ಹೊಸ ವರ್ಷಕ್ಕೆ ಪ್ರೀತಿಪಾತ್ರರಿಗೆ ಏನಾದರೂ ಗಿಫ್ಟ್ ನೀಡುವ ಯೋಚನೆ ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ನಿಮಗೆ ಗೊತ್ತಾ, ಕೆಲವೊಂದು ವಸ್ತುಗಳನ್ನು ಮನೆಯಲ್ಲಿಡುವುದರಿಂದ ಅವು ಅದೃಷ್ಟವನ್ನು ಹೊತ್ತು ತರುತ್ತವೆ ಎಂಬ ನಂಬಿಕೆ ಜಗತ್ತಿನಾದ್ಯಂತ ಇದೆ. ಅದು ಭಾರತವೇ ಇರಲಿ, ಚೀನಾ ಅಥವಾ ಜಪಾನ್ ಆಗಿರಲಿ ಅಲ್ಲಿನ ಸಂಪ್ರದಾಯ, ನಂಬಿಕೆಗಳ ಆಧಾರದಲ್ಲಿ ಕೆಲವೊಂದು ವಸ್ತುಗಳನ್ನು ಶುಭಸೂಚಕ, ಅದೃಷ್ಟದ ಸಂಕೇತ ಎಂದು ಭಾವಿಸಲಾಗುತ್ತದೆ.

ನೀವು ಇಂಥ ವಸ್ತುಗಳನ್ನು ಪ್ರೀತಿಪಾತ್ರರಿಗೆ ಗಿಫ್ಟ್ ನೀಡುವ ಮೂಲಕ 2020 ಅವರಿಗೆ ಲಕ್ಕಿ ಇಯರ್ ಆಗÀಲಿ ಎಂದು ಶುಭ ಹಾರೈಸಬಹುದು. ಹಾಗಾದ್ರೆ ಅಂಥ ಲಕ್ಕಿ ಗಿಫ್ಟ್‍ಗಳು ಯಾವುವು?

1.ಗೋಲ್ಡ್‍ಫಿಶ್: ಚೈನೀಸ್ ವಾಸ್ತುಶಾಸ್ತ್ರದ ಪ್ರಕಾರ ಗೋಲ್ಡ್‍ಫಿಶ್ ಸುದೀರ್ಘ ಹಾಗೂ ಸಮೃದ್ಧ ಜೀವನದ ಸಂಕೇತವಾಗಿದೆ. ಇದೇ ಕಾರಣಕ್ಕೆ ಚೀನೀಯರು ತಮ್ಮ ಮನೆ ಮುಂದೆ ಪುಟ್ಟ ನೀರಿನ ಕೊಳವನ್ನು ನಿರ್ಮಿಸಿ ಅದರಲ್ಲಿ ಗೋಲ್ಡ್‍ಫಿಶ್‍ಗಳನ್ನು ಸಾಕುತ್ತಾರೆ. ಮನೆಯೊಳಗೆ ಗೋಲ್ಡ್‍ಫಿಶ್‍ಗಳ ಅಕ್ವೇರಿಯಂನ್ನು ಕೂಡ ಇಡುತ್ತಾರೆ. ನೀವು ಕೂಡ ವಾಸ್ತುಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರೆ ಸ್ನೇಹಿತರಿಗೆ ಅಥವಾ ಆತ್ಮೀಯರಿಗೆ ಗೋಲ್ಡ್‍ಫಿಶ್‍ಗಳನ್ನು ಗಿಫ್ಟ್ ಆಗಿ ನೀಡಬಹುದು.

ಹೊಸ ವರ್ಷಕ್ಕೆ ತಯಾರಾಗಲು ಇಲ್ಲಿದೆ ಸಿಂಪಲ್ 20 ಟಿಪ್ಸ್!

ಮನೆಯಲ್ಲಿ ಮೀನುಗಳನ್ನು ಸಾಕುವ ಹವ್ಯಾಸ ಹೊಂದಿರುವವರಿಗೆ ಇದು ಅತ್ಯಂತ ಯೋಗ್ಯವಾದ ಗಿಫ್ಟ್. ಇನ್ನು ಮನೆಯಲ್ಲಿನ ಎಲ್ಲ ನೆಗೆಟಿವ್ ಶಕ್ತಿಗಳನ್ನು ದೂರ ಮಾಡಬೇಕೆಂದರೆ ಗೋಲ್ಡ್‍ಫಿಶ್‍ಗಳಿರುವ ಅಕ್ವೇರಿಯಂಗೆ ಒಂದು ಬ್ಲ್ಯಾಕ್ ಫಿಶ್ ಅನ್ನು ಕೂಡ ಸೇರಿಸಬಹುದು.

