Asianet Suvarna News Asianet Suvarna News

ಈ ವರ್ಷ ವಿವಾದದ ಬಿರುಗಾಳಿ ಎಬ್ಬಿಸಿದ ಆತ್ಮಚರಿತ್ರೆಗಳು

 ರಾಜಕಾರಣಿಗಳು, ಕ್ರಿಕೆಟಿಗರು, ಬಾಲಿವುಡ್‌ ನಟ ನಟಿಯರು ಹಾಗೂ ಸೆಲೆಬ್ರಿಟಿಗಳು ಆತ್ಮಕತೆ ಬರೆದಾಗ ಈ ಹಿಂದೆಯೂ ಸಾಕಷ್ಟುವಿವಾದಗಳಾಗಿದ್ದವು. ವಿಶೇಷ ಎಂದರೆ ಕೆಲವೊಮ್ಮೆ ವಿವಾದಗಳೇ ಪುಸ್ತಕದ ಓದುಗರನ್ನು ಹೆಚ್ಚಿಸಿದ ಉದಾಹರಣೆ ಇದೆ. ಈ ಹಿನ್ನೆಲೆಯಲ್ಲಿ ಕೆಲ ವಿವಾದ ಸೃಷ್ಟಿಸಿದ ಆತ್ಮಚರಿತ್ರೆಗಳು ಇಲ್ಲಿವೆ.

Know about Controversial autobiographies of 2019
Author
Bengaluru, First Published Dec 29, 2019, 2:09 PM IST

ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ತಮ್ಮ ಆತ್ಮಕತೆಯಲ್ಲಿ ‘ದೇವೇಗೌಡರು ಕಾಂಗ್ರೆಸ್‌ ಸೇರಲು ಮುಂದಾಗಿದ್ದರು’ ಎಂದು ಹೇಳಿರುವುದು ವಿವಾದ ಸೃಷ್ಟಿಸಿದೆ. ಆತ್ಮಚರಿತ್ರೆಗಳು ಪ್ರಕಟವಾದಾಗ ವಿವಾದಗಳು ಉದ್ಭವಿಸುವುದು ಇದೇನೂ ಮೊದಲಲ್ಲ.

ರಾಜಕಾರಣಿಗಳು, ಕ್ರಿಕೆಟಿಗರು, ಬಾಲಿವುಡ್‌ ನಟ ನಟಿಯರು ಹಾಗೂ ಸೆಲೆಬ್ರಿಟಿಗಳು ಆತ್ಮಕತೆ ಬರೆದಾಗ ಈ ಹಿಂದೆಯೂ ಸಾಕಷ್ಟುವಿವಾದಗಳಾಗಿದ್ದವು. ವಿಶೇಷ ಎಂದರೆ ಕೆಲವೊಮ್ಮೆ ವಿವಾದಗಳೇ ಪುಸ್ತಕದ ಓದುಗರನ್ನು ಹೆಚ್ಚಿಸಿದ ಉದಾಹರಣೆ ಇದೆ. ಈ ಹಿನ್ನೆಲೆಯಲ್ಲಿ ಕೆಲ ವಿವಾದ ಸೃಷ್ಟಿಸಿದ ಆತ್ಮಚರಿತ್ರೆಗಳು ಇಲ್ಲಿವೆ.

ಗುಡ್‌ಬೈ 2019: ಈ ವರ್ಷ ವಿವಾದದ ಬಿರುಗಾಳಿ ಎಬ್ಬಿಸಿದ ಆತ್ಮಚರಿತ್ರೆಗಳು

‘ಲೈಫ್‌ ಈಸ್‌ ನಾಟ್‌ ಇನಫ್‌’- ನಟವರ್‌ ಸಿಂಗ್‌

ಮಾಜಿ ವಿದೇಶಾಂಗ ಸಚಿವ ನಟವರ ಸಿಂಗ್‌ ಅವರ ‘ಲೈಫ್‌ ಈಸ್‌ ನಾಟ್‌ ಇನಫ್‌’ ಆತ್ಮಚರಿತ್ರೆಯು ಕಾಂಗ್ರೆಸ್‌ ಮೊಗಸಾಲೆ ಮತ್ತು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್‌ ಅವರ ನಡುವೆ ಉತ್ತಮ ಸಂಬಂಧ ಇರಲಿಲ್ಲ. ಸೋನಿಯಾ ಗಾಂಧಿ ಅವರೇ ನರಸಿಂಹ ರಾವ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಿದರೂ ರಾವ್‌ ಅವರನ್ನು ಕಂಡರೆ ಸೋನಿಯಾಗೆ ಇಷ್ಟ ಇರಲಿಲ್ಲ.

