ಬಜೆಟ್  ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಜನಪ್ರಿಯವಾಗಿರುವ ಚೀನಾ ಮೂಲದ ರಿಯಲ್‌ಮಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ಡಿಝೋ ಸ್ಟಾರ್ 300 ಮತ್ತು ಡಿಝೋ ಸ್ಟಾರ್ 500 ಎಂಬೆರಡು ಫೀಚರ್‌ ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಎರಡೂ ಫೋನ್‌ಗಳು ಹಲವು ವಿಶೇಷ ಫೀಚರ್‌ಗಳನ್ನು ಒಳಗೊಂಡಿವೆ.

ಈಗ ಏನಿದ್ದರೂ ಸ್ಮಾರ್ಟ್‌ಫೋನ್‌ಗಳ ಕಾಲ. ಬೇಸಿಕ್ ಸೆಟ್ ಅಥವಾ ಫೀಚರ್‌ ಮೊಬೈಲ್ ಫೋನ್‌ಗಳಿಗೆ ಅಂಥ ಬೇಡಿಕೆ ಇಲ್ಲ. ಆದರೂ, ಅಗತ್ಯ ಸಂಹವನಕ್ಕಾಗಿ ಇನ್ನೂ ಹಲವು ಮಂದಿ ಈ ಫೀಚರ್‌ ಫೋನ್‌ಗಳನ್ನು ಬಳಸುತ್ತಾರೆ. ಹಲವು ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಫೀಚರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತಿವೆ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಹುಬೇಗ ಜನಪ್ರಿಯವಾಗಿರುವ ರಿಯಲ್‌ಮಿ, ಇದೀಗ ಎರಡು ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಡಿಝೋ ಸ್ಟಾರ್ 300 ಮತ್ತು ಡಿಜೋ ಸ್ಟಾರ್ 500 ಫೀಚರ್‌ ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ.

ಸೂಪರ್ ಫೀಚರ್ಸ್: Redmi Note 10T 5G ಫೋನ್ ಭಾರತದಲ್ಲಿ ಬಿಡುಗಡೆ ಪಕ್ಕಾ

ಈ ಎರಡೂ ಮೊಬೈಲ್ ‌ಫೋನ್‌ಗಳು ಫೀಚರ್‌ಫೋನ್‌ಗಳಾಗಿವೆ. ಫಿಜಿಕಲ್ ಕೀಬೋರ್ಡ್‌ಗಳನ್ನು ಹೊಂದಿರುವ ಈ ಫೋನ್‌ಗಳು ಮೂರು ರೀತಿಯ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಆದರೆ, ಡಿಝೋ ಸ್ಟಾರ್ 500 ಫೋನ್, ಡಿಝೋ ಸ್ಟಾರ್ 300ಗಿಂತಲೂ ನೋಡಲು ಹೆಚ್ಚು ಶಾರ್ಪ್ ಆಗಿದೆ. ಡಿಜೊ ರಿಯಲ್‌ಮಿ ಅಡಿಯಲ್ಲಿ ಹೊಸ ಬ್ರಾಂಡ್ ಆಗಿದ್ದು, ಟ್ರೂ ವೈರ್‌ಲೆಸ್ ಮತ್ತು ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್‌ಗಳನ್ನು ಸಹ ಒಳಗೊಂಡಿದೆ.

ಡಿಜೋ ಸ್ಟಾರ್‌ 300 ಹಲವು ಫೀಚರ್‌ಗಳನ್ನು ಒಳಗೊಂಡಿವೆ. ಈ ಫೋನ್ ನಿಮೆಗ ಡ್ಯುಯೆಲ್ ಸಿಮ್ ಬಳಕೆಗೆ ಅವಕಾಶ ಕಲ್ಪಿಸುತ್ತದೆ. 1.77 ಇಂಚ್ ಕ್ಯೂವಿಜಿಎ ಡಿಸ್‌ಪ್ಲೇ ಒಳಗೊಂಡಿದ್ದು SC6531E ಪ್ರೊಸೆಸರ್‌ ಆಧರಿತವಾಗಿದೆ. 32 ಎಂಬಿ ರ್ಯಾಮ್ ಇದ್ದು, 32 ಇಂಟರ್ನಲ್ ಸ್ಟೋರೇಜ್ ದೊರೆಯುತ್ತದೆ. ಆದರೆ, ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿವರೆಗೂ ಮೆಮೋರಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ಸ್ಲಾಟ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ.

