Asianet Suvarna News Asianet Suvarna News

ಜೈಪುರ್ ಲಿಟ್‌ಫೆಸ್ಟ್‌ಗೆ ಹೋಗಲು ಈಗಲೇ ಹೆಸರು ನೋಂದಾಯಿಸಿ!

ಜನವರಿ 19-23- 2023ಕ್ಕೆ ಪ್ರಸಿದ್ಧ ಜೈಪುರ ಸಾಹಿತ್ಯ ಸಮ್ಮೇಳನ
ಹೆಸರು ನೋಂದಾಯಿಸಲು ಈಗ  ಸಮಯ
ಜಗದ್ವಿಖ್ಯಾತ ಸಾಹಿತಿಗಳನ್ನು ಏಕವೇದಿಕೆಯಲ್ಲಿ ನೋಡುವ ಅವಕಾಶ
 

Jaipur Literature Festival 2023 Online Registration begins skr
Author
First Published Sep 27, 2022, 7:13 PM IST

Jogi, Kannadaprabha

ನೊಬೆಲ್ ಪ್ರಶಸ್ತಿ ವಿಜೇತ ಅಬ್ದುಲ್ ರಜಾಕ್ ಗುರ್ನಾ, ಹಿಂದಿ ಕವಿ ಅನಾಮಿಕಾ, ದಿ ವಾಂಡರರ್ಸ್ ಹೂ ಶೇಪ್ಡ್ ಆವರ್ ವರ್ಲ್ಡ್ ಕೃತಿಕಾರ ಆಂಟನಿ ಸಟ್ಟಿನ್, ಶ್ರಿಲಂಕಾದ ಲೇಖಕ ಅಶೋಕ್ ಫೆರ್ರೆ, ಭಾರತದ ಅತ್ಯಂತ ಜನಪ್ರಿಯ ಬೆಸ್ಟ್ ಸೆಲ್ಲರ್ ಅಶ್ವಿನ್ ಸಾಂಘಿ, ನಾಗಾ ಲೇಖಕ ಅವಿನುವೋ ಕಿರೆ, ಬೂಕರ್ ಪ್ರಶಸ್ತಿ ವಿಜೇತೆ ಬರ್ನಾರ್ಡಿನ್ ಎವರಿಸ್ಟೋ, ಎರಡೆರಡು ಸಲ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿದ್ದ ಚಿಗೋಜೀ ಒಬಿಯೋಮ, ಜತೆಗೆ ದಿ ಕಂಟ್ರಿ ಕಾಲ್ಡ್ ಚೈಲ್ಡ್ ಹುಡ್ ಬರೆದ ಜನಪ್ರಿಯ ನಟಿ ದೀಪ್ತಿ ನವಲ್, ಟೋಂಬ್ ಆಫ್ ಸ್ಯಾಂಡ್ ಅನುವಾದಿಸಿದ ಡೈಸಿ ರಾಕ್ವೆಲ್- ಇವರನ್ನೆಲ್ಲ ಒಟ್ಟಿಗೆ ನೋಡುವ ವೇದಿಕೆ ಯಾವುದಾದರೂ ಇದೆಯಾ?

ಇವರಷ್ಟೇ ಅಲ್ಲ,  ಬ್ರಿಟಿಷ್ ಕಾದಂಬರಿಕಾರ ಹೋವಾರ್ಡ್ ಜೇಕಬ್‌ಸನ್, ಕತೆಗಾರ, ಪತ್ರಕರ್ತ ಜೆರ್ರಿ ಪಿಂಟೋ, ಇಂಟಿಮಸೀಸ್ ಲೇಖಕಿ ಕೇಟಿ ಕಿಟಮುರ, ಗಣಿತಜ್ಞ ಮನಿಲ್ ಸೂರಿ, ಜನಪ್ರಿಯ ಲೇಖಕರಾದ ಮಾರ್ಟಿನ್ ಪಚ್ನರ್, ಮರ್ವ್ ಎಮರ್, ಸತ್ನಮ್ ಸಂಘೇರಾ, ಶೇತನ್, ತನುಜ್ ಸೋಲಂಕಿ, ವಾಹಿನಿ ವರ, ವಿನ್ಸೆಂಟ್ ಬ್ರೌನ್ ಮತ್ತು ಪತ್ರಕರ್ತ ವೀರ್ ಸಾಂಘ್ವಿ.

