ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನವು ಇದೇ ಮೊದಲ ಬಾರಿಗೆ Manufactured in Pakistan ಎಂಬ ಟ್ಯಾಗ್‌ನಡಿ ಸ್ಮಾರ್ಟ್‌ಫೋನ್‌ಗಳ ರಫ್ತು ಆರಂಭಿಸಿದೆ. ಪಾಕಿಸ್ತಾನದಲ್ಲಿ ಉತ್ಪಾದನೆಯಾಗುವ ಮೊಬೈಲ್‌ಗಳನ್ನು ಯುಎಇ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದೆ. ಸರ್ಕಾರದ ನೀತಿಗಳ ಪರಿಣಾಮವಾಗಿ ಇದು ಸಾಧ್ಯವಾಗಿದೆ ಎಂದು ಅಲ್ಲಿನ ಟೆಲಿಕಾಂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ದೃಷ್ಟಿಯಿಂದ ಹಾಗೂ ಉತ್ಪಾದನಾ ದೃಷ್ಟಿಯಿಂದ ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ತೀರಾ ಕೆಳಮಟ್ಟದಲ್ಲಿದೆ. ಇಂಥ ಪಾಕಿಸ್ತಾನ ಇದೀಗ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಿ, ಹೊರ ದೇಶಗಳಿಗೆ ರಫ್ತು ಮಾಡಲಾರಂಭಿಸಿದೆ.

ಹೌದು. ನೀವು ಓದುತ್ತಿರುವುದು ನಿಜ. Manufactured in Pakistan ಎಂಬ ಟ್ಯಾಗ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನ ಯುಎಇಗೆ ರಫ್ತು ಮಾಡಿದೆ. ಇನೋವಿ ಟೆಲಿಕಾಂ ಉತ್ಪಾದಿಸುವ 5,500 4ಜಿ ಸ್ಮಾರ್ಟ್‌ಫೋನ್‌ಗಳ ಮೊದಲ ಸೆಟ್‌ ಯುಎಇಗೆ ರಫ್ತು ಮಾಡಲಾಗಿದೆ ಎಂದು ಸ್ಥಳೀಯ ಸುದ್ದಿ ಪತ್ರಿಕೆ ಡಾನ್ ವರದಿ ಮಾಡಿದೆ.

ಆದಾಗ್ಯೂ, ಮೊಬೈಲ್ ಫೋನ್ ಸ್‌ಟ್‌ಗಳ ಸ್ಥಳೀಯ ತಯಾರಕರು ರಫ್ತು ಬೆಂಬಲ ನೀತಿಯ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ. ಯಾಕೆಂದರೆ, ಮಧ್ಯ ಪ್ರಾಚ್ಯ ಪ್ರದೇಶಗಳಲ್ಲಿ ಸ್ಪರ್ಧಿಗಳು ವಿರುದ್ಧ ಪೈಪೋಟಿ ನಡೆಸಲು ಇದು ಅಗತ್ಯವಾಗಿದೆ. ಯುಇಎಗೆ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಟೆಲಿಕಮ್ಯುನಿಕೇಷನ್ ಪ್ರಾಧಿಕಾರವು ಸ್ಥಳೀಯ ಕಂಪನಿಯನ್ನು ಶ್ಲಾಘಿಸಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಕೈಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದೆ. ಇದು ದೇಶದಲ್ಲಿ ಮೊಬೈಲ್ ಸಾಧನ ತಯಾರಿಕಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಸಂಘಟಿತ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನೋಕಿಯಾ ಸಿ20 ಪ್ಲಸ್ ಲಾಂಚ್, ಒಮ್ಮೆ ಚಾರ್ಜ್ ಮಾಡಿದ್ರೆ 2 ದಿನ ಬರುತ್ತೆ!

ಮಧ್ಯ ಪ್ರಾಚ್ಯದ ಕಡಿಮೆ ಗುಣಮಟ್ಟದ ಮಾರುಕಟ್ಟೆಗಳಲ್ಲಿ ಅಂದರೆ ಇರಾಕ್, ಇರಾನ್ ಮತ್ತು ಆಫ್ಘಾನಿಸ್ತಾ ಮಾರುಕಟ್ಟೆಗಳಲ್ಲಿ ಪ್ರಭುತ್ವ ಸಾಧಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಝೀಶನ್ ಮಿಯಾ ತಿಳಿಸಿದ್ದಾರೆ.