ನಾನೂ ಅವರೊಂದಿಗೆ ಸಂಬಂಧ ಕಡಿದುಕೊಂಡು ತಿವಾರಿ ಕಾಂಗ್ರೆಸ್‌ ಸೇರಿಕೊಂಡಿದ್ದೆ. ಆದರೆ ಬಳಿಕ ಮತ್ತೆ ಒಂದುಗೂಡಿದೆವು. ಹಾಗೆಯೇ ಶಾ ಬಾನೋ ಪ್ರಕರಣ, ರಾಮ ಜನ್ಮಭೂಮಿ ಮತ್ತು ಡಾರ್ಜಿಲಿಂಗ್‌ ಗಲಭೆಗಳನ್ನು ರಾಜೀವ್‌ ಗಾಂಧಿ ಪ್ರಧಾನಿಯಾಗಿ ಸಮರ್ಪಕವಾಗಿ ನಿರ್ವಹಿಸಲಿಲ್ಲ. ಈ ವಿಚಾರಗಳನ್ನು ಸೂಕ್ಷ್ಮವಾಗಿ ನಿಭಾಯಿಸಬಹುದಿತ್ತು. ಬದಲಾಗಿ ಬೋಫೋರ್ಸ್‌ ಕೆಸರಿನೊಳಗೆ ಬಿದ್ದರು ಎಂದು ಬರೆದಿದ್ದರು. ಹಾಗೆಯೇ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಅಧಿಕಾರದಲ್ಲಿದ್ದ 10 ವರ್ಷ ಅವರು ಯಾವ ಸಂಪತ್ತನ್ನೂ ಉಳಿಸಲಿಲ್ಲ.

ಪ್ರಧಾನಿ ಕಚೇರಿಯಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳನ್ನು ತಾವೇ ನಡೆಸುತ್ತಿದ್ದರು ಎಂದು ಟೀಕಿಸಿದ್ದರು. ಒಬ್ಬ ಕಾಂಗ್ರೆಸ್ಸಿಗನಾಗಿ ಕಾಂಗ್ರೆಸ್‌ ಮುಖಂಡರ ಕುರಿತು ಮಾಡಿದ್ದ ಈ ಟೀಕೆಗಳು ಬಾರೀ ವಿವಾದ ಸೃಷ್ಟಿಸಿದ್ದವು.

ಅಪ್ಪನ ಸವಾಲು ಸ್ವೀಕರಿಸದೆಯೇ ವಿಶ್ವ ಚಾಂಪಿಯನ್‌ ಆದ ವಿಶ್ವನಾಥನ್ ಆನಂದ್!

ಮೈ ಲೈಫ್‌ ಮೈ ಕಂಟ್ರಿ - ಲಾಲ್‌ಕೃಷ್ಣ ಅಡ್ವಾಣಿ

ಮಾಜಿ ಉಪ ಪ್ರಧಾನಿ, ಬಿಜೆಪಿಯ ಹಿರಿಯ ಮುಖಂಡ ಎಲ… ಕೆ ಅಡ್ವಾಣಿ ಅವರ ‘ಮೈ ಕಂಟ್ರಿ ಮೈ ಲೈಪ್‌’ ಆತ್ಮಚರಿತ್ರೆ ಮಾತ್ರವಲ್ಲ, ಭಾರತದ ರಾಜಕೀಯ ಬೆಳವಣಿಗೆಯ ಕೈಪಿಡಿಯಂತಿದೆ. 1900ರಿಂದ 2007ರ ತನಕದ ರಾಜಕೀಯ ಚಿತ್ರಣ ಇದರಲ್ಲಿ ಸಿಗುತ್ತದೆ. ಸುಮಾರು 1,000,000 ಪ್ರತಿಗಳು ಮಾರಾಟವಾಗಿ ಹೊಸ ದಾಖಲೆ ಕೂಡಾ ನಿರ್ಮಿಸಿದೆ. ಆದರೆ ಅಡ್ವಾಣಿ ತಮ್ಮ ಆತ್ಮ ಚರಿತ್ರೆಯಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್‌ ಅಲಿ ಜಿನ್ನಾ ಅವರನ್ನು ‘ಗ್ರೇಟ್‌ ಮ್ಯಾನ್‌’ ಎಂದು ಹೊಗಳಿದ್ದರು.

