Koutilya ಆಡಿಯೋ ಬಿಡುಗಡೆ: 'ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳೂ ವಿಲನ್‌ಗಳೇ' ಎಂದ ಅರ್ಜುನ್ ರಮೇಶ್
ಕಿರುತೆರೆಯಲ್ಲಿ 'ಶನಿ' ಧಾರಾವಾಹಿ ಮೂಲಕ ಗಮನ ಸೆಳೆದವರು, ಹಿರಿತೆರೆಯಲ್ಲಿ 'ಜಂಟಲ್‌ಮನ್' ಚಿತ್ರದ ಖಳನಾಯಕನಾಗಿ ಮಿಂಚಿದ ಅರ್ಜುನ್ ರಮೇಶ್ ಈಗ 'ಕೌಟಿಲ್ಯ'ನಾಗಿ ಬರುತ್ತಿದ್ದಾರೆ.
ಕಿರುತೆರೆಯಲ್ಲಿ 'ಶನಿ' ಧಾರಾವಾಹಿ ಮೂಲಕ ಗಮನ ಸೆಳೆದವರು, ಹಿರಿತೆರೆಯಲ್ಲಿ 'ಜಂಟಲ್‌ಮನ್' (Gentleman) ಚಿತ್ರದ ಖಳನಾಯಕನಾಗಿ ಮಿಂಚಿದ ಅರ್ಜುನ್ ರಮೇಶ್ (Arjun Ramesh) ಈಗ 'ಕೌಟಿಲ್ಯ'ನಾಗಿ (Koutilya) ಬರುತ್ತಿದ್ದಾರೆ. ಪ್ರಭಾಕರ್ ಶೇರ್ ಖಾನೆ (Prabhakar Sherkhane) ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಜೇಂದ್ರ ಬಿ ಎ (Vijendra BA) ನಿರ್ಮಾಣ ಮಾಡಿದ್ದಾರೆ. 'ಮನಸಾರೆ' ಧಾರಾವಾಹಿಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಪ್ರಿಯಾಂಕ ಚಿಂಚೋಳಿ (Priyanka Chincholi) ಚಿತ್ರದ ನಾಯಕಿ. ಇತ್ತೀಚೆಗಷ್ಟೆ ಚಿತ್ರದ ಆಡಿಯೋ ಬಿಡುಗಡೆ (Audio Release) ನಡೆಯಿತು.
ನಿರ್ಮಾಪಕ ಈ ಕೃಷ್ಣಪ್ಪ (E Krishnappa), ನಿದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekar), ಭಾ.ಮ.ಹರೀಶ್ ಹಾಗೂ ನಟಿ ಬೃಂದಾ ಆಚಾರ್ಯ (Brinda Acharya) ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕರು, 'ದುನಿಯಾ ಸೂರಿ ಅವರ ಬಳಿ ಕೆಲಸ ಮಾಡಿದ ಅನುಭವ ಇದೆ. ಅರ್ಥಶಾಸ್ತ್ರದ ಪಿತಾಮಹ 'ಕೌಟಿಲ್ಯ' ಚಂದು ಎನ್ನುವ ವ್ಯಕ್ತಿಯನ್ನು ಚಂದ್ರಗುಪ್ತ ಮೌರ್ಯನನ್ನಾಗಿ ಮಾಡಿದಾತ. ನಮ್ಮ ಚಿತ್ರದ ಕತೆಗೂ, ಇದಕ್ಕೂ ನೇರ ಸಂಬಂಧ ಇದೆ. ಹೀಗಾಗಿ ಚಿತ್ರಕ್ಕೆ 'ಕೌಟಿಲ್ಯ' ಎನ್ನುವ ಹೆಸರು ಇಡಲಾಗಿದೆ' ಎಂದರು.
ಸಿನಿಮಾದಲ್ಲಿ ನನ್ನದು ಆರ್ಕಿಟೆಕ್ಟ್ ಪಾತ್ರ. ಚಾಣಕ್ಯನ ತಂತ್ರಕ್ಕೆ ಕೌಟಿಲ್ಯ ಎಂಬ ಹೆಸರಿದೆ. ಒಬ್ಬ ಮನುಷ್ಯ ತನ್ನ ಬುದ್ದಿಶಕ್ತಿಯನ್ನ ಯಾವುದಕ್ಕೆಲ್ಲ ಉಪಯೋಗಿಸಬಹುದು ಅನ್ನುವುದು ನನ್ನ ಪಾತ್ರ. ಚಿತ್ರದಲ್ಲಿ ನಾಲ್ಕೈದು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಬುದ್ದಿವಂತಿಕೆಯಿಂದ ಹೆಚ್ಚು ಕಡಿಮೆ ಆದರೆ ಆಗುವ ಆಗು ಹೋಗುಗಳ ಬಗ್ಗೆ ಎಂದು ತಮ್ಮ ಪಾತ್ರದ ಬಗ್ಗೆ ಚಿತ್ರದ ನಾಯಕ ಅರ್ಜುನ್ ರಮೇಶ್ ಹೇಳಿದರು. ನಾಯಕಿ ಪ್ರಿಯಾಂಕ ಚಿಂಚೋಳಿ ಮಾತನಾಡಿ, ನನ್ನದು ನಾಯಕನ ಹಿಂದೆ ಬೀಳುವ ಪಾತ್ರವಿದೆ. ಚಿತ್ರನೋಡಿ ಹಾರೈಸಿ ಎಂದು ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.
Aghora Movie: ಇಂದಿನಿಂದ ಬೆಳ್ಳಿತೆರೆ ಮೇಲೆ ವಿಭಿನ್ನ ಕಥಾಹಂದರದ 'ಅಘೋರ' ದರ್ಶನ!
