ಹೊಸ ಐಟಿ ರೂಲ್ಸ್ ಎಫೆಕ್ಟ್: ನಿಯಮ ಉಲ್ಲಂಘಿಸಿದ 3 ಕೋಟಿ ಪೋಸ್ಟ್ ವಿರುದ್ಧ ಫೇಸ್‌ಬುಕ್ ಕ್ರಮ
ಭಾರತ ಸರ್ಕಾರವು ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ಸೋಷಿಯಲ್ ಮೀಡಿಯಾ ಕಂಪನಿಗಳು ಮುಖ್ಯ ಕುಂದುಕೊರತೆ ಆಲಿಸುವ ಆಧಿಕಾರಿಯನ್ನು ನೇಮಿಸಬೇಕಿದೆ. ಈಗಾಗಲೇ ಫೇಸ್‌ಬುಕ್ ಸೇರಿದಂತೆ ಹಲವು ಕಂಪನಿಗಳು ಈ ನಿಯಮ ಪಾಲನೆ ಮಾಡಿವೆ. ಜೊತೆಗೆ ಮೊದಲ ತಿಂಗಳ ವರದಿಯನ್ನು ಫೇಸ್‌ಬುಕ್ ಪ್ರಕಟಿಸಿದ್ದು, ನಿಯಮಗಳನ್ನು ಉಲ್ಲಂಘಿಸಿದ 3 ಕೋಟಿ ಪೋಸ್ಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಡಿಜಿಟಲ್ ನಿಯಮಗಳು ಫಲ ಕೊಡಲಾರಂಭಿಸಿವೆ. ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್, ಮೇ 15ರಿಂದ ಜೂನ್ 15ರ ಅವಧಿಯಲ್ಲಿ ಸುಮಾರು 3 ಕೋಟಿ ಹಾಗೂ ಇನಸ್ಟಾಗ್ರಾಮ್ 2 ಲಕ್ಷ ಕಂಟೆಂಟ್ ವಿರುದ್ಧ ಕ್ರಮ ಕೈಗೊಂಡಿದೆ. ಐಟಿ ನಿಯಮ ಉಲ್ಲಂಘನೆಯಾಗಿರುವ 10 ಕೆಟಗರಿಗಳಿಂದ ಫೇಸ್‌ಬುಕ್ ಮತ್ತು 9 ಕೆಟಗರಿಗಳಿಂದ ಇನಸ್ಟಾಗ್ರಾಮ್ ಕಂಟೆಂಟ್ ಡಿಲಿಟ್ ಮಾಡಿದೆ.
ಹೊಸ ಐಟಿ ನಿಯಮಗಳ ಪ್ರಕಾರ ಬೃಹತ್ ಡಿಜಿಟಲ್ ವೇದಿಕೆಗಳು ಅಂದರೆ ಸುಮಾರು 50 ಲಕ್ಷಕ್ಕೂ ಅಧಿಕ ಬಳಕೆದಾರರನ್ನ ಹೊಂದಿರುವ ವೇದಿಕೆಗಳು ಪ್ರತಿ ತಿಂಗಳು ತಾವು ಪಡೆದ ತಕಾರರುಗಳು ಮತ್ತು ಅಧಕ್ಕೆ ಕೈಗೊಂಡಿರುವ ಕ್ರಮಗಳು ವರದಿಯನ್ನು ಪ್ರಕಟಿಸಬೇಕಾಗುತ್ತದೆ. ಹಾಗೆಯೇ, ಸ್ವಯಂಚಾಲಿತ ಸಾಧನಗಳನ್ನು ಬಳಸುವ ಮೂಲಕ ನಡೆಸುವ ಯಾವುದೇ ಪೂರ್ವಭಾವಿ ಮೇಲ್ವಿಚಾರಣೆಯ ಅನುಸಾರವಾಗಿ ಮಧ್ಯವರ್ತಿ ಪ್ರವೇಶವನ್ನು ತೆಗೆದುಹಾಕಿರುವ ಅಥವಾ ನಿಷ್ಕ್ರಿಯಗೊಳಿಸಿದ ನಿರ್ದಿಷ್ಟ ಸಂವಹನ ಲಿಂಕ್‌ಗಳ ಸಂಖ್ಯೆ ಅಥವಾ ಮಾಹಿತಿಯ ಭಾಗಗಳನ್ನೂ ವರದಿಯಲ್ಲಿ ಸೇರಿಸಬೇಕಾಗುತ್ತದೆ.