ನಾವು ಚೀನೀ ಬ್ರಾಂಡ್‌ಗಳನ್ನು ತಯಾರಿಸುತ್ತಿದ್ದೇವೆ ಮತ್ತು ಗಲ್ಫ್ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ವಲಸಿಗ ಕಾರ್ಮಿಕರು ಇದ್ದಾರೆ ಎಂದು ಝೀಶನ್ ಹೇಳಿದ್ದಾರೆ. ಗಲ್ಫ್ ರಾಷ್ಟ್ರಗಳ ಉನ್ನತ ಮಟ್ಟದ ಗ್ರಾಹಕರು ಉನ್ನತ ಮಟ್ಟದ ಮೊಬೈಲ್ ಬ್ರಾಂಡ್‌ಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಈ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೊಬೈಲ್ ರಫ್ತಿಗೆ ಸಂಬಂಧಿಸಿದಂತೆ ನಮ್ಮದು ಗಲ್ಫ್ ಮಾರುಕಟ್ಟೆ ಪ್ರಾಥಮಿಕ ಗುರಿಯಾಗಿದೆ. ಆದರೂ, ಇರಾಕ್, ಇರಾನ್ ಮತ್ತು ಆಫ್ಘಾನಿಸ್ತಾನದ ಮಾರುಕಟ್ಟೆಯಲ್ಲೂ ಜನರು 100 ಡಾಲರ್ ತೆತ್ತು ಸ್ಮಾರ್ಟ್‌ಫೋನ್ ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆಂದು ಅವರು ತಿಳಿಸಿದ್ದಾರೆ. 

ಸರ್ಕಾರ ರೂಪಿಸಿರುವ ರಫ್ತು ನೀತಿಗಳ ಪರಿಣಾಮದಿಂದಾಗಿ ಪಾಕಿಸ್ತಾನವು ಇದೀಗ ಮೊಬೈಲ್ ಆಮದು ರಾಷ್ಟ್ರ ಬದಲಾಗಿ ಮೊಬೈಲ್ ರಫ್ತು ಮಾಡುವ ರಾಷ್ಟ್ರವಾಗಿ ಬದಲಾಗುತ್ತಿದೆ ಎಂದು ಪಾಕಿಸ್ತಾನದ ಐಟಿ ಮತ್ತು ಟೆಲಿಕಾಂ ಸಚಿವ ಸಯ್ಯದ್ ಅಮಿನ್ ಉಲ್ ಹಕ್ ಅವರು ಸ್ಥಳೀಯ ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ. 

