7 ತಿಂಗಳಲ್ಲಿ 10 ಕೋಟಿ iPhone 12 ಸೀರೀಸ್ ಮಾರಾಟ

ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಆಪಲ್‌ ಕಂಪನಿಯ ಐಫೋನ್ 12 ಸೀರೀಸ್ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆಯನ್ನು ಬರೆದಿವೆ. ಈ ಫೋನ್‌ ಲಾಂಚ್ ಆದ ಏಳು ತಿಂಗಳಲ್ಲಿ 10 ಕೋಟಿ ಮಾರಾಟವನ್ನು ಕಂಡಿವೆ ಎಂದು ಕೌಂಟರ್‌ಪಾಯಿಂಟ್ ಹೇಳಿದೆ. ಐಫೋನ್ 6 ಬಳಿಕ ಇಷ್ಟೊಂದು ವೇಗದಲ್ಲಿ ಅತಿ ಹೆಚ್ಚು ಮಾರಾಟ ಕಂಡಿರುವ ಹೆಗ್ಗಳಿಗೆ ಐಫೋನ್ 12 ಸೀರೀಸ್‌ಗೆ ಲಭ್ಯವಾಗಿದೆ.

iPhone 12 Series Crosses 100 Million Sales Mark Says Conterpoint

ಆಪಲ್ ಕಂಪನಿಯ ಐಫೋನ್ 12 ಸೀರೀಸ್ ಸ್ಮಾರ್ಟ್‌ಫೋನ್ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಐಫೋನ್ 12 ಸೀರೀಸ್ ಲಾಂಚ್ ಆದ ಏಳು ತಿಂಗಳಲ್ಲೇ ಜಾಗತಿಕವಾಗಿ 10 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ!

ಇನ್ನೂ ಒಂದು ವಿಶೇಷ ಏನೆಂದರೆ, ಆಪಲ್ ಕಂಪನಿ ಬಿಡುಗಡೆ ಮಾಡಿದ್ದ ಐಫೋನ್‌ 11 ಸೀರೀಸ್‌ ಫೋನ್‌ಗಳು 9 ತಿಂಗಳಲ್ಲಿ ಇಂಥದೊಂದು ಮೈಲುಗಲ್ಲು ಸ್ಥಾಪಿಸಿತ್ತು. ಇದೀಗ ಐಫೋನ್ 12 ಸೀರೀಸ್ ಸ್ಮಾರ್ಟ್‌ಪೋನ್ 10 ಕೋಟಿ ಮಾರಾಟದ ಮೈಲಿಗಲ್ಲನ್ನು ಇನ್ನೂ ಎರಡು ತಿಂಗಳು ಇರುವಂತೆಯೇ ನೆಟ್ಟಿದೆ. 2021ರ ಏಪ್ರಿಲ್‌ ತಿಂಗಳಲ್ಲಿ ಐಫೋನ್ ಸೀರೀಸ್ ಫೋನ್‌ಗಳು ಮಾರಾಟವು 10 ಕೋಟಿ ದಾಟಿದೆ ಎನ್ನುತ್ತಿದೆ ವರದಿಯು.

ಜೆಪಿಜಿ ಫೈಲ್ ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು ಹೇಗೆ?

ಆಪಲ್ ಕಂಪನಿಯ ಐಫೋನ್ 6 ಅತಿ ಹೆಚ್ಚು ವೇಗದಲ್ಲಿ ಮಾರಾಟವಾಗಿತ್ತು. ಅದಾದ ಬಳಿಕ ಬಂದ ಅನೇಕ ಹೊಸ ಐಫೋನ್‌ಗಳು ಇಷ್ಟು ವೇಗದಲ್ಲಿ ಮಾರಾಟ ಕಂಡಿರಲಿಲ್ಲ. ಇದೀಗ ಐಫೋನ್ 6 ಬಳಿಕ ಅತಿ ಹೆಚ್ಚು ವೇಗದಲ್ಲಿ ಮಾರಾಟವಾದ ಹೆಗ್ಗಳಿಕೆ ಐಫೋನ್ 12 ಸೀರೀಸ್ ಸ್ಮಾರ್ಟ್‌ಫೋನ್‌ಗಳಿಗೆ ಸಲ್ಲುತ್ತದೆ. ಐಫೋನ್ 12 ಸೀರೀಸ್‌ನ ಎಲ್ಲ ಸ್ಮಾರ್ಟ್‌ಫೋನ್‌ಗಳು 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುತ್ತವೆ. ಹಾಗೆಯೇ, ಎಲ್ಲ ಕಡೆಗೂ ಐಫೋನ್ 12 ಸೀರೀಸ್ ಫೋನ್‌ಗಳು ಸ್ವೀಕಾರಗೊಂಡಿವೆ. ನಾನ್ ಪ್ರೋ ಮಾಡೆಲ್‌ಗಳಿಗೂ ಒಎಲ್ಇಡಿ ಡಿಸ್‌ಪ್ಲೇಗಳನ್ನು ನೀಡಿರುವುದು ಕೂಡ ಹೆಚ್ಚಿನ ಫೋನ್‌ಗಳ ಮಾರಾಟಕ್ಕೆ ಕಾರಣ ಎಂದು ಕೌಂಟರ್‌ಪಾಯಿಂಟ್ ವಿಶ್ಲೇಷಣೆ ಮಾಡಿದೆ.