ಜೈಪುರ ಲಿಟ್‌ ಫೆಸ್ಟ್: ಕಂಡ, ಕೇಳಿಸಿಕೊಂಡ ಸಣ್ಣ ಕತೆಗಳು

ಇವರೆಲ್ಲರೂ ಜನವರಿ 19-23ರ ತನಕ ಜೈಪುರದಲ್ಲಿ ನಡೆಯುವ 16ನೇ ಜೈಪುರ್ ಲಿಟರೇಚರ್ ಫೆಸ್ಟಿವಲ್ ಅಂಗಳದಲ್ಲಿ ಸಿಗುತ್ತಾರೆ. ಅಲ್ಲಿ ಮಾತಾಡುತ್ತಾರೆ, ಹರಟುತ್ತಾರೆ, ನಿಮ್ಮ ಜತೆ ಚಾ ಕುಡಿಯುತ್ತಾರೆ ಮತ್ತು ತಮ್ಮ ಕತೆಗಳನ್ನು ಹೇಳುತ್ತಾರೆ.

ನಮಿತಾ ಗೋಖಲೆ, ವಿಲಿಯಂ ಡಾರ್ಲಿಂಪಲ್ ಮತ್ತು ಸಂಜಯ್ ರಾಯ್ -ಸೇರಿಕೊಂಡು ನಡೆಸುತ್ತಿರುವ ಜೈಪುರ್ ಸಾಹಿತ್ಯೋತ್ಸವಕ್ಕೆ ಈಗ ಹದಿನಾರರ ಹರೆಯ. ಹಾಗಾಗಿಯೇ ಈ ಸಲದ ಸಾಹಿತ್ಯೋತ್ಸವ ಕೂಡ ಸಾಕಷ್ಟು ಯಂಗ್ ಆಗಿದೆ. ಹಿರಿಯರ ಜತೆಗೇ ಕಿರಿಯರೂ ಸಾಕಷ್ಟಿದ್ದಾರೆ. ನೀವು ಈ ಸಾಹಿತ್ಯೋತ್ಸವಕ್ಕೆ ಹೋಗುವವರಾಗಿದ್ದರೆ ನಿಮ್ಮ ಹೆಸರು ನೋಂದಣಿ ಮಾಡಿಕೊಳ್ಳಿ. ಅಂದ ಹಾಗೆ ಜೈಪುರಕ್ಕೆ ಭೇಟಿ ನೀಡಲು ಜನವರಿ ಅತ್ಯಂತ ಪ್ರಶಸ್ತವಾದ ಸಮಯ. ಅಲ್ಲಿನ ಅರಮನೆಗಳನ್ನೂ ನೋಡುತ್ತಲೇ, ಸಾಹಿತ್ಯವನ್ನೂ ಸವಿಯಬಹುದು.ಮೊದಲ ಸಲ ಹೋಗುವವರಿಗೆ ಕೆಲವು ಟಿಪ್ಪಣಿ