ಸದ್ದಿಲ್ಲದೇ ಲಾಂಚ್ ಆದ ವಿವೋ ವೈ12ಜಿ ಸ್ಮಾರ್ಟ್‌ಫೋನ್

ಸ್ಥಳೀಯ ಮೊಬೈಲ್ ಸಾಧನ ತಯಾರಿಕಾ ಕಂಪನಿಗಳಿಗೆ ಅನುಕೂಲಕರ ವಾತಾವರಣವನ್ನು ಒದಗಿಸಲಾಗುತ್ತಿದೆ ಮತ್ತು ಸಾಧನ ಗುರುತಿಸುವಿಕೆ ನೋಂದಣಿ ಮತ್ತು ನಿರ್ಬಂಧಿಸುವ ವ್ಯವಸ್ಥೆ (ಡಿವೈಸ್ ಐಡಿಟೆಂಪಿಕೇಷನ್ ರಿಜಿಸ್ಟ್ರೇಷನ್ ಮತ್ತು ಬ್ಲಾಕಿಂಗ್ ಸಿಸ್ಟಮ್-ಡಿಐಆರ್‌ಬಿಎಸ್) ಮೂಲಕ ಮೊಬೈಲ್ ಫೋನ್‌ಗಳ ಕಳ್ಳಸಾಗಣೆಯನ್ನು ನಿಲ್ಲಿಸಲಾಗಿದೆ. ಮುಂದಿನ ವರ್ಷ ಮೊಬೈಲ್ ಸೆಟ್‌ಗಳ ಬಿಡಿಭಾಗಗಳ ಉತ್ಪಾದನೆ ಆರಂಭವಾಗಲಿದೆ. ನಂತರ ಸ್ಥಳೀಯ ತಯಾರಕರು ಅಂತಿಮವಾಗಿ ಅತ್ಯಾಧುನಿಕ ಫೋನ್‌ಗಳನ್ನು ಸ್ಥಳೀಯವಾಗಿಯೇ ಜೋಡಿಸಲು ಆರಂಭಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಇಷ್ಟಾಗಿಯೂ ಸ್ಮಾರ್ಟ್‌ಫೋನ್ ತಯಾರಿಕಾ ಉತ್ಪಾದನ ಕ್ಷೇತ್ರದಲ್ಲಿರುವ ಪ್ರಮುಖ ಕಂಪನಿಗಳು ಸರ್ಕಾರದ ನಿಧಾನ ನೀತಿಯನ್ನು ಟೀಕಿಸಿವೆ. ರಫ್ತು ಮಾರುಕಟ್ಟೆಯ ಅಭಿವೃದ್ಧಿಯೆಡೆಗೆ ಸರ್ಕಾರ ನಿಧಾನ ನೀತಿಯನ್ನು ಅನುಸರಿಸುತ್ತಿದೆ. ಬದಲಾದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಅವರು ಹೇಳಿದ್ದಾರೆ. 

ಟ್ರಾನ್ಸ್‌ಶನ್ ಟೆಕ್ನೊ ಎಲೆಕ್ಟ್ರಾನಿಕ್ಸ್ ಸಿಇಒ ಅಮೀರ್ ಅಲ್ಲಾವಾಲಾ ಮಾತನಾಡಿ, ಚೀನಾದ ಮೊಬೈಲ್ ಸೆಟ್‌ಗಳ ಒಟ್ಟಾರೆ ರಫ್ತುಗಳು 140 ಡಾಲರ್‌ಗಿಂತ ಹೆಚ್ಚಾಗಿದೆ. ಆದರೆ ಅದು ಕಡಿಮೆ ಕಾರ್ಮಿಕ ವೆಚ್ಚದಿಂದ ಮಾತ್ರ ಸಾಧ್ಯವಾಗಿದೆ. ಆದರೆ, ಅದೀಗ ಗಮನಾರ್ಹ ಹೆಚ್ಚಳವಾಗಿದೆ ಎಂಬುದನ್ನು ಗಮನಿಸಬೇಕು ಎಂದು ಟ್ರಾನ್ಸ್‌ಶನ್ ಟೆಕ್ನೋ ಎಲೆಕ್ಟ್ರಾನಿಕ್ಸ್ ಸಿಇಒ ಅಮೀರ್ ಅಲ್ಲಾವಾಲಾ ತಿಳಿಸಿದ್ದಾರೆ. 

ಜಿಯೋಫೋನ್ ನೆಕ್ಸ್ಟ್ ಫೋನ್ ಹೇಗಿದೆ? ಬೆಲೆ ಎಷ್ಟಿದೆ?

ಚೀನಿಯರು ಹೈಟೆಕ್ ವಸ್ತುಗಳ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ತಮ್ಮ ಮೊಬೈಲ್ ಸೆಟ್ ಉತ್ಪಾದನೆಯನ್ನು ಭಾರತ, ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶದಂತಹ ದೇಶಗಳಿಗೆ ವರ್ಗಾಯಿಸುತ್ತಿದ್ದಾರೆ. ಇಷ್ಟಾಗಿಯೂ ವಿಯೇಟ್ನಾಮ ಮತ್ತು ಇಂಡೋನೇಷ್ಯಾದಲ್ಲಿ ಕಾರ್ಮಿಕ ವೆಚ್ಚಳ ಹೆಚ್ಚಾಗಿದೆ, ರಾಜಕೀಯ ಕಾರಣಗಳಿಂದಾಗಿ ಭಾರತದಲ್ಲೂ ತನ್ನ ಕಾರ್ಯಕ್ಷೇತ್ರವನ್ನು ಚೀನಿ ಕಂಪನಿಗಳು ವಿಸ್ತರಿಸಲು ಮುಂದಾಗುತ್ತಿಲ್ಲ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.