ಮಂಗಳೂರು ಲಿಟ್ ಫೆಸ್ಟ್ ಸಂಭ್ರಮ, ಒಂದೇ ವೇದಿಕೆಯಲ್ಲಿ ಸಾಹಿತಿಗಳ ಸಂಗಮ
ಮಂಗಳೂರು ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಲಿಟ್ ಫೆಸ್ಟ್ -2019 ಶುಕ್ರವಾರ ಆರಂಭವಾಗಿದೆ. ಪ್ರಮುಖ ಸಾಹಿತಿಗಳು, ಚಿಂತಕರು, ಬರಹಗಾರರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲಿಟ್ ಫೆಸ್ಟ್‌ನ ಸುಂದರ ಫೋಟೋಗಳು ಇಲ್ಲಿವೆ.
ನ.29ರಂದು ಬೆಳಗ್ಗೆ 10 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಪಂಪ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಲಿಟ್ ಫೆಸ್ಟ್‌ನ್ನು ಉದ್ಘಾಟಿಸಿದ್ದಾರೆ.
ನವಭಾರತ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಸುವರ್ಣ ನ್ಯೂಸ್ ಸುದ್ದಿ ಸಂಪಾದಕ ಅಜಿತ್ ಕುಮಾರ್ ಹನುಮಕ್ಕನವರ್ ಸಂವಾದ ನಡೆಸಿದ್ದಾರೆ.
ಡಾ. ಚಿದಾನಂದ ಮೂರ್ತಿ ಅವರಿಗೆ ಡಾ. ಕಂಬಾರ ಅವರು ಜೀವಮಾನ ಪ್ರಶಸ್ತಿ ಪ್ರದಾನ ಮಾಡಿದರು.
ಲಿಟ್‌ಫೆಸ್ಟ್‌ನಲ್ಲಿ ಪುಸ್ತಕ ಮಳಿಗೆಗಳಿಗೆ ಕೊರತೆ ಇರಲಿಲ್ಲ. ಹಲವು ಪುಸ್ತಕ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಸಿದವು.
ಪ್ರಮುಖ ವೇದಿಕೆಯಲ್ಲಿ ಪತ್ರಕರ್ತೆ ಬರ್ಕಾದತ್ ಅವರು ಮಾಧ್ಯಮ ಮೇಲೆ ಸಿದ್ಧಾಂತ ಪ್ರಭಾವ ಕುರಿತು ಮಾತನಾಡಿದ್ದಾರೆ.
ಡಾ. ಚಂದ್ರಶೇಖರ್ ಕಂಬಾರ, ಡಾ.ಚಿದಾನಂದಮೂರ್ತಿ ಅವರು ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದ ಕ್ಷಣ.
ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಿದ ವಿದೇಶಿ ಗಣ್ಯರು ಕಾರ್ಯಕ್ರಮದ ಫೋಟೋ ಕ್ಲಿಕ್ಕಿಸುತ್ತಿರುವುದು.
ಲಿಟ್ ಫೆಸ್ಟ್ ಉದ್ಘಾನಟನೆ ಕ್ಷಣ, ವೇದಿಕೆಯನ್ನು ಅಲಂಕರಿಸಿದ ಗಣ್ಯರು
ಡಾ. ಚಂದ್ರಶೇಖರ್ ಕಂಬಾರ ಅವರು ವೇದಿಕೆಯಲ್ಲಿ ಮಾತನಾಡುತ್ತಿರುವುದು.
ಅಯೋಧ್ಯೆ ಘಟನಾವಳಿ ಕುರಿತು ಕೇಂದ್ರ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಕೆ.ಕೆ.ಮೊಹಮ್ಮದ್ ವಿಚಾರ ಮಂಡಿಸಿದ್ದಾರೆ. ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪಿಗೆ ಮೂಲ ದಾಖಲೆ ಒದಗಿಸಿದ್ದು ಇದೇ ಮೊಹಮ್ಮದ್.
ಆವೆ ಮಣ್ಣಿನಿಂದ ಕಲಾಕೃತಿ ರಚಿಸುವ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.