‘ಜಿನ್ನಾ ಮೂಲತಃ ಮುಸ್ಲಿಂ ಪ್ರಾಬಲ್ಯದ ಜಾತ್ಯತೀತ ರಾಷ್ಟ್ರವನ್ನು ಬಯಸುವ ವ್ಯಕ್ತಿ ಎಂದು ವೈಯಕ್ತಿಕವಾಗಿ ನನಗನಿಸುತ್ತದೆ’ ಎಂದಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. ಇದೇ ಕಾರಣದಿಂದಾಗಿ ಮುಂದೆ 2005ರಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅಡ್ವಾಣಿ ಕಳೆದುಕೊಳ್ಳಬೇಕಾಯಿತು.

ಪ್ಲೇಯಿಂಗ್‌ ಇಟ್‌ ಮೈ ವೇ - ಸಚಿನ್‌ ತೆಂಡೂಲ್ಕರ್‌

ವಿಶ್ವಕಪ್‌ ಆಟಕ್ಕೆ ಕೆಲವೇ ದಿನ ಇರುವಾಗ ಆಸ್ಪ್ರೇಲಿಯಾದ ಕ್ರಿಕೆಟಿಗ, ಭಾರತೀಯ ತಂಡದ ಕೋಚ್‌ ಗ್ರೇಗ್‌ ಚಾಪೆಲ್‌ ನನ್ನನ್ನು ಭೇಟಿ ಮಾಡಿ ರಾಹುಲ್‌ ದ್ರಾವಿಡ್‌ ಅವರಿಂದ ಕ್ಯಾಪ್ಟನ್ಸಿಯನ್ನು ಕಸಿದುಕೊಳ್ಳುವಂತೆ ಸಲಹೆ ನೀಡಿದ್ದರು. ಹಾಗೆ ಮಾಡಿದರೆ ನಾವಿಬ್ಬರೂ ಭಾರತದ ಕ್ರಿಕೆಟ್‌ ಜಗತ್ತನ್ನು ಬಹುಕಾಲ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದಿದ್ದರು. ಅಂದು ಪಕ್ಕದಲ್ಲೇ ಕುಳಿತಿದ್ದ ಅಂಜಲಿಗೆ ಅವರ ಮಾತು ಕೇಳಿ ನಿಜಕ್ಕೂ ಆಶ್ಚರ್ಯವಾಗಿತ್ತು ಎಂದು ಕ್ರಿಕೆಟ್‌ ದೇವರು ಎಂದೇ ಹೆಸರಾಗಿರುವ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಕಾಂಟ್ರೋವರ್ಶಿಯಲಿ ಯುವ​ರ್ಸ್- ಶೋಯಬ್‌ ಅಖ್ತರ್‌

ಪಾಕಿಸ್ತಾನದ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ತಮ್ಮ ಆತ್ಮಚರಿತ್ರೆಯಲ್ಲಿ ಭಾರತದ ಮಾಧ್ಯಮಗಳು ಮತ್ತು ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಬಗ್ಗೆ ವಿವಾದಾತ್ಮವಾಗಿ ಬರೆದಿದ್ದರು. ತೆಂಡೂಲ್ಕರ್‌ ಬ್ಯಾಟಿಂಗ್‌ ಮಾಡುವಾಗ ಭಯಪಡುತ್ತಿದ್ದರು. ನನ್ನ ಬೌಲಿಂಗ್‌ ವೇಗವಾಗಿರುತ್ತಿತ್ತು. ಅವರಿಗೆ ಟಚ್‌ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಹೊರನಡೆಯುತ್ತಿದ್ದರು ಎಂದು ಬರೆದಿದ್ದು ವಿವಾದವಾಗಿತ್ತು.

ಅಂಡರ್‌ನೀತ್‌ ದ ಸದರ್ನ್‌ ಕ್ರಾಸ್‌ - ಮೈಕೆಲ್‌ ಹುಸ್ಸೆ

2007-08ರಲ್ಲಿ ನಡೆದ ಇಂಡಿಯಾ- ಆಸ್ಪ್ರೇಲಿಯಾ ಕ್ರಿಕೆಟ್‌ ಪಂದ್ಯಾವಳಿ ಮುಕ್ತಾಯವಾದ ಬಳಿಕ ಸಚಿನ್‌ ತೆಂಡೂಲ್ಕರ್‌ ಹಸ್ತಲಾಘವ ಮಾಡುವುದನ್ನು ಮರೆತಿದ್ದರು. ಅದನ್ನು ಉಲ್ಲೇಖಿಸಿ ಆಸ್ಪ್ರೇಲಿಯಾ ಕ್ರಿಕೆಟ್‌ ಕೋಚ್‌ ಮೈಕೆಲ್‌ ಹುಸ್ಸೆ ‘ಅಂತಾರಾಷ್ಟ್ರೀಯ ಪಂದ್ಯಾವಳಿ ಮುಗಿದ ನಂತರ ಶೇಕ್‌ ಹ್ಯಾಂಡ್‌ ಕೊಡುವುದನ್ನು ಮರೆಯಬಾರದು. ಬಹುಶಃ ಸಚಿನ್‌ ಅವರೂ ನಮ್ಮ ನಿಮ್ಮೆಲ್ಲರಂತೆ ಮನುಷ್ಯರು, ಅವರೇನು ದೇವರಲ್ಲ’ ಎಂದು ಹೇಳಿದ್ದರು. ಇದು ಕ್ರಿಕೆಟ್‌ ಅಭಿಮಾನಿಗಳ ವಿರೋಧಕ್ಕೆ ಕಾರಣವಾಗಿತ್ತು.

