Online lottery jackpot woman mobile game: ಒಂದು ದಿನ ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರಲಿಲ್ಲ. ಸಮಯ ಕಳೆಯಲು ಆಕೆ ತನ್ನ ಸ್ಮಾರ್ಟ್‌ಫೋನ್ ತೆಗೆದು ಆನ್‌ಲೈನ್ ಲಾಟರಿ ಗೇಮ್ ಆಡಲು ಪ್ರಾರಂಭಿಸಿದಳು. ಆದರೆ, ಕೆಲವು ನಿಮಿಷಗಳ ನಂತರ ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಕಂಡ ಮೆಸೇಜ್ ನೋಡಿ ಆಕೆ ಶಾಕ್ ಆದಳು.
ಕೇವಲ ಒಂದು ರಾತ್ರಿ ನಿದ್ರೆ ಬಾರದೆ ಒದ್ದಾಡಿದ್ದಕ್ಕೆ ಆ ಮಹಿಳೆಯ ಜೀವನವೇ ಬದಲಾಗಿದೆ. ಹೌದು. ಅರ್ಧರಾತ್ರಿಯಾದರೂ ಆಕೆಗೆ ನಿದ್ರೆ ಬಾರದೆ ಇದ್ದುದರಿಂದ ಟೈಂ ಪಾಸ್ ಮಾಡಲು ತನ್ನ ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್ ಲಾಟರಿ ಗೇಮ್ ಆಡಲು ಪ್ರಾರಂಭಿಸಿದಳು. ಕೆಲವೇ ನಿಮಿಷಗಳ ಅವಧಿಯಲ್ಲಿ ಆಕೆಯ ಖಾತೆಗೆ ಎಂದೂ ಊಹಿಸಲಾಗದಷ್ಟು ದುಡ್ಡು ಬಂತು. ಆಕೆ ಸುಮಾರು 1.4 ಕೋಟಿ ರೂ. ಬಹುಮಾನವನ್ನು ಗೆದ್ದುಕೊಂಡಳು. ಈ ಬಹುಮಾನವನ್ನು ಗೆಲ್ಲುವ ಅವಕಾಶ 20 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಇರುತ್ತದೆ. ಬನ್ನಿ ಮತ್ಯಾಕೆ ತಡ, ಈ ಬಗ್ಗೆ ಪೂರ್ತಿ ಮಾಹಿತಿಯನ್ನು ಮುಂದೆ ಓದೋಣ..
ಕೆಲವು ನಿಮಿಷದಲ್ಲಿ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಮೆಸೇಜ್
ಅದೃಷ್ಟ ಯಾವಾಗ, ಯಾವ ರೂಪದಲ್ಲಿ ಒಲಿಯುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸುಮ್ಮನೆ ಮಾಡುವ ಸಣ್ಣ ಕೆಲಸಗಳು ಕೂಡ ಜೀವನವನ್ನೇ ಬದಲಾಯಿಸುತ್ತವೆ. ಇದೀಗ ಇಂತಹದ್ದೇ ಘಟನೆ ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ನಡೆದಿದೆ. ಅಲ್ಲಿ ವಾಸಿಸುವ ಸೂ ರಾಲಿ ಎಂಬ ಮಹಿಳೆಗೆ ಒಂದು ದಿನ ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರಲಿಲ್ಲ. ಸಮಯ ಕಳೆಯಲು ಆಕೆ ತನ್ನ ಸ್ಮಾರ್ಟ್‌ಫೋನ್ ತೆಗೆದು ಆನ್‌ಲೈನ್ ಲಾಟರಿ ಗೇಮ್ ಆಡಲು ಪ್ರಾರಂಭಿಸಿದಳು. ಆದರೆ, ಕೆಲವು ನಿಮಿಷಗಳ ನಂತರ ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಕಂಡ ಮೆಸೇಜ್ ನೋಡಿ ಆಕೆ ಶಾಕ್ ಆದಳು. ಕೇವಲ ಟೈಮ್‌ಪಾಸ್‌ಗಾಗಿ ಆಡಿದ ಆ ಗೇಮ್‌ನಲ್ಲಿ ಆಕೆ ಬರೊಬ್ಬರಿ 1.4 ಕೋಟಿ ರೂ. ಗೆದ್ದುಕೊಂಡಿದ್ದಾಳೆ.
