನಾಯಕನ ಯೌವ್ವನಕ್ಕೆ ಮನಸೋತು ಆತನನ್ನು ಅತಿಯಾಗಿ ಪ್ರೀತಿಸುತ್ತಾಳೆ. ಯಾವಾಗ ತನ್ನ ಪ್ರೀತಿ ಹೆತ್ತ ತಂದೆಗೆ ಗೊತ್ತಾಗುತ್ತದೋ ಆಗ ನಾಯಕಿಯ ಪ್ರೀತಿಯಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತದೆ.

Gaalipata 2Film Review: ಪ್ರಾಯಶಃ ಭಾಗಶಃ ಪ್ರೇಮ ಪರವಶ

ಮಧು, ಶಿವನನ್ನು ಪ್ರೀತಿ ಮಾಡೇ ಇಲ್ಲ. ಆಕೆ ಪ್ರೀತಿ ಹೆಸರಿನಲ್ಲಿ ಕಟ್ಟುಮಸ್ತಾಗಿದ್ದ ಶಿವನ ಜತೆಗೆ ತಿರುಗಾಡಿ ಹುಡುಕಾಟ ಆಡಿದಳು. ಪ್ರೀತಿಯ ಹೆಸರಿನಲ್ಲಿ ಹುಡುಕಾಟ ಆಡಲು ಒಬ್ಬ, ಮದುವೆ ಮತ್ತು ಜೀವನಕ್ಕೆ ಮತ್ತೊಬ್ಬ ಎನ್ನುವ ಮನಸ್ಥಿತಿಯ ಹುಡುಗಿಯ ಸುತ್ತ ಸಾಗುವ ಈ ಕತೆಯಲ್ಲಿ ನಾಯಕಿಯೇ ವಿಲನ್‌ ಹಾಗೂ ಹೀರೋ ಎಂಬುದು ಚಿತ್ರದ ಹೊಸ ತಿರುವು. ಕತೆ ಎಲ್ಲೋ ಕೇಳಿ ಅಥವಾ ನೋಡಿದಂತಿದೆಯಲ್ಲ ಎನ್ನುವ ಗುಮಾನಿ ಬಂದರೆ ತೆಲುಗಿನ ‘ಆರ್‌ಎಕ್ಸ್‌ 100’ ಹೆಸರಿನ ಸಿನಿಮಾ ಪ್ರತ್ಯಕ್ಷವಾಗುತ್ತದೆ. ತೆಲುಗಿನ ರೀಮೇಕ್‌ ಸಿನಿಮಾ ಮೂಲಕ ಧೀರನ್‌ ರಾಮ್‌ಕುಮಾರ್‌ ಶಿವನಾಗಿ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನಲ್ಲಿ ಸೂಪರ್‌ಹಿಟ್‌ ಆಗಿದ್ದ ‘ಆರ್‌ಎಕ್ಸ್‌ 100’ ಸಿನಿಮಾ ಕನ್ನಡಕ್ಕೆ ‘ಶಿವ 143’ ಆಗಿದೆ. ಸಂಭಾಷಣೆಗಳಲ್ಲಿ ಪಳಗಿದ ಕೈ ಅನಿಲ್‌ ಕುಮಾರ್‌ ಅವರು ಚಿತ್ರಕ್ಕೆ ಸಾಧ್ಯವಾದಷ್ಟುಮಾಸ್‌ ಹಾಗೂ ಆ್ಯಕ್ಷನ್‌ ಇಮೇಜ್‌ ನೀಡಿದ್ದಾರೆ.

Ravi Bopanna Film Review: ಹೂವಿನ ಲೋಕದಲ್ಲಿ ತನಿಖಾ ಜಾಡು ಹಿಡಿದ ಬೋಪಣ್ಣ

ತಾರಾಗಣ: ಧೀರೇನ್‌ ರಾಮ್‌ಕುಮಾರ್‌, ಮಾನ್ವಿತಾ, ಅವಿನಾಶ್‌, ಚರಣ್‌ ರಾಜ್‌, ಚಿಕ್ಕಣ್ಣ, ಶೋಭರಾಜ್‌, ಸಾಧು ಕೋಕಿಲ

ನಿರ್ದೇಶನ: ಅನಿಲ್‌ ಕುಮಾರ್‌

ರೇಟಿಂಗ್‌: 3

ಪಾತ್ರಧಾರಿಗಳ ವಿಚಾರಕ್ಕೆ ಬಂದರೆ ಅವಿನಾಶ್‌, ಚರಣ್‌ರಾಜ್‌ ಚಿತ್ರದ ದೊಡ್ಡ ಪಿಲ್ಲರ್‌ಗಳು. ಪೊಲೀಸ್‌ ಪಾತ್ರದಲ್ಲಿ ಶೋಭರಾಜ್‌ ಆಗಾಗ ಬಂದು ಹೋಗುತ್ತಾರೆ. ಮ್ಯಾರೇಜ್‌ ಬ್ರೋಕರ್‌ ಆಗಿ ಸಾಧುಕೋಕಿಲ ಪಾತ್ರ ನಗಿಸುವ ಭರವಸೆ ಕೊಟ್ಟು ಕಾಣೆಯಾಗುತ್ತದೆ. ಚಿಕ್ಕಣ್ಣ ಪಾತ್ರ ಇದ್ದಕ್ಕಿದ್ದಂತೆ ಗಂಭೀರವಾಗುತ್ತದೆ.

ಧೀರೇನ್‌ ರಾಮ್‌ಕುಮಾರ್‌ ಮಾಸ್‌ ಹಾಗೂ ಆ್ಯಕ್ಷನ್‌ ಲುಕ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಈ ಚಿತ್ರದ ಮೂಲಕ ರಾಜ್‌ ಕುಟುಂಬದಿಂದ ಮತ್ತೊಬ್ಬ ಆ್ಯಕ್ಷನ್‌ ಹೀರೋ ಬಂದಂತಾಗಿದೆ. ಫೈಟ್‌, ಡ್ಯಾನ್ಸ್‌, ಸ್ಕ್ರೀನ್‌ ಅಪಿಯರೆನ್ಸ್‌ ಚೆನ್ನಾಗಿದೆ. ನಾಯಕಿ ಮಧು ಪಾತ್ರದಲ್ಲಿ ಮಾನ್ವಿತಾ ತಮ್ಮ ಅಂದ- ಚೆಂದವನ್ನು ಸಾಧ್ಯವಾದಷ್ಟುತೆರೆದಿಟ್ಟಿದ್ದಾರೆ. ಆ ಮೂಲಕ ತೆಲುಗಿನಲ್ಲಿ ಪಾಯಲ್‌ ರಜಪೂತ್‌ ಮಾಡಿದ ಪಾತ್ರಕ್ಕೆ ಇಲ್ಲಿ ನ್ಯಾಯ ಸಲ್ಲಿಸಲು ತೆರೆ ಮೇಲೆ ಶ್ರಮದಾನ ಮಾಡಿದ್ದಾರೆ. ಮಾನ್ವಿತಾ ಶ್ರಮದಾಟ ಮೆಚ್ಚಿಕೊಂಡರೆ ಅದು ಪ್ರೇಕ್ಷಕರಿಗೆ ಸಿಗುವ ಗ್ಲಾಮರ್‌ ಬೋನಸ್‌.

Latest Videos
Follow Us:
Download App:
  • android
  • ios