ಸೂಪರ್ ಫೀಚರ್ಸ್: Redmi Note 10T 5G ಫೋನ್ ಭಾರತದಲ್ಲಿ ಬಿಡುಗಡೆ ಪಕ್ಕಾ

ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಖಚಿತವಾಗಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಬಗ್ಗೆ ರೆಡ್‌ಮಿ ಇಂಡಿಯಾ ಟ್ವೀಟ್ ಮಾಡಿ ಖಚಿತಪಡಿಸಿದೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಕುತೂಹಲ ಕೂಡ ಮಾಡಲು ಕಾರಣವಾಗಿದೆ.

Redmi Note 10T 5G smartphone will launched in India and Teaser confirms it

ಚೀನಾ ಮೂಲದ ಶಿಯೋಮಿ ಕಂಪನಿಯು ತನ್ನ ಸಬ್‌ಬ್ರ್ಯಾಂಡ್ ಮೂಲಕ ಮತ್ತೊಂದು 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಭಾರತಕ್ಕೆ ಪ್ರವೇಶಿಸಲು ಸಿದ್ಧವಾಗಿರುವ ಫೋನ್ ಆಗಿದೆ. ಇ ಕಾಮರ್ಸ್ ತಾಣ ಅಮೆಜಾನ್ ಈಗಾಗಲೇ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್‌ಗಾಗಿಯೇ ಪ್ರತ್ಯೇಕ ಪುಟವನ್ನು ತೆರೆದಿದೆ.

ವಿಶೇಷ ಏನೆಂದರೆ, ಇತ್ತೀಚೆಗಷ್ಟೇ ರೆಡ್‌ಮಿ ನೋಟ್ 10 5ಜಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಪೋಕೋ ಎಂ3 ಪ್ರೋ 5ಜಿ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈ ಸ್ಮಾರ್ಟ್‌ಫೋನ್‌ಗೆ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ರೆಡ್‌ಮಿ ನೋಟ್ 10ಟಿ 5ಜಿ, ರೆಡ್‌ಮಿ ನೋಟ್ 10 5ಜಿ ಮತ್ತು ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್‌ಗಳು ಹಲವು ಸಾಮ್ಯತೆಗಳನ್ನು ಹೊಂದಿವೆ. 

ಹೊಸ ಐಟಿ ರೂಲ್ಸ್ ಎಫೆಕ್ಟ್: ನಿಯಮ ಉಲ್ಲಂಘಿಸಿದ 3 ಕೋಟಿ ಪೋಸ್ಟ್ ವಿರುದ್ಧ ಫೇಸ್‌ಬುಕ್ ಕ್ರಮ.

ಈ ಮೂರು ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ ಡಿಮೆನ್ಸಿಟಿ 700 ಪ್ರೊಸೆಸರ್, ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಮತ್ತು 5000 ಎಂಎಎಚ್ ಸಾಮರ್ಥ್ಯದ  ಬ್ಯಾಟರಿಗಳನ್ನು ಒಳಗೊಂಡಿವೆ. ಈ ಸ್ಮಾರ್ಟ್‌ಫೋನ್‌ಗಳು ಹಲವು ವಿಶೇಷಗಳನ್ನು ಹೊಂದಿದ್ದು, ಬಳಕೆದಾರರಸ್ನೇಹಿಯಾಗಿವೆ. 

ಶಿಯೋಮಿ ಎಲೆಕ್ಟ್ರಾನಿಕ್ಸ್ ಕಂಪನಿಯ ಸಬ್‌ಬ್ರ್ಯಾಂಡ್ ಆಗಿರುವ ರೆಡ್‌ಮಿ ಇಂಡಿಯಾ, ರೆಡ್‌ಮಿ ನೋಟ್ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗುವುದನ್ನು ಟ್ವೀಟ್ ಮೂಲಕ ಖಚಿತಪಡಿಸಿತ್ತು. ರೆಡ್ ಮಿ ಇಂಡಿಯಾ ತನ್ನ ಈ ಟ್ವೀಟ್‌ನಲ್ಲಿ, ನಾವು ಪ್ರಥಮವಾಗಿ #FastAndFuturistic ಸ್ಮಾರ್ಟ್‌ಫೋನ್‌ನೊಂದಿಗೆ ಬರುತ್ತಿದ್ದೇವೆ. ಹಾಗಾಗಿ ನೀವು ಆರಾಮವಾಗಿ ಕುಳಿತುಕೊಂಡು ನಿಮ್ಮ ನೆಚ್ಚಿನ ಟೀ ಸವಿಯಿರಿ ಎಂದು ಹೇಳಲಾಗಿತ್ತು. ಈ ಟ್ವೀಟ್‌ನಲ್ಲಿರುವ ಲಿಂಕ್  ಮೇಲೆ ಕ್ಲಿಕ್ ಮಾಡಿದರೆ ಅದು ನಿಮ್ಮನ್ನು ಮೈಕ್ರೋಸೈಟ್‌ಗೆ ರಿಡೈರೆಕ್ಟ್ ಮಾಡುತ್ತದೆ ಮತ್ತು ಅಲ್ಲಿ ನೀವು ಎಂಐ ಸ್ಟೋರ್ ಆಪ್‌ನಲ್ಲಿ ನೋಟಿ ಫೈ ಬಟನ್ ಮೇಲೆ ಕ್ಲಿಕ್ ಮಾಡಲು ಅವಕಾಶ ಕಲ್ಪಿಸಿಕೊಡುತ್ತದೆ.

