ಹೊಸ ವರ್ಷದ ಬೆಸ್ಟ್ ರೆಸಲ್ಯೂಶನ್‌ಗಳು ಏನ್ ಗೊತ್ತಾ?
ಪ್ರತಿಯೊಬ್ಬರೂ ಹೊಸ ವರ್ಷದ ಮೊದಲ ದಿನ ಒಂದಲ್ಲ ಒಂದು ರೆಸಲ್ಯೂಶನ್ ಮಾಡಿಯೇ ಮಾಡುತ್ತಾರೆ. ಅದನ್ನು ಈಡೇರಿಸಲಾಗದೆ ಚಡಪಡಿಸುತ್ತಾರೆ. ಈ ವರ್ಷ ನೀವು ನಿಜವಾಗಿಯೂ ಮಾಡಬಹುದಾದ ಒಂದಷ್ಟು ಒಳ್ಳೆಯ ರೆಸಲ್ಯೂಶನ್‌ಗಳು ಇಲ್ಲಿವೆ....
ಹೊಸ ವರ್ಷದ ಮೊದಲ ದಿನ ಬಹಳಷ್ಟು ಜೋಶ್‌ನಿಂದ ರೆಸಲ್ಯೂಶನ್ ಮಾಡುತ್ತೀರಿ. ನಾಳೆಯಿಂದ ಸಿಕ್ಕಾಪಟ್ಟೆ ಕುಡಿಯೋದನ್ನು ಬಿಡಬೇಕು, ಸ್ಮೋಕಿಂಗ್ ಬಿಟ್ಟು ಆರೋಗ್ಯ ಕಾಪಾಡಿಕೊಳ್ಳಬೇಕು, ಮುಂಜಾನೆ ಐದು ಗಂಟೆಗೆ ಎದ್ದು ಜಾಗಿಂಗ್ ಮಾಡಬೇಕು- ಅಂತೆಲ್ಲಾ. ಆದರೆ ಜನವರಿ ಎರಡನೇ ತಾರೀಕಿಗೆಲ್ಲಾ ಈ ನಿರ್ಣಯಗಳೂ ಮರೆತೇ ಹೋಗಿರುತ್ತವೆ. ಅಲ್ವಾ?
ಇಷ್ಟೊಂದು ಘನವಾದ ರೆಸಲ್ಯೂಶನ್‌ಗಳನ್ನು ಮಾಡೋ ಬದಲು, ಸಿಂಪಲ್ ಆಗಿರೋ ಒಂದಷ್ಟು ರೆಸಲ್ಯೂಶನ್ ಐಡಿಯಾಗಳನ್ನು ಹೇಳ್ತೀವಿ ಕೇಳಿ. ಇದರಿಂದ ನಿಮ್ಮ ಆಫೀಸ್ ಜೀವನ, ಕುಟುಂಬ ಜೀವನ ಎಲ್ಲವೂ ಹೆಲ್ದಿಯಾಗಿ ಇರುತ್ತೆ. ಆಚರಿಸೋದೂ ಕಷ್ಟವೇನಲ್ಲ.
2020ಕ್ಕೆ ಲಕ್ ಹೊತ್ತು ತರುವ ಗಿಫ್ಟ್ ಗಳು ಯಾವುವು ಗೊತ್ತಾ?
ವಾರಕ್ಕೊಮ್ಮೆ ಫ್ಯಾಮಿಲಿ ಔಟಿಂಗ್
ವಾರದ ಐದು ಅಥವಾ ಆರೂ ದಿನಗಳು ಕಚೇರಿ ಕೆಲಸ ಇದ್ದೇ ಇರುತ್ತೆ. ಹೆಂಡತಿ ಅಥವಾ ಗಂಡನಿಗೆ ಅಥವಾ ಮಕ್ಕಳಿಗೆ ಸಮಯ ಕೊಡೋಕಾಗಲ್ಲ. ವಾರದಲ್ಲಿ ಒಂದು ದಿನವಾದರೂ ಅವರನ್ನು ಹೊರಗೆ ಕರೆದುಕೊಂಡು ಹೋಗಿ ಟ- ತಿಂಡಿ- ಪಾನಿಪುರಿ- ಐಸ್‌ಕ್ರೀಮ್ ಕೊಡಿಸಿದರೆ ಖುಷಿಯಾಗುತ್ತೆ. ಕುಟುಂಬದ ಜತೆ ಕ್ವಾಲಿಟಿ ಟೈಮ್ ಕಳೆದ ಸಂತೋಷ ನಿಮ್ಮದಾಗುತ್ತೆ.