2.ಇವಿಲ್ ಐ: ಇದೊಂದು ಕಣ್ಣಿನ ಆಕೃತಿಯ ಪದಕ. ಇದನ್ನು ಆಭರಣದ ರೀತಿಯಲ್ಲಿ ಕುತ್ತಿಗೆಗೆ ಹಾಕಿಕೊಳ್ಳಬಹುದು. ಇಲ್ಲವೆ ಮನೆಯೊಳಗೆ ತೂಗು ಹಾಕಬಹುದು. ‘ನಝರ್’ ಎಂದು ಕೂಡ ಕರೆಯಲ್ಪಡುವ ಇದು ನೀಲಿ, ಬಿಳಿ ಹಾಗೂ ಕಪ್ಪು ಬಣ್ಣದ ವರ್ತುಲಗಳ ವಿನ್ಯಾಸವನ್ನೊಳಗೊಂಡಿದೆ. ಇದನ್ನು ಧರಿಸುವುದರಿಂದ ಕೆಟ್ಟ ದೃಷ್ಟಿಗಳು ನಮ್ಮ ಮೇಲೆ ಬೀಳುವುದಿಲ್ಲ ಎಂಬ ನಂಬಿಕೆಯಿದೆ. ಟರ್ಕಿಯಲ್ಲಿ ಇವಿಲ್ ಐ ಅನ್ನು ಅದೃಷ್ಟದ ಸಂಕೇತ ಎಂದು ನಂಬಲಾಗುತ್ತದೆ.

3.ಮರ್ಝಿಪ್ಯಾನ್ ಪಿಗ್ಸ್: ಹಂದಿ (ಪಿಗ್) ಸಂಪತ್ತು ಹಾಗೂ ಸಮೃದ್ಧಿಯ ಸಂಕೇತ ಎಂಬ ನಂಬಿಕೆ ಮಧ್ಯಕಾಲೀನ ಯುಗದ ಜರ್ಮನಿಯ ಜನರಲ್ಲಿತ್ತು. ಹಂದಿ ಸಾಕಣೆ ಮಾಡುವ ಮನೆಯಲ್ಲಿ ಊಟಕ್ಕೆ ಕೊರತೆಯಿರುವುದಿಲ್ಲ ಎಂಬುದೇ ಈ ನಂಬಿಕೆಗೆ ಆಧಾರವಾಗಿತ್ತು. ಈಗಲೂ ಕೂಡ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಂದಿಯನ್ನು ಅದೃಷ್ಟದ ಸಂಕೇತ ಎಂದು ಭಾವಿಸಲಾಗುತ್ತದೆ. ಇದೇ ಕಾರಣಕ್ಕೆ ಮರ್ಝಿಪ್ಯಾನ್ ಪಿಗ್ಸ್ ಎಂಬ ಹಂದಿ ಆಕೃತಿಯನ್ನು ಹೋಲುವ ಸಿಹಿ ತಿನಿಸನ್ನು ಅದೃಷ್ಟದ ಸಂಕೇತ ಎಂಬಂತೆ ಹೊಸ ವರ್ಷಕ್ಕೆ ಸ್ನೇಹಿತರಿಗೆ, ಬಂಧುಗಳಿಗೆ ಹಂಚುವ ಸಂಪ್ರದಾಯ ಪಾಶ್ಚಾತ್ಯ ರಾಷ್ಟ್ರಗಳಲ್ಲಿದೆ. ಮರ್ಝಿಪ್ಯಾನ್ ಪಿಗ್ಸ್ ಸಿಹಿ ಪ್ರಿಯರಿಗೆ ಅತ್ಯುತ್ತಮ ಗಿಫ್ಟ್ ಆಗಬಲ್ಲದು. 