ಸಜ್ಜನಿಕೆಯ ಸಾಹಿತ್ಯಗಿರಿ ಅಕ್ಷರ ಸಾಲಿನ ಬೆಳಕು ಪ್ರೊ.ಎಲ್‌.ಎಸ್‌. ಶೇಷಗಿರಿ ರಾವ್‌

ಆ್ಯನ್‌ ಅನ್‌ಸೂಟಬಲ್‌ ಬಾಯ್‌ - ಕರಣ್‌ ಜೋಹರ್‌

ಬಾಲಿವುಡ್‌ ನಟ ಕರಣ್‌ ಜೋಹರ್‌ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಕಾಜಲ್‌ ಅಗರವಾಲ್‌ ಜೊತೆಗಿನ ಸಂಬಂಧದ ಬಗ್ಗೆ ಬರೆದಿದ್ದರು. ಅದರಲ್ಲಿ ‘ಇಪ್ಪತ್ತೈದು ವರ್ಷಗಳಿಂದ ನಾನು ಕಾಜಲ್‌ ಬಗ್ಗೆ ಹೊಂದಿದ್ದ ಪ್ರತಿಯೊಂದು ಭಾವನೆಯನ್ನು ಕೊಂದಿದ್ದಾಳೆ’ ಎಂದಿದ್ದು ಸಾಕಷ್ಟುವಿವಾದವಾಗಿತ್ತು.

ದ ಸಬ್‌ಸ್ಟ್ಯಾನ್ಸ್‌ ಆ್ಯಂಡ್‌ ದ ಶಾಡೋ - ದಿಲೀಪ್‌ ಕುಮಾರ್‌

ಬಾಲಿವುಡ್‌ನ ದಂತಕತೆ ದಿಲೀಪ್‌ ಕುಮಾರ್‌ ತಮ್ಮ ಆತ್ಮಚರಿತ್ರೆಯಲ್ಲಿ ನಟಿ ಮಧುಬಾಲ ಬಗ್ಗೆ ಖಾಸಗಿ ಅಭಿಪ್ರಾಯವನ್ನು ಬರೆದಿದ್ದು ವಿವಾದವಾಗಿತ್ತು. ‘ಮಧುಬಾಲಾ ಒಬ್ಬ ಉತ್ತಮ ನಟಿ ಹಾಗೂ ಒಳ್ಳೆಯ ವ್ಯಕ್ತಿ. ಆಕೆಯ ಬಗ್ಗೆ ನಾನು ಆಕರ್ಷಿತನಾಗಿದ್ದೆ. ಒಬ್ಬ ಮಹಿಳೆಯಲ್ಲಿ ಏನೇನು ಇರಬೇಕು ಎಂದು ನಾನು ಬಯಸುತ್ತಿದ್ದೆನೋ ಅದರಲ್ಲಿ ಕೆಲವು ಗುಣಗಳು ಮಧುಬಾಲಾಳಲ್ಲಿದ್ದವು’ ಎಂದು ಬರೆದಿದ್ದರು. ಇದೇ ಕಾರಣದಿಂದಾಗಿ ಪುಸ್ತಕಕ್ಕೆ ಜನಪ್ರಿಯತೆ ದೊರಕಿತ್ತು. ಇದು ವಿವಾದವೂ ಆಗಿತ್ತು.