Jaipur Literature Festival 2023 Online Registration begins skr

ಜೈಪುರ ಸಾಹಿತ್ಯೋತ್ಸವ ನಮ್ಮ ಸಾಹಿತ್ಯೋತ್ಸವದ ಹಾಗಿರುವುದಿಲ್ಲ. ಅಲ್ಲಿಗೆ ಬರುವವರೆಲ್ಲರೂ ತರುಣ ತರುಣಿಯರು. ಎಲ್ಲರೂ ಪುಸ್ತಕ ಓದುವ ಆಸಕ್ತಿ ಉಳ್ಳವರು. ಗಣ್ಯರ ಕೃತಿಗಳ ಕುರಿತು ಪ್ರಶ್ನೆ ಕೇಳಬಲ್ಲವರು. ಹೀಗಾಗಿ ಅದೊಂದು ಹಿರಿಯ ತಲೆಮಾರು ಮತ್ತು ಕಿರಿಯ ತಲೆಮಾರನ್ನು ಬೆಸೆಯುವಂಥ ರಂಗ. ಅಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ನೊಬೆಲ್ ಪ್ರಶಸ್ತಿ ಪಡೆದವರಿಗೂ ನಲವತ್ತು ನಿಮಿಷ, ಹೊಸ ಕವಿಗೂ ನಲವತ್ತು ನಿಮಿಷ.

ಮಂಗಳೂರು ಲಿಟ್ ಫೆಸ್ಟ್‌ ಸಂಭ್ರಮ, ಒಂದೇ ವೇದಿಕೆಯಲ್ಲಿ ಸಾಹಿತಿಗಳ ಸಂಗಮ

ಅಲ್ಲಿಗೆ ಬರುವವರಿಗೆ ಮೂರು ಆಯ್ಕೆಗಳಿವೆ. ದಿನಕ್ಕೆ 200 ರುಪಾಯಿ ಕೊಟ್ಟು ಸಾಮಾನ್ಯ ಪ್ರೇಕ್ಷಕರಾಗಿ ಬರಬಹುದು. ದಿನಕ್ಕೆ 13,500 ರುಪಾಯಿ ಕೊಟ್ಟು ಫ್ರೆಂಡ್ ಆಫ್ ದಿ ಫೆಸ್ಟಿವಲ್ ಆಗಬಹುದು.  ಫ್ರೆಂಡ್ ಆಫ್ ದಿ ಫೆಸ್ಟಿವಲ್ ಆದವರಿಗೆ ರೈಟರ್ಸ್ ಲೌಂಜ್-ಗೆ ಹೋಗಿ ಅವರೊಂದಿಗೆ ಹರಟುವ ಅವಕಾಶವಿರುತ್ತದೆ. ವಿಶೇಷ ಔತಣಕೂಟಗಳಿಗೆ ಆಹ್ವಾನ ಇರುತ್ತದೆ. ಅದೊಂದು ಸಾಹಿತ್ಯೋತ್ಸವಕ್ಕೆ ನೆರವಾಗುವ ವಿಧಾನ ಕೂಡ. ಅಂಥವರಿಂದಲೇ ಸಾಹಿತ್ಯೋತ್ಸವ ಅದ್ದೂರಿಯಾಗಿ ನಡೆಯುತ್ತಿರುವುದು.

ಅಂದಹಾಗೆ, ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸುವ ಲೇಖಕರೆಲ್ಲರ ಪುಸ್ತಕಗಳೂ ಅಲ್ಲಿ ಮಾರಾಟಕ್ಕಿರುತ್ತವೆ. ಅದಕ್ಕೆ ನೀವು ಲೇಖಕರ ಸಹಿ ಹಾಕಿಸಿಕೊಳ್ಳಬಹುದು. ಆದರೆ, ಎಚ್ಚರಿಕೆ, ಸಹಿ ಹಾಕಿಸಿಕೊಳ್ಳಲೂ ಮೈಲುದ್ದದ ಕ್ಯೂ ಇರುತ್ತದೆ. ಲೇಖಕರ ಜತೆ ಹರಟೆ, ಊಟ, ಟೀ, ಸೆಲ್ಫಿ- ಹೀಗೆ ಐದು ದಿನ ಸಾಹಿತ್ಯದ ಸಂಸರ್ಗದಲ್ಲಿ ಇರುವವರಿಗೆ ಇದು ಒಳ್ಳೆಯ ಆಯ್ಕೆ.
 

Follow Us:
Download App:
  • android
  • ios