‘ಮುನ್ನುಗ್ಗಿ, ಬೆಳೆಯಿರಿ, ಹೊಳೆಯಿರಿ’ ಎಂಬ ಧ್ಯೇಯ ವಾಕ್ಯದಡಿ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಕಳೆದ 2019ರಿಂದ 2020ರ ಡಿಸೆಂಬರ್‌ವರೆಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ದೇಶಾದ್ಯಂತ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ.

ನ್ಯೂಝಿಲೆಂಡ್ ಸಂಸತ್ತಿನಲ್ಲಿ ಮಲಯಾಳಂ ಮಾತು..! ವಿಡಿಯೋ ವೈರಲ್ 

ವಿಶ್ವ ವ್ಯಾಪಿ ವಿಸ್ತರಿಸಿಕೊಂಡಿರುವ ಸ್ಕೌಟ್‌ ಚಳವಳಿಯ ಒಂದು ವಿಭಾಗವಾದ ‘ರೇಂಜರಿಂಗ್‌’ ಅನ್ನು 1919ರಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಯುವತಿಯರನ್ನು ‘ರೇಂಜರ್‌’ ಎಂದು ಕರೆಯಲಾಗುತ್ತದೆ. ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೇಂಜ​ರ್‍ಸ್ಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಭಾರತದಲ್ಲಿ ಒಟ್ಟು 83000 ರೇಂಜ​ರ್‍ಸ್ ಇದ್ದರೆ, ಈ ಪೈಕಿ ಕರ್ನಾಟಕದಲ್ಲಿ 25000 ರೇಂಜ​ರ್‍ಸ್ ಸಕ್ರಿಯರಾಗಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ 2019ರ ಆಗಸ್ಟ್‌ 19ರಿಂದ 23ರವರೆಗೆ ಶತಮಾನೋತ್ಸವದ ಉದ್ಘಾಟನೆ ನೆರವೇರಿಸಲಾಗಿದೆ. ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಸೆ.7ರಿಂದ 10ವರೆಗೆ ಶತಮಾನೋತ್ಸವದ ಉದ್ಘಾಟನೆ ಕಾರ್ಯಕ್ರಮ ನಡೆದಿದೆ. 2019ರ ಡಿಸೆಂಬರ್‌ 1ರಿಂದ ಡಿ.7ರವರೆಗೆ ಒರಿಸ್ಸಾದ ಕುರ್ದಾದಲ್ಲಿ ಕಿರು ಜಾಂಬೂರಿಯು ನೆರವೇರಿದೆ. 2020ರ ಜ.3ರಿಂದ 5ರವರೆಗೆ ದೊಡ್ಡಬಳ್ಳಾಪುರದಲ್ಲಿ ಮೂರು ದಿನಗಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಸಹ ಹಮ್ಮಿಕೊಳ್ಳಲಾಗಿತ್ತು. ರಾಜ್ಯದಲ್ಲಿ ಡಿಸೆಂಬರ್‌ ಮಾಸದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ರೇಂಜರಿಂಗ್‌ ಆರಂಭದಿಂದ ಮೊದಲುಗೊಂಡು ಈವರೆಗಿನ ಕಾರ್ಯಕ್ರಮಗಳ ಬಗ್ಗೆ ‘ರೇಂಜರಿಂಗ್‌ ಮೈಲುಗಲ್ಲು’ ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರ ಹೊರತರಲಾಗುತ್ತಿದೆ.

5 ನಿಮಿಷದಲ್ಲಿ 1 ಮೈಲು ಓಡಿದ 9 ತಿಂಗಳ ತುಂಬು ಗರ್ಭಿಣಿ..! ಇಲ್ಲಿದೆ ವಿಡಿಯೋ 

ರಾಷ್ಟ್ರಮಟ್ಟದಲ್ಲಿ ವಿವಿಧ ಸ್ಪರ್ಧೆಗಳು...

ಈ ಶತಮಾನೋತ್ಸವದ ಪ್ರಯುಕ್ತ ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಯಲ್ಲಿ ವರ್ಚುವಲ್‌ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗಳನ್ನು ಸಂಘಟಿಸಲಾಗಿದೆ. ಕಳೆದ ಸೆ.19ರಿಂದ 23ರವರೆಗೆ ರೇಂಜ​ರ್‍ಸ್ಗಳಿಗಾಗಿ ‘ನಿನ್ನ ರೆಕ್ಕೆಗಳನ್ನು ಬೆಳೆಸು’ ಹೆಸರಿನಲ್ಲಿ ವಾಸ್ತವಿಕ ಸಮ್ಮೇಳನ ನಡೆಸಲಾಗಿದೆ. ಅಕ್ಟೋಬರ್‌ ಮಾಸದಲ್ಲಿ ‘ನನ್ನ ಕನಸುಗಳು-ಕನಸು ನನಸಾಗಿಸಲು ನನ್ನ ಯೋಜನೆ’  ಹಾಗೂ ‘ನನ್ನ ಸಾಧನೆ-ನಾನು ಅನುಸರಿಸಿದ ಮಾರ್ಗ’ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ದೇಶಾದ್ಯಂತ 700 ವಿಡಿಯೋಗಳು ಬಂದಿವೆ. ಪ್ರಬಂಧ ಸ್ಪರ್ಧೆಯಲ್ಲಿ 685 ಮಂದಿ ಪಾಲ್ಗೊಂಡಿದ್ದಾರೆ. ರೇಂಜ​ರ್‍ಸ್ಗಳು ಸಹ ಡಿಜಿಟಲ್‌ ವ್ಯವಸ್ಥೆಗೆ ಅನುಗುಣವಾಗಿ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕದ ರಾಜ್ಯ ಆಯುಕ್ತ(ಗೈಡ್‌)ರಾದ ಗೀತಾ ನಟರಾಜ್‌ ತಿಳಿಸಿದರು.