ಖುಲ್ಲಂ ಖುಲ್ಲ - ರಿಷಿ ಕಪೂರ್‌

ಪ್ರಸಿದ್ಧ ಬಾಲಿವುಡ್‌ ನಟ ರಿಷಿ ಕಪೂರ್‌ ತಮ್ಮ ಆತ್ಮಚರಿತ್ರೆಯಲ್ಲಿ, ನನ್ನ ತಂದೆಯೊಂದಿಗೆ ನರ್ಗೀಸ್‌ ಜೀ ಸಂಬಂಧ ಹೊಂದಿದ್ದಾಗ ನಾನಿನ್ನೂ ಚಿಕ್ಕ ಹುಡುಗ. ಹಾಗಾಗಿ ಅದೇನೂ ನನ್ನ ಮೇಲೆ ಪ್ರಭಾವ ಬೀರಿಲ್ಲ. ಮನೆಯಲ್ಲಿ ನನಗೆಂದೂ ಇರಿಸು ಮುರುಸು ಆಗಿದ್ದಿಲ್ಲ. ಆದರೆ ನನ್ನ ತಂದೆ ವೈಜಯಂತಿಮಾಲಾ ಅವರೊಟ್ಟಿಗಿದ್ದಾಗ ನನ್ನ ಅಮ್ಮನೊಟ್ಟಿಗೆ ನಾನೂ ನಟರಾಜ ಹೋಟೆಲ್‌ಗೆ ಸ್ಥಳಾಂತರಗೊಂಡೆ. ನಂತರ ನಮ್ಮ ತಾಯಿ ಎರಡು ತಿಂಗಳ ಕಾಲ ಚಿತ್ರಕೂಟ ಅಪಾರ್ಟ್‌ಮೆಂಟ್‌ಗೆ ಹೋಗಲು ನಿರ್ಧರಿಸಿದರು.

ನಮಗಾಗಿ ನಮ್ಮ ತಂದೆ ಅಪಾರ್ಟ್‌ಮೆಂಟ್‌ ಖರೀದಿಸಿದ್ದರು. ನನ್ನ ಅಮ್ಮನನ್ನು ಮೆಚ್ಚಿಸಲು ಅವರು ಸಾಧ್ಯವಾದಷ್ಟುಪ್ರಯತ್ನಿಸಿದರು. ಆದರೆ ಅದು ಕೊನೆಗೂ ಈಡೇರಿಲಿಲ್ಲ ಎಂದು ಬರೆದುಕೊಂಡಿದ್ದು ಸಾಕಷ್ಟುವಿವಾದವಾಗಿತ್ತು.

ರೊಮ್ಯಾನ್ಸಿಂಗ್‌ ವಿತ್‌ ಲೈಫ್‌ - ದೇವ್‌ ಆನಂದ್‌

ನಟ, ನಿರ್ದೇಶಕ, ಬರಹಗಾರ ದೇವ್‌ ಆನಂದ್‌ ಅವರ ಆತ್ಮಚರಿತ್ರೆ ಸಿನಿಮಾ ಕ್ಷೇತ್ರದ ರಸಭರಿತ ಸುದ್ದಿಗಳಿಂದಲೇ ತುಂಬಿದೆ. ಜೀನತ್‌ ಅಮಾನ್‌ ಅವರೊಂದಿಗೆ ಇದ್ದ ಪ್ರೀತಿಯ ಬಗ್ಗೆ ಹೇಳುತ್ತಾ, ‘ರಾಜ್‌ ಕಪೂರ್‌ ಅವರೊಂದಿಗೆ ಜೀನತ್‌ ‘ಸತ್ಯಂ ಶಿವಂ ಸುಂದರಂ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾಗ ಅದೆಷ್ಟುಅಸೂಯೆ ಉಂಟಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಕೆಲವು ದಿನಗಳ ಹಿಂದೆ ಜೀನತ್‌ ತನ್ನ ಪಾತ್ರದ ಸ್ಕ್ರೀನ್‌ ಟೆಸ್ಟ್‌ಗಾಗಿ ರಾಜ್‌ ಅವರ ಸ್ಟುಡಿಯೋಗೆ ಹೋಗಿದ್ದಳು ಎಂಬ ವದಂತಿ ಹರಿದಾಡಿತ್ತು. ಅದು ಈಗ ನಿಜವಾಗಲು ಪ್ರಾರಂಭಿಸಿತು. ನನ್ನ ಹೃದಯ ಒಡೆದೇ ಹೋಗಿತ್ತು ಎಂದು ಬರೆದುಕೊಂಡಿದ್ದರು.

ಜನವರಿಯಲ್ಲಿ ಬರಲಿದೆ

ಎಚ್‌ ಡಿ ದೇವೇಗೌಡ ಆತ್ಮಕತೆ

ಫೆಬ್ರವರಿಯಲ್ಲಿ ಬರಲಿದೆ

ಬಿ ಎಸ್‌ ಯಡಿಯೂರಪ್ಪ ಆತ್ಮಕತೆ

 

Follow Us:
Download App:
  • android
  • ios