MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ಕಡಿಮೆ ಬೆಲೆಗೆ ಬೊಂಬಾಟ್ ಫೀಚರ್ಸ್‌ನ ಸ್ಮಾರ್ಟ್‌ಫೋನ್; 7000mAh ಬ್ಯಾಟರಿ, 15W ಫಾಸ್ಟ್ ಚಾರ್ಜಿಂಗ್

ಕಡಿಮೆ ಬೆಲೆಗೆ ಬೊಂಬಾಟ್ ಫೀಚರ್ಸ್‌ನ ಸ್ಮಾರ್ಟ್‌ಫೋನ್; 7000mAh ಬ್ಯಾಟರಿ, 15W ಫಾಸ್ಟ್ ಚಾರ್ಜಿಂಗ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ರಿಯಲ್‌ಮಿ ಕಂಪನಿ ತನ್ನ ಹೊಸ ಮಾಡೆಲ್ ಅನ್ನು ಪರಿಚಯಿಸಿದೆ. ಈ ಹೊಸ ಸ್ಮಾರ್ಟ್‌ಫೋನ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಉತ್ತಮ ದೈನಂದಿನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.

2 Min read
Author : Mahmad Rafik
Published : Mar 07 2026, 11:37 AM IST
Share this Photo Gallery
  • FB
  • TW
  • Linkdin
  • Whatsapp
17
 7000mAh ಬ್ಯಾಟರಿ, ಮತ್ತು 144Hz ರಿಫ್ರೆಶ್ ರೇಟ್
Image Credit : social media

7000mAh ಬ್ಯಾಟರಿ, ಮತ್ತು 144Hz ರಿಫ್ರೆಶ್ ರೇಟ್

ಬಜೆಟ್ ಬೆಲೆಯಲ್ಲಿ 5G ಸಪೋರ್ಟ್, ಬೃಹತ್ 7000mAh ಬ್ಯಾಟರಿ, ಮತ್ತು 144Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯಂತಹ ಹಲವು ಅದ್ಭುತ ಫೀಚರ್‌ಗಳನ್ನು ಈ ಫೋನ್ ಹೊಂದಿದೆ. ಗೇಮಿಂಗ್ ಮತ್ತು ನಿರಂತರ ವಿಡಿಯೋ ನೋಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

27
Realme C83 5G ಸ್ಮಾರ್ಟ್‌ಫೋನ್
Image Credit : Realme C83 5G

Realme C83 5G ಸ್ಮಾರ್ಟ್‌ಫೋನ್

Realme C83 5G ಸ್ಮಾರ್ಟ್‌ಫೋನ್ 7000mAh ಸಾಮರ್ಥ್ಯದ 'ಟೈಟಾನ್ ಬ್ಯಾಟರಿ' ಹೊಂದಿದೆ. ದೀರ್ಘಕಾಲ ಸೋಶಿಯಲ್ ಮೀಡಿಯಾ, ಸ್ಟ್ರೀಮಿಂಗ್ ಮತ್ತು ಗೇಮಿಂಗ್ ಬಳಸುವವರಿಗೆ ಈ ಬ್ಯಾಟರಿ ಉತ್ತಮ ಬ್ಯಾಕಪ್ ನೀಡುತ್ತದೆ. ಈ ಸ್ಮಾರ್ಟ್‌ಫೋನ್ 15W ಫಾಸ್ಟ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನೂ ಹೊಂದಿದೆ. ಕಾರ್ಯಕ್ಷಮತೆಗಾಗಿ, ಇದರಲ್ಲಿ 6nm ಫ್ಯಾಬ್ರಿಕೇಶನ್‌ನಲ್ಲಿ ತಯಾರಾದ MediaTek Dimensity 6300 ಚಿಪ್‌ಸೆಟ್ ನೀಡಲಾಗಿದೆ.

Related Articles

Related image1
ಕೇವಲ 8 ಸಾವಿರಕ್ಕೆ ಒಳ್ಳೆ ಫೋನ್ ಬೇಕಾ? ಹಾಗಿದ್ರೆ 6300mAh ಬ್ಯಾಟರಿಯ ಸ್ಮಾರ್ಟ್‌ಫೋನ್ ನೋಡಿ
Related image2
ಕೇವಲ 20 ಸಾವಿರ ರೂ ಒಳಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್
37
 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌
Image Credit : Realme C83 5G

6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌

ರಿಯಲ್ ಮಿ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಡೈನಾಮಿಕ್ RAM ಸೌಲಭ್ಯದ ಮೂಲಕ 18GB ವರೆಗೆ ವರ್ಚುವಲ್ RAM ಹೆಚ್ಚಿಸಿಕೊಳ್ಳಬಹುದು. ಅಲ್ಲದೆ 2TB ವರೆಗೆ ಮೆಮೊರಿ ಕಾರ್ಡ್ ಬಳಸುವ ಅವಕಾಶವೂ ಇದೆ.

47
ರಿಯಲ್‌ಮಿ C83 5G ಫೋನ್‌
Image Credit : Realme C83 5G

ರಿಯಲ್‌ಮಿ C83 5G ಫೋನ್‌

ರಿಯಲ್‌ಮಿ C83 5G ಫೋನ್‌ನಲ್ಲಿ 6.7-ಇಂಚಿನ LCD ಡಿಸ್‌ಪ್ಲೇ ನೀಡಲಾಗಿದೆ. ಬಜೆಟ್ ಫೋನ್‌ಗಳಲ್ಲಿ ಸಾಮಾನ್ಯವಾಗಿ 90Hz ಅಥವಾ 120Hz ರಿಫ್ರೆಶ್ ರೇಟ್ ಇರುತ್ತದೆ, ಆದರೆ ಈ ಫೋನ್‌ನಲ್ಲಿ 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ. ಇದರಿಂದ ಸ್ಕ್ರೋಲಿಂಗ್ ಮತ್ತು ಅನಿಮೇಷನ್‌ಗಳು ತುಂಬಾ ಸ್ಮೂತ್ ಆಗಿರುತ್ತವೆ. 

