Streamfest: ಡಿ.5ರಿಂದ 6ರವರೆಗೆ ಉಚಿತವಾಗಿ ನೆಟ್‌ಫ್ಲಿಕ್ಸ್ ನೋಡಿ!
ಭಾರತದ ಜನಪ್ರಿಯ ಸ್ಟ್ರೀಮಿಂಗ್ ಆಪ್‌ಗಳ ಪೈಕಿ ಒಂದಾಗಿರುವ ನೆಟ್‌ಫ್ಲಿಕ್ಸ್ 48 ಗಂಟೆಗಳ ಕಾಲ ಉಚಿತ ಸ್ಟ್ರೀಮ್‌ಫೆಸ್ಟ್ ಪ್ಲ್ಯಾನ್ ಆರಂಭಿಸಿದೆ. ಬಳಕೆದಾರರು ಯಾವುದೇ ಸಬ್ಸ್‌ಕ್ರಿಪ್ಷನ್ ಮಾಡದೇ ನೆಟ್‌ಫ್ಲಿಕ್ಸ್‌ನ ಎಲ್ಲ ಕಂಟೆಂಟ್ ವೀಕ್ಷಿಸಬಹುದಾಗಿದೆ. ಈ ಉಚಿತ ಸ್ಟ್ರೀಮಿಂಗ್ ಡಿ.5ರಿಂದ 6ರವರೆಗೆ ಸಿಗಲಿದೆ.
ಭಾರತದ ಒಟಿಟಿ ಬಳಕೆದಾರರಿಗೆ ಜನಪ್ರಿಯ ಸ್ಟ್ರೀಮಿಂಗ್ ಆಪ್ ಸಿಹಿ ಸುದ್ದಿ ನೀಡಿದೆ. ಭಾರತದಲ್ಲಿ ಎರಡು ದಿನಗಳವರೆಗೆ ನೆಟ್‌ಫ್ಲಿಕ್ಸ್ ಉಚಿತ ಸ್ಟ್ರೀಮಿಂಗ್ ಸೇವೆ ನೀಡುವುದಾಗಿ ಹೇಳಿಕೊಂಡಿದೆ!
ಹೌದು ನಿಜ. ಬಳಕೆದಾರರು ಎರಡು ದಿನಗಳ ಕಾಲ ನೆಟ್‌ಫ್ಲಿಕ್ಸ್ ವೀಕ್ಷಿಸಬಹುದು. ಬಳಕೆದಾರರು ಯಾವುದೇ ಸಬ್ಸ್‌ಕ್ರಿಪ್ಷನ್ ಖರೀದಿಸದೇ ಅಥವಾ ಕಾರ್ಡ್ ಮಾಹಿತಿ ನೀಡದೇ ಬಳಕೆದಾರರು ನೆಟ್‌ಫ್ಲಿಕ್ಸ್‌ನಲ್ಲಿ ಶೋ ಮತ್ತು ವೆಬ್ ಸೀರಿಸ್‌ಗಳನ್ನು ವೀಕ್ಷಿಸಬಹುದಾಗಿದೆ. ನೆಟ್‌ಫ್ಲಿಕ್ಸ್ ಈ ಉಚಿತ ಸೇವೆಯನ್ನು ಅಕ್ಟೋಬರ್ ತಿಂಗಳಲ್ಲಿ ನೀಡಲು ಈ ಮೊದಲು ಮುಂದಾಗಿತ್ತಲ್ಲದೇ ಎರಡು ದಿನಗಳ ಕಾಲ ಅಂದರೆ 48 ಗಂಟೆಗಳಷ್ಟು ಬಳಕೆದಾರರು ಯಾವುದೇ ಶುಲ್ಕವಿಲ್ಲದೇ ಸ್ಟ್ರೀಮ್ ಮಾಡಬಹುದು ಎಂದು ಘೋಷಿಸಿತ್ತು.
PUBG ಇಂಡಿಯಾದಿಂದ 6 ಕೋಟಿ ರೂಪಾಯಿ ಗೇಮಿಂಗ್ ಸ್ಪರ್ಧೆ?
ಭಾರತದಲ್ಲಿ ನೆಟ್‌ಫ್ಲಿಕ್ಸ್ ಸದ್ಯ ಅತ್ಯಂತ ಜನಪ್ರಿಯ ಸ್ಟ್ರೀಮಿಂಗ್ ಆಪ್‌ಗಳ ಪೈಕಿ ಒಂದಾಗಿದೆ. ಅಮಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಝೀ5, ಎಎಲ್‌ಟಿ ಬಾಲಾಜಿ, ವೂಟ್ ಸೇರಿದಂತೆ ಇನ್ನಿತರ ಒಟಿಟಿ ವೇದಿಕೆಗಳೊಂದಿಗೆ ಪೈಪೋಟಿ ನಡೆಸುತ್ತಿದೆ. ಈ ಉಚಿತ ಸೇವೆಯನ್ನು ಸ್ಟ್ರೀಮ್ ಫೇಸ್ಟ್ ಎಂದು ಕರೆದಿರುವ ನೆಟ್‌ಫ್ಲಿಕ್ಸ್, ಡಿಸೆಂಬರ್ 5ರಿಂದ ಇದೀಗ ಈ ಉಚಿತ ಸೇವೆಯನ್ನು ನೀಡಲಿದೆ. ಸ್ಟ್ರೀಮ್‌ಫೆಸ್ಟ್ ಡಿಸೆಂಬರ್ 5ರಿಂದ 6ರವರೆಗೆ ಇರಲಿದೆ.
