Koutilya Review:ಕಪ್ಪು ಹಣ, ಮಾದಕ ವಸ್ತುಗಳ ಘಾಟಿನಲ್ಲಿ ಕೌಟಿಲ್ಯ
ಅರ್ಜುನ್ ರಮೇಶ್, ಪ್ರಿಯಾಂಕ ಚಿಂಚೋಳಿ ನಟಿಸಿರುವ ಕೌಟಿಲ್ಯ ಚಿತ್ರವನ್ನು ಪ್ರಭಾಕರ ಶೇರಖಾನೆ ನಿರ್ದೇಶನ ಮಾಡಿದ್ದಾರೆ.
ಉಳ್ಳವರ ಸಂಪತ್ತನ್ನು ಕದಿಯುವ ರಾಬಿನ್‌ಹುಡ್ ಮಾಧರಿಯ ಸಿನಿಮಾ ಮತ್ತು ಕತೆಗಳು ಅಪರಿಚಿತವೇನಲ್ಲ. ಇಂಥ ಚಿತ್ರಗಳು ಸಾಕಷ್ಟುಬಂದಿವೆ. ಭ್ರಷ್ಟರ ಹಣವನ್ನು ಜನರಿಗೆ ಹಂಚುವ ಕತೆಗಳಿಗೆ ಪ್ರೇಕ್ಷಕರು ಕೂಡ ಜೈ ಎಂದಿದ್ದಾರೆ. ಆದರೆ, ರಾಜಕಾರಣಿಗಳ ಅಕ್ರಮ ಸಂಪತ್ತು, ವ್ಯಾಪಾರಿಗಳ ಹಣವನ್ನು ಒಬ್ಬನೇ ಹೈಜಾಕ್ ಮಾಡಿದರೆ ಹೇಗಿರುತ್ತದೆ ಎಂಬುದಕ್ಕೆ ‘ಕೌಟಿಲ್ಯ’ ಸಿನಿಮಾ ನೋಡಬೇಕು. ಅಂದರೆ ಕತ್ತಲ ಲೋಕದ ಸುತ್ತ ಸಾಗುವ ಕತೆ ಮತ್ತು ಅದಕ್ಕೆ ಬೇಕಾದ ಪ್ರಸ್ತುತ ಸನ್ನಿವೇಶಗಳನ್ನು ಜೋಡಿಸಿಕೊಂಡು ನಿರ್ದೇಶಕರು ‘ಕೌಟಿಲ್ಯ’ ಚಿತ್ರವನ್ನು ರೂಪಿಸಿದ್ದಾರೆ.
ಅದರಲ್ಲೂ ಬ್ಲಾಕ್ ಮನಿ ಹಾಗೂ ಮಾದಕ ವಸ್ತುಗಳ ನೆರಳಿನಲ್ಲಿ ಇಡೀ ಸಿನಿಮಾ ಸಾಗುತ್ತದೆ. ಅಕ್ರಮವಾಗಿ ದುಡ್ಡು ಮಾಡಿರುವ ರಾಜಕಾರಣಿಗಳು, ವ್ಯಾಪಾರಿಗಳ ಹಣವನ್ನು ಒಬ್ಬನೇ ವ್ಯಕ್ತಿ ಹೇಗೆ ಕದಿಯುತ್ತಾನೆ ಹಾಗೂ ಎರಡು ಸಾವಿರ ರುಪಾಯಿ ನೋಟಿನಲ್ಲಿ ರೂಪಾಯಿ ಲಾಂಚನ ಬದಲು ಕೌಟಿಲ್ಯನ ಸಿಂಬಲ್ ಮುದ್ರಿಸಿ ಚಲಾವಣೆಗೆ ತಂದಿದ್ದು ಯಾರು ಎನ್ನುವ ತಿರುವುಗಳಲ್ಲಿ ಕತೆ ಸಾಗುತ್ತದೆ. ಹಣ, ರಾಜಕಾರಣ, ವ್ಯಾಪಾರ ಹಾಗೂ ಮಾದಕ ವಸ್ತುಗಳ ಜಗತ್ತು ಚಿತ್ರದ ತುಂಬಾ ತುಂಬಿಕೊಂಡಿದೆ.
Koutilya ಆಡಿಯೋ ಬಿಡುಗಡೆ: 'ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳೂ ವಿಲನ್‌ಗಳೇ' ಎಂದ ಅರ್ಜುನ್ ರಮೇಶ್
ತಾರಾಗಣ: ಅರ್ಜುನ್ ರಮೇಶ್, ಪ್ರಿಯಾಂಕ ಚಿಂಚೋಳಿ, ನೀನಾಸಂ ಅಶ್ವತ್‌್ಥ, ಹರಣಿ, ರಘು ಪಾಂಡೇಶ್ವರ್, ಸೂರ್ಯ ಪ್ರವೀಣ್
ನಿರ್ದೇಶನ: ಪ್ರಭಾಕರ್ ಶೇರ್‌ಖಾನೆ
ರೇಟಿಂಗ್: 2
DOLLU REVIEW: ದೊಡ್ಡ ಸದ್ದಿನಾಚೆಗಿನ ಸಣ್ಣ ಕಂಪನ ದಾಟಿಸುವ ಡೊಳ್ಳು
ಕತೆಯಾಗಿ ತುಂಬಾ ಚೆನ್ನಾಗಿದೆ. ಆದರೆ, ಅದನ್ನು ಚಿತ್ರಕಥೆಯಾಗಿ ತೆರೆ ಮೇಲೆ ದೃಶ್ಯಕರಣ ಮಾಡುವ ಹೊತ್ತಿಗೆ ನಿರ್ದೇಶಕರು ಎಡವಿದ್ದಾರೆ. ನಿರೂಪಣೆ ಪೇವಲ ಅನಿಸುತ್ತದೆ. ಆದರೂ ಕತೆಗಾಗಿ ಒಮ್ಮೆ ನೋಡಬಹುದಾದ ಸಿನಿಮಾ ಇದು. ಅರ್ಜುನ್ ರಮೇಶ್, ಪ್ರಿಯಾಂಕ ಚಿಂಚೋಳಿ, ನೀನಾಸಂ ಅಶ್ವತ್‌್ಥ ಅವರ ಪಾತ್ರಗಳು ಚಿತ್ರದ ಕತೆಗೆ ಮುಖ್ಯ ಆಧಾರಸ್ತಂಭಗಳಾಗಿ ನಿಲ್ಲುತ್ತವೆ. ಹೊಸ ಕತೆಯನ್ನು ನಂಬಿ ಹಣ ಹೂಡಿರುವ ನಿರ್ಮಾಪಕರ ಧೈರ್ಯ ಮೆಚ್ಚುಗೆ ಆಗುತ್ತದೆ. ಬೋರಿಂಗ್ ನಿರೂಪಣೆಯಲ್ಲೂ ಮನರಂಜನೆ ಕಡಿಮೆ ಆಗದಂತೆ ನೋಡಿಕೊಂಡಿರುವುದು ಹಾಸ್ಯ ಪಾತ್ರಧಾರಿಗಳು.