57
'ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್'
Image Credit : Realme C83 5G

'ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್'

ನಿರಂತರ ಬಳಕೆಯ ಸಮಯದಲ್ಲಿ ಫೋನ್ ಬಿಸಿಯಾಗದಂತೆ ತಡೆಯಲು, ಈ ಸೆಗ್ಮೆಂಟ್‌ನಲ್ಲೇ ಅತಿದೊಡ್ಡದಾದ 5334mm² 'ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್' ಅಳವಡಿಸಲಾಗಿದೆ. ಫೋನ್‌ನ ಬ್ರೈಟ್‌ನೆಸ್ ಮತ್ತು ಆಡಿಯೋವನ್ನು ತಾನಾಗಿಯೇ ಹೆಚ್ಚಿಸುವ ಹೊಸ 'AI ಔಟ್‌ಡೋರ್ ಮೋಡ್' ಸಹ ಇದರಲ್ಲಿದೆ.

67
 ಎರಡು ಆಕರ್ಷಕ ಬಣ್ಣ
Image Credit : Realme C83 5G

ಎರಡು ಆಕರ್ಷಕ ಬಣ್ಣ

ಫೋಟೋಗಳಿಗಾಗಿ 13MP AI ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದು ಸಾಮಾನ್ಯ ಬಳಕೆಗೆ ಸೂಕ್ತವಾದ ಕ್ಯಾಮೆರಾ ವ್ಯವಸ್ಥೆಯಾಗಿದೆ. ಈ ಫೋನ್ ಮಿಲಿಟರಿ-ಗ್ರೇಡ್ ಶಾಕ್ ರೆಸಿಸ್ಟೆನ್ಸ್ ಮತ್ತು IP64 ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಪಡೆದಿದೆ. 

ಹಾಗಾಗಿ, ಕೆಳಗೆ ಬಿದ್ದರೂ ಅಥವಾ ನೀರಿಗೂ ಬಿದ್ದರೂ ಸುಲಭವಾಗಿ ಹಾಳಾಗುವುದಿಲ್ಲ. ಈ ಫೋನ್ ಬ್ಲೂಮಿಂಗ್ ಪರ್ಪಲ್ ಮತ್ತು ಸ್ಪ್ರೌಟಿಂಗ್ ಗ್ರೀನ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

77
ಬೆಲೆ
Image Credit : Realme C83 5G

ಬೆಲೆ

ಇದರ 4GB RAM + 64GB ಸ್ಟೋರೇಜ್ ಮಾದರಿಯ ಬೆಲೆ ₹13,499, 4GB RAM + 128GB ಮಾದರಿಯ ಬೆಲೆ ₹14,499, ಮತ್ತು ಟಾಪ್-ಎಂಡ್ 6GB RAM + 128GB ಮಾದರಿಯ ಬೆಲೆ ₹17,499 ಆಗಿದೆ. 

ಇದರ ಮೊದಲ ಮಾರಾಟ ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್, ರಿಯಲ್‌ಮಿ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಪ್ರಾರಂಭವಾಗುತ್ತದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸ್ಮಾರ್ಟ್‌ಫೋನ್
ಮೊಬೈಲ್

Latest Videos
Recommended Stories
Recommended image1
ವಿಶ್ವದಲ್ಲೇ ಅತಿ ವೇಗದ ಇಂಟರ್ನೆಟ್ ಯಾವ ದೇಶಗಳಲ್ಲಿದೆ? ಭಾರತದ ಸ್ಥಾನವೆಷ್ಟು? ಟಾಪ್ 8ರಲ್ಲಿ ಯುಎಸ್, ಚೀನಾ ಕೂಡ ಇಲ್ಲ!
Recommended image2
ಐಫೋನ್ 17e ರಿಲೀಸ್‌: ಕೇವಲ ₹64,900ಕ್ಕೆ ಲಭ್ಯ! ಸ್ಯಾಟಲೈಟ್ ಫೀಚರ್ ಮತ್ತು ಸೂಪರ್ ಫಾಸ್ಟ್ A19 ಚಿಪ್!
Recommended image3
ಕೇವಲ 8 ಸಾವಿರಕ್ಕೆ ಒಳ್ಳೆ ಫೋನ್ ಬೇಕಾ? ಹಾಗಿದ್ರೆ 6300mAh ಬ್ಯಾಟರಿಯ ಸ್ಮಾರ್ಟ್‌ಫೋನ್ ನೋಡಿ
Related Stories
Recommended image1
ಕೇವಲ 8 ಸಾವಿರಕ್ಕೆ ಒಳ್ಳೆ ಫೋನ್ ಬೇಕಾ? ಹಾಗಿದ್ರೆ 6300mAh ಬ್ಯಾಟರಿಯ ಸ್ಮಾರ್ಟ್‌ಫೋನ್ ನೋಡಿ
Recommended image2
ಕೇವಲ 20 ಸಾವಿರ ರೂ ಒಳಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved