ನ್ಯೂಝಿಲೆಂಡ್‌ನಲ್ಲಿ ಭಾರತ ಮೂಲದ ಮಹಿಳೆ ಮೊದಲಬಾರಿ ಸಚಿವೆಯಾಗಿ ಆಯ್ಕೆಯಾದ ಬೆನ್ನಲ್ಲೆ ಇದೀಗ ಫಾರಿನ್ ಸಂಸತ್ತಿನಲ್ಲಿ ಮಲಯಾಳಂ ಮಾತುಗಳ ವಿಡಿಯೋ ವೈರಲ್ ಬಂದಿದೆ.

ನ್ಯೂಝಿಲೆಂಡ್‌ನ ಪಾರ್ಲಿಮೆಂಟ್‌ನಲ್ಲಿ ಮಲಯಾಳಂನಲ್ಲಿ ಮಾತನಾಡುವ ಪ್ರಿಯಾಂಕ ರಾಧಾಕೃಷ್ಣನ್ ಅವರ ಹಳೆಯದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವ್ಯೂಸ್ ಪಡೆದಿದೆ.

ನ್ಯೂಜಿಲೆಂಡ್ ಸಚಿವೆಯಾದ ಮೊದಲ ಭಾರತೀಯ ಮಹಿಳೆ ಪ್ರಿಯಾಂಕ..!

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಮೂರು ವರ್ಷ ಹಳೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಭಾರತದಲ್ಲಿ ಹುಟ್ಟಿದ ಪ್ರಿಯಾಂಕ(41) ಸಿಂಗಾಪುರ್‌ನಲ್ಲಿ ಕಲಿತಿದ್ದರು.

ನಂತರ ಉನ್ನತ ಶಿಕ್ಷಣಕ್ಕಾಗಿ ನ್ಯೂಝಿಲೆಂಡ್‌ಗೆ ಶಿಫ್ಟ್ ಆಗಿದ್ದರು. ಲೇಬರರ್ ಪಾರ್ಟಿಯಿಂದ ಇವರು ಸಂಸದೆಯಾಗಿ ಆಯ್ಕೆಯಾಗಿದ್ದರು. ಮೂರು ವರ್ಷದ ನಂತರ ಪ್ರಿಯಾಂಕ ಭಾರತೀಯ ಮೂಲದ ಮೊದಲ ನ್ಯೂಝಿಲೆಂಡ್ ಸಚಿವೆಯಾಗಿ ಆಯ್ಕೆಯಾಗಿದ್ದಾರೆ.

ಬೈಡನ್‌ ಗೆದ್ದರೆ ಭಾರತದ ಜೊತೆ ಉತ್ತಮ ಸಂಬಂಧ?

ಭಾರತದ ಕೇರಳ ರಾಜ್ಯದವರಾದ ಪ್ರಿಯಾಂಕ ಸಂಸತ್ತಿನಲ್ಲಿ ಮಲಯಾಳಂ ಮಾತನಾಡಿ, ಇದೇ ಮೊದಲ ಬಾರಿ ನನ್ನ ಮಾತೃ ಭಾಷೆ ಈ ಸಂಸತ್ತಿನಲ್ಲಿ ಕೆಳಿದೆ ಎಂದುಕೊಳ್ಳುತ್ತೇನೆ ಎಂದಿದ್ದರು. 2017ರ ಪಾರ್ಲಿಮೆಂಟ್ ಸೆಷನ್‌ನ ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಭಾರತದ ಕೀರ್ತಿ ಮತ್ತಷ್ಟು ಬೆಳಗಿಸಿ, ಭಾರತೀಯ ಮೂಲದ ನ್ಯೂಝಿಲೆಂಡ್ ಸಚಿವೆ ಸಂಸತ್ತಿನಲ್ಲಿ ಮಲಯಾಳಂ ಮಾತನಾಡಿದರು ಎಂದು ಪುರಿ ಟ್ವೀಟ್ ಮಾಡಿದ್ದಾರೆ. ಚೆನ್ನೈನ ತಮಿಳುನಾಡಿನಲ್ಲಿ ಹುಟ್ಟಿದ ಪ್ರಿಯಾಂಕ ಪೋಷಕರು ಕೇರಳದವರು. ಸೋಮವಾರ ಪ್ರಿಯಾಂಕ ನ್ಯೂಝಿಲೆಂಡ್ ಸಚಿವೆಯಾಗಿ ಆಯ್ಕೆಯಾಗಿದ್ದಾರೆ.