ಅದರಲ್ಲಿ ನೂರಾರಲ್ಲ, ಸಾವಿರಾರು ವೆರೈಟಿಗಳು ಬಂದವು. ಸದ್ಯಕ್ಕೀಗ ಸಣ್ ಹುಡುಗೀರಿಂದ ದೊಡ್ಡ ಹೆಂಗಸರ ತನಕ ಎಲ್ಲರ ಕಣ್ಣಲ್ಲೂ ‘ಸೂಪರ್’ ಅನಿಸಿಕೊಂಡಿರೋದು ಚೈನ್ ಜುಮ್ಕಾ. ಒಂದು ಸರಪಳಿಯಂಥ ಉದ್ದದ ಚೈನ್. ಅದರ ತುದಿಯಲ್ಲಿ ಜುಮ್ಕಾ. ಮೊದಲೆಲ್ಲ ಕಿವಿ ಪಕ್ಕದಲ್ಲೇ ನಿಂತಿರುತ್ತಿದ್ದ ಜುಮ್ಕಾ ಈ ಡಿಸೈನ್‌ನಲ್ಲಿ ಹೆಗಲೇರಿ ಮೆರೆಯುತ್ತದೆ. ಒಂಥರ ಮೊದಲ ನೋಟದಲ್ಲೇ ಹುಡುಗಿಯರನ್ನು ಆಕರ್ಷಿಸುತ್ತದೆ. ಇದರಲ್ಲಿ ಬಹಳ ಫೇಮಸ್ಸು ಆಕ್ಸಿಡೈಸ್ಡ್ ಸಿಲ್ವರ್ ಟೋನ್ ಇರುವ ಲಾಂಗ್ ಚೈನ್ ಜುಮ್ಕಾ. ಮತ್ತೇನಿಲ್ಲ, ಸಿಲ್ವರ್ ಕಲರ್ ಇರುವ ಮೆಟಾಲಿಕ್ ಜುಮ್ಕಿ ಇದು. ಇದನ್ನು ತೊಟ್ಟು ನಡೆದರೆ ನಿಮಗಿಂತ ಮೊದಲೇ ಜುಮ್ಕಾ ಮಾತಾಡುತ್ತೆ.

ಉಂಗುರ ಧರಿಸುವ ಬೆರಳ ಅರ್ಥವೆನು ?

ಎಷ್ಟೊಂದು ವೆರೈಟಿ: ಜೈನ್ ಜುಮ್ಕಾದಲ್ಲಿ ಥರಾವರಿ ವೆರೈಟಿ ಇದೆ. ಮದ್ವೆಗೋ, ಪೂಜೆಗೋ ಹೋಗ್ಬೇಕು ಅಂದರೆ ನಮ್ಮ ಸಾಂಪ್ರದಾಯಿಕ ಉಡುಗೆಗೆ ಸೆಟ್ ಆಗುವ ಗೋಲ್ಡನ್ ಕಲರ್ ಚೈನ್ ಜುಮ್ಕಾ ಸಿಗುತ್ತೆ. ಈ ಬಣ್ಣದಲ್ಲಿ ಹೆಚ್ಚು ಫೇಮಸ್ ಆಗ್ತಿರೋದು ಪುಟ್ಟ ಪುಟ್ಟ ಜುಮ್ಕಿಗಳೆಲ್ಲ ಒಂದು ಚೆನ್‌ಗೆ ಆತುಕೊಂಡಿರುವಂಥ ವಿನ್ಯಾಸ. ಫಕ್ಕನೆ ಹುಡುಗಿ ಕಿವಿ ಅರ್ಧ ಚಂದ್ರನ ಹಾಗೆಯೂ ಈ ಜುಮ್ಕಿಗಳು ನಕ್ಷತ್ರ ಗೊಂಚಲಿನ ಹಾಗೆಯೂ ಕಾಣಿಸಿದರೆ ಅದು ಭ್ರಮೆ ಖಂಡಿತಾ ಅಲ್ಲ. ಯಾಕೆಂದರೆ ಕಂಡ ಕೂಡಲೇ ಕಲ್ಪನೆ ಕೆರಳಿಸುವ ಸೊಗಸು ಇವಕ್ಕಿವೆ. ಜುಮ್ಕಾದ ತುದಿಗೆ ಮುತ್ತಿನ ವಿನ್ಯಾಸ, ಕೆಂಪು, ಹಸಿರು, ನೀಲಿ ಹರಳುಗಳ ವಿನ್ಯಾಸವೂ ಇದೆ. ಈ ಸರಪಳಿಯನ್ನು ಕಿವಿಯ ಹಿಂಭಾಗಕ್ಕೆ ತಂದು ಜುಮ್ಕಿಯ ಅಂತರ ಕಡಿಮೆಯಾಗುವಂತೆಯೂ ಮಾಡಬಹುದು.

ಯಾವ ಡ್ರೆಸ್‌ಗೆ ಚೆಂದ: ಸಾಂಪ್ರದಾಯಿಕ ಉಡುಗೆಗೆ ಬೆಸ್ಟ್. ಅದರಲ್ಲೂ ಸಿಲ್ವರ್ ಕಲರ್ ಜುಮ್ಕಾ ತೊಟ್ಟುಕೊಳ್ಳುವಾಗ ಲಂಗ ಬ್ಲೌಸ್, ಕಂಟೆಂಪರರಿ ಪಲಾರೆ, ಲಾಂಗ್ ಕುರ್ತಿ ಇತ್ಯಾದಿ ಉಡುಗೆಗಳಿದ್ದರೆ ಸೂಪರ್. ವೆಸ್ಟರ್ನ್ ಡ್ರೆಸ್‌ಗೆ ಪೌರ್ವಾತ್ಯ ಆಕ್ಸೆಸರೀಸ್ ಹಾಕ್ಕೊಳ್ಳುವ ಮನಸ್ಸಿದ್ದರೂ ಇದನ್ನು ತೊಟ್ಟಕೊಳ್ಳಬಹುದು. ಎಲ್ಲೂ ಅಕ್ವರ್ಡ್ ಅನಿಸದಂತೆ ನೋಡಿಕೊಂಡರಾಯ್ತು. ಒಟ್ಟಾರೆ ಜುಮ್ಕಾ ಅಂದರೆ ಕಣ್ಮುಂದೆ ಬರುವುದು ಹಳ್ಳಿ ಸುಂದರಿನೇ. ಹಾಗಾಗಿ ಸಾಂಪ್ರದಾಯಿಕ ಲುಕ್‌ನ ಉಡುಗೆಗಳಿಗೆ ಇಂದು ಬೆಸ್ಟ್ ಅನ್ನೋದರಲ್ಲಿ ಅನುಮಾನ ಬೇಡ.