ಸೋತ ನಿರ್ಮಾಪಕನ ಭಾವುಕತೆ ಜೊತೆಗೆ ಆಕ್ರೋಶ, ಪ್ರತಿಭಾವಂತ ನಿರ್ದೇಶಕನ ಕನಸುಗಳ ಜೊತೆಗೆ ಹೋರಾಟ, ನಟ-ನಟಿ ಎನಿಸಿಕೊಳ್ಳುವುದಕ್ಕೆ ಕಾಯುತ್ತಿರುವವರು... ಹೀಗೆ ಪುಟ್ಟ ಪುಟ್ಟ ಪಾತ್ರಗಳೇ ಚಿತ್ರದ ಜೀವಾಳ ಎಂಬುದು ಟೈಮ್ ಪಾಸ್.
ಕೇಶವ
ಆತ ಸೋತ ನಿರ್ಮಾಪಕ. ಈತ ಏನಾದರು ಮಾಡಿ ನಿರ್ದೇಶಕ ಎನಿಸಿಕೊಳ್ಳಬೇಕೆಂದು ಕಾಯುತ್ತಿರುವ ಯುವಕ. ಕೊನೆಗೆ ಇಬ್ಬರು ಭೇಟಿ ಆಗುತ್ತಾರೆ. ಮುಂದೇನು ಎನ್ನುವ ಪ್ರಶ್ನೆಗೆ ‘ಟೈಮ್ ಪಾಸ್’ ಎನ್ನುವ ಚಿತ್ರವೇ ಉತ್ತರ. ಚಿತ್ರದ ಹೆಸರಿಗೆ ತಕ್ಕಂತೆ ಇದು ಪಕ್ಕಾ ಟೈಮ್ ಪಾಸ್. ಜೊತೆಗೆ ಎಂಟರ್‌ಟೈನ್‌ಮೆಂಟ್ ಕೂಡ. ತುಂಬಾ ದಿನಗಳ ನಂತರ ಸಿನಿಮಾದವರ ಕತೆ ಹೇಳುವ ಚಿತ್ರವೊಂದನ್ನು ನಿರ್ದೇಶಕ ಚೇತನ್ ಜೋಡಿದಾರ್ ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಸೋತ ನಿರ್ಮಾಪಕನ ಭಾವುಕತೆ ಜೊತೆಗೆ ಆಕ್ರೋಶ, ಪ್ರತಿಭಾವಂತ ನಿರ್ದೇಶಕನ ಕನಸುಗಳ ಜೊತೆಗೆ ಹೋರಾಟ, ನಟ-ನಟಿ ಎನಿಸಿಕೊಳ್ಳುವುದಕ್ಕೆ ಕಾಯುತ್ತಿರುವವರು... ಹೀಗೆ ಪುಟ್ಟ ಪುಟ್ಟ ಪಾತ್ರಗಳೇ ಚಿತ್ರದ ಜೀವಾಳ ಎಂಬುದು ‘ಟೈಮ್ ಪಾಸ್’ ಚಿತ್ರಕ್ಕಿರುವ ಮೊದಲ ಕ್ವಾಲಿಫಿಕೇಷನ್. ಟೈಮ್ ಪಾಸ್‌ಗೆ ಅಂತ ಮಾಡಿದ ಸಿನಿಮಾ ದುಡ್ಡು ಮಾಡಿ ಕೊಡುತ್ತದೆ. ಆದರೆ, ಆ ಸಿನಿಮಾ ಮಾಡಿದ ನಿರ್ಮಾಪಕ ಕೊನೆಗೆ ಏನಾಗುತ್ತಾನೆ ಎನ್ನುವುದನ್ನು ಅತ್ಯಂತ ಆಪ್ತವಾಗಿ ಹೇಳಿರುವುದು ಚಿತ್ರದ ಎಮೋಷನ್ ಪಾಯಿಂಟ್.
ಚಿತ್ರ: ಟೈಮ್ ಪಾಸ್
ತಾರಾಗಣ: ಇಮ್ರಾನ್ ಪಾಶಾ, ರಕ್ಷಾ ರಾಮ್, ಪ್ರಭಾಕರ್ ರಾವ್, ಅಶ್ವಿನಿ ಶ್ರೀನಿವಾಸ್, ನವೀನ್ ಮಹಾಬಲೇಶ್ವರ್, ಓಂಶ್ರೀ ಯಕ್ಷಶಿಫ್\B
ನಿರ್ದೇಶನ: ಕೆ. ಚೇತನ್ ಜೋಡಿದಾರ್
ರೇಟಿಂಗ್: 3
ಚಿತ್ರರಂಗದ ಒಳ ಗುಟ್ಟುಗಳನ್ನು ಸಾಧ್ಯವಾದಷ್ಟು ಟಚ್ ಮಾಡಲು ನಿರ್ದೇಶಕ ಪ್ರಯತ್ನಿಸಿದ್ದಾರೆ. ಮೊದಲರ್ಧ ಹಾಸ್ಯ, ದ್ವಿತಿಯಾರ್ಧ ಭಾವುಕತೆಯ ನೆರಳಿನಲ್ಲಿ ಒಂದು ಸಣ್ಣ ಎಳೆ ಸಿನಿಮಾ ಆಗಿದೆ. ಚಿತ್ರದಲ್ಲಿ ಸಣ್ಣ ಪುಟ್ಟ ಕೊರತೆಗಳೂ ಕಂಡರೂ ಚಿತ್ರರಂಗದ ನಿಜ ಅರಿಯಲು ‘ಟೈಮ್ ಪಾಸ್’ ಚಿತ್ರವನ್ನು ನೋಡಬಹುದು. ನಿರ್ದೇಶಕನಾಗಿ ಇಮ್ರಾನ್ ಪಾಶಾ, ನಿರ್ಮಾಪಕನಾಗಿ ಪ್ರಭಾಕರ್ ರಾವ್, ನಾಯಕಿ ಪಾತ್ರದಲ್ಲಿ ಅಶ್ವಿನಿ ಶ್ರೀನಿವಾಸ್, ನೆಗೆಟಿವ್ ಪಾತ್ರದಲ್ಲಿ ಓಂಶ್ರೀ ಯಕ್ಷಶಿಫ್ ನಟನೆ ಗಮನ ಸೆಳೆಯುತ್ತದೆ.
