ನೀವು ನಾರ್ಮಲ್ ಆಗಿದ್ದೀರಾ? ಅಮ್ಮನ ಮುಖ ಗುರುತಿಸುವುದು, ಮನುಷ್ಯರನ್ನು ತಿನ್ನಬೇಕೆನ್ನಿಸದಿರುವುದು, ಇನ್ನೂ ಬದುಕಿದ್ದೇನೆಂಬ ಅರಿವಿರುವುದು ಮುಂತಾದವೆಲ್ಲ ನಾರ್ಮಲ್ ಆಗಿರುವ ಲಕ್ಷಣಗಳೇ. ಅದರೆ, ಇಂಥ ಸಣ್ಣ ಪುಟ್ಟ ವಿಷಯಗಳೇ ಉಲ್ಟಾ ಹೊಡೆದರೆ?!
ಮೆದುಳು ಕೂಡಾ ಎಲ್ಲ ಅಂಗಗಳಂತೆಯೇ ಒಂದು ಅಂಗ. ಕೆಲವರಿಗೆ ಕೆಲವೊಮ್ಮೆ ಅದರ ವೈರ್ ರಾಂಗ್ ಕನೆಕ್ಷನ್ ಪಡೆಯಬಹುದು. ಆಗ ಕೆಲವೊಂದು ಮಾನಸಿಕ ರೋಗಗಳು ಕಾಣಿಸಿಕೊಳ್ಳಬಹುದು. ಇವೆಲ್ಲ ಎಲ್ಲರಿಗೂ ತಿಳಿದುದೇ. ಆದರೆ, ವಿಶ್ವದಲ್ಲಿ ಅಪರೂಪಕ್ಕೆ ಕೆಲವರಲ್ಲಿ ಕಾಣಿಸಿಕೊಳ್ಳುವ ಚಿತ್ರವಿಚಿತ್ರ ಮಾನಸಿಕ ಕಾಯಿಲೆಗಳ ಬಗ್ಗೆ ಮಾತ್ರ ನೀವು ಕೇಳಿರಲಿಕ್ಕಿಲ್ಲ. ಇಲ್ಲಿವೆ ನೋಡಿ ಅಂಥ ಕೆಲವು.
1. ವಾಕಿಂಗ್ ಕಾರ್ಪ್ಸ್ ಸಿಂಡ್ರೋಮ್
ನೀವು ಈಗ ಅಥವಾ ಯಾವತ್ತಾದರೂ ಸತ್ತಿದ್ದೀರಾ? ಹೌದು ಎಂಬ ಉತ್ತರ ನಿಮ್ಮದಾಗಿದ್ದರೆ ನಿಮಗೆ ಕೊಟಾರ್ಡ್ಸ್ ಅಥವಾ ವಾಕಿಂಗ್ ಕಾರ್ಪ್ಸ್ ಸಿಂಡ್ರೋಮ್ ಇರಬಹುದು ಅಥವಾ ನೀವು ನಿಜವಾಗಿಯೂ ಸತ್ತಿರಬಹುದು. ಹಾಗೇನಾದರೂ ಆಗಿದ್ದರೆ, ಡಿಸ್ಟರ್ಬ್ ಮಾಡಿದ್ದಕ್ಕೆ ಸಾರಿ!
ಈ ಮಾನಸಿಕ ಕಾಯಿಲೆ ಇರುವವರು ತಾವು ಯಾವಾಗಲೋ ಸತ್ತಿರುವುದಾಗಿ ನಂಬಿರುತ್ತಾರೆ. ಇಲ್ಲವೇ ತಮ್ಮ ರಕ್ತ ಪೂರ್ತಿ ಒಣಗಿಹೋಗಿದೆ ಎಂದೋ, ತಮ್ಮ ಅಂಗಗಳನ್ನು ತೆಗೆಯಲಾಗಿದೆ ಎಂದೋ ಭಾವಿಸಿರುತ್ತಾರೆ. ಇನ್ನು ಕೆಲವರು ತಮಗೆ ಸಾವೇ ಇಲ್ಲ ಎನ್ನುವವರೂ ಇದ್ದಾರೆ. ತಲೆಗೆ ಪೆಟ್ಟು ಬಿದ್ದವರಲ್ಲಿ ಹಾಗೂ ಸ್ಕೀಜೋಫ್ರೀನಿಯಾ ರೋಗಿಗಳಲ್ಲಿ ಈ ಕಂಡಿಶನ್ ಸಾಮಾನ್ಯವಾಗಿ ಕಂಡುಬರುತ್ತದೆ.