ನವೆಂಬರ್‌ನಲ್ಲಿ ನಡೆಯುವ ಸ್ಪರ್ಧೆಗಳು...

‘ದಿವಾಸ್‌-ಜಗತ್ತಿನಾದ್ಯಂತ’ : ಈ ಸ್ಪರ್ಧೆಯಲ್ಲಿ ಸಂಸ್ಥೆಯೇ ರೇಂಜ​ರ್‍ಸ್ಗಳಿಗೆ ವಿವಿಧ ಕ್ಷೇತ್ರಗಳಲ್ಲಿನ ಮಹಿಳಾ ಸಾಧಕಿಯರನ್ನು ಸೂಚಿಸಿದೆ. ಇದರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ, ಕಸ್ತೂರ ಬಾ ಗಾಂಧಿ, ಕಲ್ಪನಾ ಚಾವ್ಲಾ, ಅಮೃತ ದೇವಿ ಬಿಷ್ಣೋಯಿ, ಕ್ಲಾರಾ ಜೆಟ್‌ಕಿನ್‌, ಬಚೇಂದ್ರಿ ಪಾಲ್‌, ಮಲಾಲ ಯೂಸಫ್‌, ಮೇಡಂ ಕ್ಯೂರಿ, ಮದರ್‌ ತೆರೇಸಾ, ಮೇರಿ ಕ್ಯೂರಿ, ಫ್ಲಾರೆನ್ಸ್‌ ನೈಂಟಿಗೇಲ್‌, ಮೀರಾಬಾಯಿ, ಡಾ.ಅನಿಬೆಸೆಂಟ್‌, ಪುನೀತ ಅರೋರ, ಲೇಡಿ ಬಿ.ಪಿ., ಶಕುಂತಲಾ ದೇವಿ, ಸರೋಜಿನಿ ನಾಯ್ಡು, ಎಂ.ಎಸ್‌. ಸುಬ್ಬುಲಕ್ಷ್ಮಿ, ಜಾನ್ಸಿರಾಣಿ ಲಕ್ಷ್ಮೇ ಬಾಯಿ, ಪಿ.ವಿ. ಸಿಂಧು ಹೆಸರನ್ನು ನೀಡಲಾಗಿದೆ. ಸ್ಪರ್ಧಿಗಳು ಇದರಲ್ಲಿ ಒಬ್ಬರನ್ನು ಆರಿಸಿಕೊಂಡು, ಈ ವಿಶೇಷ ವ್ಯಕ್ತಿಗಳಂತೆ ಉಡುಗೆ ತೊಟ್ಟು, ಅವರ ಪಾತ್ರಗಳನ್ನು ನಟಿಸಿ ವಿಡಿಯೋ ಮಾಡಿ ರೇಂಜರಿಂಗ್‌ ಸೆಂಟನರಿ ವೆಬ್‌ಸೈಟ್‌ಗೆ ಕಳುಹಿಸಬಹುದು.

ದಪ್ಪ ಹೊಟ್ಟೆ, ಸ್ಟ್ರೆಚ್ ಮಾರ್ಕ್‌ ಎಲ್ಲವನ್ನೂ ಒಪ್ಪಿಕೊಳ್ಳುವೆ; ದರ್ಶನ್ ನಟಿ ಕನಿಕಾ!

ಸಂಸತ್ತಿನ ಅಣಕು ಸ್ಪರ್ಧೆ: ಈ ಸ್ಪರ್ಧೆಯಲ್ಲಿ ಪ್ರಾಕೃತಿಕ ವಿಕೋಪಗಳು ಅಥವಾ ನೈಸರ್ಗಿಕ ವಿಪತ್ತುಗಳ ನಿರ್ವಹಣೆ (ಉದಾಹರಣೆಗೆ ಪ್ರವಾಹಗಳು, ಭೂಕಂಪಗಳು ಇತ್ಯಾದಿ), ಹೊಸ ಶಿಕ್ಷಣ ನೀತಿಗಳು- ಅಂತರ್ನಿರ್ಮಿತ ಸಂಸ್ಕೃತಿಯೊಂದಿಗೆ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕೃತ ನೀತಿಗಳು, ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಹೊಸ ಕಾನೂನುಗಳನ್ನು ಮಾಡಲಾಗುವುದು, ವಲಸೆ ಕಾರ್ಮಿಕರಿಗಾಗಿ ರೂಪಿಸಬೇಕಾದ ಕಾನೂನುಗಳು, ಕೋವಿಡ್‌ ಸಂದರ್ಭದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ, ಕೋವಿಡ್‌ ಸಮಯದಲ್ಲಿ ಶಿಕ್ಷಣ ವ್ಯವಸ್ಥೆ, ಆಹಾರ ಸುರಕ್ಷತೆ ಸಾಧಿಸಲು ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ‘ಶೂನ್ಯ ಹಸಿವು’ ಈ ವಿಚಾರಗಳಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ 10-15 ಮಂದಿ ರೇಂಜ​ರ್‍ಸ್ಗಳಿರುವ ತಂಡವು 20 ನಿಮಿಷಗಳ ಕಾಲ ಸಂಸತ್ತಿನ ಅಣಕು ಪ್ರದರ್ಶನವನ್ನು ವಿಡಿಯೋ ಮಾಡಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್‌ಸೈಟ್‌ ವೀಕ್ಷಿಸಬಹುದು.