ನೋಕಿಯಾ ಸಿ20 ಪ್ಲಸ್ ಲಾಂಚ್, ಒಮ್ಮೆ ಚಾರ್ಜ್ ಮಾಡಿದ್ರೆ 2 ದಿನ ಬರುತ್ತೆ!
ನೋಕಿಯಾ ಸಿ20 ಪ್ಲಸ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಫೋನ್ ಡುಯಲ್ ಕ್ಯಾಮೆರಾ ಹೊಂದಿದೆ. ಜೊತೆಗೆ, ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನಗಳ ಕಾಲ ಬಾಳಿಕೆ ಬರುತ್ತದೆ. ಈ ಫೋನ್ ಬೆಲೆ ಕೂಡ ಕೈಗೆಟುಕುವ ದರದಲ್ಲಿದೆ.
ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಯಾಗಿರುವ ನೋಕಿಯಾ ಕೂಡ ಹಬ್ಬದ ಸೀಸನ್ ಅನ್ನು ತನ್ನ ಸ್ಮಾರ್ಟ್‌ಫೋನ್ ಬಿಡುಗಡೆ ಮೂಲಕ ಭರ್ಜರಿಯಾಗಿ ಆರಂಭಿಸಿದೆ. ಕಂಪನಿಯು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ನೋಕಿಯಾ ಸಿ20 ಪ್ಲಸ್ ಬಿಡುಗಡೆ ಮಾಡಿದೆ.
ಕಂಪನಿಯು ನೋಕಿಯಾ ಸಿ20 ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಕಳೆದ ತಿಂಗಳು ಚೀನಾ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಫೋನ್ ಅನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿಗನಳ ಕಾಲ ಬಾಳಿಕೆ ಬರುತ್ತದೆ. ಈ ಸಂಗತಿಯೇ ಈ ಫೋನ್‌ನ ಹೆಗ್ಗಳಿಕೆಯಾಗಿದೆ. ಈ ಮೊದಲು ಕೂಡ ನೋಕಿಯಾ ಮೊಬೈಲ್‌ಗಳ ಅದರ ಬಿಲ್ಡ್ ಕ್ವಾಲಿಟಿ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯಿಂದಲೇ ಹೆಚ್ಚು ಪ್ರಸಿದ್ಧಿಯಾಗಿದ್ದವು.
ಸದ್ದಿಲ್ಲದೇ ಲಾಂಚ್ ಆದ ವಿವೋ ವೈ12ಜಿ ಸ್ಮಾರ್ಟ್‌ಫೋನ್
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ನೋಕಿಯಾ ಸಿ20 ಪ್ಲಸ್ ಸ್ಮಾರ್ಟ್‌ಫೋನ್ ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿವೆ. ಈ ಫೋನ್ ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾ ನೀಡಲಾಗಿದೆ. ಅಕ್ಟಾಕೋರ್ ಪ್ರೊಸೆಸರ್ ಇದೆ. ನೋಕಿಯಾ ಸಿ20 ಪ್ಲಸ್ ವಿನ್ಯಾಸವು ಈ ಹಿಂದೆ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ನೋಕಿಯಾ ಸಿ20 ಸ್ಮಾರ್ಟ್‌ಫೋನ್ ರೀತಿಯಲ್ಲೇ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರಲಿಲ್ಲ.
ಸಾಮಾನ್ಯವಾಗಿ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಬೆಲೆಯ ದೃಷ್ಟಿಯಿಂದ ತೀರಾ ಹೊರೆಯಾಗಿರುವುದಿಲ್ಲ. ಇದೇ ಸಾಲಿನಲ್ಲಿ ನೋಕಿಯಾ ಸಿ20 ಪ್ಲಸ್ ಕೂಡ ಇದೆ. ಭಾರತೀಯ ಮಾರುಕಟ್ಟೆಯಲ್ಲಿ 2 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ನೋಕಿಯಾ ಸಿ20 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ 8,999 ರೂಪಾಯಿಯಾಗಿದೆ.
ಇನ್ನು 3 ಜಿಬಿ 32 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 9,999 ರೂಪಾಯಿಯಾಗಿದೆ. ಈ ಎರಡೂ ವೆರಿಯೆಂಟ್ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ನೀಲಿ ಮತ್ತು ಬೂದು ಬಣ್ಣಗಳಲ್ಲಿ ದೊರೆಯಲಿದೆ. ಗ್ರಾಹಕರು ಈ ಫೋನ್‌ಗಳನ್ನು ನೋಕಿಯಾ ಕಂಪನಿಯ ಅಧಿಕೃತ ವೆಬ್‌ಸೈಟ್ ಸೇರಿದಂತೆ ಪ್ರಮುಖ ಮೊಬೈಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.