 

 

ಐಫೋನ್ 12 ಸೀರೀಸ್‌ ಫೋನ್‌ಗಳ ಪೈಕಿ ಟಾಪ್‌ಎಂಡ್ ಫೋನ್‌ಗಳನ್ನೇ ಗ್ರಾಹಕರು ಹೆಚ್ಚು ಇಷ್ಟಪಟ್ಟಿದ್ದಾರೆಂಬ ಮಾಹಿತಿಯು ಕೌಂಟರ್‌ಪಾಯಿಂಟ್ ಸಂಶೋಧನೆಯಲ್ಲಿ ಗೊತ್ತಾಗಿದೆ. ಐಫೋನ್ 12 ಸೀರೀಸ್‌ ಫೋನ್‌ಗಳ ಪೈಕಿ ಐಫೋನ್ 12 ಪ್ರೋ ಮ್ಯಾಕ್ಸ್ ಟಾಪ್‌ಎಂಡ್ ಮಾಡೆಲ್ ಆಗಿದೆ. ಐಫೋನ್ 12 ಸೀರೀಸ್ ಫೋನ್‌ಗಳ ಒಟ್ಟು ಮಾರಾಟದಲ್ಲಿ ಈ ಐಫೋನ್ 12 ಪ್ರೋ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಮಾರಾಟದ ಪಾಲು ಶೇ.29ರಷ್ಟಿದೆ. ಐಫೋನ್ 11 ಪ್ರೋ ಮ್ಯಾಕ್ಸ್ ಶೇ.25ರಷ್ಟು ಮಾರಾಟ ಕಂಡಿತ್ತು. ಆ ದಾಖಲೆಯನ್ನು ಐಫೋನ್ 12 ಪ್ರೋ ಮ್ಯಾಕ್ಸ್ ಐಫೋನ್ ಮುರಿದಿದೆ. 

ಸರ್ಕಾರಿ ಸಂಸ್ಥೆಗಳು ಬಳಸುವ Wickr ಮೆಸೆಜಿಂಗ್ ಆ್ಯಪ್ ಖರೀದಿಸಿದ ಅಮೆಜಾನ್

ಕೌಂಟರ್‌ಪಾಯಿಂಟ್ ಪ್ರಕಾರ, ಈ ಎಲ್ಲ ಕಾರಣಗಳಿಂದಾಗಿಯೇ ಐಫೋನ್ 11 ಸೀರೀಸ್‌ಗಿಂತಲೂ ಐಫೋನ್ 12 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆದ ಮೊದಲ ಏಳು ತಿಂಗಳಲ್ಲಿ ಶೇ.22ರಷ್ಟು ಹೆಚ್ಚು ಮಾರಾಟ ಕಂಡಿವೆ. ವಿಶೇಷ ಎಂದರೆ, ಈ ಐಫೋನ್ 12 ಸೀರೀಸ್ ಫೋನ್‌ಗಳ ಬಾಕ್ಸ್‌ನಲ್ಲಿ ಕಂಪನಿ ಚಾರ್ಜರ್ ಆಗಲಿ, ಹೆಡ್‌ಫೋನ್‌ಗಳಾಗಲೀ ನೀಡಿಲ್ಲ. ಆದರೂ, ಇವುಗಳ ಮಾರಾಟಕ್ಕೆ ಅವು ಅಡ್ಡಿಯಾದಂತಿಲ್ಲ ಎಂದು ವಿಶ್ಲೇಷಣೆ ಮಾಡಲಾಗಿದೆ. 

ಏಪ್ರಿಲ್‌ನಲ್ಲಿ ಜಾಗತಿಕವಾಗಿ ಐಫೋನ್ 12 ಪ್ರೋ ಮ್ಯಾಕ್ಸ್ ಮಾರಾಟವಾದ ಒಟ್ಟು ಸ್ಮಾರ್ಟ್‌ಫೋನ್‌ಗಳು ಪೈಕಿ  ಅಮೆರಿಕದ ಮಾರುಕಟ್ಟೆಯಲ್ಲಿ ಶೇ.40ರಷ್ಟು ಫೋನ್‌ಗಳು ಮಾರಾಟವಾಗಿವೆ. 2020 ಡಿಸೆಂಬರ್‌ನಿಂದ ಅಮೆರಿಕದ ಮಾರುಕಟ್ಟೆಯಲ್ಲಿ ಐಫೋನ್ 12 ಪ್ರೋ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಅತಿ ಹೆಚ್ಚು ಮಾರಾಟವಾಗುತ್ತಿರುವ ಫೋನ್ ಎಂಬ ಹೆಗ್ಗಳಿಕೆ ಗಳಿಸಿದೆ.

ರಿಯಲ್‌ಮಿ ಸಿ11 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇವಲ 6,999 ರೂ.

ತನ್ನ ವಿಶಿಷ್ಟ ಫೀಚರ್‌ಗಳು, ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ಆಪಲ್ ಕಂಪನಿಯ ಐಫೋನ್‌ಗಳು ಗ್ರಾಹಕರ ಫೇವರಿಟ್ ‌ಸ್ಮಾರ್ಟ್‌ಫೋನ್‌ಗಳಾಗಿಯೇ ಉಳಿದಿವೆ. ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಯೋಚಿಸಿ, ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಹೊಸ ಫೀಚರ್‌ ಮತ್ತು ತಂತ್ರಜ್ಞಾನ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದರಲ್ಲಿ ಮುಂದಿದೆ. ಅದೇ ಕಾರಣಕ್ಕೆ ಜಾಗತಿಕವಾಗಿ ಈ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. 

Latest Videos
Follow Us:
Download App:
  • android
  • ios