20 ಲಕ್ಷ ಮಂದಿಯಲ್ಲಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ
ವರದಿಯ ಪ್ರಕಾರ.. ಮೋರ್ಸ್‌ವಿಲ್ಲೆ ನಿವಾಸಿಯಾದ ಸೂ ರಾಲಿ, ನಾರ್ತ್ ಕೆರೊಲಿನಾ ಎಜುಕೇಶನ್ ಲಾಟರಿಗೆ ಸೇರಿದ 'ಟಂಬ್ಲಿಂಗ್ ಟ್ರೆಷರ್ಸ್' (Tumbling Treasures) ಎಂಬ ಡಿಜಿಟಲ್ ಇನ್‌ಸ್ಟಂಟ್ ಗೇಮ್‌ನಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಆಕೆ ಕೇವಲ 30 ಡಾಲರ್ (ಸುಮಾರು ರೂ. 2500) ಖರ್ಚು ಮಾಡಿ ಗೇಮ್ ಆಡಿದ್ದರು. ಆದರೆ ಈ ಗೇಮ್‌ನಲ್ಲಿ ಅತ್ಯುನ್ನತ ಬಹುಮಾನವಾದ 1,50,000 ಡಾಲರ್ (ಸುಮಾರು 1.4 ಕೋಟಿರೂ.) ಆಕೆ ಪಾಲಾಗಿದೆ. ಲಾಟರಿ ಅಧಿಕಾರಿಗಳ ಮಾಹಿತಿಯ ಪ್ರಕಾರ, ಈ ಭಾರಿ ಮೊತ್ತವನ್ನು ಗೆಲ್ಲುವ ಅವಕಾಶ 20 ಲಕ್ಷ ಮಂದಿಯಲ್ಲಿ ಕೇವಲ ಒಬ್ಬರಿಗೆ ಮಾತ್ರ ಇರುತ್ತದೆ. ಆ ಅಪರೂಪದ ಅದೃಷ್ಟ ಸೂ ರಾಲಿಯನ್ನು ವರಿಸಿದೆ.
ಗೆಲುವಿನ ಸುದ್ದಿ ಕೇಳಿಯಂತೂ ನಿದ್ದೆ ಬರಲೇ ಇಲ್ಲ
ಸ್ಕ್ರೀನ್ ಮೇಲೆ ತಾನೇ ವಿಜೇತೆ ಎಂಬ ಮೆಸೇಜ್ ಬಂದ ಕೂಡಲೇ ಸೂ ರಾಲಿ ಮೊದಲು ನಂಬಲು ಸಾಧ್ಯವಾಗಲಿಲ್ಲ. ಅರ್ಧರಾತ್ರಿ ಆಗಿದ್ದರಿಂದ ಕಣ್ಣುಗಳು ಸರಿಯಾಗಿ ಕಾಣಿಸುತ್ತಿವೆಯೋ ಇಲ್ಲವೋ ಎಂದು ಸ್ಕ್ರೀನ್ ಅನ್ನು ಪದೇ ಪದೇ ನೋಡಿಕೊಂಡಳು. ಈ ಗೆಲುವಿನ ಸುದ್ದಿಯಿಂದ ಆಕೆಗೆ ಆ ರಾತ್ರಿ ಅಸಲು ನಿದ್ರೆ ಬರಲಿಲ್ಲ. ಬೆಳಗ್ಗೆ ಈ ವಿಷಯವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಾಗ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದೆಲ್ಲಾ ಒಂದು ಕನಸಿನಂತೆ ಭಾಸವಾಯ್ತು ಎಂದು ಹೇಳಿದ್ದಾಳೆ.
ಅಂದಹಾಗೆ ಲಾಟರಿ ಹಣವನ್ನು ಸೂ ರಾಲಿ ಅತ್ಯಂತ ಯೋಜನಾಬದ್ಧವಾಗಿ ಉಪಯೋಗಿಸಿಕೊಳ್ಳಲು ಬಯಸಿದ್ದಾಳೆ. ಬಹಳ ದಿನಗಳಿಂದ ತನ್ನ ಮನೆಯನ್ನು ರಿಪೇರಿ ಮಾಡಿಸಿ, ಮಾಡರ್ನ್ ಆಗಿ ಕಟ್ಟಿಸಬೇಕೆಂದು ಆಕೆ ಕನಸು ಕಾಣುತ್ತಿದ್ದಳು. ಈಗ ಬಂದಿರುವ ಈ ಲಾಟರಿ ಹಣದಿಂದ ತನ್ನ ಕನಸಿನ ಮನೆಯನ್ನು ಸುಂದರವಾಗಿ ರೂಪಿಸಿಕೊಳ್ಳುವುದಾಗಿ ಆಕೆ ತಿಳಿಸಿದ್ದಾಳೆ.
ಜೀವನದಲ್ಲಿ ಅದೃಷ್ಟ ಯಾವಾಗ ಬಾಗಿಲು ತಟ್ಟುತ್ತದೆ ಎಂದು ಹೇಳಲು ಈ ಘಟನೆಯೇ ಒಂದು ಉದಾಹರಣೆ. ಆ ರಾತ್ರಿ ಆಕೆಗೆ ನಿದ್ರೆ ಬಂದಿದ್ದರೆ, ಈ ಕೋಟ್ಯಂತರ ರೂಪಾಯಿ ಬಹುಮಾನ ಮತ್ತೊಬ್ಬರ ಪಾಲಾಗುತ್ತಿತ್ತು. ಆನ್‌ಲೈನ್ ಲಾಟರಿ ಎಂಬುದು ಸಂಪೂರ್ಣವಾಗಿ ಅದೃಷ್ಟದ ಮೇಲೆ ಆಧಾರಿತವಾಗಿದ್ದರೂ, ಸೂ ರಾಲಿಗೆ ಮಾತ್ರ ಆ ನಿದ್ರೆ ಇಲ್ಲದ ರಾತ್ರಿ ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಒಂದು ಮಧುರ ನೆನಪಾಗಿ ಬದಲಾಗಿ ಹೋಗಿದೆ.