ಜೆಪಿಜಿ ಫೈಲ್ ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು ಹೇಗೆ?
ಆನ್‌ಲೈನ್‌ನಲ್ಲಿ ಬಳಕೆದಾರರನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮತ್ತು ಅದರ ವೇದಿಕೆಯಲ್ಲಿ ತಮ್ಮನ್ನು ಮುಕ್ತವಾಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುವ ಕಾರ್ಯಸೂಚಿಯನ್ನು ಹೆಚ್ಚಿಸಲು ಫೇಸ್‌ಬುಕ್ ತಂತ್ರಜ್ಞಾನ, ಜನರು ಮತ್ತು ಪ್ರಕ್ರಿಯೆಗಳಲ್ಲಿ ನಿರಂತರವಾಗಿ ಪ್ರಯತ್ನ ಮಾಡುತ್ತ ಬಂದಿದೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ. ಫೇಸ್‌ಬುಕ್ ತನ್ನ ಮುಂದಿನ ವರದಿಯನ್ನು ಜುಲೈ 15ರಂದು ಪ್ರಕಟಿಸಲಿದೆ.
ಫೇಸ್ ಬುಕ್ ತನ್ನ ವರದಿಯಲ್ಲಿ ಮೇ 15ರಿಂದ ಜೂನ್ 15ರವರೆಗಿನ ಅವಧಿಯಲ್ಲಿ 10 ಕೆಟಗರಿಯಲ್ಲಿ 3 ಕೋಟಿ ಕಂಟೆಂಟ್‌ಗಳ ವಿರುದ್ಧ ಕ್ರಮವಹಿಸಲಾಗಿದೆ. ಈ ಪೈಕಿ ಸ್ಪ್ಯಾಮ್ ಕಂಟೆಂಟ್(2.5 ಕೋಟಿ), ಹಿಂಸಾತ್ಮಕ ಮತ್ತು ಗ್ರಾಫಿಕ್ ಕಂಟೆಂಟ್(25 ಲಕ್ಷ), ವಯಸ್ಕರ ನಗ್ನ ಮತ್ತು ಲೈಂಗಿಕ ಚಟುವಟಿಕೆ(18 ಲಕ್ಷ) ಹಾಗೂ ದ್ವೇಷ ಭಾಷಣ(311,000) ಕಂಟೆಂಟ್ ಸೇರಿದೆ.
ಇನ್ನು ಬೆದರಿಸುವುದು ಮತ್ತು ಕಿರುಕುಳ(118,000) ಆತ್ಮಹತ್ಯೆ ಮತ್ತು ಸ್ವ ಗಾಯ(589,000), ಅಪಾಯಕಾರಿ ಸಂಘಟನೆಗಳು ಮತ್ತು ವ್ಯಕ್ತಿಗಳು; ಭಯೋತ್ಪಾದನೆ ಪ್ರಪಗೊಂಡಾ(106,000), ಅಪಾಯಕಾರಿ ಸಂಘಟನೆಗಳು ಮತ್ತು ವ್ಯಕ್ತಿಗಳು: ಸಂಘಟಿತ ದ್ವೇಷ(75,000) ವಿಭಾಗಗಳಲ್ಲೂ ಫೇಸ್‌ಬುಕ್ ಕ್ರಮಕೈಗೊಂಡಿದೆ.
