ಜರೀನ್ ಖಾನ್ ಎಂಬ ಹುಡುಗಿ ಸುಭಾಷ್ ಘಾಯ್ ಫಿಲ್ಮ್  ಸ್ಕೂಲ್‌ನಲ್ಲಿ ಓದುತ್ತಿದ್ದಾಗಲೇ ಸಲ್ಮಾನ್ ಖಾನ್ ಕಣ್ಣಿಗೆ ಬಿದ್ದು, ಆತನ ನೆಕ್ಸ್ಟ್ ಸಿನಿಮಾಗೆ ಹೀರೋಯಿನ್ ಅಂತ ಫಿಕ್ಸ್ ಆಗಿಬಿಟ್ಲು. ಹೀಗೆ ‘ವೀರ್’ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಜರೀನ್ ವೈಟ್‌ಲಾಸ್‌ದೇ ದೊಡ್ಡ ಕಥೆ.

ಸಿನಿಮಾ ರಂಗಕ್ಕೆ ಕಾಲಿಡುವ ಹೊತ್ತಿಗೆ ಆಕೆ 100 ಕೆಜಿ ತೂಗುತ್ತಿದ್ದವಳು ಬಳಿಕ ಬರೋಬ್ಬರಿ 43 ಕೆಜಿಯಷ್ಟು ತೂಕ ಇಳಿಸಿಕೊಂಡಳು. ‘ಹೇಟ್ ಸ್ಟೋರಿ 3’ ಗೆ ಮತ್ತೊಂದಿಷ್ಟು ವೈಟ್‌ಲಾಸ್ ಅನಿವಾರ್ಯವಾಯ್ತು. ಅಷ್ಟಕ್ಕೂ ಆ ಪರಿ ತೂಕ ಇಳಿಸಿಕೊಳ್ಳೋದು ಹೇಗೆ ಸಾಧ್ಯವಾಯ್ತು?

ಕೊಹ್ಲಿ ಫಿಟ್‌ನೆಸ್‌ಗೆ ಮತ್ತೊಬ್ಬ ಆಟಗಾರನ ಪತ್ನಿ ಸ್ಫೂರ್ತಿಯಂತೆ

ಡಯೆಟ್ ಹೇಗಿರುತ್ತೆ?  

ತೂಕ ಇಳಿಸುವವರು  ಶೇ.80 ಡಯೆಟ್, ಶೇ.20 ಎಕ್ಸರ್‌ಸೈಸ್ ಮಾಡ್ಬೇಕು ಅಂತಾರೆ ಜರೀನ್ ಖಾನ್. ಸಿಕ್ಕಿದ್ದೆಲ್ಲ ತಿಂದು ಎಷ್ಟು ಎಕ್ಸರ್‌ಸೈಸ್ ಮಾಡಿದ್ರೂ ಕೆಲವೊಮ್ಮೆ ತೂಕ ಇಳಿಯಲ್ಲವಂತೆ. ಬೆಳಗ್ಗೆ ಬಿಸಿ ಬಿಸಿ ನೀರು ಕುಡಿಯೋದರಿಂದ ಜರೀನ್ ಡಯೆಟ್ ಶುರುವಾಗುತ್ತೆ. ಬ್ರೇಕ್‌ಫಾಸ್ಟ್‌ಗೆ ಬ್ರೌನ್‌ಬ್ರೆಡ್, ಎಗ್‌ವೈಟ್, ಕಾಳುಗಳು ಮತ್ತು ಹಣ್ಣುಗಳನ್ನು ತಿನ್ನುತ್ತಾರೆ. ಬ್ರಂಚ್‌ಗೆ ತರಕಾರಿ  ಸೂಪು, ಮಧ್ಯಾಹ್ನಕ್ಕೆ ಕೆಂಪಕ್ಕಿ ಅನ್ನ, ತರಕಾರಿ ಸಾಂಬಾರು, ಬೋನ್ ಲೆಸ್ ಗ್ರಿಲ್ಡ್ ಚಿಕನ್. ಸಂಜೆಗೆ ಕಾಳುಗಳು ಮತ್ತು ಎಳನೀರು. ರಾತ್ರಿ 1 ಬೌಲ್ ಸಲಾಡ್, ಕೆಂಪಕ್ಕಿ ಅನ್ನ, ಬೇಯಿಸಿದ ತರಕಾರಿ, ಚಿಕನ್.

ವರ್ಕೌಟ್ ಹೇಗಿರುತ್ತೆ ಗೊತ್ತಾ?
ಯೋಗ ಇಲ್ಲದೇ ನಾನಿಲ್ಲ ಅನ್ನುವ ಜರೀನ್ ಪ್ರತಿದಿನ ಯೋಗಾಸನ ತಪ್ಪಿಸಲ್ಲ. ಬಾಲಿವುಡ್‌ನ ಸಲೆಬ್ರಿಟಿ ಫಿಟ್‌ನೆಸ್ ಟ್ರೈನರ್ ಯಾಸ್ಮಿನ್ ಕರಾಚಿವಾಲ ಇವರಿಗೆ ಫಿಟ್‌ನೆಸ್ ಟ್ರೈನಿಂಗ್ ಕೊಡ್ತಾರೆ. ಪಿಲಾಟೆಸ್ ಜೊತೆಗೆ ವೈಟ್‌ಲಾಸ್ ಎಕ್ಸರ್‌ಸೈಸ್ ಗಳಲ್ಲೂ ತರಬೇತಿ ನೀಡುತ್ತಾರೆ. ಇದಲ್ಲದೇ ಮನಸೀ ಇಚ್ಛೆ ಈಜು ಹೊಡೆಯೋ ಜರೀನ್, ಸೈಕ್ಲಿಂಗ್ ಮಾಡೋದ್ರಲ್ಲೂ ನಿಷ್ಣಾತೆ.  

ಕನ್ನಡ ಝೀರೋ ಸೈಜ್ ನಟಿ ಆಶಾ ಭಟ್ ಫಿಟ್‌ನೆಸ್ ಸೀಕ್ರೆಟ್