ಹೆತ್ತವರಿಗೊಂದು ಫೋನ್
ನೀವಿಲ್ಲಿ ವರ್ಷ ಆರಂಭದ ಪಾರ್ಟಿ ಅಂತ ಖುಷಿ ಪಡುತ್ತಿರುವಾಗ ನ್ಮಿಮ ಅಪ್ಪ- ಅಮ್ಮ ದೂರದ ಊರಿನಲ್ಲಿ ಒಂಟಿಯಾಗಿ ಸಮಯ ಕಳೆಯುತ್ತಿರಬಹುದು. ಈ ಸಂದರ್ಭದಲ್ಲಿ ಒಮ್ಮೆ ಅವರಿಗೆ ಫೋನ್ ಮಾಡಿ ಅವರನ್ನು ಅಕ್ಕರೆಯಿಂದ ಮಾತನಾಡಿಸಿ, ಆರೋಗ್ಯ ವಿಚಾರಿಸಿಕೊಂಡರೆ ಆ ಜೀವಗಳು ಎಷ್ಟು ಖುಷಿಪಡುತ್ತವೆ ಗೊತ್ತಾ. ಆ ಖುಷಿ ನಿಮ್ಮದೂ ಆಗಲಿ.
ತಮ್ಮ- ತಂಗಿಗೊಂದು ಗಿಫ್ಟ್
ನೀವು ದುಡಿಯುತ್ತಿರೋದು ನಿಮ್ಮ ಫ್ಯಾಮಿಲಿಗಾಗಿಯಷ್ಟೇ ಅಲ್ಲ. ನಿಮ್ಮ ತಮ್ಮ ತಂಗಿ ಕೂಡ ನಿಮ್ಮ ಫ್ಯಾಮಿಲಿಯೇ ತಾನೆ. ಅವರಿನ್ನೂ ಓದುತ್ತಿರಬಹುದು, ದುಡಿಯಲು ಆರಂಭಿಸಿರಲಿಕ್ಕಿಲ್ಲ. ಅವರಿಗೊಂದು ಮೊಬೈಲ್, ವಾಚ್, ಶೂ ಅಥವಾ ಅಂಥದೇ ಒಂದು ಗಿಫ್ಟ್ ತೆಗೆಸಿಕೊಟ್ಟರೆ ಎಷ್ಟೊಂದು ಖುಷಿಪಡುತ್ತಾರೆ.
ಗುಡ್ ಬೈ 2019: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳಿವರು!
ನಿಮಗಾಗಿ ಸ್ವಲ್ಪ ಸಮಯ
ಕಚೇರಿಗೂ ಕುಟುಂಬಕ್ಕೂ ಸಮಯ ಕೊಡುತ್ತೀರಿ ನಿಜ. ಆದರೆ ಕಳೆದ ಒಂದು ವರ್ಷದಲ್ಲಿ ನಿಮಗಾಗಿ ನೀವು ಎಷ್ಟು ಸಮಯ ಕೊಟ್ಟಿದ್ದೀರಿ? ಒಮದಾದರೂ ಸಿನೆಮಾ ನೋಡಿದ್ದೀರಾ? ಒಂದಾದರೂ ಪುಸ್ತಕ ಓದಿದ್ದೀರಾ? ಮಸಾಜ್ ಮಾಡಿಸಿಕೊಂಡಿದ್ದೀರಾ? ಇಲ್ಲವೆಂದಾದರೆ ನಿಮ್ಮ ಜೊತೆಗೇ ನೀವು ಕಳೆದುಹೋಗಲು ಇದು ಸುಸಮಯ.
