ಪುರಾತನ ಕಾಲದಿಂದಲೂ ಬೇರು ಬಿಟ್ಟಿರುವ ಜಾತಿ ಪದ್ಧತಿ ವಿರುದ್ಧ ಹೋರಾಡೋ ಸಿನಿಮಾ ಕಾಟೇರ!
ಕಣಿವೆ ರಾಜ್ಯದ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತ ಕೊಲೆ ಬಿಂಬಿಸುವ ಚಿತ್ರ ದಿ ಕಾಶ್ಮೀರಿ ಫೈಲ್ಸ್. ಆದರೆ, ಕಾಟೇರಾ ಪುರಾತನ ಕಾಲದಿಂದಲೂ ಭಾರತದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿಯನ್ನು ಬಿಂಬಿಸುವ ಸಿನಿಮಾ.
-ಪಿ.ತ್ಯಾಗರಾಜ್
'ಕಾಟೇರ..' ತಡವಾಗಿ ನೋಡಿದೆ. ಸಾಮಾಜಿಕ ಸಂದೇಶ ಇರುವ ಅದ್ಭುತ ಚಿತ್ರ. ಪ್ಯಾನ್ ಇಂಡಿಯಾ ಚಿತ್ರವಾಗಲೂ ಯೋಗ್ಯವಿತ್ತು, 'ದಿ ಕಾಶ್ಮೀರ್ ಫೈಲ್ಸ್' ತರಹ!
ಕಣಿವೆ ರಾಜ್ಯದಲ್ಲಿ ಕಾಶ್ಮೀರಿ ಪಂಡಿತರ ಕಗ್ಗೊಲೆ, ಹಿಂಸೆ, ಶೋಷಣೆ ಬಗ್ಗೆ 'ದಿ ಕಾಶ್ಮೀರಿ ಫೈಲ್ಸ್' ಕನ್ನಡಿ ಹಿಡಿದರೆ, 'ಕಾಟೇರ' ದೇಶವ್ಯಾಪಿ ಕ್ಯಾಕ್ಟಸ್ ಕಳ್ಳಿಯಂತೆ ಹಬ್ಬಿಕೊಂಡಿರುವ ಜಾತಿ ಪದ್ಧತಿಯ ಅಮಾನುಷ ಬೀಳಲುಗಳಲ್ಲಿ ಮಾನವೀಯತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದರ ಪ್ರತಿಬಿಂಬ!
ಉಳುವವನಿಗೇ ಭೂಮಿ ಕೊಟ್ಟ ಭೂಸುಧಾರಣೆ ಕಾಯ್ದೆ ವಿರುದ್ಧ ಸೆಟೆದ ಜಮೀನುದಾರರ ನರಮೇಧ ಪಿತೂರಿ ವಿರುದ್ಧ ಸಿಡಿದೆದ್ದ ಗೇಣಿದಾರ ನಾಯಕನ ರಕ್ತಸಿಕ್ತ ಹೋರಾಟ ಬಿಂಬಿಸುವುದು ಒಂದೆಡೆಯಾದರೆ, ಜಾತಿ ಪದ್ಧತಿ ಅದಕ್ಕಿಂತಲೂ ಕ್ರೂರಿ ಎಂದು ಸಾರುವುದೇ ಚಿತ್ರದ ತಿರುಳು. ಚಿತ್ರಕಥನದಲ್ಲಿ ಶೋಷಿತರ ಸಹನೆ ಜ್ವಾಲಾಮುಖಿಯಂತೆ ಸ್ಫೋಟಿಸಿದಾಗ ರಕ್ತ ಲಾವರಸದಂತೆ ಹರಿಯುತ್ತದೆ. ಹಾಗೇ 'ಕಾಟೇರ'ನ ಬೀಸುಗತ್ತಿ ಏಟುಗಳಿಗೂ ರಕ್ತ ಕೋಡಿಯಾಗುತ್ತದೆ. ಹಾಗೇ ಹರಿದ ರಕ್ತವನ್ನೇ ಹೆಪ್ಪುಗಟ್ಟಿಸುವಂತಿವೆ ಚಿತ್ರದ ಡೈಲಾಗ್ಸ್!
Kaatera: ‘ಕಾಟೇರ’ ಸೆಲೆಬ್ರಿಟಿ ಶೋ ಹೌಸ್‌ಫುಲ್: ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ ದರ್ಶನ್,ರಾಕ್‌ಲೈನ್ !
ಟಪ್ರತಿ ಮಚ್ಚು ಎರಡು ದಪ ಕೆಂಪಾಗ್ ತೈತೆ. ಒಂದು ದಪ ಬೆಂಕೀಲಿ ಬೆಂದಾಗ, ಇನ್ನೊಂದು ದಪ ರಕ್ತದಲ್ಲಿ ನೆಂದಾಗ!' '
ಬೇಡ ಕಾಟೇರ, ಅವರ ಸಹವಾಸ. ಸಾಯಿಸಿಬಿಡ್ತಾರೆ...' 'ಈಗಲೂ ತಾನೇ ನಾವೆಲ್ಲಿ ಬದುಕಿದ್ದೀವಿ..?'