ಈ ಡಿಝೋ ಸ್ಟಾರ್ 300 ಫೋನ್ ಹಿಂಬದಿಯಲ್ಲಿ ಒಂದೇ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ 0.08 ಮೆಗಾ ಪಿಕ್ಸೆಲ್ ಕ್ಯಾಮೆರಾವಾಗಿದೆ. 2ಜಿಗೆ ಸಪೋರ್ಟ್ ಮಾಡುವ ಈ ಫೋನ್‌ನಲ್ಲಿ ನಿಮಗೆ ಎಫ್ಎಂ ಕೂಡ ಸಿಗುತ್ತದೆ. 2,550 ಎಂಎಎಚ್ ಬ್ಯಾಟರಿ ಇದ್ದದು, 18 ದಿನಗಳವರೆಗೂ ಸ್ಟ್ಯಾಂಡ್‌ಬೈ ಹಾಗೂ 21 ಗಂಟೆಗಳ ಕಾಲ್ ಟೈಮ್ ಸಾಮರ್ಥ್ಯವನ್ನು ಹೊಂದಿದೆ. 

ಹೊಸ ಐಟಿ ರೂಲ್ಸ್ ಎಫೆಕ್ಟ್: ನಿಯಮ ಉಲ್ಲಂಘಿಸಿದ 3 ಕೋಟಿ ಪೋಸ್ಟ್ ವಿರುದ್ಧ ಫೇಸ್‌ಬುಕ್ ಕ್ರಮ.

ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿರುವ ಡಿಝೋ ಸ್ಟಾರ್ 300 ಫೋನ್ ಬೆಲೆ 1,299 ರೂಪಾಯಿಯಾಗಿದೆ. ಇದೇ ವೇಳೆ, ಕಪ್ಪು, ಗ್ರೀನ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಮಾರಾಟಕ್ಕೆ ಸಿದ್ದವಾಗಿರುವ ಡಿಝೋ ಸ್ಟಾರ್ 500 ಫೋನ್ ಬೆಲೆ 1,799 ರೂಪಾಯಿಯಾಗಿದೆ. ಈ ಎರಡೂ ಫೋನ್‌ಗಳನ್ನು ನೀವು ಫ್ಲಿಪ್‌ಕಾರ್ಟ್ ಹಾಗೂ ಕೆಲವು ಆಯ್ದ ಆಫ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದಾಗಿದೆ. 

ಡಿಝೋ ಸ್ಟಾರ್ 300 ಮೊಬೈಲ್‌ಗಿಂತಲೂ ಡಿಝೋ ಸ್ಟಾರ್ 500 ಫೋನ್ ಡಿಸ್‌ಪ್ಲೇ ದೊಡ್ಡದಾಗಿದೆ. ಫೋನ್‌ನ ಡಿಸ್‌ಪ್ಲೇ ಗಾತ್ರ 2.8 ಇಂಚ್ ಇದ್ದು ಎಲ್‌ಸಿಡಿ ಡಿಸ್‌ಪ್ಲೇ ಆಗಿದೆ. ಈ ಫೋನ್‌ನಲ್ಲಿ ನೀವು ಎಸ್‌ಸಿ6531ಇ ಪ್ರೊಸೆಸರ್‌ವನ್ನು ಕಾಣಬಹುದಾಗಿದೆ. ಡಿಝೋ ಸ್ಟಾರ್ 300 ರೀತಿಯಲ್ಲಿ ಈ ಡಿಝೋ ಸ್ಟಾರ್‌ ಫೋನ್‌ನಲ್ಲಿ ರ್ಯಾಮ್ ಮತ್ತು ಸ್ಟೋರೇಜ್ ಇರಲಿದೆ. ಬಳಕೆದಾರರು ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಪ್ರೀಮಿಯಂ ಎಂಐ ನೋಟ್‌ಬುಕ್ ಪ್ರೋ ಎಕ್ಸ್ 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?

ಈ ಫೋನ್‌ನಲ್ಲಿ ನೀವು 0.3 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಡಿಝೋ ಸ್ಟಾರ್ 500 ಕೂಡ 2ಜಿ ಫೋನ್ ಆಗಿದ್ದು, ಎಫ್ ಎಂ ಕೂಡ ಇದರಲ್ಲಿದೆ. ಆದರೆ, ಈ ಫೋನ್‌ನಲ್ಲಿ ಕಡಿಮೆ ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಕಂಪನಿಯು ಇದರಲ್ಲಿ 1900 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ನೀಡಿಲಾಗಿದೆ. ಈ ಬ್ಯಾಟರಿಯನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ, 13 ಸ್ಟ್ಯಾಂಡ್‌ಬೈ ದೊರೆಯಲಿದ್ದು, 17 ಗಂಟೆಗಳವರೆಗೆ ಕಾಲ್ ಟೈಮ್ ಒದಗಿಸಲಿದೆ.