ಗೂಗಲ್ ಪಿಕ್ಸೆಲ್ 6, ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ
ನೋಕಿಯಾ ಸಿ20 ಪ್ಲಸ್ ಅನೇಕ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. ಈ ಫೋನ್ ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 11 ಆಪರೇಟಿಂಗ್ ಸಾಫ್ಟ್‌ವೇರ್ ಆಧರಿತವಾಗಿದೆ. 6.5 ಇಂಚ್ ಎಚ್‌ಡಿ ಪ್ಲಸ್ ಪ್ರದರ್ಶಕವಿದೆ. 3 ಜಿಬಿ ರ್ಯಾಮ್‍ನೊಂದಿಗೆ ಸಂಯೋಜಿತವಾಗಿರುವ ಅಕ್ಟಾಕೋರ್ ಯುನಿಸಾಕ್ ಎಸ್‌ಸಿ9863 ಎಸ್ಒಎಸ್ ಪ್ರೊಸೆಸರ್ ನೀಡಲಾಗಿದ್ದು, ಇದು ಫೋನ್ ಪ್ರದರ್ಶನವನ್ನು ಪರಿಣಾಮಕಾರಿಯಾಗಿಸಿದೆ.
ಇನ್ನು ನೋಕಿಯಾ ಸಿ20 ಪ್ಲಸ್ ಸ್ಮಾರ್ಟ್‌ಫೋನ್‌ಗೆ ಅಳವಡಿಸಿರುವ ಕ್ಯಾಮೆರಾಗಳ ಪ್ರದರ್ಶನವು ಅತ್ಯುತ್ತಮವಾಗಿದೆ. ಕಂಪನಿಯು ಫೋನ್‌ನ ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾಗಳನ್ನು ಅಳವಡಿಸಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಕ್ಯಾಮೆರಾವಿದೆ. ಜೊತೆಗೆ ಎಲ್ಇಡಿ ಫ್ಲ್ಯಾಸ್ ಲೈಟ್ ಕೂಡ ಕೊಡಲಾಗಿದೆ. ಕಂಪನಿಯು ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಕೈಗೆಟುಕುವ ದರದಲ್ಲಿರುವ ಈ ಫೋನ್‌ಗೆ ಒದಗಿಸಲಾಗಿರುವ ಈ ಕ್ಯಾಮೆರಾಗಳು ಈ ಸೆಗ್ಮೆಂಟ್‌ನಲ್ಲಿ ಉತ್ತಮವಾಗಿವೆ ಎಂದು ಹೇಳಬಹುದು.
ಇನ್ ಬಿಲ್ಟ್ ಆಗಿಯೇ ನಿಮಗೆ 32 ಜಿಬಿ ಸ್ಟೋರೇಜ್ ಸಿಗುತ್ತದೆ. ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಳಕೆದಾರರು ಮೆಮೋರಿಯನ್ನು 256 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. 4ಜಿ ಎಲ್‌ಟಿಇ, ವೈಫೈ, ಬ್ಲೂಟೂಥ್, ಜಿಪಿಎಸ್, ಎಫ್ಎಂ ರೆಡಿಯೋ, ಮೈಕ್ರೋ ಯುಎಸ್‌ಬಿ, 3.5 ಎಂಎಂ ಆಡಿಯೋ ಜಾಕ್ ಸೇರಿದಂತೆ ಹಲವು ಕನೆಕ್ಟಿವಿಟಿ ಫೀಚರ್‌ಗಳನ್ನು ಈ ಫೋನ್ ಹೊಂದಿದೆ.
ರಿಯಲ್‌ಮಿ ಡಿಝೋ ಸ್ಮಾರ್ಟ್‌ವಾಚ್ ಲಾಂಚ್, ಸಖತ್ ಫೀಚರ್ಸ್!
ಕಂಪನಿಯು ನೋಕಿಯಾ ಸಿ20 ಪ್ಲಸ್ ಸ್ಮಾರ್ಟ್‌ಫೋನ್‌ಗೆ 4500 ಎಂಎಂಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಈ ಬ್ಯಾಟರಿ 10 ವ್ಯಾಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ವಿಶೇಷತೆ ಏನೆಂದರೆ, ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 2 ದಿನಗಳ ಕಾಲ ಬಾಳಿಕೆ ಬರುತ್ತದೆ.