2020ರೊಳಗೆ ವಿಜ್ಞಾನಿಗಳು ಹೇಳಿದ್ದೆಲ್ಲ ನಿಜವಾಯ್ತಾ? ಏನೆಲ್ಲಾ ಹೇಳಿದ್ರು

4.ಜಪಾನೀಸ್ ಬಾಬ್‍ಟೇಲ್ ಕ್ಯಾಟ್: ಇದನ್ನು ಮನೆಗಿಂತ ಹೆಚ್ಚಾಗಿ ಹೋಟೆಲ್ ಸೇರಿದಂತೆ ವ್ಯಾಪಾರ-ವಹಿವಾಟು ನಡೆಯುವ ಅಂಗಡಿ, ಕಚೇರಿಗಳಲ್ಲಿ ಬಳಸಲಾಗುತ್ತದೆ. ಜಪಾನ್ ಜನರು ಬಾಬ್‍ಟೇಲ್ ಕ್ಯಾಟ್ ಅನ್ನು ಅದೃಷ್ಟದ ಸಂಕೇತ ಎಂದು ಭಾವಿಸುತ್ತಾರೆ. ಕೆಂಪು, ಬಿಳಿ, ಕಪ್ಪು ಹಾಗೂ ಬಂಗಾರದ ಬಣ್ಣಗಳಲ್ಲಿರುವ ಮುಂದಿನ ಒಂದು ಕಾಲನ್ನು ಎತ್ತಿಕೊಂಡು ‘ಹಾಯ್’ ಮಾಡುವ ಭಂಗಿಯಲ್ಲಿಟ್ಟುಕೊಂಡಿರುವ ಬೆಕ್ಕು ಮಾಲೀಕನಿಗೆ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.

ಒಂದು ವೇಳೆ ಬೆಕ್ಕು ಬಲ ಕಾಲನ್ನು ಮೇಲೆತ್ತಿದ್ದರೆ ಅದು ಅದೃಷ್ಟ ಹಾಗೂ ಹಣವನ್ನು ಆಹ್ವಾನಿಸುತ್ತದೆ ಎಂದು ನಂಬಲಾಗುತ್ತದೆ. ಅದೇ ಎಡ ಕಾಲನ್ನು ಮೇಲೆತ್ತಿದ್ದರೆ ಅದು ಗ್ರಾಹಕರನ್ನು ಆಹ್ವಾನಿಸುವ ಮೂಲಕ ಉದ್ಯಮದಲ್ಲಿ ಏಳ್ಗೆಯನ್ನು ತರುತ್ತದೆ ಎಂದು ಭಾವಿಸಲಾಗುತ್ತದೆ. 

ಹೊಸ ವರ್ಷದಲ್ಲಿ ಈ ಸಿಂಪಲ್ ರೂಲ್ ಫಾಲೋ ಮಾಡಿ, ಸೇವಿಂಗ್ಸ್ ಹೆಚ್ಚಿಸಿ!

5.ವರಿ ಡಾಲ್ಸ್: ಇದು ಪುಟ್ಟದಾದ ಒಂದು ಗೊಂಬೆ. ಮೆಕ್ಸಿಕೋ ಮತ್ತು ಸುತ್ತಮುತ್ತಲಿನ ಜನರಿಗೆ ಈ ಗೊಂಬೆ ಅದೃಷ್ಟ ತರುತ್ತದೆ ಎಂದು ನಂಬುತ್ತಾರೆ. ಈ ಗೊಂಬೆಯನ್ನು ರಾತ್ರಿ ಮಲಗುವಾಗ ದಿಂಬಿನ ಅಡಿಯಿಟ್ಟು ಮಲಗುವುದರಿಂದ ಆ ವ್ಯಕ್ತಿಯ ನೋವು ಮತ್ತು ಚಿಂತೆಗಳು ದೂರವಾಗುತ್ತವೆ. ಹೀಗಾಗಿ ಸದಾ ಚಿಂತೆಯಲ್ಲಿ ಮುಳುಗಿರುವ, ಸಮಸ್ಯೆಯಲ್ಲಿರುವ ವ್ಯಕ್ತಿಗೆ ಹೊಸ ವರ್ಷಕ್ಕೆ ವರಿ ಡಾಲ್ಸ್ ಗಿಫ್ಟ್ ನೀಡಿ ಚಿಯರ್ ಅಪ್ ಎನ್ನಿ.