ಸರ್ಕಾರಿ ಸಂಸ್ಥೆಗಳು ಬಳಸುವ Wickr ಮೆಸೆಜಿಂಗ್ ಆ್ಯಪ್ ಖರೀದಿಸಿದ ಅಮೆಜಾನ್
ಇದೇ ವೇಳೆ ಫೇಸ್‌ಬುಕ್ ಒಡೆತನದ ಇನಸ್ಟಾಗ್ರಾಮ್ 20 ಲಕ್ಷ ಕಂಟೆಂಟ್‌ಗಳ ವಿರುದ್ಧ ಕ್ರಮವಹಿಸಿದೆ. ಅದು ನಿಮಯ ಉಲ್ಲಂಘನೆಯಾಗಿರುವ 9 ವಿಭಾಗಗಳಲ್ಲಿ ಈ ಕ್ರಮ ತೆಗೆದುಕೊಂಡಿದೆ. ಈ ಪೈಕಿ ಆತ್ಮಹತ್ಯೆ ಮತ್ತು ಸ್ವ ಗಾಯ(699,000), ಹಿಂಸಾತ್ಮಕ ಮತ್ತು ಗ್ರಾಫಿಕ್ ಕಂಟೆಂಟ್(668,000), ವಯಸ್ಕರ ನಗ್ನತೆ ಮತ್ತು ಲೈಂಗಿಕ ಚಟುವಟೆಕ(490,000), ಬೆದರಿಸುವುದು ಮತ್ತು ಕಿರುಕುಳ(108,000), ದ್ವೇಷ ಭಾಷಣೆ(53,000), ಅಪಾಯಕಾರಿ ಸಂಘಟನೆಗಳು ಮತ್ತು ವ್ಯಕ್ತಿಗಳು- ಭಯೋತ್ಪಾದನೆ ಪ್ರಪಗೊಂಡಾ(5,800), ಅಪಾಯಕಾರಿ ಸಂಘಟನೆಗಳು ಮತ್ತು ವ್ಯಕ್ತಿಗಳು- ಸಂಘಟಿತ ದ್ವೇಷ(6,200) ಕಂಟೆಟ್ ವಿರುದ್ಧ ಕ್ರಮ ವಹಿಸಲಾಗಿದೆ.
ಗೂಗಲ್ ಮತ್ತು ಯುಟೂಬ್ ಕೂಡ ಈ ವಿಷಯಲ್ಲಿ ಕ್ರಮ ತೆಗೆದುಕೊಂಡಿವೆ. ಈ ವರ್ಷದ ಏಪ್ರಿಲ್‌ನಲ್ಲಿ ಗೂಗಲ್ ಮತ್ತು ಯುಟೂಬ್ 27,762 ದೂರುಗಳನ್ನು ಸ್ವೀಕರಿಸಿದ್ದು, ಸ್ಥಳೀಯ ಕಾನೂನು ಅಥವಾ ವೈಯಕ್ತಿಕ ಹಕ್ಕಗಳನ್ನು ಉಲ್ಲಂಘಿಸಿರುವ 59,350 ಕಂಟೆಂಟ್‌ಗಳನ್ನು ತೆಗೆದು ಹಾಕಿವೆ.
ಅದೇ ರೀತಿ, ಭಾರತೀಯ ಮೂಲದ ಮೈಕ್ರೋಬ್ಲಾಗಿಂಗ್ ಎಂದು ಖ್ಯಾತರಾಗುತ್ತಿರುವ ಕೂ ಕೂಡ 54,235 ಕಂಟೆಂಟ್ ಪೂರ್ವಭಾವಿಯಾಗಿ ಮಾಡರೆಟ್ ಮಾಡಿದ್ದರೆ, ಜೂನ್ ತಿಂಗಳಲ್ಲಿ ಬಳಕೆದಾರರು 5,502 ಪೋಸ್ಟ್‌ಗಳ ಬಗ್ಗೆ ದೂರು ನೀಡಿದ್ದಾರೆ.
ರಿಯಲ್‌ಮಿ ಸಿ11 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇವಲ 6,999 ರೂ.
ಐಟಿ ನಿಯಮಗಳ ಪ್ರಕಾರ, ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಯನ್ನು ನೇಮಿಸುವ ಅಗತ್ಯವಿದೆ ಮತ್ತು ಈ ಅಧಿಕಾರಿಗಳು ಭಾರತದಲ್ಲಿ ವಾಸಿಸುವ ಅಗತ್ಯವಿದೆ. ಆದರೆ, ಈ ವಿಷಯದಲ್ಲಿ ಮೈಕ್ರೋ ಬ್ಲಾಗಿಂಗ್ ದೈತ್ಯ ಟ್ವಿಟರ್ ಮತ್ತು ಭಾರತ ಸರ್ಕಾರದ ನಡುವೆ ಸಂಘರ್ಷ ಮುಂದುವರಿದಿದೆ. ಇತ್ತೀಚೆಗಷ್ಟೇ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು, ಟ್ವಿಟರ್ ಸ್ಥಳೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಖಡಕ್ ಆಗಿಯೇ ಹೇಳಿದ್ದರು.