 

 

ರೆಡ್‌ಮಿ ಇಂಡಿಯಾ ಮಾಡಿದ್ದ ಟ್ವೀಟ್‌ನಲ್ಲಿ ಇಮೇಜ್ ಟೀಸರ್ ಕೂಡ ಇತ್ತು. ಈ ಇಮೇಜ್ ರೆಡ್ ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್‌ ಹಿಂಭಾಗ ಮತ್ತು ಮುಂಭಾಗವನ್ನು ತೋರಿಸಲಾಗಿದೆ. ಇದು ಹೊಸ ಸ್ಮಾರ್ಟ್‌ಫೋನ್‌ ಸಂಭಾವ್ಯ ವಿನ್ಯಾಸದ ಬಗ್ಗೆ ಸುಳಿವು ನೀಡುವ ಪ್ರಯತ್ನವಾಗಿದೆ ಎಂದು ಹೇಳಬಹುದು. ಇಮೇಜ್‌ನಲ್ಲಿ ತೋರಿಸಲಾದ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯುಲ್ ಅನ್ನು ಹಿಂಬದಿಯ ಎಡಗಡೆಯ ಮೇಲ್ತುದಿಯಲ್ಲಿ ಇಡಲಾಗಿದೆ. ಫ್ರಂಟ್ ಡಿಸ್‌ಪ್ಲೇನಲ್ಲಿ ಹೋಲ್ ಪಂಚ್ ಕಟೌಟ್ ಅನ್ನು ಸೆಲ್ಫಿ ಕ್ಯಾಮೆರಾಗೆ ನೀಡಿರುವುದನ್ನು ಗುರುತಿಸಬಹುದಾಗಿದೆ. 

ಪ್ರೀಮಿಯಂ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಬಿಡುಗಡೆಯಾಗಲಿರುವ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧರಿತ ಎಂಐಯುಐ 12 ಒಎಸ್ ಹೊಂದಿದೆ. ಈ ಸ್ಮಾರ್ಟ್‌ಪೋನ್ 6.5 ಇಂಚ್ ಫುಲ್ ಎಚ್‌ಡಿ ಪ್ಲಸ್ ಹೋಲ್ ಪಂಚ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 

ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡಿಮೆನ್ಸಿಟಿ 700 ಪ್ರೊಸೆಸರ್  ಅನ್ನು ಒಳಗೊಂಡಿದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಇದೆ. ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇದೆ. ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಇನ್ನುಳಿದ ಎರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ ಮತ್ತು ಇವುಗಳ್ನು ಡೆಪ್ತ್ ಹಾಗೂ ಮ್ಯಾಕ್ರೋ ಫೋಟಗ್ರಫಿಗೆ ಬಳಸಲಾಗುತ್ತದೆ.

7 ತಿಂಗಳಲ್ಲಿ 10 ಕೋಟಿ iPhone 12 ಸೀರೀಸ್ ಮಾರಾಟ

5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ರೆಡ್‌ಮಿ ನೋಟ್ 10ಟಿ 5ಜಿ ಸ್ಮಾರ್ಟ್‌ಫೋನ್ ಇನ್ನೂ ಅನೇಕ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. ಈ ಫೋನ್ ಬಿಡುಗಡೆಯಾದ ಬಳಿಕವಷ್ಟೇ ಇನ್ನು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆಯೂ ಕಂಪನಿಯು ಮಾಹಿತಿ ನೀಡಿಲ್ಲ.

Latest Videos
Follow Us:
Download App:
  • android
  • ios