Asianet Suvarna News Asianet Suvarna News

ಉಪವಾಸ, ಡಯೆಟ್‌ ಮಾಡದೇ 17 ದಿನದಲ್ಲಿ 4ಕೆ.ಜಿ. ಕಳಕೊಂಡ ರ್‍ಯಾಪಿಡ್‌ ರಶ್ಮಿ ಟಿಪ್ಸ್‌ ಕೇಳಿ...

 ಉಪವಾಸ, ಡಯೆಟ್‌ ಮಾಡದೇ ತೂಕ ಕಳೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ನಟಿ ರ್‍ಯಾಪಿಡ್‌ ರಶ್ಮಿ ಹೇಳಿದ್ದಾರೆ ಕೇಳಿ... 
 

Bigg Boss Rapid Rashmi told about how to lose weight without fasting and dieting suc
Author
First Published Jan 24, 2024, 1:46 PM IST

ರ‍್ಯಾಪಿಡ್ ರಶ್ಮಿ ಎಂದೇ ಖ್ಯಾತಿ ಪಡೆದಿರುವ ರಶ್ಮಿ ರಾವ್ ಸ್ಯಾಂಡಲ್‌ವುಡ್‌ ನಟಿ ಮಾತ್ರವಲ್ಲದೇ, ಕನ್ನಡದ ಖ್ಯಾತ ರೇಡಿಯೋ ಜಾಕಿ, ನಿರೂಪಕಿ ಕೂಡ.  ಇವರು ಸಕತ್‌ ಫೇಮಸ್‌ ಆಗಿರುವುದು  ಪ್ರಸಿದ್ಧ ರೇಡಿಯೋ ಷೊ `ರೆಟ್ರೋ ಸವಾರಿ' ಮೂಲಕ.  `ನಮಕ್ ಹರಾಮ್', `ಡೀಲರಾಜ' ಚಿತ್ರದಲ್ಲಿಯೂ ಇವರು ನಟಿಸಿದ್ದಾರೆ.  ಕಲರ್ಸ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿ, ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿ ಕೂಡ ಹೌದು. 

ರಶ್ಮಿ ಅವರು ಇದೀಗ ತಾವು 17 ದಿನಗಳಲ್ಲಿಯೇ ನಾಲ್ಕೈದು ಕೆ.ಜಿ ತೂಕ ಇಳಿಸಿಕೊಂಡ ಬಗೆಯನ್ನು ವಿವರಿಸಿದ್ದಾರೆ. 72 ಕೆ.ಜಿಯಿಂದ ತಾವು 15 ದಿನಗಳಲ್ಲಿ 68 ಕೆ.ಜಿಗೆ ಬಂದ ಬಗೆಯನ್ನು ತಮ್ಮ ಯೂಟ್ಯೂಬ್‌ ಮೂಲಕ ರಶ್ಮಿ ವಿವರಿಸಿದ್ದಾರೆ. ಇದಕ್ಕಾಗಿ ಉಪವಾಸ ಮಾಡಬೇಕಿಲ್ಲ. ಚಾರ್ಟ್‌-ಗೀರ್ಟ್ ಹಿಡಿದು ಡಯೆಟ್‌ ಮಾಡಬೇಕಿಲ್ಲ ಎಂದಿರುವ ರಶ್ಮಿ, ಕೆಲವೊಂದು ಆಹಾರ ಅಭ್ಯಾಸಗಳ ಬಗ್ಗೆ ವಿವರಿಸಿದ್ದಾರೆ. ತಾವು ಇದನ್ನು ಪಾಲಿಸಿದ ಕಾರಣ, ಇಂಥದ್ದೊಂದು ಮ್ಯಾಜಿಕ್‌ ಆಯಿತು ಎಂದು ವಿವರಿಸಿದ್ದಾರೆ. ಅಷ್ಟಕ್ಕೂ ರಶ್ಮಿ ಅವರು, ನೀಡಿರುವ ಸಿಂಪಲ್‌ ಟಿಪ್ಸ್‌ ಎಂದರೆ, ರಾತ್ರಿ 7.30 ಒಳಗೆ ಊಟ ಮುಗಿಸಿ ಎಂದಿದ್ದಾರೆ. ತಾವು ಬೆಳಿಗ್ಗೆ 11 ಗಂಟೆಗೆ ತಿಂಡಿ, 2.30ಕ್ಕೆ ಊಟದ ಜೊತೆಗೆ ರಾತ್ರಿ 7.30 ಒಳಗೆ ಊಟ ಮುಗಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಅವರು ಕೊಟ್ಟಿರುವ ಟಿಪ್ಸ್‌ ಎಂದರೆ, 40- 30- 30ರ ಫಾರ್ಮುಲಾ.