ಸ್ಕಾಟ್‌ಲ್ಯಾಂಡ್‌ನ ಈ ಭೂಪನ ಕತೆ ಕೇಳಿದ್ರೆ ನೀವು ಇನ್ನೆಂದೂ ಹೆಲ್ಮೆಟ್ ಹಾಕಿಕೊಳ್ಳುವುದು ಮರೆಯುವುದಿಲ್ಲ. ಇಲ್ಲಿ ಬೈಕ್ ಆ್ಯಕ್ಸಿಡೆಂಟ್‌ನಿಂದ ತಲೆಗೆ ಪೆಟ್ಟು ಬಿದ್ದ ಯುವಕ ತಾನು ಏಯ್ಡ್ಸ್‌ನಿಂದ ಸತ್ತಿರುವುದಾಗಿ ಇಡೀ ಆಸ್ಪತ್ರೆಯನ್ನೇ ನಂಬಿಸುವಲ್ಲಿ ಸಫಲನಾಗಿದ್ದ! ಅಷ್ಟೇ ಅಲ್ಲ, ಆತನ ತಾಯಿ ಕೆಲ ದಿನಗಳಲ್ಲಿ ಅವನನ್ನು ದಕ್ಷಿಣ ಆಫ್ರಿಕಕ್ಕೆ ಕರೆದುಕೊಂಡು ಹೋದಾಗ ತನ್ನ ಆತ್ಮ ಈಗಾಗಲೇ ನರಕದಲ್ಲಿದೆ ಎಂದು ನಂಬತೊಡಗಿದ್ದ!
2. ಫ್ರೆಗೋಲಿ ಡೆಲ್ಯೂಶನ್
ನೀವು ಪ್ರತಿದಿನ ಹೊಸ ಜನರನ್ನು ಭೇಟಿಯಾಗುವುದನ್ನು ಎಂಜಾಯ್ ಮಾಡುತ್ತೀರಿ. ನಂತರದಲ್ಲಿ ಅವರು ನಿಮ್ಮ ಪ್ರೀತಿಯ ವ್ಯಕ್ತಿಗಳಂತೆ ವರ್ತಿಸುತ್ತಾ ನಿಮ್ಮನ್ನೇ ಫಾಲೋ ಮಾಡುತ್ತಿದ್ದಾರೆ ಎಂದು ದೂರುತ್ತೀರಾದರೆ, ಫ್ರೆಗೋಲಿ ಡೆಲ್ಯೂಶನ್‌ಗೆ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯವಿದೆ. ಅದು ಹೇಗೋ ಈ ಕಾಯಿಲೆ ಇರುವವರು ಅಪರಿಚಿತರು ತಮ್ಮ ಗೆಳೆಯರು ಹಾಗೂ ಕುಟುಂಬ ಸದಸ್ಯರ ಸ್ಥಾನಕ್ಕೆ ಬಂದು, ಅವರಂತೆಯೇ ಮುಖವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ನಂಬಿರುತ್ತಾರೆ. ಮೆದುಳಿನ ಕಾಯಿಲೆಯಿಂದಾಗಿ ಇಂಥ ಕಲ್ಪನೆಗಳು ನೈಜವಾಗಿ ತೋರಬಹುದೆಂದು ವಿಜ್ಞಾನಿಗಳು ಶಂಕಿಸಿದ್ದಾರೆ.
