ಪ್ರೀಮಿಯಂ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?
ಚೀನಾ ಮೂಲದ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯಲ್ಲಿ ದೊಡ್ಡ ಕಂಪನಿಯಾಗಿದ್ದು, ಲ್ಯಾಪ್‌ಟ್ಯಾಪ್ ಉತ್ಪಾದನೆಯಲ್ಲೂ ಮುಂದಿದೆ. ಶಿಯೋಮಿ ಇದೀಗ ಪ್ರೀಮಿಯಂ ಲ್ಯಾಪ್‌ಟ್ಯಾಪ್ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲಾಂಚ್ ಮಾಡಿದೆ. ಈ ಲ್ಯಾಪ್‌ಟ್ಯಾಪ್ ಬಹಳಷ್ಟು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.
ಒಎಲ್ಇಡಿ ಡಿಸ್‌ಪ್ಲೇ, ಯೂನಿಬಾಡಿ ಅಲ್ಯುಮಿನಿಯಮ್ ಡಿಸೈನ್ ಮತ್ತು 11ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಒಳಗೊಂಡಿರುವ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಅನ್ನು ಶಿಯೋಮಿ ಲಾಂಚ್ ಮಾಡಿದೆ.
ಈ ಎಂಐ ನೋಟ್‌ಬುಕ ಪ್ರೋ ಮಾಡೆಲ್, GeForce RTX 3050 Ti ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ. ಈ ಲ್ಯಾಪ್‌ಟ್ಯಾಪ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಬಿಲ್ಟ್ ಇನ್ ಬ್ಯಾಟರಿ 25 ನಿಮಿಷದಲ್ಲಿ ಶೂನ್ಯದಿಂದ ಶೇ.50ರಷ್ಟು ಚಾರ್ಜ್ ಆಗುತ್ತದೆ. ಅಂದರೆ, ಕೇವಲ 25 ನಿಮಿಷದಲ್ಲಿ ಈ ಲ್ಯಾಪ್‌ಟ್ಯಾಪ್ ಬ್ಯಾಟರಿ ಅರ್ಧದಷ್ಟು ಚಾರ್ಜಿಂಗ್ ಮಾಡಿಕೊಳ್ಳುತ್ತದೆ. ಈ ಫೀಚರ್ ಇತರೆ ನೋಟ್‌ಬುಕ್‌ಗಳಿಗೆ ಹೋಲಿಸಿದರೆ ವಿಶಿಷ್ಟವಾಗಿದ್ದು, ಗ್ರಾಹಕರನ್ನು ಸೆಳೆಯುವ ಸಾಧ್ಯತೆ ಇದೆ.
ಕಳೆದ ವರ್ಷ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಎಂಐ ನೋಟ್‌ಬುಕ್ ಪ್ರೋ 14 ಮತ್ತು ನೋಟ್‌ಬುಕ್ ಪ್ರೋ 15 ಲ್ಯಾಪ್‌ಟ್ಯಾಪ್ ಬಳಿಕ, ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಶಿಯೋಮಿ ಕಂಪನಿಯ ಹೊಸ ಪ್ರೀಮಿಯಂ ಲ್ಯಾಪ್‌ಟ್ಯಾಪ್ ಆಗಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರಿ ಸಂಸ್ಥೆಗಳು ಬಳಸುವ Wickr ಮೆಸೆಜಿಂಗ್ ಆ್ಯಪ್ ಖರೀದಿಸಿದ ಅಮೆಜಾನ್
ಶಿಯೋಮಿ ಕಂಪನಿಯ ಈ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಭಾರತದ ಮಾರುಕಟ್ಟೆಗೆ ಇನ್ನೂ ಬಿಡುಗಡೆಯಾಗಿಲ್ಲ. ಕಂಪನಿಯು ಈ ಲ್ಯಾಪ್‌ಟ್ಯಾಪ್ ಅ ನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಪ್ರೀಮಿಯಂ ಲ್ಯಾಪ್‌ಟ್ಯಾಪ್ ಆಗಿರುವ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಬೆಲೆ ಅಂದಾಜು 92,100 ರೂಪಾಯಿ(CNY 7,999) ಇರಲಿದೆ. ಈ ಲ್ಯಾಪ್‌ಟ್ಯಾಪ್ 11ನೇ ತಲೆಮಾರಿನ ಇಂಟೆಲ್ ಕೋರ್ i5-11300H ಪ್ರೊಸೆಸರ್ ಒಳಗೊಂಡಿದೆ. 16 ಜಿಬಿ ರ್ಯಾಮ್ ಮತ್ತು 512 ಜಿಬಿ ಎಸ್ಎಸ್‌ಡಿ ಸ್ಟೋರೇಜ್ ಮೆಮೊರಿ ಒಳಗೊಂಡಿದೆ.