ಕಿರುತೆರೆ, ಸಿನಿಮಾ ಜತೆಗೆ ರಾಜಕೀಯಕ್ಕೂ ಇಳಿದಿರುವ ಅರ್ಜುನ್ ರಮೇಶ್, ಪುರಸಭಾ ಸದ್ಯರು ಕೂಡ. ಅವರಿಗೆ ನಿರ್ದೇಶಕರು ಹೋಗಿ ಕತೆ ಹೇಳಿದ ಕೂಡಲೇ ಇಷ್ಟವಾಗಿ ಚಿತ್ರದಲ್ಲಿ ನಟಿಸಿದ್ದಾರಂತೆ. ನಾನೊಬ್ಬ ಸಾಮಾನ್ಯ ಸೇಲ್ಸ್ ಎಕ್ಸಿಕ್ಯೂಟಿವ್. ನಾನೊಂದು ಬ್ಯಾಂಕ್ ಸೇಲ್ಸ್ ಏಜೆನ್ಸಿ ಇಟ್ಟುಕೊಂಡಿದ್ದೇನೆ. ನನ್ನೆಲ್ಲ ಬೆಳವಣಿಗೆಗೆ ಐಡಿಬಿಐ ಬ್ಯಾಂಕ್ ಕಾರಣ. ನನಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬ ಕನಸಿತ್ತು ಅದನ್ನು ಪ್ರಭಾಕರ್ ನನಸು ಮಾಡಿದ್ದಾರೆ. ಈ ಸಿನಿಮಾಗೆ ಯಶಸ್ಸು ಸಿಕ್ಕರೆ ಮತ್ತೆರಡು ಸಿನಿಮಾ ಮಾಡುತ್ತೀನಿ ಎಂದು ಚಿತ್ರದ ನಿರ್ಮಾಪಕ ವಿಜೇಂದ್ರ ಬಿ ಎ ತಿಳಿಸಿದರು.
'ಕೌಟಿಲ್ಯ' ಚಿತ್ರಕ್ಕೆ ನೌಶದ್ ಆಲಮ್ ಛಾಯಾಗ್ರಹಣ, ರಾಜ್ ಶಿವ ಸಂಕಲನವಿದೆ. 'ಕೌಟಿಲ್ಯ'ನ ಹಾಡುಗಳಿಗೆ ಕಿರಣ ಕೃಷ್ಣಮೂರ್ತಿ ಸಂಗೀತ ಸಂಯೋಜಿಸುತ್ತಿದ್ದು, ಗೌಸ್ ಫೀರ್, ಅರ್ಜುನ ರಮೇಶ್ ಸಾಹಿತ್ಯವಿದೆ. 'ಕೌಟಿಲ್ಯ' ಸಿನಿಮಾದ ಟೈಟಲಿಗೆ 'ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳೂ ವಿಲನ್‌ಗಳೇ' ಎಂಬ ಟ್ಯಾಗ್‌ಲೈನ್ ಇದ್ದು, ಅದು ಹೇಗೆ ಅಂಥ ಗೊತ್ತಾಗಬೇಕಾದರೆ ಸಿನಿಮಾ ನೋಡಬೇಕು. 2-3 ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತದೆ ಚಿತ್ರತಂಡ.
Vikranth Rona ಸಿನಿಮಾದ ಇಂಗ್ಲೀಷ್ ವರ್ಷನ್‌ಗೆ ಕಿಚ್ಚ ಸುದೀಪ್ ಡಬ್ಬಿಂಗ್!
ಪುನೀತ್ ರಾಜ್‌ಕುಮಾರ್‌ಗೆ ಅಗೌರವ: ಈ ಚಿತ್ರದ ಚಿತ್ರದ ಆಡಿಯೋ ಲಾಂಚ್ ವೇಳೆ ಅಪ್ಪುಗೆ ಅಗೌರವ ತೋರಿದ್ದಾರೆ. ಪುನೀತ್ ರಾಜ್‌ಕುಮಾರ್ (Puneeth Rajkumar) ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ವೇಳೆ ಚಿತ್ರದ ಆಡಿಯೋ ಲಾಂಚ್‌ಗೆ ಬಂದಿದ್ದ ಮುಂಗಾರು ಮಳೆ ನಿರ್ಮಾಪಕ ಇ. ಕೃಷ್ಣಪ್ಪ, 'ಪ್ರೇಮಂ ಪೂಜ್ಯಂ' ನಟಿ ಬೃಂದಾ ಆಚಾರ್ಯ ಶೂ ತೆಗೆಯದೆ ಇರುವುದು ಚರ್ಚೆಗೆ ಕಾರಣವಾಗಿತ್ತು. ಪತ್ರಕರ್ತರು ಈ ಬಗ್ಗೆ ಪ್ರಶ್ನೆ ಕೇಳಿದರೂ ಅದೇನು ವಿಷಯವೇ ಅಲ್ಲವೇನೋ ಎನ್ನುವಂತೆ ವರ್ತಿಸಿದರು. ಈ ಹಿಂದೆ ಜೋಗಿ ಪ್ರೇಮ್ (Jogi Prem) ನಿರ್ದೇಶನದ 'ಏಕ್ ಲವ್ ಯಾ' (Ek Love Ya) ಚಿತ್ರದ ವೇದಿಕೆಯಲ್ಲೂ ಹೀಗೆಯೇ ಆಗಿತ್ತು. ಅಪ್ಪು ಫೋಟೋ ಮುಂದೆ ಮದ್ಯಪಾನ ಬಾಟಲಿ ಹಿಡಿದಿದ್ದ ಚಿತ್ರತಂಡಕ್ಕೆ ಇಡೀ ರಾಜ್ಯದ ಜನ ಬುದ್ಧಿ ಹೇಳಿದ್ದರು.