ಜುಲೈ 22ಕ್ಕೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್
ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ ಯಶಸ್ಸು ಕಂಡ ಬೆನ್ನಲ್ಲೇ ಕಂಪನಿಯು ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಜುಲೈ 22ರಂದು ಮಾಡುತ್ತಿದೆ. ಈ ಫೋನ್ ಕೂಡ ಹಲವು ಅದ್ಭುತ ಫೀಚರ್‌ಗಳನ್ನು ಒಳಗೊಂಡಿದೆ. ಯುರೋಪ್ ಹಾಗೂ ಭಾರತೀಯ ಮಾರುಕಟ್ಟೆಗೆ ಏಕಕಾಲಕ್ಕೆ ಈ ಫೋನ್ ಬಿಡುಗಡೆಯಾಗಲಿದೆ.
ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಿರುವ ಒನ್‌ಪ್ಲಸ್ ಕಂಪನಿಯು ಮತ್ತೊಂದು ಫೋನ್ ಮೂಲಕ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. ಈ ಹಿಂದೆ ಒನ್‌ಪ್ಲಸ್ ನಾರ್ಡ್ ಬಿಡುಗಡೆ ಮಾಡಿತ್ತು. ಈ ಫೋನ್ ಭಾರಿ ಸಕ್ಸೆಸ್ ಕಂಡ ಹಿನ್ನಲೆಯಲ್ಲಿ ಅದರ ಮುಂದಿನ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಭಾರತದಲ್ಲಿ ಜುಲೈ 22ಕ್ಕೆ ಒನ್‌ಪ್ಲಸ್ ನಾರ್ಡ್ 2 ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಈಗಾಗಲೇ ಇ ಕಾಮರ್ಸ್ ತಾಣ ಅಮೆಜಾನ್ ಇಂಡಿಯಾ ಹಾಗೂ ಒನ್‌ಪ್ಲಸ್ ನಾರ್ಡ್ 2ಗಾಗಿಯೇ ಪ್ರತ್ಯೇಕವಾದ ಮೈಕ್ರೋಸೈಟ್‌ಗಳನ್ನು ಸೃಷ್ಟಿಸಿವೆ. ಆ ಮೂಲಕ ಒನ್‌ಪ್ಲಸ್ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿವೆ. ಇದರ ಜತೆಗೆ ಕಂಪನಿಯು ಸೋಷಿಯಲ್ ಮೀಡಿಯಾಗಳಲ್ಲಿ ಒನ್‌ಪ್ಲಸ್ ನಾರ್ಡ್ 2 ಬಿಡುಗಡೆ ನಾನಾ ರೀತಿಯ ಟೀಸರ್‌ಗಳನ್ನು ಹರಿಬಿಟ್ಟಿದೆ.
1,299 ಮತ್ತು 1,799 ರೂಪಾಯಿಗೆ ಡಿಝೋ ಫೋನ್ ಲಾಂಚ್ ಮಾಡಿದ ರಿಯಲ್‌ಮಿ
ಮತ್ತೊಂದು ವಿಶೇಷ ಏನೆಂದರೆ, ಮೀಡಿಯಾ ಟೆಕ್ ಚಿಪ್‌ಸೆಟ್ ಹೊಂದಿದೆ ಮೊದಲ ಒನ್‌ಪ್ಲಸ್ ಸಾಧನವಾಗಿದೆ. ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಡಿಮೆನ್ಸಿಟಿ 1200 ಎಐ ಚಿಪ್ ಅಳವಡಿಸಿದೆ. ಈ ಹೊಸ ಸ್ಮಾರ್ಟ್‌ಫೋನ್ ಫೀಚರ್‌ಗಳ ಕಂಪನಿಯು ಯಾವುದೇ ರೀತಿಯ ಫೀಚರ್‌ಗಳ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಒನ್‌ಪ್ಲಸ್ 9 ರೀತಿಯ ವಿನ್ಯಾಸವನ್ನು ಈ ಫೋನ್ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ , 50 ಮೆಗಾಪಿಕ್ಸಲ್ ಕ್ಯಾಮೆರಾ, 4500 ಎಂಎಎಚ್ ಬ್ಯಾಟರಿ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಒಳಗೊಂಡಿದೆ.
ಈಗಾಗಲೇ ಹೇಳಿದಂತೆ ಕಂಪನಿಯು ಈ ಒನ್‌ಪ್ಲಸ್ ನಾರ್ಡ್ 2 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತ ಹಾಗೂ ಯುರೋಪ್ ಮಾರುಕಟ್ಟೆಯಲ್ಲಿ ಜುಲೈ 22ರಂದು ಬಿಡುಗಡೆ ಮಾಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಇತ್ತೀಚೆಗೆ ಕಂಪನಿ ಬಿಡುಗಡೆ ಮಾಡಿದ್ದ ಒನ್‌ಪ್ಲಸ್ ನಾರ್ಡ್ ಸಿಇ ಬೆಲೆ 22,999 ರೂಪಾಯಿ ಇತ್ತು. ಹಾಗಾಗಿ, ಒನ್‌ಪ್ಲಸ್ ನಾರ್ಡ್ 2 ಬೆಲೆಯೂ ಹೆಚ್ಚು ಕಡಿಮೆ ಇದೇ ರೇಂಜ್‌ನಲ್ಲಿ ಇರುಬಹುದು ಎಂದು ಅಂದಾಜಿಸಲಾಗುತ್ತಿದೆ.
ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಅನ್ನು ನೀವು ಮಿಡ್ ರೇಂಜ್ ಸೆಗ್ಮೆಂಟ್‌ಗೆ ಸೇರಿಸಬಹುದು. ಕೆಲವು ಸೋರಿಕೆ ಮಾಹಿತಿಗಳ ಪ್ರಕಾರ, ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಆಯತಾಕಾರದ ಕ್ಯಾಮೆರಾ ಸೆಟ್ ಅಪ್ ಮಾಡ್ಯುಲ್ ಇರಲಿದೆ. ಈ ಮಾಡ್ಯುಲ್‌ನಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ನಾರ್ಡ್ ಫೋನ್ ರೀತಿಯಲ್ಲೇ ನಾರ್ಡ್ 2 ಸ್ಮಾರ್ಟ್‌ಫೋನ್‌ನಲ್ಲೂ ಪಂಚ್ ಹೋಲ್ ಡಿಸ್‌ಪ್ಲೇ ಇರಲಿದೆ. ವ್ಯಾಲ್ಯೂಮ್ ರಾಕರ್ ಫೋನ್‌ನ ಎಡ ಬದಿಯಲ್ಲಿ ಇರಲಿದೆ ಎಂಬ ಮಾಹಿತಿ ಇದೆ. ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇರುವಂತೆ ಕಾಣುತ್ತಿಲ್ಲ. ಆ ಫೀಚರ್ ಅನ್ನು ನೀವು ಡಿಸ್‌ಪ್ಲೇಯಲ್ಲಿ ಕಾಣಬಹುದಾಗಿದೆ. ಹಸಿರು ಸೇರಿದಂತೆ ಇನ್ನೂ ಕೆಲವು ಬಣ್ಣಗಳಲ್ಲಿ ಈ ಫೋನ್ ಮಾರಾಟಕ್ಕೆ ದೊರೆಯಲಿದೆ ಎನ್ನಲಾಗುತ್ತಿದೆ.
ಸೂಪರ್ ಫೀಚರ್ಸ್: Redmi Note 10T 5G ಫೋನ್ ಭಾರತದಲ್ಲಿ ಬಿಡುಗಡೆ ಪಕ್ಕಾ
6.43 ಇಂಚ್ ಡಿಸ್‌ಪ್ಲೇ ಫುಲ್ ಎಚ್‌ಡಿ ಪ್ಲಸ್ ಮತ್ತು ಅಮೋಎಲ್ಇಡಿ ಡಿಸ್‌ಪ್ಲೇ ಇದ್ದು, ಮೀಡಿಯಾ ಟೆಕ್ ಡಿಮೆನ್ಸಿಟಿ 1200 ಎಐ ಚಿಪ್ ಅಳವಡಿಸಲಾಗಿದೆ. 12 ಜಿಬಿ ರ್ಯಾಮ್ ಮತ್ತು 256 ಜಿಬಿ ಇನ್ ಬಿಲ್ಟ್ ಮೆಮೋರಿ ದೊರೆಯಲಿದೆ. ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ ಬ್ಯಾಟರಿಯನ್ನೇ ಅಳವಡಿಸಿರುವ ಸಾಧ್ಯತೆ ಇದೆ.
ಕ್ಯಾಮೆರಾ ಬಗ್ಗೆ ಹೇಳುವುದಾದರೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇರಲಿದೆ. ಮೂರು ಕ್ಯಾಮೆರಾಗಳ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಕ್ಯಾಮೆರಾವಾಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿದ್ದು, ಡೆಪ್ತ್ ಮತ್ತು ಮ್ಯಾಕ್ರೋ ಲೆನ್ಸ್‌ಗಳಿಗಾಗಿ ಬಳಸಲಾಗುತ್ತದೆ. ಸೆಲ್ಫಿಗಾಗಿ ಕಂಪನಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಿದೆ. ಹಾಗಾಗಿ, ಅದ್ಭುತ ಸೆಲ್ಫಿಗಳನ್ನು ನೀವು ಕ್ಲಿಕ್ಕಿಸಬಹುದಾಗಿದೆ.
ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಪಕ್ಕಾ ಆಗಿದೆ ಹೊರತು, ಫೀಚರ್‌ಗಳು, ವಿನ್ಯಾಸದ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಾಗಿ, ಜುಲೈ 22ರಂದು ಈ ಫೋನ್ ಬಗ್ಗೆ ಎಲ್ಲ ವಿವರಗಳು ತಿಳಿಯಲಿವೆ.
ಹೊಸ ಐಟಿ ರೂಲ್ಸ್ ಎಫೆಕ್ಟ್: ನಿಯಮ ಉಲ್ಲಂಘಿಸಿದ 3 ಕೋಟಿ ಪೋಸ್ಟ್ ವಿರುದ್ಧ ಫೇಸ್‌ಬುಕ್ ಕ್ರಮ.