ಇಂತಹ ಹತ್ತಾರು ಡೈಲಾಗ್‌ಗಳು ಎದೆಗಿಳಿಯುತ್ತವೆ. ನೆನಪಲ್ಲಿಟ್ಟು ಮೆಲುಕು ಹಾಕಲು ಹಪಹಪಿಸುತ್ತವೆ!
'ದಾಸ'ನ ನಂತರ ದರ್ಶನ್ ಒಳಗಿನ ನೈಜ ಕಲಾವಿದ ಹಿಪ್ಪೇಕಾಯಲ್ಲಿ ಹಿಂಡಿ ತೆಗೆದ ಎಣ್ಣೆಯಲ್ಲಿ ಬೆಳಗಿದ 'ತೂಗುದೀಪ'ದಂತೆ ಪ್ರಜ್ವಲಿಸಿರುವುದು 'ಕಾಟೇರ'ದಲ್ಲಿ. ಎಲ್ಲೂ ಅತಿ ಮಾಡಿಲ್ಲ. ಚಿತ್ರದುದ್ದಕ್ಕೂ ಕಾಪಿಟ್ಟುಕೊಂಡಿರುವ ನಿಸ್ತೇಜ ಕಣ್ಣುಗಳೇ ಪಾತ್ರಕ್ಕೆ ಜೀವ ತುಂಬಿವೆ. ಇನ್ನೊಮ್ಮೆ ನೋಡಬೇಕು ಎನ್ನುವಷ್ಟರ ಮಟ್ಟಿಗೆ.
'ದಿ ಕಾಶ್ಮೀರ್ ಫೈಲ್ಸ್' ಪ್ರಚಾರ ಕ್ರಾಂತಿಗೆ ಹರಿದ ನದಿಗಟ್ಟಲೆ ಶಾಯಿ 'ಕಾಟೇರ' ವಿಚಾರದಲ್ಲಿ ಬತ್ತಿ ಹೋದಂತಿದೆ! ಇದಕ್ಕೆರಡು ಕಾರಣವಿರಬಹುದು. ಒಂದು, ಪುರಾತನ ಭರತ ಖಂಡದಿಂದ ಆಧುನಿಕ ಭಾರತದವರೆಗೂ ಬೇರು ಬಿಟ್ಟಿರುವ ಜಾತಿ ಪದ್ಧತಿ ವಿರುದ್ಧದ ಸಿನಿಮಾ ಸಹ್ಯವಾಗುವುದು ಕಷ್ಟ! ಇನ್ನೊಂದು, ಜಾತಿ ವ್ಯವಸ್ಥೆ ವಿರುದ್ಧದ ಅಸ್ತ್ರವಾಗಿ ಇಂದಿರಾಗಾಂಧಿ, ದೇವರಾಜ ಅರಸು ಜಾರಿಗೆ ತಂದ ಭೂಸುಧಾರಣೆ ಕಾಯ್ದೆ ಪರ ಸಿನಿಮಾ ಇದಾಗಿರುವುದು. ಮಿದುಳಿನ ಮಾತು ನಿರಾಕರಿಸುವ ಮನಸ್ಸಿಗೆ ವಿರುದ್ಧವಾಗಿ ಅಕ್ಷರಗಳು ಮೂಡುವುದು ಕಷ್ಟ!
ಕಾಟೇರ ಯಶಸ್ಸಿನ ಬಳಿಕ ಪ್ಯಾರಿಸ್ಗೆ ಹಾರಿದ ಆರಾಧನಾ: ಅಮ್ಮ ಮಾಲಾಶ್ರಿ ಜೊತೆ ಸಕತ್ ಸ್ಟೆಪ್- ವಿಡಿಯೋ ವೈರಲ್
'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಮಾದರಿಯಲ್ಲೇ 'ಕಾಟೇರ'ವನ್ನೂ ಬಳಸಿಕೊಳ್ಳಲು ಅವಕಾಶವಿತ್ತು. ಜಾತಿ ಪದ್ಧತಿ ಸಾಮಾಜಿಕ ಪಿಡುಗು ಎನ್ನುವವರು 'ಕಾಟೇರ' ಸಿನಿಮಾಕ್ಕೂ ತೆರಿಗೆ ವಿನಾಯಿತಿ ಘೋಷಿಸಬಹುದಿತ್ತು. ಯಾರು ಏನಾದರೂ ಮಾಡಲಿ, ಬಿಡಲಿ ಇವೆಲ್ಲವನ್ನೂ ಮೀರಿ ಚಿತ್ರ ಗೆದ್ದಾಗಿದೆ.