ಖುಷ್ ಖುಷಿಯಾಗಿರ್ಲಿಕ್ಕೆ ಹೀಗ್ ಮಾಡಿ
3. ಕ್ಯಾನಿಬಲ್ ಡಿಸೀಸ್
ಮನುಷ್ಯನ ಮಾಂಸಕ್ಕಾಗಿ ಜೀವ ಹಪಹಪಿಸುತ್ತಿದೆ ಎಂದರೆ- ನೀವು ಸಿಂಹವೋ, ಹುಲಿಯೋ ಆದರೆ ಸಂಪೂರ್ಣ ನಾರ್ಮಲ್. ಆದರೆ, ಮನುಷ್ಯರಾಗಿದ್ದರೆ ಮಾತ್ರ ಕ್ಯಾನಿಬಲ್ ಡಿಸೀಸ್‌ನಿಂದ ನರಳುತ್ತಿದ್ದೀರಿ ಎಂದರ್ಥ. ವೆಂಡಿಗೋ ಎಂದೂ ಹೇಳುವ ಈ ಮಾನಸಿಕ ಕಾಯಿಲೆ, ಸಂಸ್ಕೃತಿ ನಿರ್ದಿಷ್ಟವಾಗಿದ್ದು, ಸಾಮಾನ್ಯವಾಗಿ ಗ್ರೇಟ್ ಲೇಕ್ಸ್ ಪ್ರದೇಶದ ಆಲ್ಗೋಂಕ್ವಿನ್ ಜನರಲ್ಲಿ ಕಂಡುಬರುತ್ತದೆ. ಈ ಜನರಲ್ಲಿ ವೆಂಡಿಗೋ ಎಂದರೆ ಮನುಷ್ಯರನ್ನು ತಿನ್ನುವ ಒಂದು ದೆವ್ವ. ಈ ಕಾಯಿಲೆಯ ಲಕ್ಷಣಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಆರಂಭವಾಗುತ್ತವೆ. ಆರಂಭದಲ್ಲಿ ಹಸಿವು ಕಡಿಮೆಯಾಗುವುದು, ಸಂಕಟ, ವಾಂತಿಯಿಂದ ಶುರುವಾಗಿ, ನಿಧಾನವಾಗಿ ವ್ಯಕ್ತಿಯು ತಾನು ವೆಂಡಿಗೋ ಆಗಿರುವುದಾಗಿ ನಂಬಲಾರಂಭಿಸುತ್ತಾನೆ. ಆಗಲೇ ಆತ ಮನುಷ್ಯರ ಮಾಂಸಕ್ಕಾಗಿ ಹಪಹಪಿಸುವುದು ಇಲ್ಲವೇ ಇನ್ನೊಬ್ಬರಿಗೆ ಕೆಡುಕು ಮಾಡುವ ಭಯದಿ ಆತ್ಮಹತ್ಯೆ ಮಾಡಿಕೊಳ್ಳುವುದು.
ಡಿಪ್ರೆಷನ್ ಇದೆ ಎಂಬುವುದು ಗೊತ್ತಾಗೋದು ಹೇಗೆ?
4. ಅಬೌಲೋಮೇನಿಯಾ
ಸಣ್ಣ ಸಣ್ಣ ವಿಷಯವನ್ನೂ ನಿರ್ಧರಿಸಲು ಮೆದುಳು ಪರದಾಡುತ್ತಿದೆ, ಕೆಲಸಕ್ಕೆ ಹೋಗುವುದು, ವ್ಯಕ್ತಿಯನ್ನು ಟ್ರೋಲ್ ಮಾಡುವುದು, ವಾಕಿಂಗ್ ಹೋಗುವುದು ಅಥವಾ ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ತಾವು ಈಗ ಏನು ಮಾಡಬೇಕು, ಯಾವುದು ಮುಖ್ಯ ಎಂಬುದನ್ನು ನಿರ್ಧರಿಸಲಾಗದ ಸ್ಥಿತಿ ಅಬೌಲೋಮೇನಿಯಾ ರೋಗಿಗಳದ್ದು. ಇವರಲ್ಲಿ ಖಿನ್ನತೆ ಇರುವುದಿಲ್ಲ. ಉಳಿದಂತೆ ಸಾಮಾನ್ಯವಾಗಿಯೇ ಇರುತ್ತಾರೆ. ಆದರೆ, ಸಣ್ಣಪುಟ್ಟ ವಿಷಯವನ್ನೂ ನಿರ್ಧರಿಸಲು ಒದ್ದಾಡುತ್ತಾರೆ.
