DNA Film Review: ಸೆಂಟಿಮೆಂಟಿಗೆ ಮಾಡರ್ನ್ ಟಚ್

ಜಪಾನ್ ಭಾಷೆಯಲ್ಲಿ 2013ರಲ್ಲಿ ಬಂದ ‘ಲೈಕ್ ಫಾದರ್ ಲೈಕ್ ಸನ್’ ಸಿನಿಮಾ ನೋಡಿದ್ದರೆ ‘ಡಿಎನ್‌ಎ’ ಸಿನಿಮಾದ ಕತೆ ಏನು ಅನ್ನೋದು ಆರಂಭದಲ್ಲೇ ಗೊತ್ತಾಗುತ್ತದೆ. ಸಿನಿಮಾಕ್ಕೆ ಡಿಎನ್‌ಎ ಅನ್ನೋ ಹೆಸರಿದ್ದರೂ, ಡಿಎನ್‌ಎ ಬದಲಾದ್ದರಿಂದ ಆಗುವ ಪರಿಣಾಮದ ಬಗೆಗೆ ಇರುವ ಚಿತ್ರವಿದು.

Achyuth Kumar Acted DNA a Must Watch Film gvd

ಪ್ರಿಯಾ ಕೆರ್ವಾಶೆ

ಜಪಾನ್ ಭಾಷೆಯಲ್ಲಿ 2013ರಲ್ಲಿ ಬಂದ ‘ಲೈಕ್ ಫಾದರ್ ಲೈಕ್ ಸನ್’ ಸಿನಿಮಾ ನೋಡಿದ್ದರೆ ‘ಡಿಎನ್‌ಎ’ (DNA) ಸಿನಿಮಾದ ಕತೆ ಏನು ಅನ್ನೋದು ಆರಂಭದಲ್ಲೇ ಗೊತ್ತಾಗುತ್ತದೆ. ಸಿನಿಮಾಕ್ಕೆ ಡಿಎನ್‌ಎ ಅನ್ನೋ ಹೆಸರಿದ್ದರೂ, ಡಿಎನ್‌ಎ ಬದಲಾದ್ದರಿಂದ ಆಗುವ ಪರಿಣಾಮದ ಬಗೆಗೆ ಇರುವ ಚಿತ್ರವಿದು. ಕತೆ ನಿರೀಕ್ಷಿತವೇ ಆಗಿದ್ದರಿಂದ ಹೆಚ್ಚಿನ ಊಹೆಗೆ ಎಡೆಯಿಲ್ಲ.

ಸೆಂಟಿಮೆಂಟ್ ಟಚ್ ಕೊಟ್ಟು, ಅಲ್ಲಲ್ಲಿ ತಿರುವು ತಂದು ಸಿನಿಮಾವನ್ನು ನೋಡೆಬಲ್ ಆಗಿಸಲಾಗಿದೆ. ಆಕಾಶ್, ನಕ್ಷತ್ರಾ, ಧ್ರುವ ಈ ಮೂವರ ಶ್ರೀಮಂತ ಕುಟುಂಬ ಒಂದು ಕಡೆ. ಮಧ್ಯಮ ವರ್ಗದ ಕಿರಾಣಿ ಅಂಗಡಿ ನಡೆಸುವ ಪ್ರಶಾಂತ್ ಗೌಡ ಫ್ಯಾಮಿಲಿ ಇನ್ನೊಂದು ಕಡೆ. ಈ ಎರಡು ಫ್ಯಾಮಿಲಿ ನಡುವೆ ಕನೆಕ್ಷನ್ ತರೋದು ಡಿಎನ್‌ಎ. ಹುಟ್ಟಿದ ಮಕ್ಕಳು ಅದಲು ಬದಲಾಗಿ ಒಂದು ಹಂತದ ಬಳಿಕ ತಿಳಿದಾಗ ಆಗುವ ಅವಾಂತರದಲ್ಲಿ ಇಡೀ ಸಿನಿಮಾ ಕಟ್ಟಲಾಗಿದೆ. 

ಚಿತ್ರ: ಡಿಎನ್‌ಎ

ತಾರಾಗಣ: ಅಚ್ಯುತ ಕುಮಾರ್, ಎಸ್ತರ್ ನೊರೋನ್ಹಾ, ಮಾ.ಕೃಷ್ಣ ಚೈತನ್ಯ, ಯಮುನಾ,

ನಿರ್ದೇಶನ: ಪ್ರಕಾಶ್‌ರಾಜ್

ನಿರ್ಮಾಣ: ಮೈಲಾರಿ ಎಂ

ಕ್ಲೈಮ್ಯಾಕ್ಸ್ ಎಳೆದು ತಂದ ಹಾಗಿದೆ. ಬಾಯಲ್ಲಿ ನೀರು ತುಂಬಿ ಎರಚುವ ತಂದೆ ಮಕ್ಕಳ ಆಟ, ತಾಯಂದಿರ ದ್ವಂದ್ವ ಇತ್ಯಾದಿ ಅಂಶಗಳು ಲವಲವಿಕೆಯಿಂದ ಮೂಡಿಬಂದಿವೆ. ಇಡೀ ಸಿನಿಮಾದಲ್ಲಿ ಗಮನ ಸೆಳೆಯುವುದು ಅಚ್ಯುತ ಕುಮಾರ್ ನಟನೆ. ಸಹಜತೆಯೇ ಮೂರ್ತಿವೆತ್ತಂತೆ ಅವರ ಅಭಿನಯವಿದೆ. ಆರಂಭದಿಂದ ಕೊನೆಯವರೆಗೂ ಅವರು ಪಾತ್ರವನ್ನು ತೆಗೆದುಕೊಂಡು ಹೋದ ರೀತಿಗೆ ಫುಲ್ ಮಾರ್ಕ್ಸ್ ನೀಡದೆ ವಿಧಿಯಿಲ್ಲ. 

DNA Kannada Movie: ವಿಭಿನ್ನ ಶೀರ್ಷಿಕೆಯ ಚಿತ್ರದ ಆಡಿಯೋ ಬಿಡುಗಡೆ

ಕ್ಲೈಮ್ಯಾಕ್ಸ್ ಕೊನೆಯಲ್ಲಿ ಎಸ್ತರ್ ನೀಡುವ ಒಂದು ಲುಕ್ ಅವರ ನಟನಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಯಮುನಾ, ಮಕ್ಕಳ ನಟನೆಗೂ ಭೇಷ್ ಅನ್ನಬಹುದು. ಒಟ್ಟಾರೆ ಕಂಟೆಂಟ್ ಇರುವ ಸಿನಿಮಾ ನೋಡ್ಬೇಕು, ಕತೆಯ ಟ್ರೀಟ್‌ಮೆಂಟ್ ಬಗ್ಗೆ ಹೆಚ್ಚೇನ ತಲೆಕೆಡಿಸಿಕೊಳಲ್ಲ ಅಂತಿರುವವರಿಗೆ ಈ ಚಿತ್ರ ಇಷ್ಟವಾಗಬಹುದು.

Latest Videos
Follow Us:
Download App:
  • android
  • ios