ಬಳಕೆದಾರರು ಈ ಉಚಿತ ಸೇವೆಯನ್ನು ಪಡೆಯಲು ತಮ್ಮ ಹೆಸರನ್ನು, ಇ ಮೇಲ್ ಅಡ್ರೆಸ್ ನಮೂದಿಸಬೇಕು ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿ, ನೆಟ್‌ಫ್ಲಿಕ್ಸ್ ಒದಗಿಸುವ ಉಚಿತ ವೀಕ್ಷಣೆ ಲಾಭವನ್ನು ಪಡೆಯಬಹುದು. ಸಿನಿಮಾಗಳು, ಶೋಗಳು, ಸಾಕ್ಷ್ಯಚಿತ್ರಗಳು ಸೇರಿದಂತೆ ಇತ್ಯಾದಿ ಕಂಟೆಂಟ್ ಅನ್ನು ಬಳಕೆದಾರರು ನೋಡಬಹುದು.
ಭಾರತದಲ್ಲಿ ಚಾಲನೆ ಸಿಗಲಿರುವ ಸ್ಟ್ರೀಮ್‌ಫೆಸ್ಟ್ ಬಗ್ಗೆ ಮಾಹಿತಿ ನೀಡಿರುವ ನೆಟ್‌ಫ್ಲಿಕ್ಸ್ ಸಿಒಡಿ ಗ್ರೇಗ್ ಪೀಟರ್ಸ್, ಸ್ಟ್ರೀಮ್ ಫೆಸ್ಟ್ ಬಗ್ಗೆ ತುಂಬ ಎಕ್ಸೈಟ್ ಆಗಿದ್ದೇವೆ. ಅದು ಹೇಗೆ ಜನರನ್ನು ತಲುಪಲಿದೆ ಎಂಬುದನ್ನು ನೋಡಬೇಕಿದೆ. ದೇಶದ ಪ್ರತಿಯೊಬ್ಬರಿಗೂ ನೆಟ್‌ಫ್ಲಿಕ್ಸ್‌ಗೆ ಉಚಿತ ನೀಡುವುದನ್ನು ನಮ್ಮಲ್ಲಿರುವ ಅದ್ಭುತ ಕಥೆಗಳಿಗೆ ಹೊಸ ಜನರನ್ನು ವಾರಾಂತ್ಯದಲ್ಲಿ ಸೆಳೆಯಲು ಸಾಧ್ಯವಾಗಲಿದೆ ಎಂದಿದ್ದಾರೆ.
ನವೆಂಬರ್ 26ಕ್ಕೆ ರೆಡ್‌ಮೀ ನೋಟ್ 9 ಸರಣಿ ಫೋನ್‌ಗಳು ಬಿಡುಗಡೆ
ಸ್ಟ್ರೀಮ್‌ಫೆಸ್ಟ್‌ಗೆ ನೋಂದಣಿ ಮಾಡಿಕೊಂಡಿರುವ ಬಳಕೆದಾರರು ನೆಟ್‌ಫ್ಲಿಕ್ಸ್ ಕಂಟೆಂಟ್ ಅನ್ನು ಸ್ಮಾರ್ಟ್ ಟಿವಿಯಲ್ಲಿ ಆಪ್, ಗೇಮಿಂಗ್ ಕನ್ಸೋಲ್, ಐಒಎಸ್, ಆಂಡ್ರಾಯ್ಡ್ ಆಪ್ ಹಾಗೂ ಡೆಸ್ಕ್‌ಟಾಪ್‌ನಲ್ಲೂ ನೋಡಬಹುದಾಗಿದೆ. ಈ ವರ್ಷದ ಆರಂಭದಲ್ಲಿ ನೆಟ್‌ಫ್ಲಿಕ್ಸ್ ಒಂದು ತಿಂಗಳವರೆಗೆ ಉಚಿತ ನೀಡುವ ಆಫರ್ ಅನ್ನು ಸ್ಥಗಿತಗೊಳಿಸಿತ್ತು. ಇದರ ಜೊತೆಗೆ ಇನ್ನಿತರ ಕಡೆಯೂ ಈ ಆಫರ್ ಅನ್ನು ಕಂಪನಿ ನಿಲ್ಲಿಸಿತ್ತು ಎನ್ನಲಾಗಿದೆ.
ಭಾರತದಲ್ಲಿ ಹೆಚ್ಚನ ಚಂದಾದಾರನ್ನು ಆಕರ್ಷಿಸುವ ಸಲುವಾಗಿ ನೆಟ್‌ಫಿಕ್ಸ್ ಅಗ್ಗದ ಅಂದರೆ ತಿಂಗಳಿಗೆ 199 ರೂ. ಮೊಬೈಲ್ ಸ್ಟ್ರೀಮಿಂಗ್ ಪ್ಲ್ಯಾನ್ ಜಾರಿಗೆ ತಂದಿದೆ. ಅದರರ್ಥ, ಸಬ್ಸ್‌ಸ್ಕ್ರೈಬರ್‌ಗಳು ತಿಂಗಳಿಗೆ ಕೇವಲ 199 ರೂಪಾಯಿ ಕೊಟ್ಟು ಮೊಬೈಲ್‌ನಲ್ಲಿ ನೆಟ್‌ಫ್ಲಿಕ್ಸ್ ವೀಕ್ಷಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಕಂಪನಿ ಕಿರು ಅವಧಿಗೆ ಇನ್ನಷ್ಟು ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇದೆಲ್ಲವೂ ಭಾರತೀಯ ಬಳಕೆದಾರರ ಜೇಬಿಗೆ ಹೊರೆಯಾಗದಂತೆ ವಿನ್ಯಾಸ ಮಾಡಲಾಗಿದೆ.
ಮುಂದಿನ ವಾರ ನೋಕಿಯಾ 2.4 ಬಜೆಟ್ ಫೋನ್ ಬಿಡುಗಡೆ