32 ಜಿಬಿ ರ್ಯಾಮ್ ಮತ್ತು 1 ಟಿಬಿ ಎಸ್ಎಸ್‌ಡಿ ಸ್ಟೋರೇಜ್ ಸಾಮರ್ಥ್ಯದ ಹೈಎಂಡ್ ಲ್ಯಾಪ್‌ಟ್ಯಾಪ್ ಬೆಲೆ ಅಂದಾಜು 1,15,100 ರೂಪಾಯಿ(CNY 9,999) ಇರಲಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟ್ಯಾಪ್‌ಗಳ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಕಂಪನಿ ಇನ್ನೂ ಬಿಟ್ಟುಕೊಟ್ಟಿಲ್ಲ.
ಜೆಪಿಜಿ ಫೈಲ್ ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು ಹೇಗೆ?
ವಿಂಡೋಸ್ 10 ಹೋಮ್ ಮೂಲಕ ರನ್ ಆಗಲಿರುವ ಈ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15, 15.6 ಇಂಚ್ 3.5ಕೆ ಸ್ಯಾಮ್ಸಂಗ್ ಇ4 ಒಎಲ್ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. Nvidia GeForce RTX 3050 Ti ಗ್ರಾಫಿಕ್ಸ್‌ನೊಂದಿಗೆ 11ನೇ ತಲೆಮಾರಿನ Intel Core i7 processor ಇರಲಿದೆ. 32 ಜಿಬಿವರೆಗೆ ರ್ಯಾಮ್ ಮತ್ತು 1 ಟಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಈ ನೋಟ್‌ಬುಕ್ ಹೊಂದಿದೆ.
13 ಎಂಎಂ, ಬ್ಯಾಕ್‌ಲೈಟ್ ಕೀಬೋರ್ಡ್ ಅನ್ನು ಒಳಗೊಂಡಿರುವ ಈ ಲ್ಯಾಪ್‌ಟ್ಯಾಪ್‌ನಲ್ಲಿ ಬಿಲ್ಟ್ ಇನ್ ಆಂಬಿಯೆಂಟ್ ಲೈಟ್ ಸೆನ್ಸರ್ ಇದೆ. ವಾತಾವರಣಕ್ಕೆ ತಕ್ಕಂತೆ ಕೀಬೋರ್ಡ್ ಹಾಗೂ ಡಿಸ್‌ಪ್ಲೇ ಆಂಬಿಯೆಂಟ್ ಲೈಟ್ ಅನ್ನು ಹೊಂದಾಣಿಕೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಮೂರು ಹಂತಗಳಲ್ಲಿ ಬಳಕೆದಾರರು ಕೀಬೋರ್ಡ್ ಬ್ಯಾಕ್ ಲೈಟ್ಸ್ ಅನ್ನು ಮ್ಯಾನುಯೆಲ್ ಆಗಿಯೂ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.
ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ ಈ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲ್ಯಾಪ್‌ಟ್ಯಾಪ್ ಬ್ಲೂಟೂಥ್ ವಿ 5.2 ಮತ್ತು ವೈಫೈ 6, ಎರಡು ಯುಎಸ್‌ಬಿ-ಎ 3.2 ಜೆನ್ 2, ಯುಎಸ್‌ಬಿ ಟೈಪ್-ಸಿ, ಥಂಡರ್‌ಬೋಲ್ಟ್ 4, 3.5 ಎಂಎಂ ಹೆಡ್‌ಫೋನ್ ಜಾಕ್ ಒಳಗೊಂಡಿದೆ. ಇಷ್ಟು ಮಾತ್ರವಲ್ಲದೇ, ಎಚ್‌ಡಿಎಂಐ 2.1 ಪೋರ್ಟ್‌ಗಳಿವೆ. ಪವರ್ ಕೀಯಲ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅಳಡಿಸಲಾಗಿದೆ, ಈ ಪೈಕಿ ಒಂದು ಬೂಟ್ ಮತ್ತು ಮತ್ತೊಂದು ಅನ್ಲಾಕ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
7 ತಿಂಗಳಲ್ಲಿ 10 ಕೋಟಿ iPhone 12 ಸೀರೀಸ್ ಮಾರಾಟ
ಪ್ರೀಮಿಯಂ ಲ್ಯಾಪ್‌ಟ್ಯಾಪ್ ಆಗಿರುವ ಈ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಈಗ ಚೀನಾದಲ್ಲಿ ಬಿಡುಗಡೆಯಾಗಿದೆ. ಆದರೆ, ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶ ಪಡೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳಲ್ಲಿ. ಆದರೆ, ಶೀಘ್ರವೇ ಭಾರತದಲ್ಲಿ ಲಾಂಚ್ ಆಗಬಹುದು ಎಂದು ನಿರೀಕ್ಷಿಸಬಹುದಾಗಿದೆ.