ರೋಷ, ಮೌನ, ಕಣ್ಣೀರು.... ಕನ್ನಡಿ ಎದುರು ಕುಳಿತು ಬಿಗ್‌ಬಾಸ್‌ ಸ್ಪರ್ಧಿಗಳು ಏನೆಲ್ಲಾ ಹೇಳಿದ್ರು ಕೇಳಿ

ಹೌದು. ರಶ್ಮಿ ಅವರು ಹೇಳಿರುವಂತೆ ಈ ಫಾರ್ಮುಲಾ ಪಾಲನೆ ಮಾಡಿದರೆ ಸುಲಭದಲ್ಲಿ ವೇಟ್‌ ಲಾಸ್‌ ಮಾಡಬಹುದು ಎನ್ನುವುದು. ಈ ಫಾರ್ಮುಲಾ ಏನೆಂದರೆ ಪ್ರತಿನಿತ್ಯ ನಾರಿನಂಶ, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್‌ ಪ್ರಮಾಣವನ್ನು 40- 30- 30ರ ಫಾರ್ಮುಲಾದಲ್ಲಿ ಸ್ವೀಕರಿಸಬೇಕು ಎನ್ನುವುದು. ದಿನನಿತ್ಯದ ಊಟದಲ್ಲಿ ಇದೇ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ ಎಂದಿದ್ದಾರೆ. ಸಸ್ಯಾಹಾರಿಗಳಾಗಿದ್ದರೆ ಮೊಳಕೆ ಕಾಳು, ಸೊಪ್ಪು, ತರಕಾರಿ ಹಾಗೂ ಮಾಂಸಹಾರಿಗಳಾಗಿದ್ದರೆ ಮೀನು, ಚಿಕನ್‌, ಮೊಟ್ಟೆಯ ಬಿಳಿಯ ಭಾಗ ತಿನ್ನಬೇಕು ಎನ್ನುವುದು ಅವರ ಸಲಹೆ. 

 ಇದೇ ವೇಳೆ, ಜಂಕ್‌ ಫುಡ್‌ ಅವಾಯ್ಡ್‌ ಮಾಡಬೇಕು ಎಂದು ನಟಿ ಹೇಳಿದ್ದಾರೆ.  ಒಂದು ಸಲ ತಿಂದರೆ ಮತ್ತೆ ಮತ್ತೆ ತಿನ್ನುವ ಆಸೆ ಆಗುತ್ತದೆ. ಆದ್ದರಿಂದ ಇದರಿಂದ ಸಾಕಷ್ಟು ದೂರ ಇರುವುದು ಒಳ್ಳೆಯದು ಎಂದಿರುವ ನಟಿ, ಇವುಗಳ ಜೊತೆ ತಾವು ಮೂರು ಗಂಟೆ  workout ಮಾಡುವುದಾಗಿ ಹೇಳಿದ್ದಾರೆ. 

ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಹಾಟ್​ ಬ್ಯೂಟಿ ನೋರಾ ಫತೇಹಿ ! ಏನಿದು ಹೊಸ ವಿಷ್ಯ?


Follow Us:
Download App:
  • android
  • ios