ಒಂದು ಹೊಸ ಭಾಷೆ
ನಿಮಗೆ ಅಪರಿಚಿತವಾದ ಒಂದು ಭಾಷೆ ಕಲಿಯಲು ಇದು ಸುಸಮಯ ಅಲ್ಲವೇ. ಒಂದು ಭಾಷೆ ಕಲಿಯುವುದೆಂದರೆ ಆ ಭಾಷೆ ಮಾತನಾಡುವವರ ಸಂಸ್ಕೃತಿ, ಬದುಕು, ಸಾಹಿತ್ಯ ಎಲ್ಲವನ್ನೂ ಅರಿತುಕೊಂಡಂತೆ. ಒಂದು ಹೊಸ ಲೋಕವೇ ನಿಮ್ಮ ಮುಂದೆ ತೆರೆದುಕೊಂಡಂತೆ ಆಗುತ್ತದೆ.
ಸೋಲೋ ಟ್ರಾವೆಲ್ ಮಾಡೋ ಸಮಯ
ಫ್ಯಾಮಿಲಿ ಸಮೇತ ಪಿಕ್‌ನಿಕ್ ಹೋಗೋದು, ಪ್ರವಾಸ ಹೋಗೋದು ಸಾಮಾನ್ಯ. ಆದರೆ ಸೋಲೋ ಟ್ರಾವೆಲ್ ಹೋಗೋದರಿಂದ ಸಿಗುವ ಖುಷಿಯೇ ಬೇರೆ. ಏಕಾಂಗಿ ಪ್ರಯಾಣದ ವೇಳೆ ಉಂಟಾಗುವ ಅನುಭವಗಳು, ಎದುರಾಗುವ ಸವಾಲುಗಳು, ಅವುಗಳನ್ನು ನೀವು ಎದುರಿಸಿ ಗಟ್ಟಿಯಾಗುವ ರೀತಿ, ಹೊಸ ಪರಿಸರವನ್ನೂ ಜನರನ್ನು ಪರಿಚಯಿಸಿಕೊಳ್ಳುವ ರೋಮಾಂಚನ- ಇವೆಲ್ಲವೂ ಬೇಕು ಅನಿಸೋದಿಲ್ವಾ?
ಹೊಸ ವರ್ಷಕ್ಕೆ ತಯಾರಾಗಲು ಇಲ್ಲಿದೆ ಸಿಂಪಲ್ 20 ಟಿಪ್ಸ್!
ಜೀವನ ತುಂಬಾ ಸರಳ
ಒಮ್ಮೆ ನಿಮ್ಮ ವಾರ್ಡ್‌ರೋಬನ್ನೂ ಬುಕ್‌ಶೆಲ್ಫ್‌ನ್ನೂ ನೋಡಿ. ಎಷ್ಟು ಪುಸ್ತಕಗಳನ್ನು ಕಳೆದ ವರ್ಷ ಓದಿದ್ದೀರಿ? ಎಷ್ಟು ಅಂಗಿಗಳನ್ನು ಧರಿಸಿದ್ದೀರಿ? ನಾಲ್ಕಾರು ಶರ್ಟ್‌ಗಳನ್ನೇ ಮತ್ತೆ ಮತ್ತೆ ಧರಿಸುತ್ತೀರಿ. ವರ್ಷದಲ್ಲಿ ನಾಲ್ಕಾರು ಪುಸ್ತಕ ಓದಿದರೆ ಹೆಚ್ಚು. ತಂದಿಟ್ಟುಕೊಂಡು ಎಷ್ಟೊಂದು ವಸ್ತುಗಳು ಮನೆಯಲ್ಲಿದ್ದರೂ ಎಲ್ಲವನ್ನೂ ನೀವು ಬಳಸುವುದೇ ಇಲ್ಲ. ಹಾಗಿದ್ದರೆ ಮನೆಯನ್ನು ಸಿಂಪಲ್ ಹಾಗೂ ಸ್ಮಾರ್ಟ್ ಮತ್ತು ಚಂದ ಅನಿಸುವಂತೆ ರಿಸೆಟ್ ಮಾಡಲು ಇದು ಸಕಾಲ ಅಲ್ಲವೇ?